
ಉಡುಪಿ(ನ.22): ಅಮೆರಿಕ ಅಧ್ಯಕ್ಷರಾಗಿ ಚುನಾಯಿತರಾಗಿರುವ ಜೋ ಬೈಡನ್ ಅವರ ಪತ್ನಿ ಜಿಲ್ ಬೈಡನ್ ಅವರ ನೀತಿ ನಿರ್ದೇಶಕರಾಗಿ ಭಾರತೀಯ ಮೂಲದ ಮಾಲಾ ಅಡಿಗ ಅವರು ಆಯ್ಕೆಯಾಗಿದ್ದಾರೆ.
ಮಾಲಾ ಅಡಿಗ ಅವರು ಹುಟ್ಟಿಬೆಳೆದದ್ದು, ಅಮೆರಿಕದಲ್ಲಾದರೂ, ಆಕೆ ಉಡುಪಿ ಜಿಲ್ಲೆಯ ಕುಂದಾಪುರದ ಕಕ್ಕುಂಜೆ ಗ್ರಾಮದ ಮಣ್ಣಿನ ಮಗಳು. ಅವರು ಕಕ್ಕುಂಜೆ ಚಂದ್ರಶೇಖರ ಅಡಿಗ ಮೊಮ್ಮಗಳು, ಡಾ.ರಮೇಶ್ ಅಡಿಗರ ಮಗಳು. ಡಾ.ರಮೇಶ್ ಅಡಿಗ ಅವರು ವೈದ್ಯಕೀಯ ಪದವಿ ಪಡೆದು ಅಮೆರಿಕಕ್ಕೆ ತೆರಳಿ, ಕಳೆದ 50 ವರ್ಷಗಳಿಂದ ಅಲ್ಲಿಯೇ ನೆಲೆ ನಿಂತಿದ್ದಾರೆ.
ಬೈಡೆನ್ ಸಂಪುಟದಲ್ಲಿ ಮಂಡ್ಯದ ವಿವೇಕ್ ಮೂರ್ತಿ , ಅರುಣ್ ಮಜುಂದಾರ್‌ಗೆ ಪ್ರಮುಖ ಹುದ್ದೆ?
ಕಾನೂನು ಪದವಿಧರೆಯಾಗಿರುವ ಮಾಲಾ ಅಡಿಗ ಅವರು ಅಮೆರಿಕದ ಇಲಿನಾಯ್ಸ್ ನಿವಾಸಿ. ಬೈಡನ್ ಫೌಂಡೇಶನ್‌ನಲ್ಲಿ ಉನ್ನತ ಶಿಕ್ಷಣ ನಿರ್ದೇಶಕಿಯಾಗಿ, ಈ ಬಾರಿಯ ಚುನಾವಣೆಯ ಸಂದರ್ಭದಲ್ಲಿ, ಅಮೆರಿಕಾದ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿರುವ ಕಮಲಾ ಹ್ಯಾರೀಸ್ ಅವರಿಗೆ ಸಲಹೆಗಾರರಾಗಿದ್ದರು.
ಅಮೆರಿಕದ ಕೊರೋನಾ ತಜ್ಞರ ಸಮಿತಿಗೆ ಮಂಡ್ಯ ವಿವೇಕ್ ಹಲ್ಲೇಗೆರೆ ಬಾಸ್!
ಕುಂದಾಪುರದಲ್ಲಿ ಕಕ್ಕುಂಜೆ ಅಡಿಗರ ಮನೆತನ ಬಹಳ ಪ್ರಸಿದ್ಧ. ಈ ಮನೆತನದ ಸೂರ್ಯನಾರಾಯಣ ಅಡಿಗರು ಕರ್ಣಾಟಕ ಬ್ಯಾಂಕ್‌ನ ಅಧ್ಯಕ್ಷರಾಗಿದ್ದರು. ಇದೇ ಮನೆತನದ ಮಗಳು ಮಾಲಾ ಅಡಿಗ, ಈಗ ಅಮೆರಿಕಾದ ಪ್ರಥಮ ಮಹಿಳೆಯ ನೀತಿ ನಿರ್ದೇಶಕಿಯಾಗಿದ್ದಾರೆ. ಇದು ಕುಂದಾಪುರಕ್ಕೆ ಮಾತ್ರವಲ್ಲ ಕನ್ನಡ ನಾಡಿಗೆ ಹೆಮ್ಮೆಯ ವಿಷಯ. ಊರಿನವರಿಗೆಲ್ಲ ಬಹಳ ಸಂತೋಷವಾಗಿದೆ. ಮಾಲಾ ಅಡಿಗ ಅವರು ತಮ್ಮ ಹುದ್ದೆಯಲ್ಲಿ ಯಶಸ್ವಿಯಾಗಲಿ, ಇನ್ನೂ ದೊಡ್ಡ ಹುದ್ದೆಗೇರಲಿ ಎಂಬುದೇ ನಮ್ಮೆಲ್ಲರ ಹಾರೈಕೆ.
ಚಂದ್ರಶೇಖರ ನಾವಡ, ಅಡಿಗ ಮನೆತನದ ಒಡನಾಡಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ