ಫ್ಲೋರಿಡಾ: ಅಮೆರಿಕಾದ ಫ್ಲೋರಿಡಾ ಮೂಲದ ಮಹಿಳೆಯೊಬ್ಬಳು ತನ್ನ ಮನೆಯೊಂದಿಗೆ ಮಾಜಿ ಗಂಡನ ಮಾರಾಟಕ್ಕೆ ಇಟ್ಟಿದ್ದಾಳೆ. ಪನಾಮ ಸಿಟಿ ಬೀಚ್‌ನಲ್ಲಿರುವ (Panama City Beach) ತನ್ನ ಆಸ್ತಿಗಳಲ್ಲಿ ಒಂದನ್ನು ಮಾರಾಟ ಮಾಡುತ್ತಿರುವ ಫ್ಲೋರಿಡಾ ಮಹಿಳೆ ಈ ಬಗ್ಗೆ ವಿವರ ನೀಡಿದ್ದಾರೆ. ಮೂರು ಮಲಗುವ ಕೋಣೆಗಳು, ಎರಡು ಸ್ನಾನಗೃಹಗಳು, ಒಂದು ಒಳಾಂಗಣ, ಪೂಲ್, ಹಾಟ್ ಟಬ್ ಹಾಗೂ ಅವರ ಮಾಜಿ ಪತಿ ರಿಚರ್ಡ್ (Richard) ಮನೆಯಲ್ಲಿರುವುದಾಗಿ ತಾವು ಮನೆ ಮಾರಾಟಕ್ಕೆ ನೀಡಿದ ಜಾಹೀರಾತಿನಲ್ಲಿ ವಿವರಿಸಿದ್ದಾರೆ. ಆತ ಮನೆ ಕೊಳ್ಳುವವರಿಗೆ ಅಡುಗೆ ಮಾಡಲು ಹಾಗೂ ಸ್ವಚ್ಛತೆ ಮಾಡಲು ಸಹಾಯ ಮಾಡುತ್ತಾನೆ ಎಂದು ಮಹಿಳೆ ವಿವರಿಸಿದ್ದಾಳೆ.
43 ವರ್ಷದ ಮಹಿಳೆ ಕ್ರಿಸ್ಟಲ್ ಬಾಲ್ (Crystal Ball) ಹಾಗೂ ಆಕೆಯ 54 ವರ್ಷದ ಪತಿ ರಿಚರ್ಡ್ ಚೈಲೌ (Richard Chaillou) ತಮ್ಮ ಏಳು ವರ್ಷಗಳ ದಾಂಪತ್ಯದಿಂದ ಇತ್ತೀಚೆಗೆ ವಿಚ್ಛೇದನ ಪಡೆದಿದ್ದರು. ಆದರೆ ಇವರಿಬ್ಬರು ತಮ್ಮ ಪುತ್ರರಿಗೆ ಸಹ ಪೋಷಕರಾಗಿ ಮುಂದುವರಿಯುತ್ತಿರುವುದರಿಂದ ಬೇರ್ಪಟ್ಟ ನಂತರವೂ ಹಲವಾರು ವ್ಯವಹಾರಗಳನ್ನು ಒಟ್ಟಿಗೆ ನಡೆಸುತ್ತಿದ್ದಾರೆ.
ಆನ್‌ಲೈನ್‌ನಲ್ಲಿ ಗಂಡನ ಮಾರಾಟಕ್ಕಿಟ್ಟ ಮಹಿಳೆ... ನೋ ಎಕ್ಸ್‌ಚೇಂಜ್ ನೋ ರಿಟರ್ನ್
ಕ್ರಿಸ್ಟಲ್‌ನ ಮಾಜಿ ಪತಿ ರಿಚರ್ಡ್‌ಗೆ ಆ ಮನೆಯಲ್ಲಿ ಉಳಿಯಲು ಅವಕಾಶ ನೀಡಿದರೆ ಮನೆಯ ಖರೀದಿದಾರರು ಖರೀದಿಯಲ್ಲಿ ರಿಯಾಯಿತಿ ಪಡೆಯಬಹುದು. ಅದ್ಭುತವಾಗಿ ಪುನರ್ವಸತಿ ಹೊಂದಿದ ಪತಿಯೊಂದಿಗೆ ಆಸ್ತಿ ಲಭ್ಯವಿದೆ ಎಂದು ಈ ಆಸ್ತಿ ಖರೀದಿಗೆ ನೀಡಿದ ಜಾಹೀರಾತಿನಲ್ಲಿ ಹೇಳಲಾಗಿದೆ.
ರಿಚರ್ಡ್, ಹುಲಿಯ ಪ್ರತಿರೂಪ(ಗೊಂಬೆ)ದೊಂದಿಗೆ ಪೋಸ್ ನೀಡುತ್ತಿರುವುದನ್ನು ಕೂಡ ಈ ಜಾಹೀರಾತಿನಲ್ಲಿ ನೀಡಲಾಗಿದೆ. ರಿಚರ್ಡ್ ನಿಮಗೆ ಭಾರವಾಗಿ ಇರುವುದಿಲ್ಲ ಅವರು ಲೈವ್ ಇನ್ ಹ್ಯಾಂಡಿಮ್ಯಾನ್ ಪಾತ್ರದ ಭಾಗವಾಗಿ ಅಡುಗೆ ಮಾಡಲು, ಮನೆ ಸ್ವಚ್ಛಗೊಳಿಸಲು ಮತ್ತು ರಿಪೇರಿಗಳನ್ನು ನಿರ್ವಹಿಸಲು ಸಹಾಯ ಮಾಡುತ್ತಾರೆ ಎಂದು ತನ್ನ ಮಾಜಿ ಗಂಡನ ಬಗ್ಗೆ ಆಕೆ ವಿವರಿಸಿದ್ದಾಳೆ. ಅಡುಗೆ ಮನೆಯಲ್ಲಿರುವ ಈ ಕನಸಿನ ಮನುಷ್ಯ ವೈಯಕ್ತಿಕ ಬಾಣಸಿಗ ಮತ್ತು ಸರ್ವರ್ ಆಗುತ್ತಾನೆ. ಆತ ಹೊಸ ಸ್ಟೌವ್‌ನಲ್ಲಿ ಪರಿಪೂರ್ಣವಾದ ಊಟವನ್ನು ಮಾಡುತ್ತಾನೆ ಎಂದು ಅವರು ವಿವರಿಸಿದ್ದಾರೆ.
Divorce Tricks: ನಿಮ್ಮಿಂದ ದೂರವಾಗೋಕೆ ಸಂಗಾತಿ ಈ ತಂತ್ರ ಅನುಸರಿಸ್ತಾ ಇರ್ಬೋದು
ಆತನ ದೊಡ್ಡದಾದ ಮೂಗು ನಿಮ್ಮ ಮನೆಯಲ್ಲಿ ಏನಾದರೂ ದುರ್ವಾಸನೆ ಬರುತ್ತಿದ್ದರೆ ಅದೂ ನಿಮ್ಮ ಗಮನಕ್ಕೆ ಬರುವ ಮೊದಲು ಆತನ ಮೂಗಿಗೆ ಬಡಿಯುತ್ತದೆ. ಹಾಗೂ ಅದನ್ನು ಆತ ಸ್ವಚ್ಛಗೊಳಿಸುತ್ತಾನೆ. ಮನುಷ್ಯನ ಅಸಾಧಾರಣ ಶಕ್ತಿ ನೀವು ಕಠಿಣ ಶ್ರಮ ಪಡುವುದನ್ನು ತಡೆಯುತ್ತದೆ. ಆದರೆ ಈ ಜಾಹೀರಾತು ತಮ್ಮ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಹಲವು ಬಾರಿ ಈ ಜಾಹೀರಾತನ್ನು ತಿರಸ್ಕರಿಸಲಾಗಿದೆ.
ಕಳೆದ ಫೆಬ್ರವರಿಯಲ್ಲಿ ಮಹಿಳೆಯೊಬ್ಬಳು ಆನ್‌ಲೈನ್ ಸೈಟ್‌ನಲ್ಲಿ ತನ್ನ ಗಂಡನನ್ನೇ ಮಾರಾಟಕ್ಕಿಟ್ಟಿದ್ದಳು. ಐರಿಶ್ ಮಹಿಳೆಯೊಬ್ಬರು (Irish woman) ತನ್ನ ಪತಿಯನ್ನು ಹರಾಜು ಸೈಟ್‌ನಲ್ಲಿ 'ಮಾರಾಟ'ಕ್ಕೆ ಇಟ್ಟಿದ್ದು, ಗಂಡ ಆಕೆಯನ್ನು ಅವರ ಎರಡು ಮಕ್ಕಳೊಂದಿಗೆ ಮನೆಯಲ್ಲಿ ಬಿಟ್ಟು ಮೀನುಗಾರಿಕೆಗೆ ಹೋದ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದ ಮಹಿಳೆ ಈ ಕೃತ್ಯವೆಸಗಿದ್ದಳು. ಲಿಂಡಾ ಮ್ಯಾಕ್‌ಅಲಿಸ್ಟರ್ (Linda McAlister) ಎಂಬಾಕೆಯೇ ಹೀಗೆ ಗಂಡನನ್ನು ಮಾರಾಟಕ್ಕಿಟ್ಟ ಮಹಿಳೆ.
ಆಕೆ ನೀಡಿದ ಜಾಹೀರಾತಿನಲ್ಲಿ ಆತ ಹೇಗಿದ್ದಾನೆ ಎಂಬ ಬಗ್ಗೆ ವಿವರ ನೀಡಿದ್ದಳು. ಆನ್‌ಲೈನ್ ಹರಾಜು ಸೈಟ್‌ಗಳಾದ ನ್ಯೂಜಿಲ್ಯಾಂಡ್ ಇಬೇ ಸ್ಟೈಲ್ ಸೈಟ್ (eBay-style site), ಟ್ರೇಡ್‌ಮೀ (TradeMe)ಎಂಬ ಸೈಟ್‌ಗಳಲ್ಲಿ ಜಾಹೀರಾತು ನೀಡಿದ್ದು, ಅವುಗಳ ಪ್ರಕಾರ ಆಕೆಯ ಪತಿ ಜಾನ್ (John) ಆರು ಅಡಿ ಒಂದು ಇಂಚು ಉದ್ದವಿದ್ದು, ಆತನ ವಯಸ್ಸು 37 ವರ್ಷ, ಬೇಟೆ ಹಾಗೂ ಮೀನುಗಾರಿಕೆಯಲ್ಲಿ ಪರಿಣಿತನಾಗಿದ್ದಾನೆ. ಗೋಮಾಂಸದ ಕೃಷಿ ಮಾಡುತ್ತಾನೆ. ಆಹಾರ ಹಾಗೂ ನೀರು ನೀಡಿದಲ್ಲಿ ಈತ ನಿಷ್ಠಾವಂತನಾಗಿರುತ್ತಾನೆ ಎಂದು ಮಹಿಳೆ ತನ್ನ ಗಂಡನ ಬಗ್ಗೆ ಜಾಹೀರಾತಿನಲ್ಲಿ ವಿವರ ನೀಡಿದ್ದಳು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ