ಕಾಡಿನ ರಾಜನೇ ಆಗಿರಲಿ, ಹುಲಿ-ಚಿರತೆಯೇ ಆಗಿರಲಿ ಮುಳ್ಳು ಹಂದಿ ಕಂಡರೆ ದಿಕ್ಕಾಪಾಲಾಗಿ ಓಡಿಹೋಗೋದಕ್ಕೆ ಕಾರಣ ಏನೆಂದರೆ, ಅದರ ಮೈಮೇಲಿನ ಮುಳ್ಳುಗಳು. ತನ್ನ ರಕ್ಷಣೆಗೆ ಹಾವಿಗೆ ಹೇಗೆ ವಿಷ ಅಗತ್ಯವೋ ಅದೇ ರೀತಿ ಮುಳ್ಳುಹಂದಿಗೆ ಮುಳ್ಳುಗಳೇ ರಕ್ಷಣಾ ಕವಚ.
ಜೆರುಸಲೇಮ್ (ಆ.10): ಭೂಮಿಯ ಮೇಲಿರುವ ಸಕಲ ಜೀವಜಂತುಗಳು ತಾನು ಬದುಕಲು ಪ್ರತಿದಿನವೂ ಹೋರಾಟ ಮಾಡುತ್ತಲೇ ಇರುತ್ತದೆ. ಸೃಷ್ಟಿಕರ್ತ ಕೂಡ ತಮ್ಮ ರಕ್ಷಣೆಗೆ ಈ ಜೀವಜಂತುಗಳಿಗೆ ಹಲವು ರಕ್ಷಣಾ ಕವಚಗಳನ್ನೂ ನೀಡಿರುತ್ತಾರೆ. ಹಾವಿಗೆ ವಿಷ ಹೇಗೆ ರಕ್ಷಣಾ ಕವಚವೋ, ಮುಳ್ಳುಹಂದಿಗೆ ಅದರ ಮುಳ್ಳುಗಳೇ ರಕ್ಷಣಾ ಕವಚ. ಮುಳ್ಳುಹಂದಿಗಳ ಈ ಮುಳ್ಳುಗಳ ಕಾರಣಕ್ಕಾಗಿಯೇ ಮನುಷ್ಯ ಸೇರಿದಂತೆ ಯಾವ ಪ್ರಾಣಿಗಳೂ ಕೂಡ ಅದರ ಬೇಟೆಗೆ ಹೆದರುತ್ತಾರೆ. ಮುಳ್ಳು ಹಂದಿ ದಾಟಿ ಹೋಗುತ್ತಿದ್ದರೆ, ಸಿಂಹವಾಗಲಿ, ಹುಲಿಯಾಗಲಿ ಫುಲ್ ಸೈಲೆಂಟ್. ಹಾಗೇನಾದರೂ ದಾಳಿ ಮಾಡಲು ಯತ್ನಿಸಿದರೆ, ಮುಳ್ಳುಹಂದಿಗಿಂತ ಅದನ್ನು ಬೇಟೆಯಾಡಲು ಯತ್ನಿಸಿದವರಿಗೆ ಹಾನಿ ಹೆಚ್ಚು. ಯಾಕೆಂದರೆ, ಅದರ ಮುಳ್ಳುಗಳು ಅಷ್ಟು ಹರಿತ. ಬಹುಶಃ ಸಕಲ ಜೀವಜಂತುಗಳಿಗೂ ಇದರ ಬಗ್ಗೆ ಗೊತ್ತು. ಆದರೆ, ಇಸ್ರೇಲ್‌ನ ಶೋಹಾಮ್‌ನಲ್ಲಿ ತೀರಾ ಅಪರೂಪವಾದ ಸಂಗತಿಯನ್ನು ಸರೀಸೃಪಗಳ ಪರಿಸರ ವಿಜ್ಞಾನಿ ಅವಿಯಾದ್ ಬಾರ್ ಸೆರೆಹಿಡಿದಿದ್ದು, ವಿಷಕಾರಿಯಲ್ಲದ ಹಾವೊಂದು ಮುಳ್ಳುಹಂದಿಯನ್ನು ತಿನ್ನಲು ಪ್ರಯತ್ನ ಮಾಡಿದೆ.
ಇದರ ಚಿತ್ರಗಳನ್ನು ಅವಿಯಾದ್ ಸೆರೆ ಹಿಡಿದಿದ್ದಾರೆ. ಮುಳ್ಳುಹಂದಿಯನ್ನು ತಿನ್ನಲು ಯತ್ನಿಸಿದ ಹಾವು ಹಾಗೂ ಮುಳ್ಳುಹಂದಿ ಎರಡೂ ಸಾವು ಕಂಡಿದೆ. ಶೋಹಾಮ್‌ನ ಡಾಗ್‌ಪಾರ್ಕ್‌ನಲ್ಲಿ ಇತ್ತೀಚೆಗೆ ಈ ಹಾವು ಕಾಣಿಸಿಕೊಂಡಿತ್ತು. ಆದರೆ, ಜನರು ನೋಡುವ ವೇಳೆಗಾಗಲೇ ಈ ಹಾವು ಜೀವ ಕಳೆದುಕೊಂಡಿತ್ತು. ಮುಳ್ಳುಹಂದಿಯ ಮುಳ್ಳುಗಳು ಅದರ ಬಾಯಿಗೆ ಚುಚ್ಚಿಕೊಂಡಿತ್ತು. ಇನ್ನೊಂದೆಡೆ, ಮುಳ್ಳು ಹಂದಿಯ ತಲೆ, ಹಾವಿನ ಬಾಯಿಯ ಒಳಗೆ ಇದ್ದಿದ್ದರಿಂದ ಅದೂ ಕೂಡ ಉಸಿರುಕಟ್ಟಿ ಸಾವು ಕಂಡಿದೆ ಎಂದು ಜೆರುಸಲೆಮ್ ಪೋಸ್ಟ್ ವರದಿ ಮಾಡಿದೆ. ನೇಚರ್ ಅಂಡ್ ಪಾರ್ಕ್ಸ್ ಅಥಾರಿಟಿಯ ಸರೀಸೃಪ ಪರಿಸರಶಾಸ್ತ್ರಜ್ಞ ಅವಿಯಾದ್ ಬಾರ್ ಸ್ಥಳಕ್ಕೆ ಭೇಟಿ ನೀಡಿ ದೈತ್ಯ ಕಪ್ಪು ಚಾವಟಿ ಹಾವು ಹಾಗೂ ಮುಳ್ಳು ಹಂದಿ ಎರಡೂ ಕೂಡ ಸಾವು ಕಂಡಿದೆ ಎಂದು ತಿಳಿಸಿದ್ದಾರೆ.
ಪರಿಸ್ಥಿತಿಯ ವಿಶ್ಲೇಷಣೆ ಮಾಡಿದ ಅವರು, ಮುಳ್ಳುಹಂದಿಯನ್ನು ತಿನ್ನಲು ಪ್ರಯತ್ನಿಸಿದ ಕ್ಷಣವೇ ತನ್ನ ನಿರ್ಧಾರ ತಪ್ಪು ಎನ್ನುವುದು ಹಾವಿಗೆ ಅರಿವಾಗಿತ್ತು. ಹಿಂದೆಂದೂ ತಿನ್ನದ ವಿಶೇಷ ಪ್ರಾಣಿಯನ್ನು ತಿನ್ನಬೇಕು ಎಂದು ನಿರ್ಧಾರ ಮಾಡಿ ಅದರ ಪ್ರಯತ್ನಕ್ಕೆ ಮುಂದಾದ ವೇಳೆಯೇ ತಾನು ತಪ್ಪು ಮಾಡಿದ್ದೇನೆ ಎಂದು ಅದಕ್ಕೆ ಅರಿವಾಗಿದೆ. ತಕ್ಷಣವೇ ಮುಳ್ಳು ಹಂದಿಯನ್ನು ಹೊರಹಾಕಲು ಪ್ರಯತ್ನಿಸಿದರೂ ಅದು ಕೂಡ ಸಾಧ್ಯವಾಗಲಿಲ್ಲ ಎಂದಿದ್ದಾರೆ. ಮುಳ್ಳು ಹಂದಿಯ ಮುಳ್ಳುಗಳು ಏಕಮುಖವಾಗಿರುತ್ತದೆ. ಎಚ್ಚರಿಕೆಯಿಂದ ಮಾತ್ರವೇ ಅದನ್ನು ಹಿಡಿಯಬಹುದು ಎಂದಿದ್ದಾರೆ.
ಇನ್ನು ಇಸ್ರೇಲ್ ಮೂರು ಜಾತಿಯ ಮುಳ್ಳುಹಂದಿಗಳಿಗೆ ನೆಲೆಯಾಗಿದೆ. ಮುಳ್ಳುಹಂದಿಯ ಆಹಾರದಲ್ಲಿ ಕೀಟಗಳು, ಸಣ್ಣ ಸಸ್ತನಿಗಳು, ಪಕ್ಷಿಗಳು ಮತ್ತು ಸರೀಸೃಪಗಳು ಸೇರಿವೆ. ಹಾವುಗಳು ಕೂಡ ಅದು ತಿನ್ನುತ್ತದೆ.
ಕಚೇರಿಯಲ್ಲಿ ಸಿಕ್ ಲೀವ್, ಕ್ಲಬ್‌ನಲ್ಲಿ ಪಾರ್ಟಿ..ಎಣ್ಣೆ ಏಟಿನಲ್ಲಿ ಯುವತಿಗೆ ಕಿರುಕುಳ ನೀಡಿದ ಗೋವಾ ಡಿಐಜಿ!
ಕಪ್ಪು ಚಾವಟಿ ಹಾವು ಇಸ್ರೇಲ್‌ನಲ್ಲಿ ಅತ್ಯಂತ ಸಾಮಾನ್ಯವಾದ ಹಾವುಗಳಲ್ಲಿ ಒಂದಾಗಿದೆ, ಜೊತೆಗೆ ಇಸ್ರೇಲ್‌ನಲ್ಲಿಅತ್ಯಂತ ಉದ್ದವಾದ ಸರೀಸೃಪವಾಗಿದೆ ಎಂದು ಪ್ರಕೃತಿ ಮತ್ತು ಉದ್ಯಾನವನಗಳ ಪ್ರಾಧಿಕಾರ ವಿವರಿಸಿದೆ. ಇದು ವಿಷಕಾರಿಯಲ್ಲ ಮತ್ತು ಇಲಿ, ಹಲ್ಲಿ, ಹೆಗ್ಗಣಗಳ ಸಂಖ್ಯೆಯನ್ನು ನಿಯಂತ್ರಣದಲ್ಲಿಡಲು ಈ ಹಾವುಗಳನ್ನು ಇಸ್ರೇಲ್ ಜನರು ಮನೆಯಲ್ಲಿ ಸಾಕುತ್ತಾರೆ. ಇನ್ನು ಇಸ್ರೇಲ್‌ನಲ್ಲಿ ಸುಮಾರು 41 ವಿವಿಧ ಜಾತಿಯ ಹಾವುಗಳಿವೆ. ಅವುಗಳಲ್ಲಿ ಹೆಚ್ಚಿನವು ಮನುಷ್ಯರಿಗೆ ಅಪಾಯಕಾರಿ ಅಲ್ಲ. ಇಸ್ರೇಲ್‌ನಲ್ಲಿ ಕೇವಲ ಒಂಬತ್ತು ಜಾತಿಯ ಹಾವುಗಳು ವಿಷಪೂರಿತವಾಗಿವೆ.
ಆಪಲ್ ಕಂಪನಿಯಿಂದ ವಾರನ್ ಬಫೆಟ್‌ಗೆ 1814 ಕೋಟಿ ರೂಪಾಯಿ ಡಿವಿಡೆಂಡ್!
ವಿಷಪೂರಿತ ಹಾವುಗಳು ಬೇಟೆಯಾಡುವಾಗ ಬೇಟೆಯನ್ನು ಸಾಯಿಸಲು ಮತ್ತು ದಾಳಿಕೋರರ ವಿರುದ್ಧ ರಕ್ಷಿಸಲು ತಮ್ಮ ವಿಷವನ್ನು ಬಳಸುತ್ತವೆ, ಆದರೆ ವಿಷರಹಿತ ಹಾವುಗಳು ತಮ್ಮ ಬೇಟೆಯನ್ನು ಜೀವಂತವಾಗಿ ನುಂಗುವ ಮೂಲಕ ಅಥವಾ ಅವುಗಳನ್ನು ಉಸಿರುಕಟ್ಟಿಸುವ ಮೂಲಕ ಕೊಲ್ಲುತ್ತವೆ.