ಉಗ್ರರ ಸಾಕಿ ಪಾತಾಳಕ್ಕೆ ಕುಸಿದ ಪಾಕಿಸ್ತಾನ, ದೇಶದ ಕಡುಬಡತನ ಜನಸಂಖ್ಯೆ ಶೇ.40ಕ್ಕೆ ಏರಿಕೆ!

By Suvarna News  |  First Published Sep 24, 2023, 7:29 PM IST

ಪಾಕಿಸ್ತಾನಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳು ಉರುಳಿದೆ. ಇದೀಗ ವಿಶ್ವ ಬ್ಯಾಂಕ್ ಪಾಕಿಸ್ತಾನದ ಅಸಲಿ ಮುಖವಾಡ ಬಯಲು ಮಾಡಿದೆ. ಪಾಕಿಸ್ತಾನದ ಶೇಕಡಾ 40 ರಷ್ಟು ಮಂದಿ ಕಡು ಬಡತನ ಜೀವನ ತಳ್ಳುತ್ತಿದ್ದಾರೆ ಅನ್ನೋ ವರದಿ ಬಹಿರಂಗಪಡಿಸಿದೆ. ಪಾಕಿಸ್ತಾನ 25 ಕೋಟಿ ಜಸಂಖ್ಯೆಯಲ್ಲಿ 95 ಮಿಲಿಯನ್ ಮಂದಿ ಕಡುಬಡತನದಲ್ಲಿದ್ದಾರೆ.


ಇಸ್ಲಾಮಾಬಾದ್(ಸೆ.24) ಭಾರತದವನ್ನು ಸದಾ ದ್ವೇಷಿಸುವುದು, ಕಾಶ್ಮೀರಕ್ಕೆ ಭಯೋತ್ಪಾದಕರನ್ನು ಬಿಟ್ಟು ಆತಂಕ ಸೃಷ್ಟಿಸುವುದು ಪಾಕಿಸ್ತಾನದ ಮೊದಲ ಗುರಿ. ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪಾಕಿಸ್ತಾನ ಸ್ವರ್ಗ ಎಂದು ಬಿಂಬಿಸಿಕೊಳ್ಳುವ ಶುತ್ರ ರಾಷ್ಟ್ರದ ಅಸಲಿ ಪರಿಸ್ಥಿತಿಯನ್ನು ವಿಶ್ವ ಬ್ಯಾಂಕ್ ಬಹಿರಂಗಪಡಿಸಿದೆ. ಕಳೆದ ಒಂದು ವರ್ಷದಲ್ಲಿ ಪಾಕಿಸ್ತಾನದಲ್ಲಿ ಕಡುಬಡತನ ಜನಸಂಖ್ಯೆ ಹೆಚ್ಚಾಗಿದೆ. ಇದೀಗ ಪಾಕಿಸ್ತಾನದಲ್ಲಿ ಶೇಕಡಾ 40 ರಷ್ಟು ಮಂದಿ ಕಡು ಬಡತನದಲ್ಲಿದ್ದಾರೆ ಎಂದು ವಿಶ್ವ ಬ್ಯಾಂಕ್ ವರದಿ ನೀಡಿದೆ.

2022ರಲ್ಲಿ ಪಾಕಿಸ್ತಾನದ ಬಡತನ ರೇಖೆ ಶೇಕಡಾ 34.2 ರಷ್ಟಿತ್ತು. ಕಳೆದ ಒಂದು ವರ್ಷದಲ್ಲಿ ಪಾಕಿಸ್ತಾನದ ಕಡು ಬಡತನ ರೇಖೆ ಶೇಕಡಾ 39.4ಕ್ಕೆ ಏರಿಕೆಯಾಗಿದೆ. ಕಳೆದ ಒಂದು ವರ್ಷದಲ್ಲಿ 12.5 ಮಿಲಿಯನ್ ಮಂದಿ ಬಡತನಕ್ಕೆ ತಳ್ಳಲ್ಪಟ್ಟಿದ್ದಾರೆ. ಪಾಕಿಸ್ತಾನ ಒಟ್ಟು ಜನಸಂಖ್ಯೆಯ 95 ಮಿಲಿಯನ್ ಮಂದಿ ಕಡು ಬಡತನ ರೇಖೆಯಲ್ಲಿದ್ದಾರೆ. 

Tap to resize

Latest Videos

ಚಂದ್ರಯಾನದ ಬಳಿಕ ಪಾಕ್ ನಾಯಕರಿಗೆ ಭಾರತದ ಮೇಲೆ ಹೆಚ್ಚುತ್ತಿದೆ ಪ್ರೇಮ,ಇದರ ಹಿಂದಿದೆ ಕೆಲ ಕಾರಣ!

ಪಾಕಿಸ್ತಾನದ ಸರಾಸರಿ ತಲಾ ಆದಾಯ ಏಷ್ಯಾ ರಾಷ್ಟ್ರಗಳ ಪೈಕಿ ಅತ್ಯಂತ ಕಡಿಮೆ. ಇನ್ನು ಇದೇ ಕಾರಣದಿಂದ ಅತೀ ಹೆಚ್ಚು ಮಕ್ಕಳು ಶಾಲೆ ತೊರೆಯುತ್ತಿದ್ದಾರೆ ಎಂದು ವಿಶ್ವಬ್ಯಾಂಕ್ ವರದಿ ನೀಡಿದೆ. ಪಾಕಿಸ್ತಾನ ತೀವ್ರವಾಗಿ ಆರ್ಥಿಕ ಸಮಸ್ಯೆ ಎದುರಿಸುತ್ತಿದೆ. ಆರ್ಥಿಕ ಸಮಸ್ಯೆ ಹಾಗೂ ಮಾನವ ಅಭಿವೃದ್ಧಿ ಎರಡೂ ಅತೀ ದೊಡ್ ಸಮಸ್ಯೆಗಳಾಗಿದೆ. ಪಾಕಿಸ್ತಾನ ಆರ್ಥಿಕ ಮಾದರಿ ಯಾವತ್ತೂ ಬಡತನವನ್ನು ಕಡಿಮೆ ಮಾಡುವ ಪ್ರಯತ್ನ ಮಾಡಲೇ ಇಲ್ಲ ಎಂದು ವಿಶ್ವಬ್ಯಾಂಕ್ ಹೇಳಿದೆ.

ಪಾಕಿಸ್ತಾನ ತನ್ನ ದೇಶದ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನ ಮಾಡುತ್ತಿಲ್ಲ. ಸಮರ್ಥ ನಾಯಕತ್ವ ಕೊರತೆ, ಆಡಳಿತದಲ್ಲಿನ ಭ್ರಷ್ಟಾಚಾರ, ಪಾರದರ್ಶಕ ಕೊರತೆ, ನೀತಿಗಳು ದೇಶದ ಅಭಿವೃದ್ಧಿ ಬದಲು ಕೆಲವೇ ಕೆಲವರ ಅಭಿವದ್ಧಿಗೆ ಒತ್ತು ನೀಡಿದೆ. ಕೆಲ ತಿಂಗಳಲ್ಲಿ ಪಾಕಿಸ್ತಾನದಲ್ಲಿ ಚುನಾವಣೆ ನಡೆಯಲಿದೆ. ಈ ಚುನಾವಣೆ ಖರ್ಚು ಮಾಡಲು ಖಜಾನೆ ಖಾಲಿಯಾಗಿದೆ. ಈಗಾಗಲೇ ಸಾಲದ ಮೇಲೆ ನಡೆಯುತ್ತಿರುವ ಪಾಕಿಸ್ತಾನ, ಚುನಾವಣೆಯನ್ನೂ ಸಾಲದಲ್ಲಿ ನಡಸಲಿದೆ. ಇದರಿಂದ ಪಾಕಿಸ್ತಾನದ ಬಡತನ ಮತ್ತಷ್ಟು ಹೆಚ್ಚಲಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ. 

ಈ ವರ್ಷದಲ್ಲಿ ಅಂತಾರಾಷ್ಟ್ರೀಯ ಮಾನಿಟರಿ ಫಂಡ್ ಪಾಕಿಸ್ತಾನಕ್ಕೆ 3 ಬಿಲಿಯನ್ ಅಮೆರಿಕನ್ ಡಾಲರ್ ನೆರವು ನೀಡಿದೆ. ಹಳಿ ತಪ್ಪಿದ ಆರ್ಥಿಕತೆಯನ್ನು ಸರಿದಾರಿಗೆ ತರಲು ಈ ನೆರವು ನೀಡಲಾಗಿತ್ತು. ಪಾಕಿಸ್ತಾನದಲ್ಲಿ1 ಲೀಟರ್ ಹಾಲಿನ ಬೆಲೆ 200 ರೂಪಾಯಿ ದಾಟಿತ್ತು. ಪೆಟ್ರೋಲ್, ಗ್ಯಾಸ್ ಜನಸಾಮಾನ್ಯರಿಗೆ ಕೈಗೆ ಎಟಕುತ್ತಿರಲಿಲ್ಲ. 1 ಕೆಜಿ ಗೋದಿ ಹಿಟ್ಟಿಗೆ 500 ರಿಂದ 800 ರೂಪಾಯಿ ಆಗಿತ್ತು. ಪಾಕಿಸ್ತಾನ ಬಿಕಾರಿಯಾಗುತ್ತಿದ್ದಂತೆ ಐಎಂಎಫ್ ಆರ್ಥಿಕ ನೆರವು ನೀಡಿತ್ತು. 

ಸಾಕಾಯ್ತು ಪಾಕಿಸ್ತಾನ ಸಹವಾಸ, ಅಕ್ಟೋಬರ್‌ನಲ್ಲಿ ಅಂಜು ಭಾರತಕ್ಕೆ ವಾಪಸ್!

ಒಂದೆಡೆ ಭಯೋತ್ಪಾದಕರನ್ನು ಸಾಕಿ ಸಲಹುತ್ತಿರುವ ಪಾಕಿಸ್ತಾನ ಅದೇ ಭಯೋತ್ಪಾದಕರಿಂದಲೇ ಅರ್ಧ ಹಾಳಾಗಿದೆ. ಇದರ ಜೊತೆಗೆ ಕಳೆದ ವರ್ಷ ಸಂಭವಿಸಿದ ಭೀಕರ ಪ್ರವಾಹ ಸೇರಿದಂತೆ ಪ್ರಾಕೃತಿಕ ವಿಕೋಪಗಳು ಪಾಕಿಸ್ತಾನಕ್ಕೆ ತೀವ್ರ ಹಿನ್ನಡೆ ತರುತ್ತಿದೆ. ಪ್ರಮುಖವಾಗಿ ರಾಜಕೀಯವಾಗಿ ಪಾಕಿಸ್ತಾನ ಡೋಲಾಯಮಾನ ಸ್ಥಿತಿಯಲ್ಲಿದೆ. ಸ್ಥಿರ ಸರ್ಕಾರ ಇಲ್ಲದಾಗಿದೆ. ಇವೆಲ್ಲವೂ ಪಾಕಿಸ್ತಾನ ಅಧೋಗತಿಗೆ ಕಾರಣವಾಗಿದೆ.

click me!