ತಲೆ ಮೇಲೆ ತೆಂಗಿನ ಕಾಯಿ ಬಿದ್ದು, ಬೈಕ್‌ನಿಂದ ಉರುಳಿದ ಮಹಿಳೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

Published : Jun 29, 2022, 12:09 PM IST
ತಲೆ ಮೇಲೆ ತೆಂಗಿನ ಕಾಯಿ ಬಿದ್ದು, ಬೈಕ್‌ನಿಂದ ಉರುಳಿದ ಮಹಿಳೆ:  ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಸಾರಾಂಶ

ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಬೈಕ್‌ ಹಿಂಬದಿ ಕುಳಿತಿದ್ದ ಮಹಿಳೆಯ ತಲೆ ಮೇಲೆ ತೆಂಗಿನ ಕಾಯಿಯೊಂದು ಮೇಲಿನಿಂದ ಬಿದ್ದಿದ್ದು, ಪರಿಣಾಮ ಮಹಿಳೆ ಬೈಕ್‌ನಿಂದ ಧುಪ್ಪನೇ ಕೆಳಗೆ ಬಿದ್ದಿದ್ದಾಳೆ. ಮಲೇಷಿಯಾದಲ್ಲಿ ಈ ಘಟನೆ ನಡೆದಿದ್ದು, ಇದರ ದೃಶ್ಯ ಕ್ಯಾಮರಾದಲ್ಲಿ ಸೆರೆ ಆಗಿದೆ.

ಮಲೇಷಿಯಾ: ಕೆಲವೊಮ್ಮೆ ಅಪಘಾತಗಳು ಆಘಾತಗಳು ಹೇಗೆ ಸಂಭವಿಸುತ್ತವೆ ಎಂದೇ ಹೇಳಲಾಗದು. ಕೆಲ ದಿನಗಳ ಹಿಂದೆ ಬೈಕ್‌ ಜೋಡಿಯೊಂದು ಚಲಾಯಿಸುತ್ತಿದ್ದ ಬೈಕೊಂದು ಇದ್ದಕ್ಕಿದ್ದಂತೆ ನಡುರಸ್ತೆಯಲ್ಲಿ ನಿಯಂತ್ರಣ ತಪ್ಪಿ ಬಿದ್ದಿತ್ತು. ಆದರೆ ಈ ಸವಾರರು ಹಿಂಬದಿ ಬರುತ್ತಿದ್ದ ಬೈಕರ್ ತಮ್ಮ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಭಾವಿಸಿದ್ದರು. ಆದರೆ ಹಿಂಬದಿ ಬೈಕ್ ಸವಾರನ ಬೈಕ್‌ನಲ್ಲಿದ್ದ ಕ್ಯಾಮರಾ ಅವರು ಇದ್ದಕ್ಕಿದ್ದಂತೆ ನಿಯಂತ್ರಣ ತಪ್ಪಿ ಬಿದ್ದಿದ್ದು ಎಂಬುದನ್ನು ತೋರಿಸುತ್ತಿತ್ತು.

ಹಾಗೆಯೇ ಇಲ್ಲೊಂದು ಕಡೆ ರಸ್ತೆಯಲ್ಲಿ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಬೈಕ್‌ ಹಿಂಬದಿ ಕುಳಿತಿದ್ದ ಮಹಿಳೆಯ ತಲೆ ಮೇಲೆ ತೆಂಗಿನ ಕಾಯಿಯೊಂದು ಮೇಲಿನಿಂದ ಬಿದ್ದಿದ್ದು, ಪರಿಣಾಮ ಮಹಿಳೆ ಬೈಕ್‌ನಿಂದ ಧುಪ್ಪನೇ ಕೆಳಗೆ ಬಿದ್ದಿದ್ದಾಳೆ. ಮಲೇಷಿಯಾದಲ್ಲಿ ಈ ಘಟನೆ ನಡೆದಿದ್ದು, ಇದರ ದೃಶ್ಯ ಕ್ಯಾಮರಾದಲ್ಲಿ ಸೆರೆ ಆಗಿದೆ.

 

ಈ ವಿಡಿಯೋವನ್ನು ಸಾಮಾಜಿಕ ಜಾಲತಾಣವಾದ ರೆಡಿಟ್‌ನಲ್ಲಿ u/EmesZek ಎಂಬ ಖಾತೆದಾರರೊಬ್ಬರು ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ಕಾಣಿಸುವಂತೆ ಖಾಲಿ ರಸ್ತೆಯಲ್ಲಿ ವೇಗವಾಗಿ ಬೈಕ್ ಸಾಗುತ್ತಿದ್ದು, ಈ ವೇಳೆ ರಸ್ತೆ ಬದಿಯೇ ಇದ್ದ ತೆಂಗಿನ ಮರದಿಂದ ಕಾಯಿಯೊಂದು ಸೀದಾ ಬಂದು ಬೈಕ್‌ ಹಿಂಬದಿ ಕುಳಿತು ಚಲಿಸುತ್ತಿದ್ದ ಮಹಿಳೆಯ ತಲೆ ಮೇಲೆ ಬೀಳುತ್ತದೆ. ತೆಂಗಿನ ಕಾಯಿ ಬಿದ್ದ ರಭಸಕ್ಕೆ ಮಹಿಳೆ ಬೈಕ್‌ನಿಂದ ಕೆಳಗುರುಳಿದ್ದಾಳೆ. ಬೈಕ್ ಚಲಾಯಿಸುತ್ತಿದ್ದ ಮಹಿಳೆ ಸ್ವಲ್ಪ ಮುಂದೆ ಸಾಗಿ ಬೈಕ್ ನಿಲ್ಲಿಸಿ ಹಿಂದೆ ಬಂದು ಕೆಳಗೆ ಬಿದ್ದ ಮಹಿಳೆಯನ್ನು ಎಳಿಸಲು ಪ್ರಯತ್ನಿಸುತ್ತಾಳೆ. 

ತಾವೇ ಕೆಳಗೆ ಬಿದ್ದು ಬೈಕ್ ಸವಾರನೊಂದಿಗೆ ವಾದಕ್ಕಿಳಿದ ಜೋಡಿ: ಕ್ಯಾಮರಾದಿಂದಾಗಿ ಬಚಾವಾದ ಬೈಕರ್

ತೆಂಗಿನ ಕಾಯಿ ಬಿದ್ದ ರಭಸಕ್ಕೆ ಮಹಿಳೆ ಕೆಳಗೆ ಬಿದ್ದು ರಸ್ತೆಯಲ್ಲಿ ಉರುಳುತ್ತಿದ್ದರೆ, ಆಕೆಯ ತಲೆಯಲ್ಲಿದ್ದ ಹೆಲ್ಮೆಟ್ ಮತ್ತೊಂದು ಕಡೆ ಬಿದ್ದು ಉರುಳಿ ಹೋಗುತ್ತದೆ. ಈ ಬೈಕ್ ಹಿಂದೆಯೇ ಬಂದ ವಾಹನ ಸವಾರರು ತಮ್ಮ ವಾಹನಗಳನ್ನು ನಿಲ್ಲಿಸಿ ಆಘಾತಗೊಂಡಿದ್ದು, ಕೂಡಲೇ ವಾಹನವನ್ನು ನಿಲ್ಲಿಸಿ ಮಹಿಳೆಯ ನೆರವಿಗೆ ಧಾವಿಸುತ್ತಾರೆ. ಘಟನೆಯ ಬಳಿಕ ಮಹಿಳೆಯ ಪುತ್ರಿ ಫೇಸ್‌ಬುಕ್‌ನಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದು, ತೆಂಗಿನ ಕಾಯಿ ಬಿದ್ದು ಅಸ್ವಸ್ಥಳಾದ ಮಹಿಳೆಯ ಆರೋಗ್ಯ ಸ್ಥಿತಿಯ ವಿವರ ನೀಡಿದ್ದಾರೆ. ಮಹಿಳೆಯೂ ಹೆಲ್ಮೆಟ್ ಧರಿಸಿದ್ದರಿಂದ ದೊಡ್ಡ ಅನಾಹುತದಿಂದ ಪಾರಾಗಿದ್ದಾಳೆ ಎಂದು ಮಹಿಳೆಯ ಪುತ್ರಿ ಹೇಳಿದ್ದಾರೆ. 

ವೇಗವಾಗಿ ಬಂದು ಟ್ರಾನ್ಸ್‌ಫಾರ್ಮರ್‌ ಏರಿದ ಬೈಕ್‌: ಸವಾರ ಪಾರು ವಿಡಿಯೋ ವೈರಲ್‌
 

ತೆಂಗಿನಕಾಯಿ ಬಿದ್ದ ಮಹಿಳೆಯು ನನ್ನ ತಾಯಿಯಾಗಿದ್ದು, ಬೈಕ್ ಓಡಿಸುತ್ತಿದ್ದಿದ್ದು ನನ್ನ ತಂಗಿ ಎಂದು ಯುವತಿ ಫೇಸ್‌ಬುಕ್‌ನಲ್ಲಿ ಹೇಳಿಕೊಂಡಿದ್ದಾಳೆ. ನನ್ನ ತಾಯಿ ಘಟನೆಯಿಂದ ಚೇತರಿಸಿಕೊಂಡಿದ್ದು, ಸದ್ಯ ಆಸ್ಪತ್ರೆಯಲ್ಲೇ ಇದ್ದಾಳೆ. ಆದರೆ ಆಕೆಯ ಬಲ ಭಾಗದ ಹೆಗಲಿಲು ಹಾಗೂ ಎಡಭಾಗದ ಕೈ ಹಾಗೂ 2 ಪಕ್ಕೆಲುಬುಗಳಿಗೆ ಹಾನಿಯಾಗಿದೆ. ಇದೊಂದು ಸಣ್ಣ ಆಘಾತವಾಗಿದೆ. ನಾನು ನನ್ನ ತಾಯಿಯ ಆರೋಗ್ಯ ಸ್ಥಿತಿಯನ್ನು ಮತ್ತೆ ತಿಳಿಸುವೆ ಎಂದು ಅವರು ಫೇಸ್‌ಬುಕ್‌ನಲ್ಲಿ(Facebook)  ಬರೆದುಕೊಂಡಿದ್ದಾರೆ. ಇನ್ನು ಮಹಿಳೆಯ ತಲೆ ಮೇಲೆ ತೆಂಗಿನ ಕಾಯಿ ಬೀಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು,  59,000 ಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುರುಷರ ಕೊರತೆ: ಈ ದೇಶದಲ್ಲಿ ಗಂಡನ ಬಾಡಿಗೆಗೆ ಪಡೆಯುತ್ತಾರೆ ಹೆಣ್ಣು ಮಕ್ಕಳು
ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ