
ವಾಷಿಂಗ್ಟನ್: ತನ್ನ ಹೊಸ ಎಐ (ಕೃತಕ ಬುದ್ಧಿಮತ್ತೆ) ಟೂಲ್ ಮೂಲಕ ಜಾಗತಿಕ ಐಟಿ ವಲಯದಲ್ಲಿ ತಲ್ಲಣ ಸೃಷ್ಟಿಸಿರುವ ಅಮೆರಿಕ ಮೂಲದ ಆ್ಯಂಥ್ರೋಪಿಕ್ ಕಂಪನಿಯ ಹಿಂದಿನ ಶಕ್ತಿ ಕನ್ನಡಿಗ ರಾಹುಲ್ ಪಾಟೀಲ್!
ನಿಜ. ಕಳೆದೊಂದು ವಾರದಿಂದ ಇಡೀ ಜಗತ್ತಿನಾದ್ಯಂತ ಐಟಿ ಕಂಪನಿಗಳಿಗೆ, ಐಟಿ ಉದ್ಯೋಗಿಗಳಿಗೆ ಭವಿಷ್ಯದ ಬಗ್ಗೆ ಆತಂಕ ಹುಟ್ಟುಹಾಕಿರುವ ಆ್ಯಂಥ್ರೋಪಿಕ್‌ನಲ್ಲಿ ಸಿಟಿಒ (ಮುಖ್ಯ ತಾಂತ್ರಿಕ ಅಧಿಕಾರಿ) ಹುದ್ದೆಯಲ್ಲಿರುವುದು ಕರ್ನಾಟಕದ ಬಾಗಲಕೋಟೆಯ ರಾಹುಲ್ ಪಾಟೀಲ್. ಕಂಪನಿಯ ಈ ಹೊಸ ಎಐ ಟೂಲ್ ಸೇರಿದಂತೆ ಇತ್ತೀಚಿನದ ದಿನಗಳಲ್ಲಿನ ಎಲ್ಲಾ ಹೊಸ ಅವಿಷ್ಕಾರಗಳ ಮೆದುಳು ಇವರೇ ಎಂದು ಹೇಳಲಾಗಿದೆ.
ಕಳೆದ ಅಕ್ಟೋಬರ್ ತಿಂಗಳಲ್ಲಷ್ಟೇ ಎಐ ಸುರಕ್ಷತೆ ಮತ್ತು ಸಂಶೋಧನಾ ಸ್ಟಾರ್ಟಪ್ ಆಗಿರುವ ಆ್ಯಂಥ್ರೋಪಿಕ್‌ನ ಸಿಟಿಒ ಆಗಿ ರಾಹುಲ್ ನೇಮಕವಾಗಿದ್ದರು. ಅದಾದ ಕೆಲವೇ ತಿಂಗಳಲ್ಲಿ ಕಂಪನಿ, ಮಾನವನ ಅಗತ್ಯವೇ ಇಲ್ಲದೆ ಕೆಲಸ ಮಾಡುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಇದು ಐಟಿ ಕ್ಷೇತ್ರದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.
ಇದನ್ನೂ ಓದಿ: ಆ್ಯಂಥ್ರೋಪಿಕ್ ಎಐನಿಂದ ವಿಶ್ವ ಟೆಕ್ ಲೋಕದಲ್ಲಿ ಬಿರುಗಾಳಿ!
ಬೆಂಗಳೂರಿನ ಪ್ರತಿಷ್ಠಿತ ಪಿಇಎಸ್ ಐಟಿ ಖಾಸಗಿ ವಿವಿಯಲ್ಲಿ 1998ರಲ್ಲಿ ಎಂಜಿನಿಯರಿಂಗ್ ಮುಗಿಸಿದ್ದ ರಾಹುಲ್, ನಂತರ ಅಮೆರಿಕದ ವಾಷಿಂಗ್ಟನ್ ವಿವಿಯಲ್ಲಿ ಎಂಬಿಎ ಮುಗಿಸಿದ್ದರು. ಮೈಕ್ರೋಸಾಫ್ಟ್, ಒರ್‍ಯಾಕಲ್ ಸೇರಿ ಅನೇಕ ಕಂಪನಿಗಳಲ್ಲಿ ಕೆಲಸ ಮಾಡಿದ್ದರು. ಆ ಬಳಿಕ ಫಿನ್‌ಟೆಕ್ ಸಂಸ್ಥೆಯ ಸಿಟಿಒ ಆಗಿಯೂ ಕರ್ತವ್ಯ ನಿರ್ವಹಿಸಿದ್ದರು. ಪ್ರಸ್ತುತ ಆ್ಯಂಥ್ರೋಪಿಕ್‌ನ ಸಿಟಿಒ ಆಗಿದ್ದಾರೆ.
ಇದನ್ನೂ ಓದಿ: ಫೋಟೊ, ವಿಡಿಯೋ ಡಿಲೀಟ್ ಮಾಡಿದ್ರೂ ಮೆಮೊರಿ ಫುಲ್ ತೋರಿಸ್ತಿದ್ಯಾ? ಹಾಗಿದ್ರೆ ಹೀಗೆ ಮಾಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ