ವಿದೇಶದ ಅತಿ ದೊಡ್ಡ ಹಿಂದೂ ದೇಗುಲ ಅಮೆರಿಕದಲ್ಲಿ: 183 ಎಕರೆಯಲ್ಲಿರುವ ಸ್ವಾಮಿನಾರಾಯಣ ದೇಗುಲ

By Anusha Kb  |  First Published Sep 25, 2023, 7:28 AM IST

ಆಧುನಿಕ ಕಾಲದಲ್ಲಿ ಭಾರತದ ಹೊರಗೆ ನಿರ್ಮಿಸಲಾಗುತ್ತಿರುವ ಅತಿ ದೊಡ್ಡ ಹಿಂದೂ ದೇವಾಲಯ ಎಂಬ ಹಿರಿಮೆಗೆ ಪಾತ್ರವಾಗಿರುವ ಅಮೆರಿಕದ ನ್ಯೂ ಜೆರ್ಸಿಯ ಸ್ವಾಮಿ ನಾರಾಯಣ ದೇಗುಲ ಬಹುತೇಕ ಪೂರ್ಣಗೊಂಡಿದ್ದು, ಅ.8 ರಂದು ಉದ್ಘಾಟನೆಗೆ ಸಿದ್ಧವಾಗಿದೆ.


ನ್ಯೂ ಜೆರ್ಸಿ: ಆಧುನಿಕ ಕಾಲದಲ್ಲಿ ಭಾರತದ ಹೊರಗೆ ನಿರ್ಮಿಸಲಾಗುತ್ತಿರುವ ಅತಿ ದೊಡ್ಡ ಹಿಂದೂ ದೇವಾಲಯ ಎಂಬ ಹಿರಿಮೆಗೆ ಪಾತ್ರವಾಗಿರುವ ಅಮೆರಿಕದ ನ್ಯೂ ಜೆರ್ಸಿಯ ಸ್ವಾಮಿ ನಾರಾಯಣ ದೇಗುಲ ಬಹುತೇಕ ಪೂರ್ಣಗೊಂಡಿದ್ದು, ಅ.8 ರಂದು ಉದ್ಘಾಟನೆಗೆ ಸಿದ್ಧವಾಗಿದೆ.

ನ್ಯೂ ಜೆರ್ಸಿಯ (New Jersey) ರಾಬಿನ್ಸ್‌ವಿಲ್ಲೆಯಲ್ಲಿ (Robbinsville) ಬರೋಬ್ಬರಿ 183 ಎಕರೆ ಜಾಗದಲ್ಲಿರುವ ಸ್ವಾಮಿನಾರಾಯಣ ದೇವಸ್ಥಾನವನ್ನು 2011ರಿಂದ 2023ರವರೆಗಿನ 12 ವರ್ಷಗಳ ಅವಧಿಯಲ್ಲಿ ಸುಮಾರು 12,500 ಸ್ವಯಂಸೇವಕರು ನಿರ್ಮಿಸಿದ್ದಾರೆ. ಇದನ್ನು ಪ್ರಾಚೀನ ಹಿಂದೂ ಧರ್ಮಗ್ರಂಥ ಪ್ರಕಾರ ಸ್ಥಾಪಿಸಲಾಗಿದ್ದು, ದೇವಸ್ಥಾನದಲ್ಲಿ ಪ್ರತಿಮೆಗಳು, ಭಾರತೀಯ ಸಂಗೀತ ವಾದ್ಯಗಳು, ಭಾರತೀಯ ಸಂಸ್ಕ್ರತಿ ಮತ್ತು ನೃತ್ಯ ಪ್ರಕಾರದ ಕೆತ್ತನೆಗಳು ಸೇರಿದಂತೆ ಸುಮಾರು 10,000 ಕೆತ್ತನೆಗಳು ಅಥವಾ ಪ್ರತಿಮೆಗಳನ್ನು ಒಳಗೊಂಡಿದೆ.

Tap to resize

Latest Videos

ಈ ದೇವಾಲಯವು ಕಾಂಬೋಡಿಯಾದಲ್ಲಿರುವ (Cambodia) ವಿಶ್ವದ ಅತಿ ದೊಡ್ಡ ಹಿಂದೂ ದೇವಾಲಯವಾದ ಪುರಾತನ ಅಂಕೋರ್‌ ವಾಟ್‌ ನಂತರದ 2ನೇ ದೊಡ್ಡ ದೇವಾಲಯವಾಗಿದೆ ಎನ್ನಲಾಗಿದೆ. ಅಂಕೋರ್‌ವಾಟ್‌ (Angkor Wat) ದೇಗುಲ 500 ಮೀ. ಪ್ರದೇಶದಲ್ಲಿದೆ. ಸ್ವಾಮಿನಾರಾಯಣ ದೇವಾಲಯವನ್ನು (Swaminarayan Temple) ಸುಣ್ಣದ ಕಲ್ಲು, ಗುಲಾಬಿ ಮರಳುಗಲ್ಲು, ಅಮೃತ ಶಿಲೆ ಮತ್ತು ಗ್ರಾನೈಟ್‌ಗಳಿಂದ ನಿರ್ಮಿಸಲಾಗಿದ್ದು ಇದು ಮುಖ್ಯ ದೇವಾಲಯದ ಹೊರತು ಒಟ್ಟು 12 ಉಪ ದೇಗುಲಗಳನ್ನು ಹೊಂದಿದೆ. ಔಪಚಾರಿಕವಾಗಿ ದೇವಸ್ಥಾನ ಉದ್ಘಾಟನೆಯಾಗದಿದ್ದರೂ ಈಗಾಗಲೇ ಹಿಂದೂಗಳು ಸೇರಿದಂತೆ ಇತರ ಧರ್ಮೀಯರು ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ.

ನಕಲಿ ವೀಸಾ ಮೂಲಕ ಬಂದಿದ್ದವನಿಗೆ ಕೆನಡಾ ಪೌರತ್ವ : ಜಿ-20 ವೇಳೆ ಪ್ರೆಸಿಡೆಂಟ್‌ ಸೂಟ್‌ ತಿರಸ್ಕರಿಸಿದ್ದ ಟ್ರಡೋ

click me!