ಪತ್ನಿ ವಿದ್ಯಾಭ್ಯಾಸ ಮಾಡಿ ಉತ್ತಮ ಕೆಲಸ ಗಿಟ್ಟಿಸಿಕೊಳ್ಳಬೇಕು ಎಂಬ ಕನಸು ಕಂಡ ಪತಿ ಬರೋಬ್ಬರಿ 76 ಲಕ್ಷ ರೂಪಾಯಿ ಖರ್ಚು ಮಾಡಿದ್ದಾನೆ. ವಿದ್ಯಾರ್ಥಿ ವೀಸಾದಡಿ ಕೆನಡಾಗೆ ಕಳುಹಿಸಿದ ಪತಿಗೆ ಶಾಕ್ ಆಗಿದೆ. ಕೆನಡಾ ತಲುಪುತ್ತಿದ್ದಂತೆ ಪತಿ ನಂಬರ್ ಬ್ಲಾಕ್ ಮಾಡಿರುವ ಪತ್ನಿ ಸಂಪರ್ಕಕ್ಕೆ ಸಿಗುತ್ತಿಲ್ಲ.
ಇಸ್ಲಾಮಾಬಾದ್(ಜು.20) ಮದುವೆಯಾದ ಮೇಲೆ ಪತ್ನಿ ಕೆಲಸಕ್ಕೆ ಹೋಗಬಾರದು, ಮನೆಯಲ್ಲಿರಬೇಕು, ವಿದ್ಯಾಭ್ಯಾಸ ಮುಂದುವರಿಸುವುದು ಬೇಡ ಅನ್ನೋ ಮಾತುಗಳು ಕೇಳಿಬರುತ್ತಿದ್ದ ಕಾಲವಲ್ಲ. ಇದೀಗ ಮದುವೆಯಾದ ಬಳಿಕ ಪತ್ನಿಯ ಆಸೆ ಆಕಾಂಕ್ಷೆ, ಕನಸುಗಳನ್ನು ಸಾಕಾರಗೊಳಿಸಲು ಪತಿ ಪ್ರಯತ್ನಿಸಿದ ಹಲವು ಉದಾಹರಣೆಗಳಿವೆ. ಇದೇ ವೇಳೆ ಹೀಗೆ ಪ್ರಯತ್ನಿಸಿದ ಪತಿ ಕೊನೆಗೆ ಎಲ್ಲವನ್ನೂ ಕಳದುಕೊಂಡ ಘಟನೆಗಳೂ ನಡೆದಿದೆ. ಇದೀಗ ತನ್ನ ಪತ್ನಿಯ ಕನಸಿನಂತೆ ಬರೋಬ್ಬರಿ 76 ಲಕ್ಷ ರೂಪಾಯಿ ಖರ್ಚು ಮಾಡಿ ಆಕೆಯನ್ನು ಕೆನಡಾಗೆ ವಿದ್ಯಾರ್ಥಿ ವೀಸಾದಲ್ಲಿ ಕಳುಹಿಸಿದ್ದಾನೆ. ಆದರೆ ಆಕೆ ಕೆನಡಾ ತಲಪುತ್ತಿದ್ದಂತೆ ಪತಿಯ ಫೋನ್ ನಂಬರ್ ಬ್ಲಾಕ್ ಮಾಡಿ ಸಂಪರ್ಕಕ್ಕೆ ಸಿಗುತ್ತಿಲ್ಲ. ಇದೀಗ ಪಾಕಿಸ್ತಾನದ ಪತಿಗೆ ದಿಕ್ಕು ತೋಚದಂತಾಗಿದೆ.
ಪಾಕಿಸ್ತಾನ ವ್ಯಕ್ತಿ ಇತ್ತೀಚೆಗೆ ಮದುವೆಯಾಗಿದ್ದಾನೆ. ಮದುವೆ ಮುನ್ನ ಮಾತುಕತೆಯಲ್ಲಿ ಆಕೆ ತನಗೆ ವಿದ್ಯಾಭ್ಯಾಸ ಮುಂದುವರಿಸಬೇಕು ಎಂದು ಹಂಬಲ ವ್ಯಕ್ತಪಡಿಸಿದ್ದಾಳೆ. ಆದರೆ ಅಷ್ಟೊಂದು ಆರ್ಥಿಕ ಶಕ್ತಿ ತನ್ನ ಪೋಷಕರಿಗಿಲ್ಲ. ಹೀಗಾಗಿ ವಿದ್ಯಾಭ್ಯಾಸಕ್ಕೆ ಬ್ರೇಕ್ ಬಿದ್ದಿದೆ ಎಂದು ಹೇಳಿದ್ದಳು. ಈ ವೇಳೆ ಆಕೆಗೆ ಭರವಸೆ ನೀಡಿದ್ದ ವ್ಯಕ್ತಿ, ಮದುವೆಯಾದ ಬಳಿಕ ನಿನ್ನ ಕೆನಡಾ ವಿದ್ಯಾಭ್ಯಾಸ ಕನಸು ಪೂರೈಸಲು ನೆರವಾಗುತ್ತೇನೆ ಎಂದು ಭರವಸೆ ನೀಡಿದ್ದ.
undefined
ಹೆಂಡ್ತಿ ಮಾಡೋ ಈ ಐದು ತಪ್ಪುಗಳು ಗಂಡನನ್ನೇ ಬಿಕಾರಿಯನ್ನಾಗಿಸುತ್ತೆ !
ಮದುವೆಯಾದ ಕೆಲ ತಿಂಗಳು ಕಳೆಯುತ್ತಿದ್ದಂತೆ ಪತ್ನಿ ವಿದ್ಯಾಭ್ಯಾಸದ ಕುರಿತು ಪ್ರಶ್ನಿಸಿದ್ದಾಳೆ. ಈ ಕುರಿತು ವಿಚಾರಿಸಿದಾಗ ಶುಲ್ಕ, ಖರ್ಚು ವೆಚ್ಚ, ವೀಸಾ ಸೇರಿದಂತೆ ಇತರ ಖರ್ಚುಗಳು ಸೇರಿ ಒಟ್ಟು 76 ಲಕ್ಷ ರೂಪಾಯಿ ಒಟ್ಟುಗೂಡಿಸಬೇಕಿತ್ತು. ಇದು ದೊಡ್ಡ ಮೊತ್ತವೇ ಆಗಿತ್ತು. ಈ ಕುರಿತು ಪತ್ನಿಗೆ ವಿವರಣೆ ನೀಡಿ ಕೆಲ ದಿನಗಳ ಸಮಯಾವಕಾಶ ಬೇಕಿದೆ. ದೊಡ್ಡ ಮೊತ್ತ ಸಂಗ್ರಹಿಸಬೇಕಿದೆ. ಶೀಘ್ರದಲ್ಲೇ ಹಣ ಸಂಗ್ರಹಿಸುತ್ತೇನೆ. ಸ್ವಲ್ಪ ಮೊತ್ತ ಸಾಲ ಪಡೆಯಬೇಕು ಎಂದು ತಿಳಿಸಿದ್ದಾನೆ.
ಸಾಲದ ಮೊತ್ತವೂ ಸಿಕ್ಕಿದೆ. ತನ್ನ ಎಲ್ಲಾ ಉಳಿತಾಯ ಹಣ ಒಗ್ಗೂಡಿಸಿ ಪತ್ನಿಗೆ ವಿದ್ಯಾರ್ಥಿ ವೀಸಾ ಅರ್ಜಿ ಹಾಕಿದ್ದಾನೆ. ವಿದ್ಯಾಬ್ಯಾಸದ ಶುಲ್ಕ ಸೇರಿದಂತೆ ಇತರ ಖರ್ಚು ವೆಚ್ಚಗಳನ್ನು ನೀಡಿದ್ದಾನೆ. ಬರೋಬ್ಬರಿ 76 ಲಕ್ಷ ರೂಪಾಯಿ ಪತ್ನಿ ಕನಸು ಪೂರೈಸಲು ಖರ್ಚು ಮಾಡಿದ್ದಾನೆ. ಭಾರವಾಸ ಮನಸ್ಸಿನಿಂದ ಪತ್ನಿಯನ್ನು ವಿಮಾನ ನಿಲ್ದಾಣದ ಮೂಲಕ ಕೆನಡಾಗೆ ಕಳುಹಿಸಿಕೊಟ್ಟಿದ್ದಾನೆ.
ಪತ್ನಿ ಕನೆಡಾ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಆಕೆ ಪತಿಯ ನಂಬರ್ ಬ್ಲಾಕ್ ಮಾಡಿದ್ದಾಳೆ. ಪತಿ ಕುಟುಂಬಸ್ಥರು ನಂಬರ್ ಕೂಡ ಬ್ಲಾಕ್ ಮಾಡಿದ್ದಾಳೆ. ಯಾವುದೇ ಸಂಪರ್ಕಕ್ಕೂ ಸಿಗುತ್ತಿಲ್ಲ. ಇತ್ತ ಇಷ್ಟು ದುಡ್ಡು ಖರ್ಚು ಮಾಡಿದರೂ ಪತ್ನಿ ಈ ರೀತಿ ಮೋಸ ಮಾಡಿದ್ದಾಳೆ ಎಂದು ಪತಿ ಅಸ್ವಸ್ಥನಾಗಿದ್ದಾನೆ.
ಮಗುವಿಗೆ ತಿಂಗಳು 2 ಆಗುತ್ತಿದ್ದಂತೆ ಗಂಡಂಗೆ ಇನ್‌ಸ್ಟಾಗ್ರಾಮ್‌ನಲ್ಲೇ ತಲಾಖ್ ನೀಡಿದ ದುಬೈ ರಾಣಿ!