ಸೋಶಿಯಲ್ ಮೀಡಿಯಾದಲ್ಲಿ ಮದುವೆಯ ವಿಡಿಯೋವೊಂದು ವೈರಲ್ ಆಗಿದ್ದು, ವೇದಿಕೆ ಮೇಲೆ ವರನ ಪ್ಯಾಂಟ್ ಹರಿದ ಘಟನೆ ನಡೆದಿದೆ. ಎಲ್ಲರ ಮುಂದೆ ಮುಜುಗರಕ್ಕೊಳಗಾದ ವರ ನಗುತ್ತಲೇ ವೇದಿಕೆ ಹಿಂದೆ ಓಡಿದ್ದಾನೆ.
ಸೋಶಿಯುಲ್ ಮೀಡಿಯಾದಲ್ಲಿ ಮದುವೆಗೆ ಸಂಬಂಧಿಸಿದ ವಿಡಿಯೋಗಳು ಹೆಚ್ಚು ವೈರಲ್ ಆಗುತ್ತಿರುತ್ತವೆ. ಕೆಲ ವಿಡಿಯೋದಲ್ಲಿ ವರನ ಕಣ್ಣು ವಧುವಿನ ಗೆಳತಿ ಅಥವಾ ಮದುವೆಗೆ ಆಗಮಿಸಿದ ಚೆಂದುಳ್ಳಿ ಚೆಲುವೆಯರ ಸುತ್ತವೇ ಸುಳಿದಾಡುತ್ತಿರುವ ವಿಡಿಯೋಗಳು ಆಗಾಗ್ಗೆ ವೈರಲ್ ಆಗಿರೋದನ್ನು ನಾವೆಲ್ಲಾ ನೋಡಿರುತ್ತವೆ. ಮದುವೆಯಲ್ಲಿ ವಧು-ವರನ ಡ್ಯಾನ್ಸ್ ವಿಡಿಯೋ ಕ್ಲಿಪ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಕೋಟಿ ಕೋಟಿ ವ್ಯೂವ್ ಪಡೆದುಕೊಂಡಿರುತ್ತವೆ. ಇದರ ಜೊತೆಯಲ್ಲಿ ಮದುವೆ ವೇಳೆ ನಡೆಯುವ ವಿಚಿತ್ರ ಘಟನೆಗಳ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ. ಇದೀಗ ಮದುವೆಯಲ್ಲಿ ವರನ ಪ್ಯಾಂಟ್ ಹರಿದಿರುವ ವಿಡಿಯೋ ಮಿಂಚಿನಂತೆ ವೈರಲ್ ಆಗುತ್ತಿದೆ.
ಈ ವಿಡಿಯೋವನ್ನು ಯಾಸ್ಮಿನ್ ಬ್ರೈಡಲ್ ಕಂಪನಿ (@yasminsbridal) ಹೆಸರಿನ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ವಧು ಮತ್ತು ವರ ಇಬ್ಬರು ವೇದಿಕೆ ಮೇಲೆ ನಿಂತಿರುತ್ತಾರೆ. ಮದುವೆಗೆ ಆಗಮಿಸಿದ ಅತಿಥಿಗಳೆಲ್ಲರೂ ಇರುವಾಗಲೇ ವರನ ಪ್ಯಾಂಟ್ ಹಿಂಬದಿಯಲ್ಲಿ ಹರಿಯುತ್ತದೆ. ಕೂಡಲೇ ನಾಚಿಕೊಳ್ಳುತ್ತಾ ವಧುವಿನ ಸಹಾಯದಿಂದ ಒಳಗೆ ಓಡಿ ಹೋಗುತ್ತಾನೆ.
undefined
ಈ ವಿಡಿಯೋ ನೋಡಿದ ನೆಟ್ಟಿಗರು, ತಮ್ಮ ಅನುಭವಗಳನ್ನು ಕಮೆಂಟ್ ರೂಪದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಓರ್ವ ಬಳಕೆದಾರರ ನನ್ನ ಸೋದರ ಸಂಬಂಧಿ ಯಾವಾಗಲೂ ಲಾಂಗ್ ಶಾರ್ಟ್ಸ್ ಧರಿಸುತ್ತಾನೆ. ಅವನಿಗೆ ಪ್ಯಾಂಟ್ ಕಳಚುವ ಅಥವಾ ಹರಿಯುವ ಭಯ ಇರುತ್ತದೆ ಎಂದಿದ್ದಾರೆ. ಇದೊಂದು ಅತ್ಯಂತ ಮುಜುಗರದ ಘಟನೆಯಾಗಿದ್ದು, ವರ ಹಾಗೂ ಮದುವೆಯಲ್ಲಿ ಭಾಗಿಯಾದ ಅತಿಥಿಗಳಿಗೆ ಈ ಘಟನೆ ಸದಾ ನೆನಪಿನಲ್ಲಿ ಉಳಿಯುತ್ತದೆ. ಕೆಲವೊಮ್ಮೆ ಮದುವೆಯಲ್ಲಿ ನಡೆಯುವ ಇಂತಹ ಘಟನೆಗಳಿಂದ ಎಲ್ಲರಿಗೂ ಉಚಿತ ಮನರಂಜನೆ ನೀಡಿದಂತಾಗುತ್ತದೆ. ಈ ವಿಡಿಯೋ ಅಪ್ಲೋಡ್ ಆದ ಒಂದೇ ದಿನದಲ್ಲಿ 85 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದೆ.
ಬಾಯ್‌ಫ್ರೆಂಡ್ ಜೊತೆ ಓಡಿ ಹೋಗ್ತಿದ್ದ ಯುವತಿ; ರೈಲಿನೊಳಗೆ ಹೋಗುವಾಗ ಹುಡುಗಿಗೆ ನೆನಾಪದ ಅಪ್ಪ!
ವೈರಲ್ ವಿಡಿಯೋದಲ್ಲಿ ಏನಿದೆ?
ವರ ಬ್ಲಾಕ್ ಪ್ಯಾಂಟ್ ಮತ್ತು ವೈಟ್ ತ್ರಿಪೀಸ್ ಕೋಟ್ ಧರಿಸಿದ್ದಾನೆ. ವಧು ಗ್ರಾಂಡ್ ವೈಟ್ ಗೌನ್ ಧರಿಸಿ ಬಾರ್ಬಿಯಂತೆ ಕಾಣುತ್ತಿದ್ದರು. ವೇದಿಕೆ ಮೇಲೆಯೇ ಎಲ್ಲರ ಮುಂದೆ ವಧುವನ್ನು ವರ ಎತ್ತಿಕೊಂಡಿದ್ದಾಳೆ. ಪ್ಯಾಂಟ್ ಟೈಟ್ ಫಿಟಿಂಗ್ ಮಾಡಿದ್ದರಿಂದ ವಧುವನ್ನು ಎತ್ತಿಕೊಳ್ಳಲು ಮೊಣಕಾಲು ಕೊಂಚ ಮಡಿಚಿಕೊಳ್ಳುತ್ತಿದ್ದಂತೆ ವರ ಧರಿಸಿದ ಪ್ಯಾಂಟ್ ಹಿಂಭಾಗದಿಂದ ಹರಿಯುತ್ತದೆ. ಪ್ಯಾಂಟ್ ಕೆಳಗೆ ಜಾರುತ್ತಿರೋದು ವರನ ಗಮನಕ್ಕೆ ಬರುತ್ತಲೇ ವಧುವನ್ನು ಇಳಿಸಿ ಮೇಲೆರಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಆನಂತರ ಬಟನ್ ಬಿಚ್ಚಿಲ್ಲ, ಬದಲಾಗಿ ಹರಿದಿದೆ ಎಂಬ ವಿಷಯ ತಿಳಿಯುತ್ತಲೇ ನಗುತ್ತಲೇ ವರ ವೇದಿಕೆ ಹಿಂದೆ ಹೆಜ್ಜೆ ಹಾಕುತ್ತಾನೆ.
ಇತ್ತ ವಧು ಏನಾಗಿದೆ ಎಂದು ನೋಡಿದ್ರೆ ಗಂಡನ ಪ್ಯಾಂಟ್ ಹರಿದಿರೋದನ್ನು ಕಂಡು ನಗುತ್ತಾಳೆ. ವೇದಿಕೆ ಮೇಲಿದ್ದ ವ್ಯಕ್ತಿಯೋರ್ವ ತನ್ನ ಕೋಟ್ ಕಳಚಿ ವರನಿಗೆ ನೀಡಲು ಮುಂದಾಗಿರೋದನ್ನು ವೈರಲ್ ಆಗಿರುವ ವಿಡಿಯೋದಲ್ಲಿ ಕಾಣಬಹುದಾಗಿದೆ.
ಪ್ರೀತಿ ಅತಿಯಾದಾಗ ಹೀಗೆ ಆಗೋದು? ಕಾರ್‌ನಲ್ಲಿಯೇ ಮುಖಕ್ಕೆ ಪಟ ಪಟ ಅಂತ ಹೊಡೆದಾಡಿಕೊಂಡ ಗಂಡ ಹೆಂಡತಿ