
ಇಸ್ಲಾಮಾಬಾದ್: ಕಳೆದ ಮೇನಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ನಡೆಸಿದ ಆಪರೇಷನ್ ಸಿಂದೂರವನ್ನು ಪಾಕ್ ಸಶಸ್ತ್ರ ಪಡೆಗಳ ಮುಖ್ಯಸ್ಥ ಆಸೀಂ ಮುನೀರ್, ಘಜ್ವಾ-ಎ-ಹಿಂದ್ ಎಂದು ಕರೆದಿದ್ದರು.
ಷರಿಯಾ ಕಾನೂನಿನ ಅನ್ವಯ ಇದರ ಅರ್ಥ ಇಸ್ಲಾಮಿಕ್ ಕಾನೂನನ್ನು ಜಾರಿಗೊಳಿಸಲು ನಡೆಸುವ ಸಶಸ್ತ್ರ ಹೋರಾಟ ಅಥವಾ ಜಿಹಾದ್ ಎಂದು ಜೈಷ್ ಎ ಮೊಹಮ್ಮದ್ ಉಗ್ರಸಂಘಟನೆಯ ಕಮಾಂಡರ್ ಒಬ್ಬ ಹೇಳಿಕೊಂಡಿದ್ದಾನೆ.
ರಾವಲ್ಕೋಟ್‌ನಲ್ಲಿ ಸಂಘಟನೆಯ ಕಮಾಂಡರ್‌ಗಳನ್ನುದ್ದೇಶಿಸಿ ಮಾತನಾಡಿದ ಉಗ್ರ ಇಲ್ಯಾಸ್ ಕಾಶ್ಮೀರಿ, ‘ಯುದ್ಧ ಪ್ರಾರಂಭವಾದ ತಕ್ಷಣ ಶಸ್ತ್ರಾಸ್ತ್ರಗಳು ಹೊರಬಂದವು, ಫೈಟರ್ ಜೆಟ್‌ಗಳು ಡಿಕ್ಕಿ ಹೊಡೆದವು, ಟ್ಯಾಂಕ್‌ಗಳು ಮುಖಾಮುಖಿಯಾದವು. ಕಮಾಂಡರ್ (ಮುನೀರ್) ಇದು ಘಜ್ವತ್-ಉಲ್-ಹಿಂದ್, ಇದು ಬನ್ಯನ್ ಅಲ್ ಮರ್ಸೂಸ್ ಎಂದು ಘೋಷಿಸಿದರು. ನಮ್ಮ ಹೆಸರು, ಗುರುತು, ಧ್ಯೇಯವಾಕ್ಯ ಜಿಹಾದ್. ಸರ್ಕಾರ ನಮ್ಮೊಂದಿಗಿದ್ದಾಗಲೂ ಇಲ್ಲದಿದ್ದಾಗಲೂ ನಮ್ಮ ಗುರಿ ಜಿಹಾದ್. ನಾವು ಜಿಹಾದ್ ನಡೆಸಿ ಕಾಶ್ಮೀರವನ್ನು ಮುಕ್ತಗೊಳಿಸುತ್ತೇವೆ’ ಎಂದಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ