ಲುಂಗಿ ಉಟ್ಟು ಪೋಸ್ ನೀಡಿದ ಬೆಯರ್‌ ಗ್ರಿಲ್ಸ್‌, ಮುಂದಿನ ಅತಿಥಿ ಸುಳಿವು ನೀಡಿದ ಸಾಹಸಿ!

Published : Jun 26, 2023, 02:44 PM IST
ಲುಂಗಿ ಉಟ್ಟು ಪೋಸ್ ನೀಡಿದ ಬೆಯರ್‌ ಗ್ರಿಲ್ಸ್‌, ಮುಂದಿನ ಅತಿಥಿ ಸುಳಿವು ನೀಡಿದ ಸಾಹಸಿ!

ಸಾರಾಂಶ

ಡಿಸ್ಕರಿ ಚಾನೆಲ್ ಮೂಲಕ ಬೆಯರ್ ಗ್ರಿಲ್ಸ್ ಭಾರತದಲ್ಲಿ ಚಿರಪರಿಚಿತ. ಪ್ರಧಾನಿ ಮೋದಿ, ಅಕ್ಷಯ್ ಕುಮಾರ್ ಸೇರಿದಂತೆ ಹಲವು ಗಣ್ಯ ಅತಿಥಿಗಳ ಜೊತೆ ಕಾರ್ಯಕ್ರಮ ಮಾಡಿದ ಬೆಯರ್ ಗ್ರಿಲ್ಸ್ ಇದೀಗ ಮುಂದಿನ ಗಣ್ಯ ಅತಿಥಿ ಬಗ್ಗೆ ಸುಳಿವು ನೀಡಿದ್ದಾರೆ. 

ನವದೆಹಲಿ(ಜೂ.26) ಬೆಯರ್‌ ಗ್ರಿಲ್ಸ್‌ ನಡೆಸಿಕೊಡುವ ‘ಮ್ಯಾನ್‌ ವರ್ಸಸ್‌ ವೈಲ್ಡ್‌’ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಾಲಿವುಡ್ ನಟ ಅಕ್ಷಯ್ ಕುಮಾರ್ ಸೇರಿದಂತೆ ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಿದ್ದಾರೆ. ಇದೀಗ ಬೆಯರ್ ಗ್ರಿಲ್ಸ್ ಮುಂದಿನ ಅತಿಥಿ ಕುರಿತು ಸುಳಿವು ನೀಡಿದ್ದಾರೆ. ಬೆಯರ್ ಗ್ರಿಲ್ಸ್ ಲುಂಗಿ ಜೊತೆ ಫೋಸ್ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ಹಂಚಿಕೊಂಡಿರುವ ಬೆಯರ್ ಗ್ರಿಲ್ಸ್ ಅತಿಥಿ ಯಾರು ಎಂದು ಊಹಿಸಲು ಸೂಚಿಸಿದ್ದಾರೆ.

ಟ್ವಿಟರ್ ಮೂಲಕ ಬೆಯರ್ ಗ್ರಿಲ್ಸ್ ಕುತೂಹಲ ಹೆಚ್ಚಿಸಿದ್ದಾರೆ. ಸ್ಕಾಟ್‌ಲೆಂಡ್ ಹೈಲ್ಯಾಂಡ್ಸ್‌ನಲ್ಲಿ ಚಿತ್ರೀಕರಣ ಮಾಡಲಾಗಿದೆ. ಲುಂಗಿ ಉಟ್ಟು ಫೋಸ್ ನೀಡಿರುವ ಫೋಟೋ ಹಂಚಿಕೊಂಡು ಕೆಲ ಸುಳಿವುಗಳನ್ನು ನೀಡಿದ್ದಾರೆ. ಬೆಯರ್ ಗ್ರಿಲ್ಸ್ ಫೋಟೋ ನೋಡಿದ ಬೆನ್ನಲ್ಲೇ ಹಲವರು ದಕ್ಷಿಣ ಭಾರತದ ಖ್ಯಾತ ನಟ ಅತಿಥಿಯಾಗಿರುವ ಸಾಧ್ಯತೆಯನ್ನು ವ್ಯಕ್ತಪಡಿಸಿದ್ದಾರೆ.

 

ಕಾರ್ಬೆಟ್ ಹುಲಿ ಸಂರಕ್ಷಿತ ಪ್ರದೇಶದಲ್ಲಿ 'ಮೋದಿ ಸರ್ಕ್ಯೂಟ್' ಅಭಿವೃದ್ಧಿಪಡಿಸಲಿರುವ ಉತ್ತರಾಖಂಡ ಸರ್ಕಾರ

ಆದರೆ ಬಿಯೆರ್ ಗ್ರಿಲ್ಸ್ ಟ್ವೀಟ್ ಮೂಲಕ ರನ್ನಿಂಗ್ ವೈಲ್ಡ್ ವಿತ್ ಬಿಜಿ, ಈ ಸ್ಕಾಟಿಶ್ ಸಾಹಸ ಶೀಘ್ರದಲ್ಲೆ ತೆರೆ ಮೇಲೆ ಬರಲಿದೆ. ಈ ಸಾಹಸದ ಅತಿಥಿ ಯಾರೆಂದು ಗುರಿತಿಸಬಲ್ಲಿರಾ? ಉದ್ದ ಕೂದಲು, ಬ್ರಿಟೀಷ್ ಹಾಗೂ ಓರ್ವ ಐಕಾನ್ ಎಂದು ಬೆಯರ್ ಗ್ರಿಲ್ಸ್ ಟ್ವೀಟ್ ಮೂಲಕ ಹೇಳಿಕೊಂಡಿದ್ದಾರೆ. ಇದೀಗ ಬೆಯರ್ ಗ್ರಿಲ್ಸ್ ಅತಿಥಿ ಯಾರು ಅನ್ನೋ ಕುತೂಹಲ ಹೆಚ್ಚಾಗಿದೆ.

 

 

ಬೆಯರ್ ಗ್ರಿಲ್ಸ್ ಇದೀಗ ಹೊಸ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಮೊದಲು ಮ್ಯಾನ್ ವರ್ಸಸ್ ವೈಲ್ಡ್ ಕಾರ್ಯಕ್ರಮವಾಗಿದ್ದರೆ, ಇದೀಗ ರನ್ನಿಂಗ್ ವೈಲ್ಡ್ ವಿಥ್ ಬೆಯರ್ ಗ್ರಿಲ್ಸ್ ಹೆಸರಿನಲ್ಲಿ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಹೊಸ ಕಾರ್ಯಕ್ರಮ ನ್ಯಾಷನಲ್ ಜಿಯೋಗ್ರಫಿ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಕುತೂಹಲ ಅತಿಥಿಯ ಕಾರ್ಯಕ್ರಮ ಆಗಸ್ಟ್ 20ರ ಸಂಜೆ 6 ಗಂಟೆ ಪ್ರಸಾರವಾಗಲಿದೆ.

 

Into The Wild With Bear Gryllsನಲ್ಲಿ ಅಜಯ್ ದೇವಗನ್

ಬೆಯರ್‌ ಗ್ರಿಲ್ಸ್‌ ನಡೆಸಿಕೊಟ್ಟ‘ಮ್ಯಾನ್‌ ವರ್ಸಸ್‌ ವೈಲ್ಡ್‌’ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಪಾಲ್ಗೊಂಡು ಅಚ್ಚರಿ ನೀಡಿದ್ದರು.ಉತ್ತರಾಖಂಡದ ಜಿಮ್‌ಕಾರ್ಬೆಟ್‌ ಅರಣ್ಯದ ಪೂರ್ವ ನಿಗದಿತ ಸ್ಥಳ ಈ ಚಿತ್ರೀಕರಣ ನಡೆದಿತ್ತು.  8 ಕಿ.ಮೀ ದೂರದ ಕಾಲ್ನಡಿಗೆ ಮೂಲಕ ಯಾನ ಆರಂಭಗೊಂಡಿತ್ತು. ಈ ವೇಳೆ ಆನೆಯೊಂದು ಆನೆಯೊಂದು ಹಾಕಿರುವ ಲದ್ದಿ ಕಾಣಸಿಕ್ಕಿತ್ತು. ಇದನ್ನು ಕೈಗೆತ್ತಿಕೊಳ್ಳುವ ಬೆಯರ್‌, ಇದನ್ನು ಮೈಗೆ ಹಚ್ಚಿಕೊಂಡರೆ ಸೊಳ್ಳೆ ಹತ್ತಿರ ಸುಳಿಯೋಲ್ಲ ಎಂಬ ಜ್ಞಾನ ಹಂಚಿಕೊಳ್ಳುತ್ತಾರೆ. ಜೊತೆಗೆ ಹಿಂದೊಮ್ಮೆ ಆಫ್ರಿಕಾದ ಕಾಡಲ್ಲಿ ನೀರಿನ ಅಭಾವದ ವೇಳೆ ಆನೆ ಲದ್ದಿ ಹಿಂಡಿ ಅದರಲ್ಲಿದ್ದ ನೀರು ಕುಡಿದ ಘಟನೆಯನ್ನು ಜ್ಞಾಪಿಸಿಕೊಂಡಿದ್ದರು.  ಈ ಕಾಡಿನ ಅಪಾಯಕಾರಿ ಆನೆ ಮತ್ತು ಹುಲಿಗಳ ಬಗ್ಗೆ ಬೆಯರ್‌ ಪ್ರಸ್ತಾಪಿಸಿದಾಗ, ಪ್ರಕೃತಿಯ ಜೊತೆ ತಾಳಮೇಳದೊಂದಿಗೆ ಜೀವಿಸಿದರೆ ಪ್ರಕೃತಿ ಮತ್ತು ವನ್ಯಜೀವಿಗಳು ನಮ್ಮ ಜೊತೆ ಸಹಕರಿಸುತ್ತದೆ ಎಂದು ಮೋದಿ ನೀತಿ ಪಾಠ ಮಾಡಿದ್ದರು.

ಬಂಡೀಪುರ ಅಭಯಾರಣ್ಯದಲ್ಲಿ ಬಿಯೆರ್ ಗ್ರಿಲ್ಸ್ , ಭಾರತದ ಸೂಪರ್ ಸ್ಟಾರ್ ರಜನೀಕಾಂತ್‌ ಜೊತೆ ಕಾರ್ಯಕ್ರಮ ಮಾಡಿದ್ದರು. ಡಿಸ್ಕವರಿ ಚಾನಲ್‌ನಲ್ಲಿ ವಿಶ್ವಾದ್ಯಂತ ಪ್ರಸಾರವಾಗುವ ‘ಮ್ಯಾನ್‌ ವರ್ಸಸ್‌ ವೈಲ್ಡ್‌’ ಕಾರ್ಯಕ್ರಮದಲ್ಲಿ ರಜನೀಕಾಂತ್‌ ಅವರು ಯುದ್ಧೋಪಾದಿಯಲ್ಲಿ ಜಲಸಂರಕ್ಷಣೆ ಮಾಡುವಂತೆ ಮನವಿ ಮಾಡಿದ್ದರು. 

‘ಸರ್ಕಾರ, ಸಮುದಾಯ ಮಾತ್ರವಲ್ಲದೇ ವೈಯಕ್ತಿಕವಾಗಿಯೂ ಈ ಯುದ್ಧ (ಜಲಸಂರಕ್ಷಣೆ)ವನ್ನು ಮುನ್ನಡೆಸಬೇಕಾಗಿದೆ. ನೀರು ಸಂರಕ್ಷಿಸುವ ಸಂದೇಶವನ್ನು ದೇಶದ ಪ್ರತಿ ಮನೆಗೂ ಒಯ್ಯಲು ಡಿಸ್ಕವರಿ ಚಾನಲ್‌ನ ಕಾರ್ಯಕ್ರಮ ಒಂದು ಅತ್ಯುತ್ತಮ ವೇದಿಕೆಯಾಗಿದೆ. ಪ್ರತಿಯೊಬ್ಬ ಭಾರತೀಯ ಕೂಡ ಜಲಸಂರಕ್ಷಣೆಗೆ ಮುಂದೆ ಬಂದು ಕೊಡುಗೆ ನೀಡಬೇಕು. 4 ದಶಕಗಳಿಗೂ ಅಧಿಕ ಕಾಲ ಚಿತ್ರರಂಗದಲ್ಲಿದ್ದ ನಾನು ಈ ಕಾರ್ಯಕ್ರಮದ ಮೂಲಕ ಕಿರುತೆರೆಗೆ ಬರಲು ಒಪ್ಪಿದ್ದೇನೆ’ ಎಂದಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

5 ವರ್ಷದಲ್ಲಿ 1.42 ಕೋಟಿ ರೂಪಾಯಿ ಉಳಿತಾಯ ಮಾಡಿದ 25 ವರ್ಷದ ಫುಡ್ ಡೆಲಿವರಿ ಬಾಯ್‌
ಭಾರತ ವಿರೋಧಿ ಬಾಂಗ್ಲಾದೇಶಿ ವಿದ್ಯಾರ್ಥಿ ಯುವ ನಾಯಕ ಉಸ್ಮಾನ್‌