ಜೀವಂತ ಪ್ರಾಣಿಗಳ ಕಳ್ಳಸಾಗಣೆ: ಇಬ್ಬರು ಭಾರತೀಯ ಮಹಿಳೆಯರು ಸೆರೆ

Published : Jun 29, 2022, 02:54 PM ISTUpdated : Jun 29, 2022, 02:59 PM IST
ಜೀವಂತ ಪ್ರಾಣಿಗಳ ಕಳ್ಳಸಾಗಣೆ: ಇಬ್ಬರು ಭಾರತೀಯ ಮಹಿಳೆಯರು ಸೆರೆ

ಸಾರಾಂಶ

ಬ್ಯಾಂಕಾಕ್‌: ಜೀವಂತ ಪ್ರಾಣಿಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಇಬ್ಬರು ಭಾರತೀಯ ಮಹಿಳೆಯರನ್ನು ಥಾಯ್ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.

ಬ್ಯಾಂಕಾಕ್‌: ಜೀವಂತ ಪ್ರಾಣಿಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಇಬ್ಬರು ಭಾರತೀಯ ಮಹಿಳೆಯರನ್ನು ಥಾಯ್ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಬಂಧಿತರು ಜೀವಂತವಿದ್ದ ನೂರಕ್ಕೂ ಹೆಚ್ಚು ಚಿಪ್ಪುಹಂದಿ, ಹಾವು ಹಾಗೂ ಆಮೆ ಮುಂತಾದ ವನ್ಯಜೀವಿಗಳನ್ನು ಕಳ್ಳಸಾಗಣೆ ಮಾಡಲು ಮುಂದಾಗಿದ್ದರು ಎಂದು ಏರ್‌ಪೋರ್ಟ್‌ನ ವನ್ಯಜೀವಿ ಸಂರಕ್ಷಣಾ ಅಧಿಕಾರಿಗಳು ಹೇಳಿದ್ದಾರೆ. 

ಥೈಲ್ಯಾಂಡ್ ವನ್ಯಜೀವಿ ಕಳ್ಳಸಾಗಣೆದಾರರಿಗೆ (wildlife smugglers) ಪ್ರಮುಖ ಸಾರಿಗೆ ರಹದಾರಿಯಾಗಿದ್ದು, ಈ ಜೀವಂತ ಪ್ರಾಣಿಗಳನ್ನು ಸಾಮಾನ್ಯವಾಗಿ ವಿಯೆಟ್ನಾಂ (Vietnam) ಅಥವಾ ಚೀನಾಕ್ಕೆ (China) ಸಾಗಿಸಲಾಗುತ್ತದೆ. ಅಲ್ಲಿ ಅವುಗಳನ್ನು ಸಾಂಪ್ರದಾಯಿಕ ಔಷಧಿಗಳಿಗೆ ಬಳಸಲಾಗುತ್ತದೆ.

ಬಂಧಿತ ಮಹಿಳೆಯರನ್ನು 38 ವರ್ಷ ಪ್ರಾಯದ ನಿತ್ಯ ರಾಜಾ (Nithya Raja) ಮತ್ತು 24 ವರ್ಷ ಪ್ರಾಯದ ಝಕಿಯಾ ಸುಲ್ತಾನಾ (Zakia Sulthana) ಎಂದು ಗುರುತಿಸಲಾಗಿದೆ. ಅವರು ಭಾನುವಾರ ರಾತ್ರಿ ಬ್ಯಾಂಕಾಕ್‌ನ ಸುವರ್ಣಭೂಮಿ ವಿಮಾನ ನಿಲ್ದಾಣದಲ್ಲಿ (Suvarnabhumi airport) ಭಾರತದ ಚೆನ್ನೈಗೆ (Chennai) ಹೋಗುವ ಮೊದಲು ತಪಾಸಣೆ ನಡೆಸುತ್ತಿದ್ದಾಗ ಇವರ ಚೀಲಗಳಲ್ಲಿ ಎಕ್ಸ್-ರೇ ಯಂತ್ರದಲ್ಲಿ ಪ್ರಾಣಿಗಳಿರುವುದು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಇಂತಹ ಪ್ರಕರಣಗಳು ಇಲ್ಲಿ ಹಲವು ಬಾರಿ ನಡೆದಿವೆ. ಭಾರತದಲ್ಲಿ ಈ ಪ್ರಾಣಿಗಳು ದುಬಾರಿ ಬೆಲೆ ಪಟ್ಟಿಯಲ್ಲಿ ಇರುವುದರಿಂದ  ಈ ರೀತಿಯ ಪ್ರಕರಣವು ಇಲ್ಲಿ ಹಲವು ಬಾರಿ ಸಂಭವಿಸಿದೆ ಎಂದು ವಿಮಾನ ನಿಲ್ದಾಣದ ವನ್ಯಜೀವಿ ತಪಾಸಣಾ ಕಚೇರಿಯ ಮುಖ್ಯಸ್ಥ ಸಾಥೋನ್ ಕೊಂಗ್ಗೊಯೆನ್ (Sathon Konggoen) ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಬುರ್ಕಾದಲ್ಲಿ 18 ಲಕ್ಷದ ಚಿನ್ನ ಪೋಣಿಸಿ ಕಳ್ಳಸಾಗಣೆ: ಹೈದರಾಬಾದ್‌ ಏರ್‌ಪೋರ್ಟ್‌ನಲ್ಲಿ ಸಿಕ್ಕಿಬಿದ್ದ ಮಹಿಳೆ 


ಥೈಲ್ಯಾಂಡ್‌ನಲ್ಲಿ ಸಾಕಲಾಗಿದೆ ಎಂದು ನಂಬಲಾದ ಈ ಪ್ರಾಣಿಗಳ ಬೆಲೆ ಸುಮಾರು 200,000 ಬಹ್ತ್ (USD 5,600) (442,072.69 ಭಾರತೀಯ ರೂಪಾಯಿ) ಮೌಲ್ಯದ್ದಾಗಿದೆ ಎಂದು ಅವರು ಅಂದಾಜಿಸಿದ್ದಾರೆ. ಪ್ರಾಣಿಗಳ ಕಳ್ಳಸಾಗಣೆ ಸಾಮಾನ್ಯವಾಗಿ ಥಾಯ್-ಮ್ಯಾನ್ಮಾರ್ ಗಡಿಗಳಲ್ಲಿ ಮತ್ತು ದೇಶೀಯ ವಿಮಾನ ನಿಲ್ದಾಣಗಳಲ್ಲಿ ಒಂದು ನಿರ್ದಿಷ್ಟ ಮಟ್ಟಿಗೆ ಪತ್ತೆಯಾಗುತ್ತಲೇ ಇರುತ್ತದೆ ಎಂದು ಅಧಿಕಾರಿ ಹೇಳಿದರು.

ಎರಡು ಚಿಪ್ಪು ಹಂದಿಗಳು, ಎರಡು ಮುಳ್ಳು ಹಂದಿಗಳು, 20 ಹಾವುಗಳು, 35 ಆಮೆಗಳು ಮತ್ತು 50 ಊಸರವಳ್ಳಿಗಳನ್ನು ಇಬ್ಬರು ಮಹಿಳೆಯರು ಚೀಲದಲ್ಲಿ ತುಂಬಿಸಿ  ಸಾಗಿಸುತ್ತಿರುವುದನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಇವುಗಳಲ್ಲಿ ಎರಡು ಸತ್ತ ಓತಿಕ್ಯಾತಗಳು ಕೂಡ ಇದ್ದವು. ಎಲ್ಲಾ ಸರೀಸೃಪಗಳು ನಿರ್ಜಲೀಕರಣದಿಂದ ಬಳಲುತ್ತಿದ್ದವು ಎಂದು ರಾಷ್ಟ್ರೀಯ ಉದ್ಯಾನವನಗಳು, ವನ್ಯಜೀವಿ ಮತ್ತು ಸಸ್ಯ ಸಂರಕ್ಷಣಾ ಇಲಾಖೆಯೂ ತನ್ನ ಫೇಸ್‌ಬುಕ್ ಪೋಸ್ಟ್‌ನಲ್ಲಿ ಹೇಳಿದೆ.  

ಕೇರಳ ಚಿನ್ನ ಸ್ಮಗ್ಲಿಂಗ್‌ ಕೇಸ್‌ಗೆ ಸ್ಫೋಟಕ ಟ್ವಿಸ್ಟ್‌, ಸ್ವಪ್ನಾ ಸುರೇಶ್‌ ಶಾಕಿಂಗ್ ಆರೋಪ: ಸಿಎಂ, ಪತ್ನಿ, ಪುತ್ರಿಗೆ ಕುತ್ತು!
ಪ್ರಸ್ತುತ ವಶಪಡಿಸಿಕೊಂಡ ಜೀವಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಾಣಿ ಕೇಂದ್ರ ಅಥವಾ ಸಂತಾನಾಭಿವೃದ್ಧಿ ಕೇಂದ್ರಕ್ಕೆ ಸ್ಥಳಾಂತರಿಸಲಾಗುವುದು ಎಂದು ಇಲಾಖೆ ತಿಳಿಸಿದೆ. ಇಬ್ಬರು ಮಹಿಳೆಯರನ್ನು ಬಂಧಿಸಲಾಗಿದ್ದು, ವನ್ಯಜೀವಿ ಸಂರಕ್ಷಣೆ ಮತ್ತು ಸಂರಕ್ಷಣಾ ಕಾಯ್ದೆ, ಅನಿಮಲ್ ಎಪಿಡೆಮಿಕ್ಸ್ ಆಕ್ಟ್ ಮತ್ತು ಕಸ್ಟಮ್ಸ್ ಆಕ್ಟ್ ಉಲ್ಲಂಘನೆ ಪ್ರಕರಣ ದಾಖಲಿಸಲಾಗಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!