ಪಾಕಿಸ್ತಾನದಲ್ಲೊಂದು ಕಡೆ ತಂದೆಯೊಬ್ಬರು ತನ್ನ ಮಗಳ ರಕ್ಷಣೆಗಾಗಿ ಮಗಳ ತಲೆಯ ಮೇಲ್ಭಾಗಕ್ಕೆ ಸಿಸಿಟಿವಿಯನ್ನು ಫಿಕ್ಸ್ ಮಾಡಿದ್ದಾರೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ.
ಕರಾಚಿ: ಇಂದಿನ ಕಾಲದಲ್ಲಿ ಹೆಣ್ಣು ಮಕ್ಕಳನ್ನು ರಕ್ಷಣೆ ಮಾಡುವುದು ತುಂಬಾ ಕಷ್ಟದ ಕೆಲಸ, ಶಾಲೆಗೆ ಹೋದ ಮಕ್ಕಳು ಹಸುಗೂಸುಗಳ ಮೇಲೂ ದುಷ್ಕರ್ಮಿಗಳು ಕ್ರೌರ್ಯ ತೋರುತ್ತಿರುವ ಇಂದಿನ ದಿನಗಳಲ್ಲಿ ಹೆಣ್ಣು ಹೆತ್ತ ಪೋಷಕರು ಹೊರಗೆ ಹೋದ ಮಗಳು ಸಂಜೆ ಮನೆಗೆ ಬರುವವರೆಗೂ ಆತಂಕದಿಂದಲೇ ಕಾಯುವಂತಹ ಸ್ಥಿತಿ ನಿರ್ಮಾಣವಾಗಿದೆ. ಇದೇ ಕಾರಣಕ್ಕೆ ಕೆಲವರು ಹೆಣ್ಣು ಮಕ್ಕಳೇ ಬೇಡ ಅವರ ಕಷ್ಟ ನೋಡಲಾಗದು ಎಂದು ಹೇಳುವುದನ್ನು ನೀವು ಕೇಳಿರುತ್ತೀರಿ. ಆದರೆ ಪಾಕಿಸ್ತಾನದಲ್ಲೊಂದು ಕಡೆ ತಂದೆಯೊಬ್ಬರು ತನ್ನ ಮಗಳ ರಕ್ಷಣೆಗಾಗಿ ಮಗಳ ತಲೆಯ ಮೇಲ್ಭಾಗಕ್ಕೆ ಸಿಸಿಟಿವಿಯನ್ನು ಫಿಕ್ಸ್ ಮಾಡಿದ್ದಾರೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ.
ಪಾಕಿಸ್ತಾನದ ಕರಾಚಿಯಲ್ಲಿಯೂ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಗಳ ಸುರಕ್ಷತೆಗಾಗಿ ಅಪ್ಪ ಈ ಸಿಸಿಟಿವಿಯನ್ನು ಮಗಳ ತಲೆಗೆ ಕಟ್ಟಿದ್ದಾರೆ ಎಂದು ವರದಿಯಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ಧರಿಸಿ ಓಡಾಡುವ ಪಾಕಿಸ್ತಾನ ಯುವತಿ ಪ್ರತಿಕ್ರಿಯೆ ನೀಡಿದ್ದು, ಇದು ತಮಾಷೆ ಮಾಡುವ ವಿಚಾರ ಅಲ್ಲ. ನಾನು ಹಾಗೂ ನನ್ನ ಕುಟುಂಬ ವಾಸ ಮಾಡುವ ಪಾಕಿಸ್ತಾನದಲ್ಲಿ ಹೆಣ್ಣು ಮಕ್ಕಳ ಮೇಲೆ ಅಪರಾಧ ಪ್ರಕರಣಗಳು ಹೆಚ್ಚಾಗಿವೆ ಎಂದು ಆಕೆ ಹೇಳಿಕೊಂಡಿದ್ದಾಳೆ. ಮೊದಲಿಗೆ ಇದೊಂದು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿರುವ ಫೇಕ್ ವೀಡಿಯೋ ಎಂದು ಭಾವಿಸಲಾಗಿತ್ತು. ಆದರೆ ಯುವತಿ ಮಾಧ್ಯಮಗಳಿಗೆ ಸಂದರ್ಶನ ನೀಡಿದ ನಂತರ ಇದು ನಿಜ ಎಂಬುದು ತಿಳಿದು ಬಂದಿದೆ.
ಹಣದುಬ್ಬರದಿಂದ ದಿವಾಳಿಯಾದ ಪಾಕ್‌ನಲ್ಲಿ 50 ರೂ ಮಾಲ್ ಓಪನ್; ಕ್ಷಣಾರ್ಧದಲ್ಲಿಯೇ ಹಣ ಕೊಡದೇ ಲೂಟಿಗೈದ ಪಾಕಿಸ್ತಾನಿಗಳು
ಸಂದರ್ಶನದಲ್ಲಿ ಯುವತಿ ತನ್ನ ತಂದೆ ತನ್ನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಈ ಸಿಸಿಟಿವಿಯನ್ನು ತನ್ನ ತಲೆಗೆ ಅಳವಡಿಸಿದ್ದಾರೆ. ಇದರಿಂದ ನಾನು ಎಲ್ಲಿಗೆ ಹೋಗುತ್ತೇನೆ ಏನು ಮಾಡುತ್ತೇನೆ ಯಾವಾಗ ಬರುತ್ತೇನೆ ಈ ಪ್ರತಿಯೊಂದು ನನ್ನ ತಂದೆಯ ಗಮನಕ್ಕೆ ಬರುವುದು ಎಂದು ಆಕೆ ಹೇಳಿದ್ದಾರೆ. ಇದಕ್ಕೆ ನಿಮ್ಮದೇನಾದರು ವಿರೋಧವಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಆಕೆ ನನ್ನ ವಿರೋಧವೇನು ಇಲ್ಲ ಎಂದಿದ್ದಾರೆ. ಅಲ್ಲದೇ ಯಾರದರೂ ನನಗೆ ಥಳಿಸಿದರು ಈ ಸಿಸಿಟಿವಿಯಲ್ಲಿ ಸಾಕ್ಷ್ಯ ಇರುತ್ತದೆ ಎಂದು ಹೇಳಿದ್ದಾರೆ.
ಆದರೆ ಜನ ಮಾತ್ರ ಈ ಮಗಳ ಬಗೆಗಿನ ಅಪ್ಪನ ಕಾಳಜಿಗೆ ಹಾಸ್ಯ ಮಾಡಿದ್ದಾರೆ. ಇಷ್ಟೊಂದು ಡಿಜಿಟಲ್ ಬೇಡವಾಗಿತ್ತು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು SheCtv ಗೆ ಒಂದು ಅರ್ಥ ಬಂತು ಎಂದು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಇನ್ನೊಬ್ಬರು 360 ಕ್ಯಾಮರಾ ಅಳವಡಿಸಬೇಕಿತ್ತು ಎಂದು ಕಾಮೆಂಟ್ ಮಾಡಿದ್ದಾರೆ.
ವಾಘ ಗಡಿ ರಿಟ್ರೀಟ್ ವೇಳೆ ಭಾರತದೊಳಗೆ ಓಡಿ ಬಂದ ಪಾಕಿಸ್ತಾನ ಬೀದಿ ನಾಯಿ ವಶಕ್ಕೆ ಪಡೆದ ಸೇನೆ!
Pakistan🫡😭
pic.twitter.com/Hdql8R2ejt