ಬಾಂಗ್ಲಾ ಜೈಲಲ್ಲಿ ಹಿಂದೂ ಸಂಸದ ಸೇನ್‌ ನಿಗೂಢ ಸಾವು : ಅನುಮಾನ

Kannadaprabha News   | Kannada Prabha
Published : Feb 08, 2026, 06:52 AM IST
 bangladesh hindu

ಸಾರಾಂಶ

ಬಾಂಗ್ಲಾದಲ್ಲಿ ಹಿಂದೂ ಸಂಸದ ರಮೇಶ್‌ ಚಂದ್ರ ಸೇನ್‌ ಜೈಲಿನಲ್ಲೇ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಅಧಿಕಾರಿ ಇದು ಅನಾರೋಗ್ಯದಿಂದ ಸಂಭವಿಸಿದ ಸಾವು ಎಂದರೆ, ಇದು ಉದ್ದೇಶಪೂರ್ವಕ ಕೊಲೆ. ಹತ್ಯಾಕಾಂಡದ ಭಾಗ ಎಂದು ಮಾಜಿ ಪ್ರಧಾನಿ ಶೇಖ್‌ ಹಸೀನಾ ಅವರ ಅವಾಮಿ ಲೀಗ್‌ ಪಕ್ಷ ಆರೋಪಿಸಿದೆ.

ಢಾಕಾ: ಬಾಂಗ್ಲಾದಲ್ಲಿ ಸಾಮಾನ್ಯ ಹಿಂದೂಗಳ ಮಾರಣಹೋಮದ ನಡುವೆಯೇ, ಇದೀಗ ಹಿಂದೂ ಸಂಸದ ರಮೇಶ್‌ ಚಂದ್ರ ಸೇನ್‌ ಜೈಲಿನಲ್ಲೇ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಅಧಿಕಾರಿಗಳ ಇದು ಅನಾರೋಗ್ಯದಿಂದ ಸಂಭವಿಸಿದ ಸಾವು ಎಂದರೆ, ಇದು ಉದ್ದೇಶಪೂರ್ವಕ ಕೊಲೆ. 2024ರಿಂದ ನಡೆಯುತ್ತಿರುವ ಹತ್ಯಾಕಾಂಡದ ಭಾಗ ಎಂದು ಮಾಜಿ ಪ್ರಧಾನಿ ಶೇಖ್‌ ಹಸೀನಾ ಅವರ ಅವಾಮಿ ಲೀಗ್‌ ಪಕ್ಷ ಆರೋಪಿಸಿದೆ.

5 ಬಾರಿ ಸಂಸದ, ಜಲ ಸಂಪನ್ಮೂಲ ಸಚಿವರಾಗಿಯೂ ಕೆಲಸ

ಅವಾಮಿ ಲೀಗ್‌ ಪಕ್ಷದ ಸೇನ್‌ (83) 5 ಬಾರಿ ಸಂಸದರಾದ, ಜಲ ಸಂಪನ್ಮೂಲ ಸಚಿವರಾಗಿಯೂ ಕೆಲಸ ಮಾಡಿದ ಅನುಭವ ಹೊಂದಿದ್ದರು. ಹಸೀನಾ ಸರ್ಕಾರದ ಪತನ ನಂತರ ಕೊಲೆ ಸೇರಿದಂತೆ ಮೂರು ಪ್ರಕರಣಗಳಲ್ಲಿ ಅವರನ್ನು ಬಂಧಿಸಲಾಗಿದ್ದು, ಅಂದಿನಿಂದ ಜೈಲಿನಲ್ಲಿದ್ದರು.

ಅನಾರೋಗ್ಯ ಹಿನ್ನೆಲೆ ಆಸ್ಪತ್ರೆಗೆ

ಶನಿವಾರ ಅವರನ್ನು ಅನಾರೋಗ್ಯ ಹಿನ್ನೆಲೆ ದಿನಾಜ್‌ಪುರ ಜಿಲ್ಲಾ ಕಾರಾಗ್ರಹದಿಂದ ದಿನಾಜ್‌ಪುರ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು, ಅಷ್ಟರೊಳಗೆ ಅವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಆದರೆ ಯೂನಸ್‌ ನೇತೃತ್ವದ ಮಧ್ಯಂತರ ಸರ್ಕಾರದಲ್ಲಿ ಅವರಿಗೆ ಸರಿಯಾದ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿರಲಿಲ್ಲ ಎನ್ನುವ ಆರೋಪವೂ ಕೇಳಿ ಬಂದಿದೆ. ಅವಾಮಿ ಲೀಗ್‌ ಕಾರ್ಯಕರ್ತರು ಇದೊಂದು ಜೈಲಿನಲ್ಲಿ ನಡೆದ ಉದ್ದೇಶಪೂರ್ವಕ ಕೊಲೆ ಎಂದು ಆರೋಪಿಸಿದ್ದಾರೆ. ಜಾಲತಾಣದಲ್ಲಿಯೂ ಈ ಬಗ್ಗೆ ಆಕ್ರೋಶ ವ್ಯಕ್ತವಾಗಿದ್ದು, ‘2024ರ ಆಗಸ್ಟ್‌ನಿಂದ ನಡೆಯುತ್ತಿರುವ ಹತ್ಯಾಕಾಂಡದ ಮತ್ತೊಂದು ಭಾಗ, ನೂರಾರು ಹತ್ಯೆಗಳು ಈ ಪಟ್ಟಿಯಲ್ಲಿದೆ. ರಮೇಶ್‌ ಅವರದ್ದು ಹೊಸ ಹೆಸರಿನ ಸೇರ್ಪಡೆ’ ಎಂದು ಯೂನಸ್‌ ಸರ್ಕಾರದ ವಿರುದ್ಧ ಆರೋಪಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಐಟಿ ಕ್ಷೇತ್ರದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ ಆ್ಯಂಥ್ರೋಪಿಕ್‌ ಸಿಟಿಒ ಕನ್ನಡಿಗ ರಾಹುಲ್ ಪಾಟೀಲ್
ಕೃಷಿ ಕ್ಷೇತ್ರ ರಕ್ಷಿಸಿ ಅಮೆರಿಕ ಜತೆಗೆ ವ್ಯಾಪಾರ ಒಪ್ಪಂದ