ಜಿರಾಫೆಯ ಬೇಟೆಯಾಡಲು ಯತ್ನಿಸಿದ ಸಿಂಹ... ಆಮೇಲೇನಾಯ್ತು ನೋಡಿ

By Anusha KbFirst Published Dec 12, 2022, 6:36 PM IST
Highlights

ಸಿಂಹವೊಂದು ಬೃಹತ್ ಗಾತ್ರದ ಜಿರಾಫೆಯನ್ನು ಬೇಟೆಯಾಡಲು ಯತ್ನಿಸಿದೆ. ಆದರೆ ಜಿರಾಫೆ ಸಿಂಹದಿಂದ ತಪ್ಪಿಸಿಕೊಂಡು ಹೋಗುವಲ್ಲಿ ಯಶಸ್ವಿಯಾಗಿದೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ತನಗಿಂತ ಗಾತ್ರದಲ್ಲಿ ದೊಡ್ಡದಾಗಿರುವ ಹಾಗೂ ಬಹಳ ಎತ್ತರವಾಗಿರುವ ಜಿರಾಫೆಯನ್ನು ಬೇಟೆಯಾಡುವುದು ಅದಕ್ಕಿಂತ ಗಾತ್ರದಲ್ಲಿ ಚಿಕ್ಕದಾಗಿರುವ ಸಿಂಹಕ್ಕೆ  ಸ್ವಲ್ಪ ಕಷ್ಟದ ಕೆಲಸ. ಹೀಗಾಗಿ ಸಾಮಾನ್ಯವಾಗಿ ಬೇರೆ ಬೇಟೆ ಏನೂ ಸಿಗದ ಸಂದರ್ಭದಲ್ಲಿ ಮಾತ್ರವಷ್ಟೇ ಸಿಂಹಗಳು ಜಿರಾಫೆಯಂತಹ ದೈತ್ಯ ಗಾತ್ರದ ಪ್ರಾಣಿಗಳನ್ನು ಬೇಟೆಯಾಡಲು ಹೋಗುತ್ತವೆ.  ಹಾಗೆಯೇ ಸಿಂಹವೊಂದು ಬೃಹತ್ ಗಾತ್ರದ ಜಿರಾಫೆಯನ್ನು ಬೇಟೆಯಾಡಲು ಯತ್ನಿಸಿದೆ. ಆದರೆ ಜಿರಾಫೆ ಸಿಂಹದಿಂದ ತಪ್ಪಿಸಿಕೊಂಡು ಹೋಗುವಲ್ಲಿ ಯಶಸ್ವಿಯಾಗಿದೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಅನಿಮಲ್ ಕೊಟೆರಿ ಎಂಬ ಇನ್ಸ್ಟಾಗ್ರಾಮ್ (Instagram) ಪೇಜ್‌ನಿಂದ ಈ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದ್ದು, ಲಕ್ಷಾಂತರ ಜನ ವೀಕ್ಷಿಸಿದ್ದಾರೆ. ವಿಡಿಯೋದಲ್ಲಿ ಕಾಣಿಸುವಂತೆ ಸಿಂಹವೊಂದು ಕಾದು ಕುಳಿತು ಜಿರಾಫೆಯ ಬೇಟೆಯಾಡಲು ಮುಂದಾಗಿದೆ. ಈ ವೇಳೆ ಜಿರಾಫೆ (Giraffe) ಸಿಂಹವನ್ನು ಕಾಲಿನಿಂದ ತಳ್ಳಿ ನೆಲಕ್ಕೆ ಕೊಡವಿದೆ. ಅಲ್ಲದೇ ಕೆಳಗೆ ಬಿದ್ದ ಅದನ್ನು ತುಳಿದುಕೊಂಡು ಅಲ್ಲಿಂದ ಮುಂದೆ ಓಡಿದೆ. ಇತ್ತ ದೈತ್ಯ ಗಾತ್ರದ ಜಿರಾಫೆಯ ಕಾಲಡಿಗೆ ಸಿಲುಕಿದ ಸಿಂಹ (Lion) ನೆಲದಲ್ಲಿ ಹೊರಳಾಡುತ್ತಾ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಮುಂದೆ ಸಾಗಿದೆ. 

ಈ ವಿಡಿಯೋವನ್ನು ಸಾಕಷ್ಟು ಜನ ವೀಕ್ಷಿಸಿದ್ದು, ಅನೇಕರು ಕಾಮೆಂಟ್ ಮಾಡಿದ್ದಾರೆ. ಈ ಹೋರಾಟದಲ್ಲಿ ಯಾರಿಗೆ ಹಾನಿಯಾಯ್ತೋ ತಿಳಿಯದು. ಆದರೆ ಎರಡರದ್ದು ಕೂಡ ಬದುಕಿಗಾಗಿ ಹೋರಾಟ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಒಬ್ಬರು ಸಿಂಹ ದಾಳಿಗೊಳಗಾಗಿದ್ದನ್ನು ನನಗೆ ನೋಡಲಾಗುತ್ತಿಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಹೀಗೆ ಜಿರಾಫೆಗಳು ದೊಡ್ಡ ಗಾತ್ರದ ಜಿರಾಫೆಗಳನ್ನು ಬೇಟೆಯಾಡಲು ಹೋಗಿ ಹೊಡೆಸಿಕೊಳ್ಳುವುದು ಇದೇ ಮೊದಲಲ್ಲ ಈ ಹಿಂದೆಯೂ ಜಿರಾಫೆಗಳು ದಾಳಿ ಮಾಡಲು ಬಂದ ಸಿಂಹಗಳ ಮೇಲೆ ಪ್ರತಿದಾಳಿ ನಡೆಸಿ ಎಸ್ಕೇಪ್ ಆಗಿದ್ದವು. ಸಾಮಾನ್ಯವಾಗಿ ಕಾಡುಪ್ರಾಣಿಗಳು (Wild Animal) ಹಸಿದಿದ್ದಲ್ಲಿ ಮಾತ್ರ ಬೇಟೆಯಾಡುತ್ತವೆ. ಅದರ ಹೊರತಾಗಿ ಅವುಗಳು ಅವುಗಳಷ್ಟಕ್ಕೆ ಯಾರ ಸುದ್ದಿಗೂ ಹೋಗದೇ ಸುಮ್ಮನೆ ಮಲಗಿರುತ್ತವೆ. ಆದರೆ ಅವುಗಳ ಶಾಂತಿಭಂಗ ಮಾಡಿ ಕೆರಳಿಸಲು ಹೋದರೆ ಮಾತ್ರ ರೊಚ್ಚಿಗೆದ್ದು ದಾಳಿ ಮಾಡುತ್ತವೆ.

ಕೆಲ ದಿನಗಳ ಹಿಂದೆ ಗುಜರಾತ್‌ನ ಗಿರ್ ರಾಷ್ಟ್ರೀಯ ಉದ್ಯಾನದ (Gir National Park in Gujarat) ಸಮೀಪದ ಹೊಲವೊಂದರಲ್ಲಿ ಸಿಂಹಗಳ ಹಾಯಾಗಿ ಓಡಾಡುತ್ತಿರುವ ಅವುಗಳ ಜೊತೆಗೆ ಮನುಷ್ಯರು ಸ್ವಲ್ಪವೂ ಭಯವೇ ಇಲ್ಲದೇ ಸುಮ್ಮನೆ ನಿಂತಿರುವ ವಿಡಿಯೋವೊಂದು ವೈರಲ್ ಆಗಿತ್ತು. ಅಲ್ಲಿ ಸಿಂಹಗಳು ಹಾಯಾಗಿ ಮಲಗಿದ್ದು, ಇತ್ತ ರೈತ ಕೂಡ ಮೊಬೈಲ್ ನೋಡುತ್ತಾ ಕಾಲ ಕಳೆಯುತ್ತಿದ್ದ. ಸಾಮಾನ್ಯವಾಗಿ ಮೊಬೈಲ್‌ನಲ್ಲಿ ಮುಳುಗುವ ಕೆಲವರಿಗೆ ಸುತ್ತಮುತ್ತ ಏನಾಗುತ್ತಿದೆ ಎಂಬುದರ ಅರಿವು ಕೂಡ ಇರುವುದಿಲ್ಲ. ಅದೇ ರೀತಿ ಇಲ್ಲೂ ಈ ಯುವಕ ಹೆದರದೇ ಓಡಲು ಇದೂ ಒಂದು ಕಾರಣವಿರಲೂಬಹುದು. ಅಂತೂ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ(Social Media) ಸಾಕಷ್ಟು ವೈರಲ್ ಆಗುತ್ತಿದ್ದು, ನೋಡುಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಮಲಗಿದ್ದ ಸಿಂಹವನ್ನು ತಿವಿದ ಕಾಡುಕೋಣಗಳು

ಸಾಮಾನ್ಯವಾಗಿ ಸಿಂಹಗಳ ಸುದ್ದಿಗೆ ಬೇರಾವ ಪ್ರಾಣಿಗಳು ಹೋಗುವುದಿಲ್ಲ. ಸಿಂಹಗಳು ಅಷ್ಟೇ ಹಸಿದಿದ್ದರಷ್ಟೇ ಬೇರೆ ಪ್ರಾಣಿಗಳ ಮೇಲೆ ಬೇಟೆಯಾಡಿ ತಮ್ಮ ಹೊಟ್ಟೆ ತುಂಬಿಸುತ್ತವೆ. ಆದರೆ ಇಲ್ಲಿ ಈ ಕಾಡುಕೋಣಗಳಿಗೆ ಸಿಂಹವೇನು ಆಹಾರವಲ್ಲ. ಕಾಡುಕೋಣಗಳು ಸಸ್ಯಹಾರಿ ಪ್ರಾಣಿಗಳಾಗಿದ್ದು, ಸಿಂಹದ ಸುದ್ದಿಗೆ ಹೋಗುವುದಿಲ್ಲ. ಆದರೆ ಇತ್ತೀಚೆಗೆ ವೈರಲ್ ಆಗಿರುವ ವಿಡಿಯೋವೊಂದರಲ್ಲಿಮಲಗಿದ್ದ ಅಸಹಾಯಕ ಸಿಂಹದ ಮೇಲೆ ಕಾಡುಕೋಣಗಳ ಹಿಂಡು ತಮ್ಮ ದರ್ಪ ತೋರಿದ್ದು, ಅದನ್ನು ಕೊಂಬಿನಲ್ಲಿ ತಿವಿದಿದ್ದಲ್ಲದೇ, ಮೇಲೆತ್ತಿ ಕೆಳಗೆಸೆದು ಅದರ ಮೇಲೆ ಹಲ್ಲೆ ನಡೆಸಿವೆ. ಕಾಡುಕೋಣಗಳ ಉಪದ್ರ ತಡೆಯಲಾಗದೇ ಸಿಂಹ ಪೊದೆಯೊಂದನ್ನು ಸೇರಲು ನೋಡುತ್ತದೆ. ಆದರೂ ಬಿಡದೇ ಕಾಡುಕೋಣಗಳು ಅಲ್ಲಿಗೂ ದಾಳಿ ಇಟ್ಟು ಸಿಂಹವನ್ನು ಮೇಲೆ ಕೆಳಗೆ ಮಾಡುತ್ತವೆ. ಆದರೆ ಅಷ್ಟರಲ್ಲಿ ಸಿಂಹದ ಪರಿವಾರ ಅಲ್ಲಿಗೆ ಬಂದಿದ್ದು, ಅವುಗಳನ್ನು ನೋಡಿ ಕಾಡುಕೋಣಗಳು ಸುಮ್ಮನಾಗಿವೆ. 

3 ಸಿಂಹಗಳನ್ನು ವಾಕಿಂಗ್ ಕರೆದುಕೊಂಡು ಹೊರಟ ಮಹಿಳೆ: ಬೆಚ್ಚಿಬಿದ್ದ ನೆಟ್ಟಿಗರು..!

ಮಲಗಿದ್ದ ಸಿಂಹವ ತಿವಿದೆಬ್ಬಿಸಿ ಎತ್ತಿ ಎಸೆದ ಕಾಡುಕೋಣಗಳು: ವೈರಲ್ ವಿಡಿಯೊ

ಮೊಬೈಲ್‌ನಲ್ಲಿ ಮುಳುಗಿದ ಮೇಲೆ ಸಿಂಹ ಬಂದರೂ ತಿಳಿಯದೇ...? ಇಲ್ಲೇನಾಯ್ತು ನೋಡಿ

click me!