
ವಾಷಿಂಗ್ಟನ್: ಅಮೆರಿಕಾದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. 150 ಕೆಜಿ ತೂಕದ ದಡೂತಿ ಮಹಿಳೆ 10 ವರ್ಷದ ಮಗನ ಮೇಲೆ ಕುಳಿತು ಆತನ ಉಸಿರು ನಿಲ್ಲಿಸಿ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ಪೊಲೀಸರು ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ. ಆರೋಪಿ ಮಹಿಳೆಯನ್ನು ಜೆನಿಫರ್ ವಿಲ್ಸನ್ ಎಂದು ಗುರುತಿಸಲಾಗಿದೆ. ಜೆನಿಫರ್ ಕೊಲೆ ಮಾಡಿದ ಬಾಲಕನ ಮಲತಾಯಿ ಆಗಿದ್ದಳು. ಕಳೆದ ವಾರವಷ್ಟೇ ಮಹಿಳೆ ವಿರುದ್ಧ ನ್ಯಾಯಾಲಯ ವಾರೆಂಟ್ ಜಾರಿ ಮಾಡಿತ್ತು. ಏಪ್ರಿಲ್ ನಲ್ಲಿ 10 ವರ್ಷದ ಬಾಲಕನ ಹತ್ಯೆ ನಡೆದಿತ್ತು. ಡಕೋಟಾ ಸ್ಟೀವನ್ಸ್ ಮಲತಾಯಿಂದಲೇ ಕೊಲೆಯಾದ ಬಾಲಕ.
ಬಾಲಕ ಡಕೋಟಾ ಸ್ಟೀವನ್ಸ್ ಪದೇ ಪದೇ ಮನೆಯ ಹೊರಗೆ ಹೋಗುತ್ತಿದ್ದನು. ಹೊರಗಡೆ ಹೋಗಿ ನೆರೆಹೊರೆಯ ಜನರ ಜೊತೆ ಸೇರಿಕೊಳ್ಳುತ್ತಿದ್ದನು. ಆತನಿಗೆ ಶಿಕ್ಷೆ ನೀಡಲು ಮಹಿಳೆ ಹಾಗೆ ಮಾಡಿದ್ದಾಳೆ. ಇದು ಉದ್ದೇಶಪೂರಿತವಾದ ಕೊಲೆ ಅಲ್ಲ ಎಂದು ಮಹಿಳೆ ಪರ ವಕೀಲರು ನ್ಯಾಯಾಲಯದ ಮುಂದೆ ಮನವಿ ಮಾಡಿಕೊಂಡಿದ್ದಾರೆ.
ವಿವಾಹಿತ ಮಹಿಳೆ ಜೊತೆ ಅಕ್ರಮ ಸಂಬಂಧ ಬೆಳೆಸೋದಕ್ಕೆ ಅಣ್ತಮ್ಮ ಕಿತ್ತಾಟ; ಕೊಲೆಯಲ್ಲಿ ಅಂತ್ಯ!
ಮಹಿಳೆ ವಿರುದ್ಧ ಕೊಲೆ ಪ್ರಕರಣ
ಮೊದಲು ಬಾಲಕನ ಕತ್ತಿನ ಮೇಲೆ ಕುಳಿತಿದ್ದಾಳೆ. ನಂತರ ಕೆಲ ಸಮಯದ ಎದೆ ಭಾಗದ ಮೇಲೆ ಕುಳಿತು ಹಿಂಸೆ ನೀಡಿದ್ದಾಳೆ. ಇದಾದ ಬಳಿಕ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದ್ದು, ಬಾಲಕ ಪ್ರಜ್ಞೆ ಕಳೆದುಕೊಂಡಿದ್ದಾನೆ. ಆರೋಗ್ಯದಲ್ಲಿ ವ್ಯತ್ಯಾಸ ಕಾಣಿಸಿಕೊಳ್ಳುತ್ತಿದ್ದಂತೆ ಬಾಲಕನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಏಪ್ರಿಲ್ 27ರಂದು ಬಾಲಕ ಮೃತಪಟ್ಟಿದ್ದಾನೆ. ಸಾವಿನ ಬಳಿಕ ಮಹಿಳೆ ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು.
ಅನಾಥ ಅಥವಾ ಪೋಷಕರೊಂದಿಗೆ ಜೀವನ ನಡೆಸಲಾಗದ ಮಕ್ಕಳನ್ನು ದತ್ತು ಪಡೆದುಕೊಳ್ಳುವ ಪದ್ಧತಿ ಅಮೆರಿಕಾದದಲ್ಲಿದೆ. ಈ ರೀತಿ ದತ್ತು ಪಡೆದುಕೊಳ್ಳುವ ಜನರು, ಮಕ್ಕಳ ಆರೈಕೆ ಹಾಗೂ ಶಿಕ್ಷಣದ ಜವಾಬ್ದಾರಿ ತೆಗೆದುಕೊಳ್ಳಬೇಕು. ಜೆನಿಫರ್ ವಿಲ್ಸನ್ ಸಹ 10 ವರ್ಷದ ಕೋಟಾ ಸ್ಟೀವನ್ಸ್ ನ್ನು ದತ್ತು ಪಡೆದುಕೊಂಡಿದ್ದಳು. ಶನಿವಾರ ಮಹಿಳೆಯನ್ನ ಬಂಧಿಸಲಾಗಿದ್ದು, ಮಕ್ಕಳನ್ನು ದತ್ತು ಪಡೆದುಕೊಳ್ಳುವಿಕೆ ಪರವಾನಿಗೆಯನ್ನು ರದ್ದುಪಡಿಸಲಾಗಿದೆ.
ಕೊಲೆಗಾರನ ಬೆನ್ನಟ್ಟಲು ಮಳೆಯನ್ನೂ ಲೆಕ್ಕಿಸದೆ 8 ಕಿ.ಮೀ ಓಡಿ ಮಹಿಳೆಯ ಪ್ರಾಣ ಉಳಿಸಿದ ಕರ್ನಾಟಕ ಪೊಲೀಸ್ ಶ್ವಾನ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ