ಸೋಶಿಯಲ್ ಮೀಡಿಯಾ ಬ್ಯಾನ್, ವ್ಯಾಟ್ಸಾಪ್, ಫೇಸ್‌ಬುಕ್ ಸೇರಿ ಎಲ್ಲಾ SM ಪಾಕ್‌ನಲ್ಲಿ 6 ದಿನ ನಿಷೇಧ!

Published : Jul 05, 2024, 09:25 AM IST
ಸೋಶಿಯಲ್ ಮೀಡಿಯಾ ಬ್ಯಾನ್, ವ್ಯಾಟ್ಸಾಪ್, ಫೇಸ್‌ಬುಕ್ ಸೇರಿ ಎಲ್ಲಾ SM ಪಾಕ್‌ನಲ್ಲಿ 6 ದಿನ ನಿಷೇಧ!

ಸಾರಾಂಶ

ವ್ಯಾಟ್ಸ್ಆ್ಯಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಯೂಟ್ಯೂಬ್ ಸೇರಿದಂತೆ ಎಲ್ಲಾ ಸೋಶಿಯಲ್ ಮೀಡಿಯಾ ಬಳಕೆಯನ್ನು 6 ದಿನ ಪಾಕಿಸ್ತಾನದಲ್ಲಿ ನಿಷೇಧಿಸಲಾಗಿದೆ.  

ಇಸ್ಲಾಮಾಬಾದ್(ಜು.05) ಕಳೆದ ನಾಲ್ಕು ತಿಂಗಳಿಂದ ಎಕ್ಸ್( ಟ್ವಿಟರ್) ನಿಷೇಧಿಸಿರುವ ಪಾಕಿಸ್ತಾನ ಇದೀಗ ಎಲ್ಲಾ ಸಾಮಾಜಿಕ ಮಾಧ್ಯಮಗಳನ್ನು 6 ದಿನಗಳ ಬ್ಯಾನ್ ಮಾಡಲಾಗಿದೆ. ಫೇಸ್‌ಬುಕ್, ವ್ಯಾಟ್ಸಾಪ್, ಇನ್‌ಸ್ಟಾಗ್ರಾಂ, ಟಿಕ್‌ಟಾಕ್, ಯೂಟ್ಯೂಬ್ ಸೇರಿದಂತೆ ಎಲ್ಲಾ ಸೋಶಿಯಲ್ ಮೀಡಿಯಾ ಮುಂದಿನ 6 ದಿನ ಸಂಪೂರ್ಣ ಬಂದ್ ಮಾಡಲಾಗಿದೆ. ಜುಲೈ 13ರಿಂದ 18ರ ವರೆಗೆ ಪಾಕಿಸ್ತಾನದಲ್ಲಿ ಸೋಶಿಯಲ್ ಮೀಡಿಯಾಗೆ ನಿರ್ಬಂಧ ವಿಧಿಸಲಾಗಿದೆ. ರಂಜಾನ್ ತಿಂಗಳಲ್ಲಿ ದ್ವೇಷಕಾರ ಮಾಹಿತಿಗಳು, ವಿಡಿಯೋ, ಫೋಟೋಗಳು, ಸಂದೇಶ ಹರಡದಂತೆ ತಡೆಯಲು ಪಾಕಿಸ್ತಾನ ಈ ಕ್ರಮ ಕೈಗೊಂಡಿದೆ.

ಪಾಕಿಸ್ದಾನ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಮರಿಯಮ್ ನವಾಜ್ ಸೋಶಿಯಲ್ ಮೀಡಿಯ ಬ್ಯಾನ್ ಪ್ರಸ್ತಾವನೆ ಸಲ್ಲಿಸಿದ್ದರು. ಪಂಜಾಬ್ ಪ್ರಾಂತ್ಯದಲ್ಲಿ ರಂಜಾನ್ ತಿಂಗಳಲ್ಲಿ ದ್ವೇಷಕಾರ ಮಾಹಿತಿಗಳು, ಸಂದೇಶಗಳು, ವಿಡಿಯೋಗಳನ್ನು ಹರಡುವುದು ಹೆಚ್ಚಾಗುತ್ತಿದೆ. ಇದರಿಂದ ರಂಜಾನ್ ತಿಂಗಳಲ್ಲಿ ಶಾಂತಿ ಸುವ್ಯವಸ್ಥೆಗೆ ಅಡ್ಡಿಯಾಗುತ್ತಿದೆ. ಜೊತೆಗೆ ಪವಿತ್ರ ತಿಂಗಳಲ್ಲಿ ಈ ರೀತಿಯ ಘಟನೆಗೆ ಅವಕಾಶ ನೀಡದಂತೆ ತಡೆಯಲು ಈ ಕ್ರಮಕೈಗೊಂಡಿದೆ. ಜುಲೈ4ರ ತಡ ರಾತ್ರಿ ಪಂಜಾಬ್ ಪ್ರಾವಿನ್ಸ್ ಮುಖ್ಯಮಂತ್ರಿ ಈ ಆದೇಶ ಹೊರಡಿಸಿದ್ದಾರೆ.

ಇದೇ ವೇಳೆ ಮರಿಯಮ್ ನವಾಜ್ ತಮ್ಮ ಅಂಕಲ್, ಪ್ರಧಾನಿ ನವಾಜ್ ಷರೀಫ್‌ಗೆ ಸಂಪೂರ್ಣ ಪಾಕಿಸ್ತಾನದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ಮಾಡುವಂತೆ ಮನವಿ ಮಾಡಿದ್ದಾರೆ. ರಂಜಾನ್ ತಿಂಗಳ ಪಾವಿತ್ರ್ಯತೆ ಕಾಪಾಡಲು ಇದು ಅತ್ಯವಶ್ಯಕ ಎಂದು ಮರಿಯಮ್ ನವಾಜ್ ಹೇಳಿದ್ದಾರೆ. ಇತ್ತ ಪಾಕಿಸ್ತಾನ ಸೇನೆ ಮುಖ್ಯಸ್ಥ ಜನರಲ್ ಆಸಿಮ್ ಮುನೀರ್ ಹಿಂದಿನಿಂದಲೂ ಸೋಶಿಯಲ್ ಮೀಡಿಯಾ ಸಂಪೂರ್ಣ ನಿಷೇಧಕ್ಕೆ ಒತ್ತಾಯಿಸಿದ್ದಾರೆ. ಇದು ಡಿಜಿಟಲ್ ಭಯೋತ್ಪಾದನೆಗೆ ಉತ್ತೇಜನ ನೀಡಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚೆಗೆ ಪಾಕಿಸ್ತಾನದ ಉಪ ಪ್ರಧಾನಿ ಇಶಾಖ್ ಧಾರ್ ಸಂಪೂರ್ಣವಾಗಿ ಸಾಮಾಜಿಕ ಮಾಧ್ಯಮಗಳನ್ನು ನಿಷೇಧಿಸುವ ಮಾತನಾಡಿದ್ದರು. ಸೋಶಿಯಲ್ ಮೀಡಿಯಾದಿಂದ ಪಾಕಿಸ್ತಾನದ ಭದ್ರತೆಗೆ ಅಪಾಯ ಹೆಚ್ಚಿದೆ. ಭಯೋತ್ಪಾದಕೆ, ಗಡಿ ಪ್ರದೇಶದಲ್ಲಿನ ಸಮಸ್ಯೆಗಳು ತೀವ್ರಗೊಳ್ಳುತ್ತಿರುವುದಕ್ಕೆ ಸಾಮಾಜಿಕ ಮಾಧ್ಯಮಗಳು ಕಾರಣವಾಗುತ್ತಿದೆ ಎಂದಿದ್ದರು. 

ಐಸಿಸಿ ಚಾಂಪಿಯನ್ಸ್‌ ಟ್ರೋಫಿ ತಾತ್ಕಾಲಿಕ ವೇಳಾಪಟ್ಟಿ ಫೈನಲ್: ಭಾರತ vs ಪಾಕ್‌ ಪಂದ್ಯದ ಡೇಟ್ ಫಿಕ್ಸ್!

ಫೆಬ್ರವರಿ ತಿಂಗಳಲ್ಲಿ ಪಾಕಿಸ್ತಾನ ಮೈಕ್ರೋ ಬ್ಲಾಗಿಂಗ್ ವೇದಿಕೆ ಟ್ವಿಟರ್(ಎಕ್ಸ್) ನಿಷೇಧ ಮಾಡಿದೆ. ಪಾಕಿಸ್ತಾನ ಚುನಾವಣೆ ಫಲಿತಾಂಶದ ಬೆನ್ನಲ್ಲೇ ಟ್ವಿಟರ್ ನಿಷೇಧಿಸಲಾಗಿದೆ. ಕಳೆದ ನಾಲ್ಕು ತಿಂಗಳಿಂದ ಪಾಕಿಸ್ತಾನದಲ್ಲಿ ಟ್ವಿಟರ್ ಲಭ್ಯವಿಲ್ಲ. ಇದೀಗ ಇತರ ಸೋಶಿಯಲ್ ಮೀಡಿಯಾ ಕೂಡ ಸದ್ಯದಲ್ಲೇ ಸಂಪೂರ್ಣ ನಿಷೇಧವಾಗುವ ಲಕ್ಷಣಗಳು ಗೋಚರಿಸುತ್ತಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ
sculptor makeup: ಹುಡುಗರೇ ಆಹಾ ಚೂಪಾದ ಮೂಗು ಎಂಥಾ ಬ್ಯೂಟಿ ಅಂತ ಮರುಳಾಗದಿರಿ ಜೋಕೆ..!