ಅಮೆರಿಕಾದಲ್ಲಿ ಸೆಕ್ಸ್ ಗುಲಾಮಗಿರಿ ಸುದ್ದಿಯೊಂದು ಚರ್ಚೆಯಾಗ್ತಿದೆ. ಮಹಿಳಾ ಸೆನೆಟರ್ ಕೊಲೀಗ್ ಗೆ ಹಿಂಸೆ ನೀಡಿದ್ದಾರೆ. ಸಂಭೋಗಿಸಿ ಸೊಂಟ ನೋವ್ ಮಾಡ್ಕೊಂಡ ಉದ್ಯೋಗಿ ಈಗ ದೂರು ನೀಡಿದ್ದಾನೆ.
ಉದ್ಯೋಗದ ಸ್ಥಳದಲ್ಲಿ ಲೈಂಗಿಕ ಹಿಂಸೆ (sexual violence) ಇತ್ತೀಚಿನ ದಿನಗಳಲ್ಲಿ ಹೆಚ್ಚಾಗ್ತಿದೆ. ಭಾರತ ಮಾತ್ರವಲ್ಲದೆ ಅಮೆರಿಕಾ ಸೇರಿದಂತೆ ಅನೇಕ ದೇಶಗಳಲ್ಲಿ ಕೆಳ ಹಂತದ ಉದ್ಯೋಗಿಗಳು ಶಿಕ್ಷೆ ಅನುಭವಿಸುತ್ತಿದ್ದಾರೆ. ಕೇವಲ ಮಹಿಳೆಯರು ಮಾತ್ರವಲ್ಲ ಪುರುಷರು ಕೂಡ ಸೆಕ್ಸ್ ಗುಲಾಮಗಿರಿ (Sex slavery) ಗೆ ಒಳಗಾಗ್ತಿದ್ದಾರೆ.
ಅಮೆರಿಕಾದಲ್ಲಿ ಇಂಥ ಘಟನೆಯೊಂದು ಬೆಳಕಿಗೆ ಬಂದಿದೆ. ಕ್ಯಾಲಿಫೋರ್ನಿಯಾ (California) ದಲ್ಲಿ ಮಹಿಳಾ ಸೆನೆಟರ್ ಮೇಲೆ ಗಂಭೀರ ಆರೋಪವೊಂದು ಕೇಳಿ ಬಂದಿದೆ. ಸೆನೆಟರ್ ಮೇರಿ ಅಲ್ವಾರಾಡೊ ಗಿಲ್, ಮಾಜಿ ಉದ್ಯೋಗಿ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದರು ಎಂಬ ವರದಿ ಪ್ರಸಾರವಾಗಿದೆ. ಅಲ್ವಾರಾಡೊ ಗಿಲ್, ಉದ್ಯೋಗಿಯನ್ನು ಸೆಕ್ಸ್ ಸ್ಲೇವ್ ಆಗಿ ನೋಡ್ತಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
undefined
ಸೆಕ್ಸ್‌ಗೂ ಮುನ್ನ ಹಿಟ್ಲರ್ ಗೂಳಿ ವೃಷಣದಿಂದ ಮಾಡಿದ ಮಾತ್ರೆ ಸೇವಿಸ್ತಿದ್ದನಂತೆ!
2022 ರಲ್ಲಿ ಅಲ್ವಾರಾಡೊ ಗಿಲ್, ಚಾಡ್ ಕಾಂಡಿಟ್ ಎಂಬ ವ್ಯಕ್ತಿಯನ್ನು ಸಿಬ್ಬಂದಿ ಮುಖ್ಯಸ್ಥರನ್ನಾಗಿ ನೇಮಿಸಿಕೊಂಡಿದ್ದರು. ಕಾಂಡಿಟ್ ನೇಮಕದ ನಂತ್ರ ಅಲ್ವಾರಾಡೊ ಗಿಲ್, ಹಿಂಸೆ ನೀಡಲು ಶುರು ಮಾಡಿದ್ದರು. ಅವರನ್ನು ಲೈಂಗಿಕ ಗುಲಾಮರಂತೆ ನೋಡ್ತಿದ್ದರು. ಉದ್ಯೋಗ ಸ್ಥಳದಲ್ಲಿ ಹಾಗೂ ಕೆಲಸದ ನಿಮಿತ್ತ ಬೇರೆ ಊರುಗಳಿಗೆ ಪ್ರಯಾಣ ಮಾಡುವಾಗ ಗಿಲ್, ತನ್ನನ್ನು ಲೈಂಗಿಕ ಗುಲಾಮನಂತೆ ಕಾಣ್ತಿದ್ದಳು ಎಂದು ಕಾಂಡಿಟ್ ಆರೋಪಿಸಿದ್ದಾರೆ. ಅಲ್ವಾರಾಡೊ ಗಿಲ್, ಸಂಭೋಗ ನಡೆಸಲು ಬಲವಂತ ಮಾಡ್ತಿದ್ದರು ಎಂದು ಕಾಂಡಿಟ್ ದೂರಿದ್ದಾರೆ. ಕಾಂಡಿಟ್, ಗಿಲ್ ಮಾತಿಗೆ ಅನೇಕ ಬಾರಿ ಬಗ್ಗಿರಲಿಲ್ಲ. ಇದ್ರಿಂದ ಕೋಪಗೊಂಡ ಗಿಲ್, ಕಾಂಡಿಟ್ ಅವರನ್ನು ಡಿಸೆಂಬರ್ ನಲ್ಲಿ ವಜಾ ಮಾಡಿದ್ದರು.
ನಿರಂತರ ಲೈಂಗಿಕತೆಯಿಂದ ಅನಾರೋಗ್ಯ : ಕಾಂಡಿಟ್, ಅಲ್ವಾರಾಡೊ ಗಿಲ್ ಜೊತೆ ನಿರಂತರ ಸೆಕ್ಸ್ ನಲ್ಲಿ ತೊಡಗಿದ್ದರಿಂದ ಬೆನ್ನು ಮತ್ತು ಸೊಂಟ ನೋವಿನಿಂದ ಬಳಲುತ್ತಿದ್ದೇನೆ ಎಂದಿದ್ದಾರೆ. ಕಾಂಡಿಟ್, ತಮ್ಮ ದೂರಿನಲ್ಲಿ ಯಾವಾಗಿನಿಂದ ಸಮಸ್ಯೆ ಶುರುವಾಗಿದೆ ಎಂಬುದನ್ನು ಕೂಡ ವಿವರಿಸಿದ್ದಾರೆ. 2023 ರಲ್ಲಿ ಕಾರಿನಲ್ಲಿ ಓರಲ್ ಸೆಕ್ಸ್ ಮಾಡಲು, ಕಾಂಡಿಟ್ ಗೆ ಅಲ್ವಾರಾಡೊ ಗಿಲ್ ಒತ್ತಾಯ ಮಾಡಿದ್ದರಂತೆ. ಚಲಿಸುತ್ತಿದ್ದ ಕಾರಿನಲ್ಲಿ ಓರಲ್ ಸೆಕ್ಸ್ ಗೆ ಮುಂದಾದ ಕಾರಣ, ಬೆನ್ನಿಗೆ ಗಂಭೀರ ಗಾಯಗಳಾಗಿತ್ತಂತೆ. ಇದು ಮೂರು ಹರ್ನಿಯೇಟೆಡ್ ಡಿಸ್ಕ್ ಕಾರಣವಾಯ್ತು. ಹಿಪ್ ನೋವು ಶುರುವಾಯ್ತು ಎಂದು ಕಾಂಡಿಟ್ ತಮ್ಮ ದೂರಿನಲ್ಲಿ ಹೇಳಿದ್ದಾರೆ.
ನೋವಾಗಿದ್ರೂ ಕರುಣೆ ತೋರದ ಮಹಿಳೆ : ಕಾಂಡಿಟ್ ಪ್ರಕಾರ, ಕಾರಿನಲ್ಲಿ ಸಂಭೋಗ ಬೆಳೆಸಿ ನೋವಾಗಿದ್ರೂ ಅಲ್ವಾರಾಡೊ ಗಿಲ್ ಕರುಣೆ ತೋರಿರಲಿಲ್ಲ. ಮತ್ತೆ ಸಂಭೋಗ ಬೆಳೆಸುವಂತೆ ಒತ್ತಡ ಹೇರುತ್ತಲೇ ಇದ್ದರು. ಕಾಂಡಿಟ್ ಗೆ ಇದು ಸಾಧ್ಯವಾಗದ ಮಾತಾಗಿತ್ತು. ಹಾಗಾಗಿ ಅವರು, ಅಲ್ವಾರಾಡೊ ಗಿಲ್ ಬೇಡಿಕೆಯನ್ನು ತಿರಸ್ಕರಿಸಿದ್ದರು. ತಮಗೆ ಸಮಯ ನೀಡುವಂತೆ ಮನವಿ ಮಾಡಿದ್ರು. ಆದ್ರೆ ಕಾಂಡಿಟ್, ಮನವಿಯನ್ನು ಗಿಲ್ ಸ್ವೀಕರಿಸಲಿಲ್ಲ. ತಮ್ಮ ಆಸೆಗೆ ತಣ್ಣೀರೆರಚಿದ ಕಾಂಡಿಟ್ ಮೇಲೆ ಗಿಲ್ ಕೋಪಗೊಂಡಿದ್ದರು. ಹಾಗಾಗಿಯೇ ಕಾಂಡಿಟ್ ಅವರನ್ನು ಕೆಲಸದಿಂದ ತೆಗೆದ ಹಾಕಲು ಸುಳ್ಳು ಆರೋಪ ಹೊರಿಸಿದ್ದರು. ನನ್ನನ್ನು ಕೆಲಸದಿಂದ ತೆಗೆದ್ರು ಎಂದು ಕಾಂಡಿಟ್ ಆರೋಪ ಮಾಡಿದ್ದಾರೆ.
ಪರ ಪುರುಷರೊಂದಿಗೆ ಇತ್ತಾ ಬೆನಜೀರ್ ಭುಟ್ಟೋಗೆ ಸಂಬಂಧ ?
ಆರೋಪ ಸುಳ್ಳು : ಮೇರಿ ಅಲ್ವಾರಾಡೊ ಗಿಲ್ ಪರ ವಕೀಲರು ಈ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಮೇರಿ ಘನತೆಗೆ ಧಕ್ಕೆ ತರುವ ಕೆಲಸ ಮಾಡಲಾಗ್ತಿದೆ. ಮೇರಿ ಇಂಥ ಕೆಲಸ ಮಾಡಿಲ್ಲ. ಮಾಜಿ ಉದ್ಯೋಗಿಗೆ ಹಣದ ಅವಶ್ಯಕತೆ ಇದೆ. ಅದನ್ನು ಪಡೆಯಲು ಆತ ಸುಳ್ಳು ಕಥೆ ಸೃಷ್ಟಿ ಮಾಡ್ತಿದ್ದಾನೆಂದು ವಕೀಲರು ಆರೋಪಿಸಿದ್ದಾರೆ. ಸೆನೆಟರ್ ಸೆನೆಟರ್ ಮೇರಿ ಅಲ್ವಾರಾಡೊ ಗಿಲ್ ವಿರುದ್ಧ ದೂರು ದಾಖಲಾಗಿದೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.