24 ಗಂಟೆಯಲ್ಲಿ 2 ಮದುವೆಯಾದ ಪಾಕ್ ಸಂಸದ ನಿಧನ!

By Santosh NaikFirst Published Jun 9, 2022, 5:23 PM IST
Highlights

ಹೃದಯಸ್ತಂಭನದಿಂದ ಅಮಿರ್ ಲಿಯಾಕತ್ ಸಾವನ್ನಪ್ಪಿರಬಹುದು ಎಂದು ಹೇಳಲಾಗಿದೆ. ಕಳೆದ ಫೆಬ್ರವರಿಯಲ್ಲಿ 2ನೇ ಪತ್ನಿ ಟೂಬಾಗೆ ವಿಚ್ಚೇದನ ನೀಡಿದ 24 ಗಂಟೆಯ ಒಳಗಾಗಿ ಕೇವಲ 18 ವರ್ಷ ವಯಸ್ಸಿನ ದನಿಯಾ ಶಾ ಅವರನ್ನು ವಿವಾಹವಾಗುವ ಮೂಲಕ ಸುದ್ದಿಯಾಗಿದ್ದರು. ಅವರ ಮೂರನೇ ಮದುವೆಯೂ ಹೆಚ್ಚು ಕಾಲ ಉಳಿದಿರಲಿಲ್ಲ. ಕಳೆದ ತಿಂಗಳು ದನಿಯಾ ಶಾಗೆ ಕೂಡ ಅಮಿರ್ ಲಿಯಾಕತ್ ವಿಚ್ಛೇದನ ನೀಡಿದ್ದರು. 

ಕರಾಚಿ (ಜೂನ್ 9): ಕೆಲವು ತಿಂಗಳ ಹಿಂದೆ, 2ನೇ ಪತ್ನಿಗೆ ವಿಚ್ಛೇದನ ನೀಡಿದ 24 ಗಂಟೆಯ ಒಳಗಾಗಿ 18 ವರ್ಷ ಹುಡುಗಿಯನ್ನು ವಿವಾಹವಾಗಿ ಸುದ್ದಿಯಾಗಿದ್ದ, ಕೊನೆಗೆ ಆಕೆಗೂ ವಿಚ್ಛೇದನ ನೀಡಿದ್ದ ಪಾಕಿಸ್ತಾನದ ಸಂಸದ ಅಮಿರ್ ಲಿಯಾಕತ್ ಹುಸೇನ್  (Amir Liaqat Hussain ) 49ನೇ ವರ್ಷದಲ್ಲಿ ಸಾವಿಗೀಡಾಗಿದ್ದಾರೆ. ಪಾಕಿಸ್ತಾನದ (Pakistan) ಜನಪ್ರಿಯ ಟಿವಿ ಆಂಕರ್ ಕೂಡ ಆಗಿದ್ದರು.

ಗುರುವಾರ ಕರಾಚಿಯಲ್ಲಿರುವ (Karachi) ತಮ್ಮ ಸ್ವಗೃಹದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅವರು ಮೃತಪಟ್ಟಿದ್ದಾರೆ ಎಂದು ಈ ವೇಳೆ ಘೋಷಣೆ ಮಾಡಲಾಗಿದೆ.

ಹೃದಯಸ್ತಂಭನದಿಂದ ಅಮಿರ್ ಲಿಯಾಕತ್ ಸಾವನ್ನಪ್ಪಿರಬಹುದು ಎಂದು ಹೇಳಲಾಗಿದೆ. ಕಳೆದ ಫೆಬ್ರವರಿಯಲ್ಲಿ 2ನೇ ಪತ್ನಿ ಟೂಬಾಗೆ ವಿಚ್ಚೇದನ ನೀಡಿದ 24 ಗಂಟೆಯ ಒಳಗಾಗಿ ಕೇವಲ 18 ವರ್ಷ ವಯಸ್ಸಿನ ದನಿಯಾ ಶಾ ಅವರನ್ನು ವಿವಾಹವಾಗುವ ಮೂಲಕ ಸುದ್ದಿಯಾಗಿದ್ದರು. ಅವರ ಮೂರನೇ ಮದುವೆಯೂ ಹೆಚ್ಚು ಕಾಲ ಉಳಿದಿರಲಿಲ್ಲ. ಕಳೆದ ತಿಂಗಳು ದನಿಯಾ ಶಾಗೆ ಕೂಡ ಅಮಿರ್ ಲಿಯಾಕತ್ ವಿಚ್ಛೇದನ ನೀಡಿದ್ದರು. ಈ ವೇಳೆ ಅವರ ಅನೇಕ ಆಕ್ಷೇಪಾರ್ಹ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸೋರಿಕೆಯಾಗಿದ್ದವು. ರಾಷ್ಟ್ರೀಯ ಸಂಸತ್ತಿನ ಸ್ಪೀಕರ್ ಪರ್ವೇಜ್ ಅಶ್ರಫ್ ಕೂಡ ಅವರ ಸಾವನ್ನು ಸದನದಲ್ಲಿ ಖಚಿತಪಡಿಸಿದ್ದು, ಪಾಕಿಸ್ತಾನದ ಸಂಸತ್ ಕಲಾಪವನ್ನು ಶುಕ್ರವಾರಕ್ಕೆ ಮುಂದೂಡಿಕೆ ಮಾಡಲಾಗಿದೆ.

ಸಾಯುವ ಸಮಯದಲ್ಲಿ ಲಿಯಾಕತ್ ಅವರ ಕೋಣೆಯ ಒಳಗಿನಿಂದ ಲಾಕ್ ಆಗಿತ್ತು. ಮನೆಯ ಸಿಬ್ಬಂದಿ ಹಲವು ಬಾರಿ ಬಾಗಿಲು ತಟ್ಟಿದರೂ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಕಳೆದ ಕೆಲವು ದಿನಗಳಿಂದ ಅವರು ಅನಾರೋಗ್ಯದಲ್ಲಿದ್ದರು ಎಂದು ಮನೆಯ ಕೆಲಸದವರು ಹೇಳಿದ್ದಾರೆ. ಅದಲ್ಲದೆ, ಅವರಿಗೆ ಕೆಲ ದಿನದ ಹಿಂದೆ ಎದೆ ನೋವು ಕೂಡ ಕಾಣಿಸಿಕೊಂಡಿತ್ತು ಎಂದು ತಿಳಿಸಿದ್ದಾರೆ.

ಮದುವೆಗಳ ಮೂಲಕವೇ ಜನಪ್ರಿಯನಾಗಿದ್ದ ಸಂಸದ: ಅಮಿರ್ ಲಿಯಾಕತ್ ಅವರ ಮೂರನೇ ಪತ್ನಿ ದಾನಿಯಾ ಶಾ, ಆತನಿಗಿತ 31 ವರ್ಷ ಚಿಕ್ಕವರು. ವಿಚ್ಚೇದನ ಪಡೆದುಕೊಳ್ಳುವ ವೇಳೆ ಲಿಯಾಕತ್ ವಿರುದ್ಧ ಹಲ್ಲೆ, ಕೂಡಿಹಾಕಿ ಹಿಂಸೆ, ಬಲವಂತವಾಗಿ ನಗ್ನ ವಿಡಿಯೋ ಚಿತ್ರೀಕರಣ ಮಾಡಿದಂಥ ಆರೋಪಗಳನ್ನು 18 ವರ್ಷದ ದಾನಿಯಾ ಶಾ ಮಾಡಿದ್ದರು. ಲಿಯಾಕತ್ ನಿಂದ ಹಿಂಸೆ ಹೆಚ್ಚಾದ ಬೆನ್ನಲ್ಲಿಯೇ ಕೋರ್ಟ್ ನಲ್ಲಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಪಾಕಿಸ್ತಾನದ ಪಿಟಿಐ ಪಕ್ಷದ ಸಂಸ ಹಾಗೂ ಜನಪ್ರಿಯ ಟಿವಿ ಆಂಕರ್ ಆಗಿದ್ದ ಅಮಿರ್ ಲಿಯಾಕತ್ ಅವರದೆಂದು ಹೇಳಲಾದ ಸಾಕಷ್ಟು ಅಶ್ಲೀಲ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾಗಿದ್ದವು. ಇದನ್ನು ಸ್ವತಃ ಲಿಯಾಕತ್ ಅವರ ಮೂರನೇ ಪತ್ನಿ ದಾನಿಯಾ ಶಾ ಅವರೇ ರಿಲೀಸ್ ಮಾಡಿದ್ದಾರೆ ಎನ್ನಲಾಗಿತ್ತು.

1972ರಲ್ಲಿ ಕರಾಚಿಯಲ್ಲಿ ಜನಿಸಿದ್ದ ಅಮಿರ್ ಲಿಯಾಕತ್, ಮೊದಲ ಪತ್ನಿಯ ಹೆಸರು ಸಯೀದಾ ಬುಶ್ರಾ ಇಕ್ಬಾಲ್ ( Syeda Bushra Iqbal), ಆಕೆಗೆ 2020ರಲ್ಲಿ ವಿಚ್ಚೇದನ ನೀಡಿದ್ದರು. ಸಯೀದಾ ಬುಶ್ರಾ ಪತ್ನಿಯಾಗಿದ್ದ ವೇಳೆಗಾಗಲೇ  ಸಯೀದಾ ತೂಬಾ ಅಮೀರ್ (Syeda Tuba Aamir) ಎನ್ನುವ ಮತ್ತೊಬ್ಬ ಹುಡುಗಿಯ ಜೊತೆ ಸಂಬಂಧ ಬೆಳೆಸಿದ್ದಲ್ಲದೆ, 2018ರಲ್ಲಿಯೇ ಆಕೆಯಲ್ಲಿ ವಿವಾಹವಾಗಿದ್ದರು.  2022ರಲ್ಲಿ ತೂಬಾಗೆ ವಿಚ್ಛೇದನ ನೀಡಿದ್ದರು. ಈಕೆಗೆ ಡೈವೋರ್ಸ್ ನೀಡಿದ 24 ಗಂಟೆಯ ಒಳೆಗೆ ದಾನಿಯಾ ಶಾರನ್ನು (Dania Shah) ವಿವಾಹವಾಗಿದ್ದರು. ಇದು ಕೆಲವೇ ತಿಂಗಳು ಮಾತ್ರವೇ ನಡೆದಿತ್ತು.

24 ತಾಸೂ ಕಾಯಲಿಲ್ಲ, 18ರ ಯುವತಿ ಜೊತೆ 49 ವರ್ಷದ ಪಾಕ್ ಸಂಸದನ 3ನೇ ಮದುವೆ!

ತಮ್ಮ ಮೂರನೇ ಮದುವೆಯ ಫೋಟೋವನ್ನು ಸ್ವತಃ ಡಾ.ಲಿಯಾಖತ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಲಿಯಾಕತ್ ತನ್ನ ಎರಡನೇ ಮದುವೆಯನ್ನು ಕೆಟ್ಟ ಸಮಯ ಎಂದು ಪರಿಗಣಿಸಿದ್ದಾರೆ. ಈ ಬಗ್ಗೆ ಬರೆದಿರುವ ಲಿಯಾಕತ್ ಕಳೆದ ರಾತ್ರಿ, 18 ವರ್ಷದ ಸೈಯದಾ ಡೇನಿಯಾ ಶಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದೇನೆ. ಅವರು ದಕ್ಷಿಣ ಪಂಜಾಬ್‌ನ ಲೋಧ್ರಾನ್‌ನ ಗೌರವಾನ್ವಿತ ನಜೀಬ್ ಉತ್ ತರೈನ್ "ಸಾದತ್" ಕುಟುಂಬಕ್ಕೆ ಸೇರಿದವರು. ದಯವಿಟ್ಟು ನಮಗಾಗಿ ಪ್ರಾರ್ಥಿಸಿ ಎಂದು ನನ್ನ ಎಲ್ಲಾ ಹಿತೈಷಿಗಳಲ್ಲಿ ನಾನು ವಿನಂತಿಸಲು ಬಯಸುತ್ತೇನೆ. ನಾನು ಕತ್ತಲೆಯ ಸುರಂಗವನ್ನು ದಾಟಿದ್ದೇನೆ, ಅದೊಂದು ದೊಡ್ಡ ತಪ್ಪಾಗಿತ್ತು ಎಂದು 3ನೇ ಮದುವೆಯ ವೇಳೆ ಅಮಿರ್ ಲಿಯಾಕತ್ ಬರೆದುಕೊಂಡಿದ್ದರು.

click me!