7 ಅಂತಸ್ತಿನ ಕಟ್ಟಡದಿಂದ ಬಿದ್ದು ಪವಾಡ ಸದೃಶ್ಯವಾಗಿ ಬದುಕುಳಿದ ಯುವತಿ!

By Suvarna NewsFirst Published Aug 8, 2023, 4:34 PM IST
Highlights

ಬರೋಬ್ಬರಿ 7 ಅಂತಸ್ತಿನ ಕಟ್ಟಡದ ಮೇಲಿನಿಂದ 20 ಹರೆಯದ ಯುವತಿ ಕೆಳಕ್ಕೆ ಬಿದ್ದಿದ್ದಾಳೆ. ಆದರೆ ಅಚ್ಚರಿ ನೀಡಿದಿದೆ. ಗಂಭೀರಗಾಯಗೊಂಡರೂ ಯುವತಿ ಬದುಕುಳಿದಿದ್ದಾಳೆ. ಇದೀಗ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಯುವತಿಯನ್ನು ಜನ ಫೈಟರ್ ಎಂದು ಕರೆಯುತ್ತಿದ್ದಾರೆ.
 

ಮೆಲ್ಬೋರ್ನ್(ಆ.08) ಮೀಟರ್ ಎತ್ತರಿಂದ ಬಿದ್ದರೂ ಬದುಕುಳಿಯುವ ಸಾಧ್ಯತೆಗಳಿಲ್ಲ. ಹೀಗಿರುವಾಗ 7 ಅಂತಸ್ತಿನ ಕಟ್ಟದ ಮೇಲಿನಿಂದ ಬಿದ್ದ 20 ಹರೆಯದ ಯುವತಿ ಟೊಮ್ನಿ ರೈಡ್ ಪವಾಡ ಸದೃಶ್ಯ ಬದುಕುಳಿದಿದ್ದಾಳೆ. ಯುವತಿ ಸದ್ಯ ತುರ್ತು ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಹಲವು ಸರ್ಜರಿ ಮಾಡಲಾಗಿದ್ದು, ಚೇತರಿಕೆಗೆ ಕೆಲ ದಿನಗಳು ಬೇಕಾಗಬಹುದು ಎಂದು ವೈದ್ಯರು ಹೇಳಿದ್ದಾರೆ. ಇದೇ ವೇಳೆ, ಈ ಯುವತಿ ಹೋರಾಟಗಾರ್ತಿ ಎಂದು ಬಣ್ಣಿಸಿದ್ದಾರೆ. ಈ ಘಟನೆ ನಡೆದಿರುವುದು ಆಸ್ಟ್ರೇಲಿಯಾದ ಮೆಲ್ಬೊರ್ನ್‌ನಲ್ಲಿ ನಡೆದಿದೆ.

ಮಧ್ಯರಾತ್ರಿ 1.30ರ ಸುಮಾರಿಗೆ  ಯುವತಿ ಪೋಷಕರಿಗೆ ಕರೆಯೊಂದು ಬಂದಿದೆ. ಕರೆ ಸ್ವೀಕರಿಸಿದ ಪೋಷಕರಿಗೆ ಆಘಾತವಾಗಿದೆ.  ಮಗಳು 7ನೇ ಮಹಡಿಯಿಂದ ಬಿದ್ದಿರುವ ಮಾಹಿತಿ ಸಿಕ್ಕ ಬೆನ್ನಲ್ಲೇ ಪೋಷಕರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಇತ್ತ ಸ್ಥಳೀಯರು ಯುವತಿಯನ್ನು ಮೆಲ್ಬೋರ್ನ್‌ನ ಆಲ್ಫ್ರೆಡ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬರೋಬ್ಬರಿ 21 ಮೀಟರ್ ಎತ್ತರದಿಂದ ಕೆಳಕ್ಕೆ ಬಿದ್ದ ಯುವತಿಯನ್ನು ತುರ್ತು ನಿಘಾ ಘಟಕಕ್ಕೆ ದಾಖಲಿಸಲಾಗಿತ್ತು.

Latest Videos

ಜಲಪಾತದ ಅಂಚಿನಲ್ಲಿ ಮಸ್ತಿ, ಕಾರಿನ ಸಮೇತ ಮೂವರು ಕೆಳಕ್ಕೆ ಬಿದ್ದ ಭಯಾನಕ ವಿಡಿಯೋ ವೈರಲ್!

ಯುವತಿಗೆ ಹಲವು ಸರ್ಜರಿಗಳನ್ನು ಮಾಡಲಾಗಿದೆ. ಸದ್ಯ ಯುವತಿ ಸ್ಥಿತಿ ಗಂಭೀರವಾಗಿದ್ದರೂ ಸ್ಥಿರವಾಗಿದೆ. ಯುವತಿ ಬದುಕುಳಿದಿದ್ದೆ ಪವಾಡ ಎಂದು ವೈದ್ಯರು ಹೇಳಿದ್ದಾರೆ. ಇಷ್ಟೇ ಅಲ್ಲ ಯುವತಿ ಚೇತರಿಕೆಗೆ ಹಲವು ದಿನಗಳೇ ತಗುಲಲಿದೆ ಎಂದು ವೈದ್ಯರು ಹೇಳಿದ್ದಾರೆ.

ಸೇತುವೆಯಿಂದ ಕೆಳಕ್ಕೆ ತಳ್ಳಿದರೂ ಬದುಕಿ ಬಂದ ಸಾಹಸಿ ಬಾಲಕಿ!
ಇತ್ತೀಚೆಗ ಹೈದರಾಬಾದ್‌ನಲ್ಲಿ ನಡೆದ ಘಟನೆ ಎಲ್ಲರನ್ನು ಬೆಚ್ಚಿ ಬೀಳಿಸಿತ್ತು. ತನ್ನನ್ನು ಸೇತುವೆಯಿಂದ ತಳ್ಳಿದರೂ ಕೇವಲ 13 ವರ್ಷದ ಬಾಲಕಿಯೊಬ್ಬಳು ಸಾಹಸ ಮಾಡಿ ಬದುಕಿ ಬಂದಿರುವ ಮೈನವಿರೇಳಿಸುವ ಸಂಗತಿ ಆಂಧ್ರಪ್ರದೇಶದ ಕೋನಸೀಮಾ ಜಿಲ್ಲೆಯಲ್ಲಿ ಭಾನುವಾರ ನಡೆದಿತ್ತು. ಈ ಬಾಲಕಿಯ ತಾಯಿಯೊಂದಿಗೆ ಲಿವ್‌ ಇನ್‌ ಸಂಬಂಧದಲ್ಲಿದ್ದ ವ್ಯಕ್ತಿಯೇ ಭಾನುವಾರ ಮುಂಜಾನೆ 3.50ರ ಸುಮಾರಿಗೆ ಬಾಲಕಿ ಮತ್ತು ಆಕೆಯ ತಾಯಿ ಹಾಗೂ ಸಹೋದರಿಯನ್ನು ರಾವುಲಪಾಲೆಂ ಸೇತುವೆಯಿಂದ ತಳ್ಳಿದ್ದ. ಈ ವೇಳೆ ಇನ್ನೇನು ನೀರಿಗೆ ಬೀಳುತ್ತಿದ್ದ ಬಾಲಕಿ ನದಿ ನೀರಿನಿಂದ 50 ಮೀ. ಎತ್ತರದಲ್ಲಿದ್ದ ಪ್ಲಾಸ್ಟಿಕ್‌ ಪೈಪ್‌ ಹಿಡಿದಿದ್ದಾಳೆ. ಬಳಿಕ ಜೋತಾಡುತ್ತಲೇ ಧೃತಿಗೆಡದೆ ಕೈಲಿದ್ದ ಮೊಬೈಲ್‌ನಿಂದ ‘100’ ಸಂಖ್ಯೆ ಡಯಲ್‌ ಮಾಡಿ ಪೊಲೀಸರಿಗೆ ತನ್ನನ್ನು ರಕ್ಷಿಸುವಂತೆ ಕೋರಿದ್ದಾಳೆ. 10 ನಿಮಿಷದಲ್ಲಿ ಪೊಲೀಸರು ಬಂದು, ಆಕೆಯನ್ನು ರಕ್ಷಿಸಿದ್ದಾರೆ.

ಅರಿಶಿನಗುಂಡಿ ಜಲಪಾತಕ್ಕೆ ಬಿದ್ದು, ಬಾರದ ಲೋಕಕ್ಕೆ ತೆರಳಿದ ಭದ್ರಾವತಿ ಶರತ್‌ ಕುಮಾರ್

ಇದೀಗ ಬಾಲಕಿ ಪುಪ್ಪಳ ಲಕ್ಷ್ಮೇ ಸಾಯಿ ಕೀರ್ತನಾಳ ಧೈರ್ಯ ಮತ್ತು ಚಾಣಾಕ್ಷತನಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ಆಕೆಯೊಂದಿಗೆ ನೀರಿಗೆ ದೂಡಲ್ಪಟ್ಟತಾಯಿ ಹಾಗೂ ಸೋದರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

click me!