ಭಾರತ ಪಿಒಕೆ ಹಿಂಪಡೆಯಬಹುದು; ಈ ವರ್ಷ ಪಾಕ್‌ ಹಲವು ಭಾಗಗಳಾಗಿ ವಿಭಜನೆಯಾಗುತ್ತೆ: ಪ್ರೊ. ಮುಖ್ತೆದಾರ್‌ ಖಾನ್‌

By BK Ashwin  |  First Published Jan 21, 2023, 11:15 AM IST

ಶೀಘ್ರದಲ್ಲೇ ಪಾಕಿಸ್ತಾನದ ಪರಿಸ್ಥಿತಿಯಲ್ಲಿ ಯಾವುದೇ ಸುಧಾರಣೆಯಾಗದಿದ್ದರೆ, ಪಾಕಿಸ್ತಾನವು ಹಲವು ಭಾಗಗಳಾಗಿ ವಿಭಜನೆಯಾಗುತ್ತದೆ ಎಂದು ಅನೇಕ ವಿಶ್ಲೇಷಕರು ಹೇಳುತ್ತಿದ್ದಾರೆ. 


ವಾಷಿಂಗ್ಟನ್ (ಜನವರಿ 21, 2023): ಆರ್ಥಿಕ ಅಡೆತಡೆಗಳಿಂದ ತೀವ್ರವಾಗಿ ತತ್ತರಿಸುತ್ತಿರುವ ಪಾಕಿಸ್ತಾನದ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ವಿದೇಶಿ ನೆರವಿನ ಹೊರತಾಗಿಯೂ ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಸದ್ಯಕ್ಕೆ ಸುಧಾರಣೆ ಕಾಣುವ ಲಕ್ಷಣ ಕಾಣುತ್ತಿಲ್ಲ. ಹಣದುಬ್ಬರ, ನಿರುದ್ಯೋಗ ಮತ್ತು ಭ್ರಷ್ಟಾಚಾರದಿಂದ ತೊಂದರೆಗೊಳಗಾದ ಜನರು ಸರ್ಕಾರದ ವಿರುದ್ಧ ಬೀದಿಗಿಳಿದಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಕೆಲವು ಜನರು ಕಳೆದ ಹಲವು ದಿನಗಳಿಂದ ಭಾರತವನ್ನು ಲಡಾಖ್‌ನೊಂದಿಗೆ ಒಗ್ಗೂಡಿಸಬೇಕೆಂದು ಬೀದಿಗಿಳಿದು ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೆ, ಶೀಘ್ರದಲ್ಲೇ ಪಾಕಿಸ್ತಾನದ ಪರಿಸ್ಥಿತಿಯಲ್ಲಿ ಯಾವುದೇ ಸುಧಾರಣೆಯಾಗದಿದ್ದರೆ, ಪಾಕಿಸ್ತಾನವು ಹಲವು ಭಾಗಗಳಾಗಿ ವಿಭಜನೆಯಾಗುತ್ತದೆ ಎಂದು ಅನೇಕ ವಿಶ್ಲೇಷಕರು ಹೇಳುತ್ತಿದ್ದಾರೆ. 

ಇನ್ನೊಂದೆಡೆ, ಪ್ರಸ್ತುತ ಪಾಕ್‌ (Pakistan) ಬಿಕ್ಕಟ್ಟಿನ ಬಗ್ಗೆ ಅಮೆರಿಕದ (United States) ಡೆಲವೇರ್ ವಿಶ್ವವಿದ್ಯಾನಿಲಯದ (Delaware University) ಇಸ್ಲಾಮಿಕ್ ಅಧ್ಯಯನ ಕಾರ್ಯಕ್ರಮದ ಸಂಸ್ಥಾಪಕ ನಿರ್ದೇಶಕ ಪ್ರೊಫೆಸರ್ ಮುಖ್ತೆದಾರ್‌ ಖಾನ್ (Professor Muqtedar Khan) ಮಾತನಾಡಿದ್ದಾರೆ. ಪ್ರಸ್ತುತ ಪಾಕಿಸ್ತಾನದ ಮೇಲೆ ಆರು ಬಿಕ್ಕಟ್ಟುಗಳು ಎದುರಾಗಿದ್ದು, ಇದರಿಂದ ದೇಶ (Country) ಹಲವು ತುಂಡುಗಳಾಗಿ ಒಡೆಯಬಹುದು ಎಂದು ಹೇಳಿದ್ದಾರೆ. 

Tap to resize

Latest Videos

ಇದನ್ನು ಓದಿ: ನಾವು ಪಾಠ ಕಲಿತಿದ್ದೇವೆ: ಪ್ರಧಾನಿ ಮೋದಿ ಜತೆ ಪ್ರಾಮಾಣಿಕ ಮಾತುಕತೆ ನಡೆಸಬೇಕು ಎಂದ ಪಾಕ್‌ ಪಿಎಂ ಶೆಹಬಾಜ್‌..!

ಅಲ್ಲದೆ, ಪಾಕಿಸ್ತಾನವು ಪ್ರಸ್ತುತ ಎಲ್ಲ ರೀತಿಯಲ್ಲೂ ಬಿಕ್ಕಟ್ಟಿನಲ್ಲಿದೆ ಮತ್ತು ಭಾರತ (India) ಬಯಸಿದರೆ, ಪಾಕಿಸ್ತಾನದ ಮೇಲೆ ಯುದ್ಧವನ್ನು (War) ಘೋಷಿಸಬಹುದು ಮತ್ತು ಪಾಕ್‌ ಆಕ್ರಮಿತ ಕಾಶ್ಮೀರ (ಪಿಒಕೆ) (Pakistan Occupied Kashmir) (Pok) ಹಾಗೂ ಇತರ ಪ್ರದೇಶಗಳನ್ನು ವಿಲೀನಗೊಳಿಸಬಹುದು ಎಂದು ಮುಖ್ತೆದಾರ್‌ ಖಾನ್ ಹೇಳಿದ್ದಾರೆ. ಇನ್ನು, ಪಾಕಿಸ್ತಾನವನ್ನು ತುಂಡು ತುಂಡಾಗಿಸುವ 6 ಬಿಕ್ಕಟ್ಟುಗಳು ಯಾವುವು ಎಂದೂ ಪ್ರೊಫೆಸರ್ ತಮ್ಮ ವಿಡಿಯೋ ಒಂದರಲ್ಲಿ ತಿಳಿಸಿದ್ದಾರೆ. ಅವರ ಪ್ರಕಾರ, ಆ ಬಿಕ್ಕಟ್ಟುಗಳೆಂದರೆ - ರಾಜಕೀಯ ಬಿಕ್ಕಟ್ಟುಗಳು, ಆರ್ಥಿಕ ಬಿಕ್ಕಟ್ಟುಗಳು, ಭದ್ರತಾ ಬಿಕ್ಕಟ್ಟುಗಳು, ವ್ಯವಸ್ಥೆಯ ಬಿಕ್ಕಟ್ಟುಗಳು, ಗುರುತಿನ ಬಿಕ್ಕಟ್ಟುಗಳು ಮತ್ತು ಪರಿಸರ ಬಿಕ್ಕಟ್ಟುಗಳು ಎಂದು ತಿಳಿದುಬಂದಿದೆ.
ಈ ಹಿನ್ನೆಲೆ 2023 ರಲ್ಲಿ ಈ ಬಿಕ್ಕಟ್ಟುಗಳಿಂದಾಗಿ ಪಾಕಿಸ್ತಾನವು ವಿಭಜನೆಯಾಗಬಹುದು ಅಥವಾ ದೇಶದ ಎಲ್ಲಾ ಸರ್ಕಾರಿ ಸಂಸ್ಥೆಗಳು ಕುಸಿಯಬಹುದು ಎಂದು ಮುಖ್ತೆದಾರ್‌ ಖಾನ್ ಹೇಳುತ್ತಾರೆ. ಅಲ್ಲದೆ, ಪಾಕಿಸ್ತಾನ ವಿಭಜನೆಯಾದರೆ, ಸಾವಿರಾರು ಮತ್ತು ಲಕ್ಷಾಂತರ ನಿರಾಶ್ರಿತರು ಪಾಕಿಸ್ತಾನದಿಂದ ಹೊರಬರುತ್ತಾರೆ ಮತ್ತು ಇಡೀ ಜಗತ್ತಿಗೆ ಹೋಗುತ್ತಾರೆ. ಅಂತಿಮವಾಗಿ ಇದು ಭಾರತದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ’ ಎಂದೂ ಅಮೆರಿಕದ ಡೆಲವೇರ್ ವಿಶ್ವವಿದ್ಯಾನಿಲಯದ ಇಸ್ಲಾಮಿಕ್ ಅಧ್ಯಯನ ಕಾರ್ಯಕ್ರಮದ ಸಂಸ್ಥಾಪಕ ನಿರ್ದೇಶಕ ಪ್ರೊಫೆಸರ್ ಮುಖ್ತೆದಾರ್‌ ಖಾನ್ ಹೇಳಿದರು.

ಭಾರತದ ಜತೆ ಮಾತುಕತೆಗೆ ಅವಲತ್ತುಕೊಂಡಿದ್ದ ಪಾಕ್‌ ಪಿಎಂ..!
ಪಾಕಿಸ್ತಾನ  ಪ್ರಧಾನಿ ಶೆಹಬಾಜ್ ಷರೀಫ್ ಅವರು ನಮ್ಮ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ "ವಿಮರ್ಶಾತ್ಮಕ ಮತ್ತು ಪ್ರಾಮಾಣಿಕ ಮಾತುಕತೆಗೆ" ಇತ್ತೀಚೆಗೆ ಕರೆ ನೀಡಿದ್ದರು. ಕಾಶ್ಮೀರದಂತಹ ಪ್ರಮುಖ ವಿಚಾರಗಳ ಬಗ್ಗೆಯೂ ಮಾತುಕತೆ ನಡೆಸಬೇಕು ಎಂದೂ ಪಾಕ್‌ ಪ್ರಧಾನಿ ಇಂಗಿತ ವ್ಯಕ್ತಪಡಿಸಿದ್ದಾರೆ. ದುಬೈ ಮೂಲದ ಅರೇಬಿಕ್ ನ್ಯೂಸ್ ಟೆಲಿವಿಷನ್ ಚಾನೆಲ್ ಅಲ್ ಅರೇಬಿಯಾಗೆ ನೀಡಿದ ಸಂದರ್ಶನದಲ್ಲಿ ಶೆಹಬಾಜ್‌ ಷರೀಫ್ ಈ ಮಾತುಗಳನ್ನಾಡಿದ್ದಾರೆ ಎಂದು ವರದಿಯಾಗಿತ್ತು. ಅಲ್ಲದೆ, ಭಾರತದೊಂದಿಗಿನ ಮೂರು ಯುದ್ಧಗಳು ಪಾಕಿಸ್ತಾನ ಜನತೆಗೆ ಹೆಚ್ಚುವರಿ ಸಂಕಷ್ಟ, ಬಡತನ ಮತ್ತು ನಿರುದ್ಯೋಗವನ್ನು ಮಾತ್ರ ಪರಿಚಯಿಸಿದೆ. ಈ ಯುದ್ಧಗಳಿಂದ ಪಾಕ್‌ಗೆ ಪ್ರಯೋಜನವೇನೂ ಆಗಿಲ್ಲ ಎಂಬುದನ್ನೂ ಪಾಕ್‌ ಪ್ರಧಾನಿ ಒಪ್ಪಿಕೊಂಡಿದ್ದಾರೆ ಎಂದೂ ತಿಳಿದುಬಂದಿತ್ತು. 
 

ಇದನ್ನೂ ಓದಿ: ಪಾಕ್‌ನಲ್ಲಿ ಆಹಾರಕ್ಕೆ ತೀವ್ರ ಹಾಹಾಕಾರ: ಗನ್‌ ಹಿಡಿದು ಸರ್ಕಾರದಿಂದ ಆಹಾರ ವಿತರಣೆ

click me!