ಪಾಕಿಸ್ತಾನ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ವರ್ಷಗಳೇ ಉರುಳಿದೆ. ಕುಂಟುತ್ತಾ, ತೆವಳುತ್ತಾ ಸಾಗುತ್ತಿರುವ ಪಾಕಿಸ್ತಾನದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಇದೀಗ ಇಂಧನಕ್ಕಿಂತ ಪಾಕಿಸ್ತಾನದಲ್ಲಿ ಹಾಲಿನ ದರ ದುಬಾರಿಯಾಗಿದೆ. ಒಂದು ಲೀಟರ್ ಹಾಲಿಗೆ 370 ರೂಪಾಯಿಗೆ ಏರಿಕೆಯಾಗಿದೆ.
ಇಸ್ಲಾಮಾಬಾದ್(ಜು.05) ಪಾಕಿಸ್ತಾನದ ಪರಿಸ್ಥಿತಿ ಬಿಡಿಸಿ ಹೇಳಬೇಕಿಲ್ಲ. ಕಳೆದ ಒಂದು ವರ್ಷದಿಂದ ಪಾಕಿಸ್ತಾನ ಆರ್ಥಿಕವಾಗಿ ಜರ್ಝರಿತವಾಗಿದೆ. ಖಜಾನೆ ಖಾಲಿ ಖಾಲಿ, ವಿದೇಶಿದಲ್ಲಿ ಸಾಲದ ಶೂಲ, ಉತ್ಪಾದನೆ, ರಫ್ತು ಪಾತಾಳಕ್ಕೆ, ಆಮದು ಏರಿಕೆ. ಹಳಿ ತಪ್ಪಿರುವ ಪಾಕಿಸ್ತಾನದಲ್ಲಿ ಇದೀಗ ತೆರಿಗೆ ಹೆಚ್ಚಳ ಮಾಡಲಾಗಿದೆ. ಇದರ ಪರಿಣಾಮ ಒಂದು ಲೀಟರ್ ಹಾಲಿನ ಬೆಲೆ 370 ರೂಪಾಯಿಗೆ ಏರಿಕೆಯಾಗಿದೆ. ಫ್ರಾನ್ಸ್, ಆಸ್ಟ್ರೇಲಿಯಾ ಸೇರಿದಂತೆ ಮಂದುವರಿದ ದೇಶಗಳಿಗಿಂತ ಪಾಕಿಸ್ತಾನದಲ್ಲಿ ಹಾಲಿನ ದರ ದುಬಾರಿಯಾಗಿದೆ.
ಪಾಕಿಸ್ತಾನದಲ್ಲಿ ಪೆಟ್ರೋಲ್ ಬೆಲೆ 277 ರೂಪಾಯಿ ಪ್ರತಿ ಲೀಟರ್‌ಗೆ ಆದರೆ ಹಾಲಿನ ಬೆಲೆ 1.33 ಅಮೆರಿಕನ್ ಡಾಲರ್. ಪ್ಯಾರಿಸ್‌ನಲ್ಲಿ ಒಂದು ಲೀಟರ್ ಹಾಲಿನ ಬೆಲೆ 1.23 ಅಮೆರಿಕನ್ ಡಾಲರ್, ಆಸ್ಟ್ರೇಲಿಯಾ ಮೆಲ್ಬೋರ್ನ್‌ನಲ್ಲಿ 1.08 ಅಮೆರಿಕನ್ ಡಾಲರ್. ಕಳೆದ ವಾರ ಪಾಕಿಸ್ತಾನದಲ್ಲಿ ಹಾಲಿನ ಮೇಲೆ ಶೇಕಡಾ 18ರಷ್ಟು ತೆರಿಗೆ ಏರಿಕೆ ಮಾಡಲಾಗಿದೆ. ಪಾಕಿಸ್ತಾನ ಹಣಕಾಸು ಸಚಿವ ಮೊಹಮ್ಮದ್ ಔರಂಗಜೇಬ್ ಈ ಘೋಷಣೆ ಮಾಡಿದ್ದರು. ಇತ್ತ ಸಗಟು ಮಾರಕಟ್ಟೆ ದರ ಕೂಡ ಹೆಚ್ಚಳವಾಗಿದೆ. ಹೀಗಾಗಿ ಸರಿಸುಮಾರು ಶೇಕಡಾ 25 ರಷ್ಟು ದರದಲ್ಲಿ ಏರಿಕೆಯಾಗಿದೆ. ಇದರ ಪರಿಣಾಮ ಹಾಲು 370 ರೂಪಾಯಿಗೆ ತಲುಪಿದೆ.
undefined
ಜುಲೈ5ರ ಪೆಟ್ರೋಲ್ ಡೀಸೆಲ್ ದರ ಘೋಷಿಸಿದ OMCs, ನಿಮ್ಮ ಊರಲ್ಲಿ ಎಷ್ಟಿದೆ ಇಂಧನ ಬೆಲೆ?
ತೆರಿಗೆ ಹೆಚ್ಚಳದಿಂದ ಹಾಲು ದುಬಾರಿಯಾಗಿದೆ. ಇದರ ಪರಿಣಾಮ ಹಣದುಬ್ಬರ ಪಾಕಿಸ್ತಾನದಲ್ಲಿ ತಾಂಡವವಾಡುತ್ತಿದೆ. ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಶೇಕಡಾ 40 ರಷ್ಚು ಪಾಕಿಸ್ತಾನದ ಜನ ಕಡು ಬಡನತಕ್ಕೆ ತಳ್ಳಲ್ಪಟ್ಟಿದ್ದಾರೆ. ಪಾಕಿಸ್ತಾನದಲ್ಲೇ 5 ವರ್ಷ ಕೆಳಗಿನ ಶೇಕಡಾ 60 ರಷ್ಟು ಮಕ್ಕಳು ಅನೆಮಿಯಾ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇನ್ನು ಶೇಕಡಾ 40 ರಷ್ಟು ಮಕ್ಕಳು ಅಪೌಷ್ಠಿಕತೆ ಸೇರಿದಂತೆ ಇತರ ಕೆಲ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸದ್ಯ ಹಾಲಿನ ದರವೂ ಏರಿಕೆಯಾಗಿರುವುದರಿಂದ ಪಾಕಿಸ್ತಾನ ಪರಿಸ್ಥಿತಿ ಸಾವು ಬದುಕಿನ ನಡುವಿದೆ.
ಅಂತಾರಾಷ್ಟ್ರೀಯ ಹಣಕಾಸು ನಿಧಿ(IMF) ಷರತ್ತುಗಳಂತೆ ಆರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸಿ ಸಾಲ ಪಡೆಯಲು ಮುಂದಾಗಿರುವ ಪಾಕಿಸ್ತಾನ ಇತ್ತೀಚೆಗೆ ವಾರ್ಷಿಕ ಬಜೆಟ್ ಮಂಡಿಸಲಾಗಿದೆ. ಈ ವೇಳೆ ಒಟ್ಟಾರೆ ಶೇಕಡಾ 40 ರಷ್ಟು ತೆರಿಗೆ ಹೆಚ್ಚಳ ಮಾಡಲಾಗಿದೆ. ಪಾಕಿಸ್ತಾನದ ಇತಿಹಾಸದಲ್ಲಿ ಈ ಪೈಕಿ ತೆರಿಗೆ ಏರಿಕೆ ಮಾಡಿಲ್ಲ. ಇದರ ಪರಿಣಾಮ ನೇರವಾಗಿ ಜನಸಾಮಾನ್ಯರ ಮೇಲೆ ತಟ್ಟಿದೆ.
ಮುಂಬೈ ಉಗ್ರರ ದಾಳಿಯ ಆರೋಪಿ ರಾಣಾ ಶೀಘ್ರದಲ್ಲಿಯೇ ಭಾರತಕ್ಕೆ
ಇತ್ತೀಚಗೆ ಕಡಿತಗೊಳಿಸಿದ್ದ ತೈಲ ಬೆಲೆ ಮೇಲಿನ ತೆರಿಗೆಯನ್ನು ಮತ್ತೆ ಏರಿಕೆ ಮಾಡಲಾಗಿದೆ. ಪಾಕಿಸ್ತಾನದಲ್ಲಿ ಪೆಟ್ರೋಲ್ ದರವನ್ನು 7.45 ರೂಪಾಯಿ ಏರಿಕೆ ಮಾಡಿದ್ದರ, ಡೀಸೆಲ್ ದರವನ್ನು 9.56 ರೂಪಾಯಿ ಏರಿಕೆ ಮಾಡಲಾಗಿದೆ. ಸದ್ಯ ಪಾಕಿಸ್ತಾನದಲ್ಲಿ ಲೀಟರ್ ಪೆಟ್ರೋಲ್ ಬೆಲೆ 277 ರೂಪಾಯಿ ಆಗಿದೆ.