ಹಾವು ಕಡಿತಕ್ಕೆ 54 ಇಂಜೆಕ್ಷನ್ ನೀಡಿದ ವೈದ್ಯರು.. ಬದುಕಿ ಬಂದ ವ್ಯಕ್ತಿಗೆ ಕಾದಿತ್ತು ಬಿಗ್ ಶಾಕ್!

Published : Jul 19, 2026, 10:39 AM IST
rattle snake

ಸಾರಾಂಶ

Snake bite recovery story Kannada: ತೋಟದಲ್ಲಿ ವಾಕಿಂಗ್ ಮಾಡುತ್ತಿದ್ದಾಗ ಸರಕ್ಕನೆ ಬಂದ ವಿಷಕಾರಿ ಹಾವು ವ್ಯಕ್ತಿಯೊಬ್ಬರಿಗೆ ಕಚ್ಚಿದೆ. ಆ ನಂತರ ಅವರಿಗೆ ವೈದ್ಯರು ಬರೋಬ್ಬರಿ 54 ಇಂಜೆಕ್ಷನ್‌ಗಳನ್ನು ನೀಡಿ ಪವಾಡದಂತೆ ಪ್ರಾಣಾಪಾಯದಿಂದ ಪಾರು ಮಾಡಿದ್ದೇನೋ ನಿಜ. ಆದರೆ ಚಿಕಿತ್ಸೆಯ ನಂತರ ಆಸ್ಪತ್ರೆ ಕೊಟ್ಟ ಶಾಕ್‌ಗೆ ಇಡೀ ಕುಟುಂಬವೇ ಬೆಚ್ಚಿಬಿದ್ದಿದೆ.

ಹಾವು ಕಚ್ಚಿದ ಮೇಲೆ ಯಾವುದೇ ವ್ಯಕ್ತಿಯಾಗಲಿ ಬದುಕುಳಿಯುವುದು ಒಂದು ಪವಾಡವೇ ಸರಿ. ಅದೇ ರೀತಿ ಇಲ್ಲೊಂದು ಕಡೆ ಬರೋಬ್ಬರಿ 54 ಆಂಟಿ-ವೆನಮ್ ಇಂಜೆಕ್ಷನ್‌ಗಳನ್ನು ಪಡೆದ ವ್ಯಕ್ತಿಯೊಬ್ಬರು ಸಾವು ಮತ್ತು ಬದುಕಿನ ನಡುವೆ ಹೋರಾಡಿ ಗೆದ್ದಿದ್ದಾರೆ. ಆದರೆ ಕೊನೆಗೆ ಆಸ್ಪತ್ರೆ ನೀಡಿದ ಬಿಲ್ ನೋಡಿ ಬದುಕಿದ ವ್ಯಕ್ತಿಗೆ ಮರುಕ್ಷಣವೇ ಪ್ರಜ್ಞೆ ತಪ್ಪುವಂತಾಗಿದೆ! ಆ ಘಟನೆಯ ವಿವರ ಇಲ್ಲಿದೆ.

ಇದನ್ನೂ ಓದಿ: KBR ಪಾರ್ಕ್‌ನಲ್ಲಿ ಇದ್ದಕ್ಕಿದ್ದಂತೆ ಎದುರಾಯ್ತು 12 ಅಡಿ ಉದ್ದದ ದೈತ್ಯ ಹೆಬ್ಬಾವು.. ಮುಂದೇನಾಯ್ತು ನೀವೇ ನೋಡಿ

ಆಗಿದ್ದಿಷ್ಟು..

ಅಮೆರಿಕದ ಇಡಾಹೊ ನಿವಾಸಿ ಕ್ರಿಸ್ ಹೊವರ್ತ್ ಎಂಬುವವರು ಕ್ಯಾಲಿಫೋರ್ನಿಯಾದಲ್ಲಿರುವ ತಮ್ಮ ಪೋಷಕರ ಮನೆಗೆ ಹೋಗಿದ್ದರು. ಪತ್ನಿ ಮಕ್ಕಳ ಜೊತೆ ಸಂತೋಷದಿಂದ ಕಾಲ ಕಳೆಯುತ್ತಿದ್ದ ಕ್ರಿಸ್, ಅಲ್ಲಿನ ತೋಟದಲ್ಲಿ ವಾಕಿಂಗ್ ಮಾಡುತ್ತಿದ್ದಾಗ ಕಾಲಡಿ ಸರಕ್ಕನೆ ಬಂದ ವಿಷಕಾರಿ ರಾಟಲ್ ಸ್ನೇಕ್ ಮೇಲೆ ಆಕಸ್ಮಿಕವಾಗಿ ಕಾಲಿಟ್ಟಿದ್ದಾರೆ. ಮರುಕ್ಷಣವೇ ಆ ಹಾವು ಕ್ರಿಸ್‌ಗೆ ಎರಡು ಬಾರಿ ಕಚ್ಚಿದೆ.

ಇದನ್ನೂ ಓದಿ: ಭಾರೀ ಮಳೆ ಮಧ್ಯೆ ಪೊದೆ ಹಿಂದೆ ಏನೋ ವಿಚಿತ್ರ ಕಾಣಿಸಿತೆಂದು ಕ್ಯಾಮೆರಾ ಜೂಮ್ ಮಾಡಿದಾಗ ಕಂಡಿದ್ದೇನು ನೋಡಿ...

ಇದ್ದಕ್ಕಿದ್ದಂತೆ ಹದಗೆಟ್ಟ ಆರೋಗ್ಯ

ಹಾವು ಕಚ್ಚಿದ ಕೆಲವೇ ನಿಮಿಷಗಳಲ್ಲಿ ಕ್ರಿಸ್ ಅವರ ಆರೋಗ್ಯ ಇದ್ದಕ್ಕಿದ್ದಂತೆ ಹದಗೆಟ್ಟಿತು. ನಾಲಿಗೆ ಮರಗಟ್ಟಿ, ಶ್ವಾಸಕೋಶಗಳು ಕೆಲಸ ಮಾಡುವುದನ್ನು ನಿಲ್ಲಿಸಿದವು. ರಕ್ತನಾಳಗಳಲ್ಲಿ ಅಸಹಜವಾಗಿ ರಕ್ತ ಹೆಪ್ಪುಗಟ್ಟುವ 'DIC' ಎಂಬ ಪ್ರಾಣಾಂತಿಕ ಕಾಯಿಲೆ ಅವರಿಗೆ ಕಾಣಿಸಿಕೊಂಡಿತು. ಇಡೀ ದೇಹವೇ ವಿಷಮಯವಾಗಿ ಸಾವು ಕಣ್ಣೆದುರೇ ಕಾಣತೊಡಗಿತ್ತು.

ಇದನ್ನೂ ಓದಿ: ರಜೆಯ ದಿನ ಕಚೇರಿಗೆ ಬಾ ಎಂದ ಮ್ಯಾನೇಜರ್‌.. ಪಂಚ್ ಡೈಲಾಗ್ ಹೊಡೆದ ಮಹಿಳಾ ಉದ್ಯೋಗಿಯ ವಿಡಿಯೋ ವೈರಲ್

ಪ್ರಾಣ ಉಳಿಸಲು 54 ಇಂಜೆಕ್ಷನ್

ವೈದ್ಯರು ಕ್ರಿಸ್ ಅವರನ್ನು ಸಾವಿನಿಂದ ಪಾರು ಮಾಡಲು ಬರೋಬ್ಬರಿ 54 ಆಂಟಿ-ವೆನಮ್ ಇಂಜೆಕ್ಷನ್‌ಗಳನ್ನು ನೀಡಿದ್ದಾರೆ. ಒಂದು ಆಸ್ಪತ್ರೆಯಲ್ಲಿದ್ದ ಇಂಜೆಕ್ಷನ್ ಸ್ಟಾಕ್ ಖಾಲಿಯಾದ ಕಾರಣ, ಅವರನ್ನು ಹೆಲಿಕಾಪ್ಟರ್ ಮೂಲಕ ಮತ್ತೊಂದು ದೊಡ್ಡ ಆಸ್ಪತ್ರೆಗೆ ದಾಖಲಿಸಬೇಕಾಯಿತು. ಸುಮಾರು 12 ದಿನಗಳ ಕಾಲ ಐಸಿಯು (ICU) ನಲ್ಲಿ ಹೋರಾಡಿದ ಕ್ರಿಸ್, ಕೊನೆಗೂ ಬದುಕುಳಿದಿದ್ದಾರೆ.

ಇದನ್ನೂ ಓದಿ: 1.9 ಕೋಟಿ ರೂ. ಪ್ಯಾಕೇಜ್ ಕೆಲಸ ಬಿಟ್ಟು ಕಂಟೆಂಟ್ ಕ್ರಿಯೇಟರ್ ಆದ ಟೆಕ್ಕಿ; ಈಗೇನಾಯ್ತು ಅಂತ ನೋಡಿ..

ಸುಮಾರು 11 ಕೋಟಿ ರೂಪಾಯಿ

ಕ್ರಿಸ್ ಅವರ ಪ್ರಾಣವಂತೂ ಉಳಿಯಿತು, ಆದರೆ ಆಸ್ಪತ್ರೆ ನೀಡಿದ ಬಿಲ್ ಮಾತ್ರ ಅವರ ಕುಟುಂಬಕ್ಕೆ ಮತ್ತೊಂದು ಶಾಕ್ ನೀಡಿದೆ. ಎರಡು ಆಸ್ಪತ್ರೆಗಳ ಒಟ್ಟು ಚಿಕಿತ್ಸಾ ವೆಚ್ಚ ಬರೋಬ್ಬರಿ 13 ಲಕ್ಷ ಡಾಲರ್, ಅಂದರೆ ಭಾರತೀಯ ರೂಪಾಯಿಯಲ್ಲಿ ಸುಮಾರು 11 ಕೋಟಿ ರೂಪಾಯಿ! ಒಂದು ಇಂಜೆಕ್ಷನ್ ಬೆಲೆಯೇ ಲಕ್ಷಾಂತರ ರೂಪಾಯಿ ಆಗಿತ್ತು ಮತ್ತು ಐಸಿಯುನ ಒಂದು ರಾತ್ರಿಯ ಬಾಡಿಗೆ 50 ಲಕ್ಷ ರೂಪಾಯಿಗೂ ಅಧಿಕವಾಗಿತ್ತು.

ಕೆಲಸವೂ ಇಲ್ಲ ದುಡ್ಡು ಇಲ್ಲ

ಚಿಕಿತ್ಸೆಗಾಗಿ ಮಾಡಿದ ಸಾಲ ಒಂದೆಡೆಯಾದರೆ, ಕಳೆದ ಹಲವಾರು ತಿಂಗಳಿಂದ ಕ್ರಿಸ್ ಕೆಲಸಕ್ಕೆ ಹೋಗಲಾಗದೆ ಸಂಬಳವೂ ಇಲ್ಲದೆ ಪರದಾಡುತ್ತಿದ್ದಾರೆ. 11 ಕೋಟಿ ರೂಪಾಯಿಯ ಈ ದೊಡ್ಡ ಗಾತ್ರದ ಮೊತ್ತವನ್ನು ಪಾವತಿಸುವುದು ಹೇಗೆ ಎಂಬ ಚಿಂತೆಯಲ್ಲಿ ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ. ಸದ್ಯ ದಾನಿಗಳು ನೀಡುವ ಸಹಾಯ ಹಸ್ತಕ್ಕಾಗಿ ಇಡೀ ಕುಟುಂಬ ಈಗ ಕಾದು ಕುಳಿತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Oil Crisis: ತೈಲ ಬಿಕ್ಕಟ್ಟಿನ ನಡುವೆ ಭಾರತದ 3 ಬಿಗ್ ಗೇಮ್ ಪ್ಲಾನ್: ಜಾಗತಿಕ ಮಾರ್ಕೆಟ್ ಕಿಂಗ್ ಆದ ಭಾರತ! 2030ರ ವೇಳೆಗೆ ಜಗತ್ತೇ ದಿಲ್ಲಿಯ ಮುಂದೆ ಕೈಚಾಚಲಿದೆ!
ಆಸ್ಟ್ರೇಲಿಯಾ ಮಕ್ಕಳಿಗೆ ಯಶ್‌ 'ರಾಮಾಯಣ' ದರ್ಶನ ಇಲ್ವಾ? ದೇವ-ದಾನವರ ಯುದ್ಧ ಏಕೆ ನೋಡಲ್ಲ? ಇದೇನಿದು ನಿಯಮ..?