ಅಮೆರಿಕ ಅಧ್ಯಕ್ಷರ ಪತ್ನಿಯ ಪಾಲಿಸಿ ಡೈರೆಕ್ಟರ್ ಆಗಿ ಕನ್ನಡತಿ ಮಾಲಾ ಅಡಿಗ ಆಯ್ಕೆ!

Published : Nov 21, 2020, 08:32 PM ISTUpdated : Nov 21, 2020, 08:42 PM IST
ಅಮೆರಿಕ ಅಧ್ಯಕ್ಷರ ಪತ್ನಿಯ ಪಾಲಿಸಿ ಡೈರೆಕ್ಟರ್ ಆಗಿ ಕನ್ನಡತಿ ಮಾಲಾ ಅಡಿಗ ಆಯ್ಕೆ!

ಸಾರಾಂಶ

 ಅಮೆರಿಕ ನೂತನ ಅಧ್ಯಕ್ಷ ಜೋ ಬೈಡನ್ ಸರ್ಕಾರದಲ್ಲಿ ಹಲವು ಭಾರತೀಯರು ಪ್ರಮುಖ ಸ್ಥಾನ ಅಲಂಕರಿಸಿದ್ದಾರೆ. ಉಪಾಧ್ಯಕ್ಷೆ ಕೂಡ ಭಾರತೀಯ ಮೂಲ ಅನ್ನೋದು ನಮ್ಮ ಹೆಮ್ಮೆ. ಇದೀಗ ಅಧ್ಯಕ್ಷರ ಪತ್ನಿಯ ಪಾಲಿಸಿ ಡೈರೆಕ್ಟರ್ ಆಗಿ ಕನ್ನಡತಿ ಆಯ್ಕೆಯಾಗಿದ್ದಾರೆ.

ಉಡುಪಿ(ನ.21): ಅಮೆರಿಕ ನೂತನ ಅಧ್ಯಕ್ಷ ಜೋ ಬೈಡನ್ ಹಾಗೂ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸಂಪುಟ ಇದೀಗ ಭಾರತೀಯರಿಂದಲೇ ತುಂಬಿ ತುಳುಕುತ್ತಿದೆ. ಇದೀಗ ಅಮೆರಿಕಾ ಅಧ್ಯಕ್ಷರ ಪತ್ನಿ ಪಾಲಿಸಿ ಡೈರೆಕ್ಟರ್ ಆಗಿ ಕನ್ನಡತಿ ಮಾಲಾ ಆಡಿಗ ಆಯ್ಕೆಯಾಗಿದ್ದಾರೆ. ಮಾಲಾ ಉಡುಪಿ ಜಿಲ್ಲೆಯ ಕುಂದಾಪುರ ಮೂಲದವರಾಗಿದ್ದಾರೆ.

ಬೈಡೆನ್ ಸಂಪುಟದಲ್ಲಿ ಮಂಡ್ಯದ ವಿವೇಕ್ ಮೂರ್ತಿ , ಅರುಣ್ ಮಜುಂದಾರ್‌ಗೆ ಪ್ರಮುಖ ಹುದ್ದೆ?

ಜೋ ಬೈಡೆನ್ ಪತ್ನಿ ಜಿಲ್ ಬೈಡೆನ್ ಅಮೆರಿಕದ ಪಥಮೆ ಮಹಿಳೆಯಾಗಿದ್ದಾರೆ.  ಇದೀಗ ಮಹತ್ವ ಬಿಲ್ ಬೈಡೆನ್ ಅವರ ಪಾಲಿಸಿ ನಿರ್ದೇಶಕರಾಗಿ ಮಾಲಾ ಅಡಿಕ ಆಯ್ಕೆಯಾಗಿದ್ದಾರೆ.  ಕಳೆದ 50 ವರ್ಷಗಳಿಂದ ಮಾಲಾ ಅಡಿಗ ಕುಟುಂಬ ಅಮೆರಿಕದಲ್ಲಿ ವಾಸವಾಗಿದೆ.

ಈ ಹಿಂದೆ ಬಿಡೆನ್ ಫೌಂಡೇಶನ್ ನ ಉನ್ನತ ಶಿಕ್ಷಣ ನಿರ್ದೇಶಕಿಯಾಗಿ ಮಾಲಾ ಅಡಿಗ ಸೇವೆ ಸಲ್ಲಿಸಿದ್ದಾರೆ. ಬರಾಕ್ ಒಬಾಮಾಗೆ ಶಿಕ್ಷಣ, ಸಾಂಸ್ಕೃತಿಕ ವಿಭಾಗದ ಉಪ ಸಹಾಯಕ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ ಅನುಭವವಿದೆ.  ಇನ್ನು ಮಾಲಾ  ಅಮೇರಿಕಾದ ನ್ಯಾಶನಲ್ ಸೆಕ್ಯೂರಿಟಿ ಸ್ಟಾಫ್ ನಲ್ಲಿ ಮಾನವ ಹಕ್ಕುವಿಭಾಗದ ನಿರ್ದೇಶಕಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

ಮಾಲಾ ಅಡಿಗ ತಂದೆ ರಮೇಶ್ ಅಡಿಗ ಅಮೇರಿಕಾದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಾಲಾ ಅಡಿಗ ಅಮೇರಿಕಾದಲ್ಲೇ ಹುಟ್ಟಿ ಬೆಳೆದಿದ್ದಾರೆ. ಕುಂದಾಪುರ ತಾಲೂಕು ಕಕ್ಕುಂಜೆಯ ಅಡಿಗ ಕುಟುಂಬದ ಕುಡಿ ಮಾಲಾ ಅಡಿಗ ಇದೀಗ ಅಮೆರಿಕದಲ್ಲಿ ಅತ್ಯುನ್ನತ ಸ್ಥಾನ ಅಲಂಕರಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವೃತ್ತಿಪರತೆ ಅಂತ್ಯಸಂಸ್ಕಾರ, ಪ್ರಶ್ನೆ ಕೇಳಿದ ಪತ್ರಕರ್ತೆಗೆ ಕಣ್ಣು ಹೊಡೆದ ಪಾಕಿಸ್ತಾನ ಸೇನಾ ಲೆ.ಜನರಲ್
ಜಪಾನ್‌ನಲ್ಲಿ 7.5 ತೀವ್ರತೆಯ ಭೂಕಂಪ: ಧರಣಿ ಗರ ಗರನೇ ತಿರುಗಿದ ಕ್ಷಣದ ವೀಡಿಯೋಗಳು ವೈರಲ್