ಕಾಬೂಲ್‌ನಲ್ಲಿ ಮುಂಬೈ ರೀತಿ ಉಗ್ರ ದಾಳಿ, ಚೀನಾ ನಾಗರಿಕರಿದ್ದ ಹೊಟೆಲ್‌ ಮೇಲೆ ಗ್ರೆನೇಡ್ ಅಟ್ಯಾಕ್!

By Suvarna NewsFirst Published Dec 12, 2022, 5:18 PM IST
Highlights

ಚೀನಾ ನಾಗರೀಕರಿದ್ದ ಹೊಟೆಲ್ ಗುರಿಯಾಗಿಸಿ ಭಯೋತ್ಪಾದಕ ದಾಳಿ ನಡೆಸಲಾಗಿದೆ. ಕಾಬೂಲ್ ನಗರದಲ್ಲಿ ಈ ಘಟನೆ ನಡೆದಿದೆ. ಇದು 2008ರಲ್ಲಿ ಮುಂಬೈ ಮೇಲೆ ನಡೆದ ದಾಳಿ ರೀತಿಯಲ್ಲೇ ಕಾಬೂಲ್ ದಾಳಿ ನಡೆದಿದೆ.

ಕಾಬೂಲ್(ಡಿ.12): ಚೀನಾ ನಾಗರೀಕರಿದ್ದ ಹೊಟೆಲ್ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿರುವ ಈ ಹೊಟೆಲ್ ಮೇಲೆ ಶಸ್ತ್ರಾಸ್ತ್ರ ಹಿಡಿದ ಉಗ್ರರು ಫೈರಿಂಗ್ ಮಾಡುತ್ತಾ ಒಳ ನುಗ್ಗಿದ್ದಾರೆ. ಬಳಿಕ ಗ್ರೇನೇಡ್ ಸ್ಫೋಟಿಸಿ ಭೀಕರ ದಾಳಿ ನಡೆಸಿದ್ದರೆ. ಇದೀಗ ಹೊಟೆಲ್‌ನಲ್ಲಿರುವ ಹಲವರನ್ನು ಒತ್ತೆಯಾಳಾಗಿರಿಸಿಕೊಂಡಿರುವ ಸಾಧ್ಯತೆ ಇದೆ. ಗುಂಡಿನ ದಾಳಿ ನಡೆಸುತ್ತಾ ಹೊಟೆಲ್ ಒಳನುಗಿದ್ದ ಭಯೋತ್ಪಾದಕರು ವ್ಯವಸ್ಥಿತ ದಾಳಿ ನಡೆಸಿದ್ದಾರೆ. ದಾಳಿಯ ಸಾವು ನೋವು ಮಾಹಿತಿ ಲಭ್ಯವಾಗಿಲ್ಲ. ಇತ್ತ ಆಫ್ಘಾನಿಸ್ತಾನದಲ್ಲಿ ಆಡಳಿತದಲ್ಲಿರುವ ತಾಲಿಬಾನ್ ಪಡೆ ಹೊಟೆಲ್ ಸುತ್ತುವರೆದಿದೆ. ಕಾಬೂಲ್ ಇತರ ಭಾಗದಲ್ಲಿ ಭದ್ರತೆ ಹೆಚ್ಚಿಸಲಾಗಿದೆ.  2008ರಲ್ಲಿ ಮುಂಬೈ ಮೇಲೆ ನಡೆದ ಭಯೋತ್ಪಾದಕ ದಾಳಿ ರೀತಿಯಲ್ಲೇ ಇದೀಗ ಕಾಬೂಲ್‌ನಲ್ಲಿ ದಾಳಿ ನಡೆದಿದೆ.

ಕಾಬೂಲ್‌ನಲ್ಲಿ ಲೊಂಗನ್ ಹೊಟೆಲ್ ಮೇಲೆ ದಾಳಿ ನಡೆದಿದೆ. ಇದು ಬಹುಮಹಡಿಗಳ ಕಟ್ಟವಾಗಿದೆ. ಚೀನಾದ ಜನಪ್ರಿಯ ಹೊಟೆಲ್ ಇಲ್ಲಿ ಕಾರ್ಯನಿರ್ವಹಿಸುತ್ತಿದೆ. ವ್ಯಾವಹಾರ, ವ್ಯಾಪಾರ ಸೇರಿದಂತೆ ಇತರ ಹಲವು ಕಾರಣಗಳಿಗೆ ಆಫ್ಘಾನಿಸ್ತಾನಕ್ಕೆ ಭೇಟಿ ನೀಡುವ ಚೀನಿಯರು ಇದೇ ಹೊಟೆಲ್‌ಗೆ ಹೆಚ್ಚಾಗಿ ಬೇಟಿ ನೀಡುತ್ತಾರೆ. ಇದೇ ಹೊಟೆಲ್‌ನಲ್ಲಿ ಉಳಿದುಕೊಳ್ಳುತ್ತಾರೆ. ಇದೇ ಹೊಟೆಲ್ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ.

 

Mangauru bomb blast: ಹೋಂ ಸ್ಟೇಯಲ್ಲಿ ಸ್ತ್ರೀಯರ ಜತೆ ತಂಗಿದ್ದ ಶಾರೀಕ್‌!

ತಾಲಿಬಾನ್ ಪಡೆ ಇದೀಗ ಉಗ್ರರ ವಿರುದ್ಧ ಕಾರ್ಯಾಚರಣೆ ಆರಂಭಿಸಿದೆ. ಆದರೆ ಹೊಟೆಲ್ ಒಳ ನುಗ್ಗಿರುವ ಉಗ್ರರು ಪ್ರತಿ ದಾಳಿ ನಡೆಸುತ್ತಲೇ ಇದ್ದಾರೆ. ಇದೀಗ ಹೊಟೆಲ್‌ನಲ್ಲಿರುವ ಚೀನಾ ನಾಗರೀಕರ ದೃಷ್ಟಿಯಿಂದ ತಾಲಿಬಾನ್ ಪಡೆದೆ ಪ್ರತಿ ದಾಳಿ ಸಾಧ್ಯವಾಗುತ್ತಿಲ್ಲ. ಒಳಗಿರುವ ನಾಗರೀಕರನ್ನು ಒತ್ತೆಯಾಳಾಗಿಟ್ಟುಕೊಂಡು ಉಗ್ರರು ಮತ್ತಷ್ಟು ದಾಳಿ ನಡೆಸುವ ಸಾಧ್ಯತೆ ಇದೆ.

ಸೆಪ್ಟೆಂಬರ್‌ನಲ್ಲಿ ರಷ್ಯಾ ರಾಯಭಾರ ಕಚೇರಿ ಮೇಲೆ ದಾಳಿ
ಕಾಬೂಲ್‌ನಲ್ಲಿರುವ ರಷ್ಯಾ ರಾಯಭಾರ ಕಚೇರಿ ಬಳಿ ಸೆಪ್ಟೆಂಬರ್ ತಿಂಗಳಲ್ಲಿ ಆತ್ಮಾಹುತಿ ಬಾಂಬ್‌ ದಾಳಿ ನಡೆದಿತ್ತು. ರಾಯಭಾರ ಕಚೇರಿಯ 1 ಸಿಬ್ಬಂದಿ ಹಾಗೂ 1 ನಾಗರಿಕರು ಮೃತಪಟ್ಟಿದ್ದರು. ರಷ್ಯಾ ರಾಯಭಾರಿ ಸಿಬ್ಬಂದಿ ವೀಸಾ ಅರ್ಜೀದಾರರ ಹೆಸರು ತಿಳಿಸಲು ಕಚೇರಿಯಿಂದ ಹೊರಬಂದಾಗ ದಾಳಿ ನಡೆದಿದೆ ಎಂದು ತಿಳಿಸಿದೆ. ಈ ನಡುವೆ ಆತ್ಮಾಹುತಿ ದಾಳಿಕೋರನ ಮಾಹಿತಿ ಪತ್ತೆಯಾಗಿ ಆತ ಅರ್ಜಿ ಸಲ್ಲಿಸಲು ಬಂದಿದ್ದವರ ಕಡೆಗೆ ತೆರಳುವ ಮುನ್ನವೇ, ಭದ್ರತಾ ಪಡೆಗಳು ದಾಳಿಕೋರನ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಯತ್ನ ನಡೆಸಿದ್ದಾರೆ. ಆದರೆ ದಾಳಿಗೆ ಮುನ್ನವೇ ಆತ್ಮಾಹುತಿ ದಾಳಿಕೋರ ಸ್ಫೋಟ ನಡೆಸುವಲ್ಲಿ ಯಶಸ್ವಿಯಾದನೇ ಅಥವಾ ಗುಂಡಿನ ದಾಳಿಯಿಂದ ಆತ ಕಟ್ಟಿಕೊಂಡಿದ್ದ ಸ್ಫೋಟಕಗಳು ಸ್ಫೋಟಗೊಂಡವೇ ಎಂಬುದು ಗೊತ್ತಾಗಿಲ್ಲ.

ಕಾಶ್ಮೀರದಲ್ಲಿ ಮತ್ತೆ ಮಾರಣಹೋಮದ ಮುನ್ಸೂಚನೆ, 56 ಪಂಡಿತರ ಲಿಸ್ಟ್‌ ಬಿಡುಗಡೆ ಮಾಡಿದ ಉಗ್ರವಾದಿಗಳು!

 ಆಗಸ್ಟ್‌ನಲ್ಲಿ ಕಾಬೂಲ್‌ ಮದರಸಾನಲ್ಲಿ ಬಾಂಬ್‌ ಸ್ಫೋಟ 
ಕಾಬೂಲಿನಲ್ಲಿರುವ ಮದರಸಾದ ಮೇಲೆ ಆಗಸ್ಟ್ ತಿಂಗಳಲ್ಲಿ ಉಗ್ರರು ದಾಳಿ ನಡೆಸಿದ್ದರು.  ಮದರಸಾದ ಇಮಾಮ್‌ ಸೇರಿದಂತೆ ಸುಮಾರು 20 ಜನರು ಮೃತಪಟ್ಟಿದ್ದರು. 40ಕ್ಕೂ ಹೆಚ್ಚು ಜನರಿಗೆ ತೀವ್ರ ಗಾಯಗಳಾಗಿತ್ತು.  ಮೃತರ ಸಂಖ್ಯೆಯು 35ಕ್ಕೆ ಏರಿಕೆಯಾಗಬಹುದು ಎಂದು ಮೂಲಗಳು ತಿಳಿಸಿವೆ. ಕಾಬೂನಿನ ವಾಯುವ್ಯ ಭಾಗದಲ್ಲಿರುವ ಕೋತಾಲ್‌-ಇ-ಖೈರ್‌ನಲ್ಲಿ ಈ ಸ್ಫೋಟ ಸಂಭವಿಸಿದೆ. ಘಟನಾ ಸ್ಥಳಕ್ಕೆ ಭದ್ರತಾ ಪಡೆಗಳು ಆಗಮಿಸಿವೆ ಎಂದು ಕಾಬೂಲ್‌ ಸುರಕ್ಷತಾ ಪಡೆಯ ವಕ್ತಾರ ಖಲೀದ್‌ ಜರ್ದಾನ್‌ ಹೇಳಿದ್ದಾರೆ. ಸ್ಫೋಟ ಎಷ್ಟುಶಕ್ತಿಶಾಲಿಯಾಗಿತ್ತೆಂದರೆ ಮದರಸಾ ಅಕ್ಕಪಕ್ಕದ ಕಟ್ಟಡಗಳು ಭೂಕಂಪ ಸಂಭವಿಸಿದಾಗ ಆದಂತೆ ಅಲ್ಲಾಡಿವೆ.

click me!