ಇಸ್ಲಾಮಾಬಾದ್(ಮೇ.01): ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್‌ಗೆ ಮೈಕ್, ಟಿವಿ, ಲೈವ್ ಕಾರ್ಯಕ್ರಮಗಳ ಮೇಲೆ ಎಲ್ಲಿಲ್ಲದ ಆಸಕ್ತಿ. ಪಾಕಿಸ್ತಾನದ ಎಲ್ಲಾ ಟಿವಿಗಳಲ್ಲಿ ತನ್ನದೇ ಲೈವ್ ಇರಬೇಕು, ಸುದ್ದಿ ವಾಹಿನಿಗಳು ತನ್ನ ಹೇಳಿಕೆಗಾಗಿ ಲೋಗೋ ಹಿಡಿಯಬೇಕು ಅನ್ನೋ ಬಯಕೆ ಮೊದಲಿನಿಂದಲೂ ಇದೆ. ಹೀಗಿರುವಾಗ ಪ್ರಧಾನಿ ಕಾರ್ಯಕ್ರವ ಪಾಕಿಸ್ತಾನ ಸರ್ಕಾರದ ಅಧೀನದ ವಾಹಿನಿಯಲ್ಲಿ ಪ್ರಸಾರವಾಗದಿದ್ದರೆ ಕೇಳಬೇಕೆ? ತನ್ನ ಕಾರ್ಯಕ್ರಮ, ಭಾಷಣ ಪ್ರಸಾರ ಮಾಡದ ಟಿವಿಯ 17 ಉದ್ಯೋಗಿಗಳನ್ನು ವಜಾ ಮಾಡಲಾಗಿದೆ.
ನೂತನ ಪ್ರಧಾನಿ ಶೆಹಬಾಜ್ ಷರಿಫ್ ರಂಜಾನ್ ಹಬ್ಬದ ಪ್ರಯುಕ್ತ ಕೋಟ್ ಲಖಪಟ್ ಜೈಲಿಗೆ ಭೇಟಿ ನೀಡಿದ್ದರು. ಜೈಲಿನಲ್ಲಿನ ಕೈದಿಗಳಿಗೆ, ಸಿಬ್ಬಂದಿಗಳಿಗೆ ರಂಜಾನ್ ಹಬ್ಬಕ್ಕೆ ಶುಭಕೋರುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಪ್ರಸಾರ ಮಾಡಲು ಪಾಕಿಸ್ತಾನ ಸರ್ಕಾರದ ಅಧೀನ ಸಂಸ್ಥೆ ಪಾಕಿಸ್ತಾನ ಟಿವಿಗೆ ಮೊದಲೆ ಸೂಚಿಸಲಾಗಿತ್ತು. ಎಲ್ಲಾ ತಯಾರಿ ಮಾಡಿಕೊಳ್ಳುವಂತೆ ಖಡಕ್ ಸೂಚನೆ ನೀಡಲಾಗಿತ್ತು.
ಸೌದಿ ಅರೇಬಿಯಾ ನೆಲದಲ್ಲಿ ಪಾಕ್ ಪ್ರಧಾನಿಗೆ 'ಕಳ್ಳ' ಎಂದ ಪ್ರಜೆಗಳು!
ಸಂಪೂರ್ಣ ಪಾಕಿಸ್ತಾನದಲ್ಲಿ ತನ್ನ ಲೈವ್ ಪ್ರಸಾರವಾಗಲಿದೆ. ಇಂದಿನ ನಡೆಗೆ ಅಪಾರ ಮೆಚ್ಚುಗೆ ಬರಲಿದೆ. ಇದಕ್ಕಾಗಿ ಸಕಲ ತಯಾರಿ ಮಾಡಿಕೊಂಡ ಪ್ರಧಾನಿ ಶಹಬಾಜ್ ಷರೀಫ್‌ಗೆ ತೀವ್ರ ನಿರಾಸೆಯಾಗಿದೆ. ಲೈವ್ ಪ್ರಸಾರವಾಗಲಿಲ್ಲ, ಕಾರ್ಯಕ್ರಮ ಮುಗಿದ ಬಳಿಕವೂ ಪ್ರಧಾನಿ ಭಾಷಣ ಪ್ರಸಾರವಾಗಲೇ ಇಲ್ಲ.
ಇದರಿಂದ ರೊಚ್ಚಿಗೆದ್ದ ಶೆಹಬಾಜ್ ಷರಿಫ್, ಕಾರ್ಯಕ್ರಮ ಪ್ರಸಾರ ಮಾಡದ ಉದ್ಯೋಗಿಗಳ ವಿರುದ್ಧ ಕ್ರಮಕ್ಕೆ ಸೂಚಿಸಿದ್ದಾರೆ.ಇದರಂತೆ 17 ಉದ್ಯೋಗಿಗಳನ್ನು ವಜಾ ಮಾಡಲಾಗಿದೆ. ಕಾರಣ ಯಾವುದೇ ಇದ್ದರೂ ಈ ನಡೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಷರಿಫ್ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ.
ಮೈಕ್ ಕಂಡರೆ ಸಾಕು ಮೈಮೇಲೆ ಬರುತ್ತೆ ದೆವ್ವ, ಪಾಕಿಸ್ತಾನ ನೂತನ ಪ್ರಧಾನಿ ಫುಲ್ ಟ್ರೋಲ್!
ಅತ್ಯಾಧುನಿಕ ಲ್ಯಾಪ್‌ಟಾಪ್ ಕೊರತೆ
ಪಾಕಿಸ್ತಾನ ಪ್ರಧಾನಿ ಭಾಷಣ ಪ್ರಸಾರ ಮಾಡಲು ಪಾಕಿಸ್ತಾನ ಟಿವಿ ಉದ್ಯೋಗಿಗಳು ಕೇಂದ್ರ ಕಚೇರಿಯಲ್ಲಿ ಲ್ಯಾಪ್‌ಟಾನ್ ನೀಡುವಂತೆ ಮನವಿ ಮಾಡಿದ್ದರು. ಈ ವೇಳೆ ಪಾಕಿಸ್ತಾನ ಟಿವಿ ಕೇಂದ್ರ ಕಚೇರಿ, ಇಲ್ಲೇ ಲ್ಯಾಪ್‌ಟಾಪ್ ಇಲ್ಲ, ನಿಮಗೆಲ್ಲಿಂದ ಕೊಡಲಿ ಎಂದು ಮರು ಪ್ರಶ್ನಿಸಿದ್ದಾರೆ. ಇರುವ ಲ್ಯಾಪ್‌ಟಾಪ್‌ನಲ್ಲಿ ಪ್ರಸಾರ ಮಾಡಿ ಎಂದು ತಾಕೀತು ಮಾಡಿದ್ದಾರೆ. ಪರಿಣಾಮ ಪ್ರಧಾನಿ ಕಾರ್ಯಕ್ರಮ, ಭಾಷಣ ಪ್ರಸಾರವಾಗಿಲ್ಲ.
ಪಾಕ್ ಸಚಿವ ಸಂಪುಟ ನೇಮಕ ಮತ್ತಷ್ಟು ತಡ
ಪಾಕಿಸ್ತಾನ ನೂತನ ಪ್ರಧಾನಿಯಾಗಿ ನೇಮಕಗೊಂಡಿರುವ ಶೆಹಬಾಜ್ ಷರೀಫ್ ಅವರು ತಮ್ಮ ಸಚಿವ ಸಂಪುಟವನ್ನು ನೇಮಕ ಮಾಡಲು ಇನ್ನಷ್ಟುಸಮಯ ತೆಗೆದುಕೊಳ್ಳುವ ಸಾಧ್ಯತೆ ಇದೆ. ತಮ್ಮ ದುರ್ಬಲ ಮೈತ್ರಿಕೂಟದ ಅರಿವಿರುವ ಅವರು ಮೈತ್ರಿಕೂಟದಲ್ಲಿರುವ ಎಲ್ಲಾ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡ ನಂತರ ಸಂಪುಟ ರಚನೆ ಮಾಡಬಹುದು ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.
ಮೈತ್ರಿಕೂಟದಲ್ಲಿರುವ ಎಲ್ಲಾ ಪಕ್ಷಗಳ ನಾಯಕರಿಗೆ ಸಂಪುಟದಲ್ಲಿ ಸ್ಥಾನ ನೀಡಲು ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ ಮತ್ತು ಪಾಕಿಸ್ತಾನ್ ಪೀಪಲ್ಸ್ ಪಕ್ಷಗಳು ನಿರ್ಧರಿಸಿವೆ. ಪ್ರಸ್ತುತ ಆಡಳಿತ ಪಕ್ಷದ ಮೈತ್ರಿಕೂಟದಲ್ಲಿ 8 ಪಕ್ಷಗಳು ಮತ್ತು 5 ಸ್ವತಂತ್ರ ಅಭ್ಯರ್ಥಿಗಳಿದ್ದಾರೆ. ಕೇವಲ 2 ಹೆಚ್ಚುವರಿ ಮತಗಳಿಂದ ಪ್ರಧಾನಿ ಸ್ಥಾನ ಗಳಿಸಿಕೊಂಡಿರುವ ಶೆಹಬಾಜ್ ಅವರಿಗೆ ಅಧಿಕಾರ ಉಳಿಸಿಕೊಳ್ಳಲು ಎಲ್ಲರನ್ನು ಬೆಂಬಲದಲ್ಲಿ ಉಳಿಸಿಕೊಳ್ಳಬೇಕಾದ ಸವಾಲು ಎದುರಾಗಿದೆ. ಹಾಗಾಗಿ ನಿಧಾನವಾಗಿ ನಿರ್ಧಾರಗಳನ್ನು ತೆಗೆದುಕೊಂಡು ಸಚಿವ ಸಂಪುಟ ರಚನೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
342 ಸ್ಥಾನಗಳನ್ನು ಹೊಂದಿರುವ ಪಾಕ್ ಅಸೆಂಬ್ಲಿಯಲ್ಲಿ ಬಹುಮತಕ್ಕೆ 172 ಸ್ಥಾನ ಬೇಕು. 174 ಮತಗಳನ್ನು ಪಡೆಯುವ ಮೂಲಕ ಶೆಹಬಾಜ್ ಅವರು 23ನೇ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.