
ಮಧ್ಯಪ್ರಾಚ್ಯದಲ್ಲಿ ಯುದ್ಧದ ವಾತಾವರಣ ತೀವ್ರಗೊಂಡಿದೆ. ಅಮೆರಿಕದ ಸೆನೆಟರ್ ಲಿಂಡ್ಸೆ ಗ್ರಹಾಂ ನಿಧನ, ಯುಎಇ ಹಡಗಿನ ಮೇಲೆ ಇರಾನ್ ದಾಳಿ, ಮತ್ತು ಸೌದಿ ವಿಮಾನ ನಿಲ್ದಾಣದ ಧ್ವಂಸದಂತಹ ಘಟನೆಗಳು ನಡೆದಿವೆ.
ಬೆಂಗಳೂರು (ಜು.15): ಮಧ್ಯಪ್ರಾಚ್ಯದಲ್ಲಿ ಯುದ್ಧದ ಜ್ವಾಲೆ ತಾರಕಕ್ಕೇರಿದ್ದು, ಜಗತ್ತೇ ಬೆಚ್ಚಿಬೀಳುವಂಥ ವಿದ್ಯಾಮಾನಗಳು ನಡೆದಿವೆ. ಇರಾನ್‌ನ ಕಡು ವೈರಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬಲಗೈ ಬಂಟ ಹಾಗೂ ಸೆನೆಟರ್ ಆಗಿದ್ದ ಲಿಂಡ್ಸೆ ಗ್ರಹಾಂ ಹಠಾತ್ತನೆ ಮೃತಪಟ್ಟಿದ್ದು, ಇರಾನ್ ಮಾಧ್ಯಮಗಳು ಈ ಸಾವನ್ನು ಸಂಭ್ರಮಿಸುತ್ತಿವೆ.
ಇದರ ಬೆನ್ನಲ್ಲೇ, ಹೊರ್ಮುಜ್ ಜಲಸಂಧಿಯಲ್ಲಿ ಯುಎಇ ಹಡಗಿನ ಮೇಲೆ ಇರಾನ್‌ನ ಐಆರ್‌ಜಿಸಿ (IRGC) ಭೀಕರ ದಾಳಿ ನಡೆಸಿದ್ದು, ರಕ್ತಪಾತದಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.
ಮತ್ತೊಂದೆಡೆ ಹೌತಿ ಪಡೆಗಳು ಸೌದಿ ಅರೇಬಿಯಾ ವಿಮಾನ ನಿಲ್ದಾಣವನ್ನು ಧ್ವಂಸಗೊಳಿಸಿವೆ. ಶಾಂತಿ ಒಪ್ಪಂದದ ಹೊಸ್ತಿಲಲ್ಲಿದ್ದ ಅಮೆರಿಕ, ಇಸ್ರೇಲ್‌ನ ರಾಜತಾಂತ್ರಿಕ ಚದುರಂಗದಾಟಕ್ಕೆ ಸಿಲುಕಿ ಇರಾನ್ ವಿರುದ್ಧ ಮತ್ತೆ ಯುದ್ಧದ ಅಖಾಡಕ್ಕೆ ಧುಮುಕುವಂತಾಗಿದ್ದು, 3ನೇ ಮಹಾಯುದ್ಧದ ಕಹಳೆ ಮೊಳಗುವ ಭೀತಿ ಸೃಷ್ಟಿಯಾಗಿದೆ.