
ರೋಮ್(ಜು.20) ಧಾರ್ಮಿಕ ಪವಿತ್ರ ಸ್ಥಳಗಳಲ್ಲಿ ಬಿಕಿನಿ ಫೋಟೋ ಶೂಟ್, ದೇವಸ್ಥಾನಗಳಲ್ಲಿ ಎಲ್ಲೆ ಮೀರಿದ ಫೋಟೋ, ವಿಡಿಯೋ ಶೂಟಿಂಗ್ ಸೇರಿದಂತೆ ಹಲವು ನಿರ್ಬಂಧಿತ ಪ್ರದೇಶಗಳು, ದೇವಸ್ಥಾನಗಳಲ್ಲಿ ರೀಲ್ಸ್, ವಿಡಿಯೋ, ಫೋಟೋ ತೆಗೆದು ವಿವಾದಗಳು ಸೃಷ್ಟಿಯಾಗಿದೆ. ಇಂತಹ ಘಟನೆಗಳು ಇದೀಗ ಹೆಚ್ಚಾಗುತ್ತಿದೆ. ಇದೀಗ ಯವತಿಯೊಬ್ಬಳು ಮತ್ತೊಂದು ಹೆಜ್ಜೆ ಮುಂದೆ ಹೋಗಿ ಅಶ್ಲೀಲವಾಗಿ ವರ್ತಿಸಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾಳೆ. ಇಟಲಿಯ ರೋಮ್ ನಗರದಲ್ಲಿ ವೈನ್ ಆಫ್ ಗಾಡ್ ಎಂದೇ ಗುರುತಿಸಿಕೊಂಡಿರುವ ಬಚ್ಚೂಸ್ ದೇವರ ಪ್ರತಿಮೆ ಜೊತೆ ಪ್ರವಾಸಿ ಯುವತಿ ಅಶ್ಲೀಲವಾಗಿ ನಡೆದುಕೊಂಡಿದ್ದಾಳೆ. ಅಶ್ಲೀಲವಾಗಿ ಫೋಟೋ ಕ್ಲಿಕ್ಕಿಸಿಕೊಂಡು ಇದೀಗ ವಿವಾದಕ್ಕೆ ಗುರಿಯಾಗಿದ್ದಾಳೆ.
ಫ್ಲೊರೆನ್ಸ್ ನಗರದ ಮ್ಯೂಸಿಯಮ್‌ನಲ್ಲಿಟ್ಟಿರುವ ಬಚ್ಚೂಸ್(ದಿ ಗಾಡ್ ಆಫ್ ವೈನ್) ಪ್ರತಿಮೆ ಜೊತೆ ಪ್ರವಾಸಿ ಯುವತಿ ಅಸಭ್ಯವಾಗಿ ನಡೆದುಕೊಂಡಿದ್ದಾಳೆ. ಮಾರ್ಬಲ್ ಮೂಲಕ 1496-97ರ ಅವಧಿಯಲ್ಲಿ ಈ ಪ್ರತಿಮೆಗಳನ್ನು ಕೆತ್ತಲಾಗಿದೆ. ಇಟಲಿಯ ಪ್ರಖ್ಯಾತ ಶಿಲ್ಪಿ ಮೈಕೆಲಾಂಗಲೋ ಈ ನಗ್ನ ಬಚ್ಚೂಸ್ ಪ್ರತಿಮೆಗಳ ಕೆತ್ತಿ ವಾಸ್ತುಶಿಲ್ಪಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಬಚ್ಚೂಸ್ ಪ್ರತಿಮೆಗಳು ನಗ್ನ ಪ್ರತಿಮೆಗಳಾಗಿದೆ. ಈ ನಗ್ನ ಪ್ರತಿಮೆ ಜೊತೆ ಯುವತಿ ಅಶ್ಲೀಲವಾಗಿ ನಡೆದುಕೊಂಡು ಫೋಟೋ ಕ್ಲಿಕ್ಕಿಸಿಕೊಂಡಿದ್ದಾಳೆ.
ಗಾಂಧಿ ಪ್ರತಿಮೆಗೆ ಕೂಲಿಂಗ್ ಗ್ಲಾಸ್ ಹಾಕಿ ಅವಮಾನಿಸಿದ ಎಸ್‌ಎಫ್‌ಐ ನಾಯಕ!
ವಾರಾಂತ್ಯದಲ್ಲಿ ಬರ್ಗೆಲ್ಲೋ ಮ್ಯೂಸಿಯಂಗೆ ಆಗಮಿಸಿದ ಪ್ರವಾಸಿ ಯುವತಿ ಅಶ್ಲೀಲಾಗಿ ವರ್ತಿಸಿದ್ದಾಳೆ. ಬ್ಲೂ ಸ್ಕರ್ಟ್ ಹಾಗೂ ಟಿ ಶರ್ಟ್ ಧರಿಸಿದ್ದ ಯುವತಿ ಬಚ್ಚೂಸ್ ನಗ್ನ ಪ್ರತಿಮೆ ಜೊತೆ ಲೈಂಗಿಕ ಕ್ರಿಯೆ ಭಂಗಿಗಳಲ್ಲಿ ಫೋಟೋ ತೆಗೆದುಕೊಂಡಿದ್ದಾಳೆ. ಈ ಮೂಲರ ರೋಮ್ ನಿವಾಸಿಗಳ ನಂಬಿಕೆ ತೀವ್ರ ಹೊಡೆತ ನೀಡಿದ್ದಾಳೆ. ಬಚ್ಚೂಸ್ ಪ್ರತಿಮೆಯನ್ನು ಎತ್ತರದಲ್ಲಿ ಇಡಲಾಗಿದೆ. ಈ ಪ್ರತಿಮೆಯನ್ನು ಮುಟ್ಟವುದು ಕೂಡ ನಿಷಿದ್ಧವಾಗಿದೆ. ಆದರೆ ಯುವತಿ ಪ್ರತಿಮೆ ಕಟ್ಟೆಗೆ ಹತ್ತಿ ಪ್ರತಿಮೆ ಜೊತೆ ಅಸಭ್ಯವಾಗಿ ವರ್ತಿಸಿದ್ದಾಳೆ.
ಈಕೆಯ ಅಸಭ್ಯ ವರ್ತನೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗು್ತ್ತಿದ್ದಂತೆ ಫ್ಲೊರೆನ್ಸ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಯುವತಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಇದುವರೆಗೂ ಯುವತಿ ಪತ್ತೆಯಾಗಿಲ್ಲ. ಯುುವತಿಯನ್ನು ಪತ್ತೆ ಹಚ್ಚಿ ದುಬಾರಿ ದಂಡ ವಿಧಿಸಲಾಗುತ್ತದೆ. ಇಷ್ಟೇ ಅಲ್ಲ ಯುವತಿಗೆ ನಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.
ಯುವತಿಯ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಯುವತಿಯನ್ನು ಬಂಧಿಸಬೇಕು ಎಂಬ ಆಗ್ರಹಗಳು ವ್ಯಕ್ತವಾಗುತ್ತಿದೆ. ನಶೆಯಲ್ಲಿ ಈ ಯುವತಿ ಹೀಗೆ ಮಾಡಿರುವ ಸಾಧ್ಯತೆ ಇದೆ. ಹೀಗಾಗಿ ಯುವತಿಗೆ ತಕ್ಕ ಪಾಠ ಕಲಿಸಬೇಕು. ನಶೆ ಇರಲಿ, ಇಲ್ಲದಿರಲಿ ತಪ್ಪು ತಪ್ಪೇ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
ಕಂಠಿ ಬಸವೇಶ್ವರ ದೇವಸ್ಥಾನದ ನಂದಿಮೂರ್ತಿ ಭಗ್ನಗೊಳಿಸಿದ ದುಷ್ಕರ್ಮಿಗಳು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ