ನ್ಯೂಜಿಲ್ಯಾಂಡ್‌ನ ಅತಿ ದೊಡ್ಡ ರಫ್ತು ಮಾರುಕಟ್ಟೆಯಾಗಿರುವ ಚೀನಾದಲ್ಲಿ ತನ್ನ ವ್ಯಾಪಾರವನ್ನು ಇನ್ನಷ್ಟು ವೃದ್ಧಿಸುವ ಸಲುವಾಗಿ ಕಂಪನಿಗಳ ಅಧಿಕಾರಿಗಳ ನಿಯೋಗದೊಂದಿಗೆ ಕ್ರಿಸ್ ಹಿಪ್ಕಿನ್ಸ್ ಭಾನುವಾರ ಚೀನಾಗೆ ತೆರಳಿದ್ದಾರೆ.
ವೆಲ್ಲಿಂಗ್ಟನ್ (ಜೂನ್ 27, 2023): ಚೀನಾ ಪ್ರವಾಸ ಕೈಗೊಂಡಿರುವ ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ ಹಿಪ್‌ಕಿನ್ಸ್ ತಾವು ಪ್ರಯಾಣಿಸಿದ ವಾಯುಪಡೆ ವಿಮಾನದ ಜೊತೆಗೆ, ಇನ್ನೊಂದು ವಿಮಾನವನ್ನು ಜೊತೆಗೆ ಕೊಂಡೊಯ್ದಿದ್ದಾರೆ. ಕಾರಣ ಏನು ಗೊತ್ತೇ? ಯಾವುದೇ ದೋಷದಿಂದ ಒಂದು ವಿಮಾನ ಕೈಕೊಟ್ಟರೆ ಇನ್ನೊಂದು ವಿಮಾನ ಇರಲಿ ಎಂಬ ಕಾರಣಕ್ಕೆ!
ನ್ಯೂಜಿಲ್ಯಾಂಡ್‌ನ ಅತಿ ದೊಡ್ಡ ರಫ್ತು ಮಾರುಕಟ್ಟೆಯಾಗಿರುವ ಚೀನಾದಲ್ಲಿ ತನ್ನ ವ್ಯಾಪಾರವನ್ನು ಇನ್ನಷ್ಟು ವೃದ್ಧಿಸುವ ಸಲುವಾಗಿ ಕಂಪನಿಗಳ ಅಧಿಕಾರಿಗಳ ನಿಯೋಗದೊಂದಿಗೆ ಕ್ರಿಸ್ ಹಿಪ್ಕಿನ್ಸ್ ಭಾನುವಾರ ಚೀನಾಗೆ ತೆರಳಿದ್ದಾರೆ. ಈ ವೇಳೆ ಎರಡು ವಿಮಾನಗಳು ತೆರಳಿದ್ದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ವಿಪಕ್ಷಗಳು ‘ಇದು ರಾಷ್ಟ್ರದ ಕಳಪೆ ರಕ್ಷಣಾ ವ್ಯವಸ್ಥೆ ಹಾಗೂ ಮುಜುಗರ ತರುವ ಸಂಗತಿಯಾಗಿದೆ’ ಎಂದಿವೆ.
ಇದನ್ನು ಓದಿ: ನನಗೇ ಇದೇ ಸರಿಯಾದ ಸಮಯ: ಪ್ರಧಾನಿ ಹುದ್ದೆಗೆ ದಿಢೀರ್ ರಾಜೀನಾಮೆ ಘೋಷಿಸಿದ 42 ವರ್ಷದ ಜಸಿಂಡಾ ಅರ್ಡೆರ್ನ್
ಈ ಬಗ್ಗೆ ಸ್ಪಷ್ಟನೆ ನೀಡಿರುವ ಪ್ರಧಾನ ಮಂತ್ರಿ ಕಚೇರಿಯು ‘ಈಗಾಗಲೇ ಈ ವಿಮಾನಗಳು 30 ವರ್ಷ ಹಳೆಯವಾಗಿವೆ. ಅವುಗಳ ಕಾರ್ಯಕ್ಷಮತೆಯ ಅಂತ್ಯ ಸಮೀಪಿಸುತ್ತಿದೆ. 2028 ಅಥವಾ 30ರಲ್ಲಿ ಅವುಗಳನ್ನು ಬದಲಾಯಿಸಲಾಗುತ್ತದೆ. ಹೀಗಾಗಿ ಒಂದು ವಿಮಾನ ಹಾಳಾದರೂ ‘ಬ್ಯಾಕಪ್’ ಆಗಿ ಇನ್ನೊಂದು ವಿಮಾನ ಇರಲಿ’ ಎಂದು ಈ ಯೋಜನೆ ಮಾಡಲಾಗಿದೆ ಎಂದಿದೆ.
ಪ್ರವಾಸದ ಪ್ರಾಮುಖ್ಯತೆ ಮತ್ತು ದೂರದ ದೂರವನ್ನು ಗಮನಿಸಿದರೆ, "ನಮ್ಮ ಅತಿದೊಡ್ಡ ವ್ಯಾಪಾರ ಪಾಲುದಾರರಿಗೆ ಕಾರ್ಯಾಚರಣೆಯ ಯಶಸ್ಸನ್ನು ಖಚಿತಪಡಿಸಿಕೊಳ್ಳಲು ಬ್ಯಾಕಪ್ ವಿಮಾನವನ್ನು ಸಮರ್ಥಿಸಲಾಗಿದೆ ಎಂದು ಪರಿಗಣಿಸಲಾಗಿದೆ" ಎಂದು ಈ ಸಂಬಂಧ ವಕ್ತಾರರು ಮಾಹಿತಿ ನೀಡಿದ್ದಾರೆ "757 ಗಳು ಸುಮಾರು 30 ವರ್ಷ ಹಳೆಯವು, ಅದರ ವೈಮಾನಿಕ ಹಾರಾಟದ ಜೀವನದ ಅಂತ್ಯವನ್ನು ಸಮೀಪಿಸುತ್ತಿವೆ ಮತ್ತು 2028 ಹಾಗೂ 2030 ರ ನಡುವೆ ಬದಲಿಯಾಗಲಿವೆ." ಎಂದೂ ಹೇಳಿದ್ದಾರೆ.
ಇದನ್ನೂ ಓದಿ: Covid Crisis: ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಮದುವೆ ರದ್ದು!
ಇನ್ನು, ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರಮುಖ ವಿರೋಧ ಪಕ್ಷದ ರಾಷ್ಟ್ರೀಯ ಪಕ್ಷದ ನಾಯಕ ಕ್ರಿಸ್ಟೋಫರ್ ಲುಕ್ಸನ್, "ನಾವು ಹವಾಮಾನ ತುರ್ತು ಪರಿಸ್ಥಿತಿಯನ್ನು ಹೊಂದಿದ್ದರೆ, ಎರಡನೆಯ 30 ವರ್ಷ ವಯಸ್ಸಿನ 757 ಇತರರನ್ನು ಹಿಂಬಾಲಿಸುವುದರಲ್ಲಿ ಅರ್ಥವಿಲ್ಲ" ಎಂದು ನ್ಯೂಸ್‌ಸ್ಟಾಕ್‌ಜೆಡ್‌ಬಿಗೆ ಹೇಳಿದ್ದು, ಪ್ರಧಾನಿ ನಿರ್ಧಾರವನ್ನು ಟೀಕಿಸಿದ್ದಾರೆ.
ಕಳೆದ ವರ್ಷ ಪ್ರಧಾನಿ ಜಸಿಂಡಾ ಆರ್ಡೆರ್ನ್ ಪ್ರಯಾಣಿಸುತ್ತಿದ್ದ ವಿಮಾನ ಮುರಿದು ಅವರು ಅಂಟಾರ್ಟಿಕಾದಲ್ಲಿ ಸಿಲುಕಿಕೊಂಡಿದ್ದ ಘಟನೆ ನಡೆದಿತ್ತು. ಬಳಿಕ ಅವರನ್ನು ಬೇರೊಂದು ವಿಮಾನದ ಮೂಲಕ ಕರೆತರಲಾಗಿತ್ತು. ಹೀಗಾಗಿ ನ್ಯೂಜಿಲೆಂಡ್ ಬ್ಯಾಕಪ್ ವಿಮಾನದ ಮೊರೆ ಹೋಗಿದೆ.
ಇದನ್ನೂ ಓದಿ: 1 ಕೊರೋನಾ ಕೇಸ್ ಪತ್ತೆ: ಇಡೀ ನ್ಯೂಜಿಲೆಂಡ್ ಲಾಕ್‌ಡೌನ್!