ಬಲೆಗೆ ಬಿದ್ದ ವಿಚಿತ್ರ ಮೀನು ನೋಡಿ ಭಯಗೊಂಡ ಮೀನುಗಾರ

By Anusha Kb  |  First Published Jun 9, 2022, 11:53 AM IST

ಇಲ್ಲೊಂದು ಕಡೆ ಮೀನುಗಾರಿಕೆಗೆ ತೆರಳಿದವರಿಗೆ ವಿಚಿತ್ರವಾದ ಮೀನೊಂದು ಸಿಕ್ಕಿದ್ದು ಅದನ್ನು ನೋಡಿ ಮೀನುಗಾರರೇ ಗಾಬರಿಯಾಗಿದ್ದಾರೆ. ಆದರೆ ಇದು ಎಲ್ಲಿ ಯಾವ ಪ್ರದೇಶದಲ್ಲಿ ಸಿಕ್ಕಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. 
 


ದೂರ ಸಮುದ್ರದ ಅಥವಾ ಸಮುದ್ರದದಳದ ಮೀನುಗಾರಿಕೆ ವೇಳೆ ಸಮುದ್ರದಲ್ಲಿ ವಿಚಿತ್ರವಾದ ಮೀನಿನ ಪ್ರಬೇಧಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಈ ಹಿಂದೆಯೂ ಮೀನುಗಾರಿಕೆಗೆ ತೆರಳಿದ ಮೀನುಗಾರರಿಗೆ ಬೃಹತ್ ಗಾತ್ರದ ಮೀನುಗಳು, ವಿಚಿತ್ರ ಮೀನುಗಳು ಸಿಕ್ಕಿದ್ದು ವರದಿಯಾಗಿತ್ತು. ಹಾಗೆಯೇ ಇಲ್ಲೊಂದು ಕಡೆ ಮೀನುಗಾರಿಕೆಗೆ ತೆರಳಿದವರಿಗೆ ವಿಚಿತ್ರವಾದ ಮೀನೊಂದು ಸಿಕ್ಕಿದ್ದು ಅದನ್ನು ನೋಡಿ ಮೀನುಗಾರರೇ ಗಾಬರಿಯಾಗಿದ್ದಾರೆ. ಆದರೆ ಇದು ಎಲ್ಲಿ ಯಾವ ಪ್ರದೇಶದಲ್ಲಿ ಸಿಕ್ಕಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. 

ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್‌ನಲ್ಲಿ  rfedortsov_official_account ಎಂಬ ಹೆಸರಿನ ಖಾತೆಯಲ್ಲಿ ಈ ಮೀನಿನ ಚಿತ್ರವನ್ನು ಪೋಸ್ಟ್ ಮಾಡಲಾಗಿದೆ. ಫ್ರಾಂಕೆನ್‌ಸ್ಟೈನ್ಸ್ ಫಿಶ್ (Frankenstein's Fish) ಎಂದು ಉಲ್ಲೇಖಿಸಿ ಈ ವಿಚಿತ್ರ ಮೀನಿನ ಫೋಟೋವನ್ನು ಈ ಖಾತೆಯಿಂದ ಪೋಸ್ಟ್ ಮಾಡಲಾಗಿದೆ. rfedortsov_official_account ಸುಮಾರು ಆರು ಲಕ್ಷಕ್ಕೂ ಅಧಿಕ ಫಾಲೋವರ್‌ಗಳನ್ನು ಹೊಂದಿದೆ. ಈ ಖಾತೆ ಹೊಂದಿರುವವರು ತಮಗೆ ಮೀನುಗಾರಿಕೆ ಸಮಯದಲ್ಲಿ ಸಿಗುವ ಆಸಕ್ತಿದಾಯಕ ಮೀನುಗಳು, ಬಲೆಗೆ ಸಿಕ್ಕಿ ಸಮುದ್ರದ ವಿಚಿತ್ರ ಪ್ರಬೇಧಗಳ ಫೋಟೋಗಳನ್ನು ಈ ಖಾತೆಯಲ್ಲಿ ಆಗಾಗ ಹಾಕುತ್ತಿರುತ್ತಾರೆ. 

 
 
 
 
 
 
 
 
 
 
 
 
 
 
 

Tap to resize

Latest Videos

A post shared by Роман Федорцов (@rfedortsov_official_account)

 

ಕಳೆದ ವಾರ ವೈರಲ್ ಆಗಿರುವ ಈ ಚಿತ್ರವು ಅರೆ ಪಾರದರ್ಶಕ ಬಿಳಿ ಮೀನಾಗಿದೆ. ಇದು ಗುಳಿ ಬಿದ್ದ ದೊಡ್ಡದಾದ ಹಸಿರು ಕಣ್ಣುಗಳನ್ನು ಹೊಂದಿದೆ.  ಮೊನಚಾದ ಬಾಲ ಮತ್ತು ಹರಿದ ರೆಕ್ಕೆಗಳಂತೆ ಕಾಣುವ ರೆಕ್ಕೆಗಳನ್ನು ಪ್ರದರ್ಶಿಸುತ್ತದೆ. ಅಲ್ಲದೇ ಮೀನಿನ ಮೇಲೆ ಇನ್ನೂ ವಿಚಿತ್ರವಾದ ಗುರುತುಗಳಿವೆ, ಅದು ಅದರ ದೇಹವನ್ನು ಹೊಲಿದಿರುವಂತೆ ತೋರುತ್ತಿದೆ. ಈ ಮೀನಿನ ಫೋಟೋಗೆ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಭಯಾನಕವಾಗಿ ಪ್ರತಿಕ್ರಿಯಿಸಿದ್ದಾರೆ. jmcg21 ಹೆಸರಿನ ಬಳಕೆದಾರರೊಬ್ಬರು, ಇದು ನನ್ನ ಸಮುದ್ರ ಜೀವ ತಜ್ಞನಾದ ತಮ್ಮ ಪುತ್ರ ಹೇಳುವಂತೆ ಬಹುಶಃ ಚರ್ಮದ ಆಳದಿಂದ ರಾಟ್‌ಫಿಶ್‌ನಂತೆ ಕಾಣುತ್ತದೆ ಎಂದು ಹೇಳಿದರು. 

Uttara Kannada: ಕಾರವಾರದಲ್ಲಿ ಗಮನ ಸೆಳೆದ ಮೀನು ಹಿಡಿಯುವ ಸ್ಪರ್ಧೆ

ಇಂತಹ ಮೀನುಗಳು ಸಮುದ್ರದಲ್ಲಿ ಆಳದಲ್ಲಿ ವಾಸಿಸುತ್ತವೆ ಮತ್ತು 650 ರಿಂದ 8,530 ಅಡಿಗಳ ಆಳದಲ್ಲಿ ಕಂಡು ಬರುತ್ತವೆ ಎಂದು ಯುಕೆ ಸಂಸ್ಥೆ ಶಾರ್ಕ್ ಟ್ರಸ್ಟ್ ತಿಳಿಸಿದೆ. ಇವು ಶಾರ್ಕ್‌ಗಳಂತೆಯೇ ಕಾರ್ಟಿಲ್ಯಾಜಿನಸ್ ಮಾಪಕಗಳಲ್ಲ. ಇವುಗಳು ಸಾಮಾನ್ಯವಾಗಿ ಹೆಚ್ಚಿನ ಬಣ್ಣವನ್ನು ಹೊಂದಿರುವುದಿಲ್ಲ ಮತ್ತು ಅವುಗಳ ಆಳವಾದ ಆವಾಸಸ್ಥಾನದ ಕಾರಣದಿಂದಾಗಿ ಹೆಚ್ಚಿನ ಒತ್ತಡವನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತವೆ ಎಂದು ಶಾರ್ಕ್ ಟ್ರಸ್ಟ್ ಹೇಳಿದೆ. 

ಮೀನಿನ ಬಲೆಯಲ್ಲಿ ಸಿಲುಕಿದ್ದ ಡಾಲ್ಪಿನ್ ಮರಿಯ ರಕ್ಷಣೆ: ವಿಡಿಯೋ

ಇದೇ ಖಾತೆಯಿಂದ ಮತ್ತೊಂದು ವಿಚಿತ್ರ ಮೀನಿನ ವಿಡಿಯೋ ಪೋಸ್ಟ್ ಮಾಡಲಾಗಿದ್ದು, ಇದನ್ನು ನೀವು ತಿನ್ನಲಾರಿರಿ ಎಂದು ಭಾವಿಸುತ್ತೇನೆ ಎಂದು ಬರೆದಿದ್ದಾರೆ. ಈ ಮೀನಿನ ಬಾಯಲ್ಲಿ ಅದರ ಕರುಳುಗಳಿವೆ. ನೋಡಲು ಇದು ಕೂಡ ಭಯಾನಕವಾಗಿ ಕಾಣುತ್ತವೆ.

ಸಮುದ್ರದಲ್ಲಿ ಮೀನಿನ ಬಲೆಗೆ ಸಿಲುಕಿ ಒದ್ದಾಡುತ್ತಿದ್ದ ಡಾಲ್ಪಿನ್ ಮರಿಯೊಂದನ್ನು ವ್ಯಕ್ತಿಯೊಬ್ಬರು ಬಲೆಯಿಂದ ಬಿಡಿಸಿ ರಕ್ಷಣೆ ಮಾಡಿ ಮತ್ತೆ ಸಮುದ್ರಕ್ಕೆ ಬಿಟ್ಟ ವಿಡಿಯೋವೊಂದು ಈ ಹಿಂದೆ ವೈರಲ್ ಆಗಿತ್ತು. ವೀಡಿಯೊವನ್ನು ಮೂಲತಃ ರೆಡ್ಡಿಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ವೀಡಿಯೊವನ್ನು ಮೂಲತಃ ರೆಡ್ಡಿಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿತ್ತು. ಇದನ್ನು ಯೂಟ್ಯೂಬ್‌ನಲ್ಲಿ ವೈರಲ್‌ಹಾಗ್ ಚಾನಲ್ಹಂಚಿಕೊಂಡಿದೆ. ಇದು ಹಳೆಯ ವಿಡಿಯೋ ಆಗಿದ್ದರೂ ಈಗ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗುತ್ತಿದೆ. ಬ್ರೆಜಿಲ್‌ನ ಸಾವೊ ಪಾಲೊದಲ್ಲಿ ಈ ಘಟನೆ ನಡೆದಿದೆ.

click me!