ಕೆನಡಾ ಆರೋಪದ ವಿಷಯದಲ್ಲಿ ಭಾರತಕ್ಕೆ ವಿನಾಯಿತಿ ಇಲ್ಲ: ಅಮೆರಿಕ ತಟಸ್ಥ ನಿಲುವು

Published : Sep 23, 2023, 10:27 AM IST
ಕೆನಡಾ ಆರೋಪದ ವಿಷಯದಲ್ಲಿ ಭಾರತಕ್ಕೆ ವಿನಾಯಿತಿ ಇಲ್ಲ: ಅಮೆರಿಕ ತಟಸ್ಥ ನಿಲುವು

ಸಾರಾಂಶ

ಕೆನಡಾದಲ್ಲಿ ಕೊಲೆಯಾದ ಖಲಿಸ್ತಾನಿ ಉಗ್ರ ಹರ್‌ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂಬ ಕೆನಡಾ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಅಮೆರಿಕ ತಟಸ್ಥ ನಿಲುವನ್ನು ಬಹಿರಂಗಪಡಿಸಿದೆ.

ವಾಷಿಂಗ್ಟನ್‌ (ಸೆ.23): ಕೆನಡಾದಲ್ಲಿ ಕೊಲೆಯಾದ ಖಲಿಸ್ತಾನಿ ಉಗ್ರ ಹರ್‌ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂಬ ಕೆನಡಾ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಅಮೆರಿಕ, ‘ಅಮೆರಿಕವು ಭಾರತದೊಂದಿಗೆ ಉನ್ನತ ಮಟ್ಟದ ಸಂಪರ್ಕದಲ್ಲಿದೆ. ಮಿತ್ರ ರಾಷ್ಟ್ರ ಎಂಬ ಕಾರಣಕ್ಕೆ ಉಭಯ ರಾಷ್ಟ್ರಗಳ ಸಮಸ್ಯೆಯಲ್ಲಿ ಭಾರತಕ್ಕೆ ಅಮೆರಿಕವು ವಿಶೇಷ ವಿನಾಯಿತಿ ನೀಡುತ್ತಿಲ್ಲ’ ಎಂದು ತನ್ನ ತಟಸ್ಥ ನಿಲುವನ್ನು ಬಹಿರಂಗಪಡಿಸಿದೆ.

ಈ ಬಗ್ಗೆ ಶ್ವೇತಭವನದಲ್ಲಿ ಮಾತನಾಡಿದ ಅಮೆರಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್‌ ಸುಲ್ಲಿವನ್‌ ‘ಇಂಥ ವಿಷಯದಲ್ಲಿ ಯಾವ ದೇಶಕ್ಕೂ ವಿಶೇಷ ವಿನಾಯಿತಿ ನೀಡಲಾಗುವುದಿಲ್ಲ. ಯಾವ ದೇಶ ಪರಿಣಾಮಕಾರಿಯೆಂಬುದನ್ನು ಲೆಕ್ಕಿಸದೆ ಅಮೆರಿಕವು ತನ್ನ ತತ್ವಗಳನ್ನು ಪಾಲಿಸುತ್ತದೆ. ಈ ವಿಷಯವು ನಮಗೆ ಕಳವಳಕಾರಿ ಸಂಗತಿಯಾಗಿದ್ದು ಇದನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಹೇಳಿದರು.

ಭಾರತ ಮತ್ತು ಕೆನಡಾ ಶೈಕ್ಷಣಿಕ ಅಭಿವೃದ್ಧಿಗಾಗಿ ಒಪಿ ಜಿಂದಾಲ್‌ ವಿವಿ ಜೊತೆ ಕೆನಡಾ

ಕೆನಡಾ ಸಂಸ್ಥೆಯಿಂದ ಷೇರು ಹಿಂಪಡೆದ ಮಹೀಂದ್ರಾ
ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆಯೇ ಭಾರತ ಮೂಲದ ವಾಹನ ತಯಾರಕ ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಸಂಸ್ಥೆಯು ಕೆನಡಾದ ಕಂಪನಿಯೊಂದರಲ್ಲಿ ತಾನು ಹೂಡಿಕೆ ಮಾಡಿದ್ದ ಸಂಪೂರ್ಣ ಪಾಲನ್ನು ಹಿಂಪಡೆದುಕೊಂಡಿದೆ. ಸೆ.20 ರಂದು ಸ್ವಯಂಪ್ರೇರಿತ ವಿಂಡ್‌ ಅಪ್‌ ಅರ್ಜಿ ಸಲ್ಲಿಸುವ ಮೂಲಕ ಕೆನಡಾದ ರೆಸ್ಸಾನ್ ಏರೋಸ್ಪೇಸ್‌ ಕಾರ್ಪೋರನ್ನ್‌ನಲ್ಲಿ ತಾನು ಹೊಂದಿದ್ದ ಶೇ.11.18 ರಷ್ಟು ಶೇರ್‌ (28.7 ಕೋಟಿ ರು.) ಅನ್ನು ಮಹೀಂದ್ರಾ ಹಿಂಪಡೆಯಲು ನಿರ್ಧರಿಸಿದೆ. ಈ ಕುರಿತ ಮಾಹಿತಿಯನ್ನು ರೆಸ್ಸಾನ್‌ ಕಂಪನಿ ಷೇರುಪೇಟೆ ನಿಯಂತ್ರಣ ಸಂಸ್ಥೆ ಸೆಬಿಗೆ ನೀಡಿದ ಮಾಹಿತಿಯಲ್ಲಿ ತಿಳಿಸಿದೆ. ಆದರೆ ಇದಕ್ಕೆ ಕಾರಣವೇನೆಂಬುದನ್ನು ಮಹೀಂದ್ರಾ ಸಂಸ್ಥೆ ಸ್ಪಷ್ಟಪಡಿಸಿಲ್ಲ.

ಭಾರತದ ವೈದ್ಯಕೀಯ ಪದವೀಧರರಿಗೆ ಜಾಗತಿಕ ಮನ್ನಣೆ, ವಿದೇಶಗಳಲ್ಲೂ ಅಧ್ಯಯನ, ವೃತ್ತಿ

ಈಗಲೇ ಚುನಾವಣೆ ನಡೆದರೆ ಟ್ರುಡೋಗೆ ಸೋಲು: ಸಮೀಕ್ಷೆ
ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಆರೋಪಿಸಿ ಸದ್ದು ಮಾಡಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ, ಸ್ವದೇಶದಲ್ಲಿ ಜನಪ್ರಿಯತೆ ಕಳೆದುಕೊಳ್ಳುತ್ತಿದ್ದಾರೆ ಎಂದು ಇತ್ತೀಚಿನ ಸಮೀಕ್ಷೆಯೊಂದು ಹೇಳಿದೆ.

ಇದೇ ವೇಳೆ ಟ್ರುಡೋ ಅವರ ರಾಜಕೀಯ ಎದುರಾಳಿ ಆಗಿರುವ ಕೆನಡಾ ಪ್ರತಿಪಕ್ಷವಾದ ಕನ್ಸರ್ವೇಟಿವ್‌ ಪಕ್ಷ ನಾಯಕ ಪೀರ್‌ ಪಾಲಿವರ್ ಅವರು ಶೇ.39ರಷ್ಟು ಕೆನಡಿಯನ್ನರ ಬೆಂಬಲ ಸಂಪಾದಿಸಿದ್ದು, ಈಗಲೇ ಚುನಾವಣೆ ನಡೆದರೆ ಪ್ರಧಾನಿ ಆಗುವ ಸಾಧ್ಯತೆ ಇದೆ. ಇನ್ನು 2015ರಲ್ಲಿ ಚುನಾಯಿತರಾಗಿದ್ದ ಲಿಬರಲ್ ಪಕ್ಷದ ನಾಯಕ ಟ್ರುಡೋ ಕೇವಲ ಶೇ.30ರಷ್ಟು ಮತಗಳೊಂದಿಗೆ ಭಾರೀ ಸೋಲು ಕಾಣುವ ಸಾಧ್ಯತೆ ಇದೆ ಎಂದು ‘ಇಪೋಸ್’ ಎಂಬ ಸಂಸ್ಥೆ ನಡೆಸಿದ ಸಮೀಕ್ಷೆ ಹೇಳಿದೆ.

ಕೆನಡಾ ಚುನಾವಣೆ 2025ರಲ್ಲಿ ನಡೆಯಲಿದೆ. ಕಳೆದ ಜುಲೈನಲ್ಲೂ ನಡೆದಿದ್ದ ಸಮೀಕ್ಷೆಯೊಂದರಲ್ಲಿ ಟ್ರೂಡೊ 50 ವರ್ಷಗಳಲ್ಲಿ ಅತ್ಯಂತ ಕೆಟ್ಟ ಪ್ರಧಾನಿ ಎಂದು ಕಂಡುಬಂದಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸ್ಲಿಮ್ ಆಗೋಕೆ ಹೋಗಿ ಆರೋಗ್ಯವೇ ಹೋಯ್ತು: 11691 ರೂ ಪಾವತಿಸಿ ತೂಕ ಇಳಿಕೆ ಇಂಜೆಕ್ಷನ್ ಪಡೆದಾಕೆಗೆ ಆಘಾತ
ಹೆದ್ದಾರಿಯಲ್ಲಿ ಇಳಿದು ಕಾರಿಗೆ ಡಿಕ್ಕಿ ಹೊಡೆದ ವಿಮಾನ: ವೀಡಿಯೋ