ಬ್ರಿಟನ್‌ ಸಂಸತ್ತಲ್ಲಿ ಪ್ರಧಾನಿ ಮೋದಿ ಸಮರ್ಥಿಸಿದ ಪ್ರಧಾನಿ ರಿಷಿ ಸುನಕ್‌

By Kannadaprabha NewsFirst Published Jan 20, 2023, 7:15 AM IST
Highlights

ಗೋಧ್ರೋತ್ತರ ಗಲ​ಭೆ​ಗಳಲ್ಲಿ ನರೇಂದ್ರ ಮೋದಿ ಪಾತ್ರ​ವಿದೆ ಎಂಬ ಬಿಬಿಸಿಯ ವಿವಾದಿತ ಸಾಕ್ಷ್ಯಚಿತ್ರದ ಅಂಶಗಳನ್ನು ಸ್ಪಷ್ಟವಾಗಿ ತಿರಸ್ಕರಿಸಿರುವ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌, ಈ ವಿಷಯವನ್ನು ಸಂಸತ್‌ನಲ್ಲಿ ಪ್ರಸ್ತಾಪಿಸಲು ಯತ್ನಿಸಿದ ಪಾಕಿಸ್ತಾನದ ಮೂಲದ ಸಂಸದ ಇಮ್ರಾನ್‌ ಹುಸೇನ್‌ ಅವರಿಗೂ ತಪರಾಕಿ ಹಾಕಿದ್ದಾರೆ.

ಲಂಡ​ನ್‌: ಗೋಧ್ರೋತ್ತರ ಗಲ​ಭೆ​ಗಳಲ್ಲಿ ನರೇಂದ್ರ ಮೋದಿ ಪಾತ್ರ​ವಿದೆ ಎಂಬ ಬಿಬಿಸಿಯ ವಿವಾದಿತ ಸಾಕ್ಷ್ಯಚಿತ್ರದ ಅಂಶಗಳನ್ನು ಸ್ಪಷ್ಟವಾಗಿ ತಿರಸ್ಕರಿಸಿರುವ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌, ಈ ವಿಷಯವನ್ನು ಸಂಸತ್‌ನಲ್ಲಿ ಪ್ರಸ್ತಾಪಿಸಲು ಯತ್ನಿಸಿದ ಪಾಕಿಸ್ತಾನದ ಮೂಲದ ಸಂಸದ ಇಮ್ರಾನ್‌ ಹುಸೇನ್‌ ಅವರಿಗೂ ತಪರಾಕಿ ಹಾಕಿದ್ದಾರೆ.

ಗೋಧ್ರೋತ್ತರ (Godhra riots) ಗಲಭೆಗಳ ಕುರಿತು ಬಿಬಿಸಿ ಚಾನೆಲ್‌ 2 ಎಪಿಸೋಡ್‌ಗಳ ಸಾಕ್ಷ್ಯಚಿತ್ರ ಸಿದ್ಧಪಡಿಸಿದ್ದು, ಮೊದಲ ಭಾಗವನ್ನು ಇತ್ತೀಚೆಗೆ ಪ್ರಸಾರ ಮಾಡಿದೆ. ಈ ಬಗ್ಗೆ ಗುರುವಾರ ಬ್ರಿಟನ್‌ ಸಂಸತ್‌ನಲ್ಲಿ ಪ್ರಸ್ತಾಪಿಸಿದ ಸಂಸದ ಇಮ್ರಾನ್‌ ಹುಸೇನ್‌, ‘ನೂರಾರು ಜನ​ರನ್ನು ಬಲಿ ತೆಗೆ​ದು​ಕೊಂಡ ಗೋದ್ರಾ ಗಲ​ಭೆ​ಯಲ್ಲಿ ಅಂದಿನ ಮುಖ್ಯ​ಮಂತ್ರಿ​ಯಾ​ಗಿದ್ದ ಮೋದಿ ಅವರ ಕೈವಾ​ಡ​ವಿದೆ. ಈ ಕುರಿ​ತಾಗಿ ಬಿಬಿಸಿ (BBC documentary) ತಯಾ​ರಿ​ಸಿ​ರುವ ಸಾಕ್ಷ್ಯ​ಚಿ​ತ್ರ​ವನ್ನು ಸುನಕ್‌ ಒಪ್ಪಿ​ಕೊ​ಳ್ಳು​ತ್ತಾರಾ?’ ಪ್ರಶ್ನಿ​ಸಿ​ದರು. ಇದಕ್ಕೆ ಪ್ರತಿ​ಕ್ರಿ​ಯಿ​ಸಿದ ಸುನಕ್‌, ‘ನಾವು ಹಿಂಸಾ​ಚಾ​ರ​ವನ್ನು ವಿರೋ​ಧಿ​ಸು​ತ್ತೇವೆ. ಆದರೆ ಸಜ್ಜ​ನ​ರಾದ ಮೋದಿ (Narendra Modi) ವಿರುದ್ಧ ಬಿಬಿಸಿ ನಿರ್ಮಾಣ ಮಾಡಿ​ರುವ ಪಾತ್ರ​ವನ್ನು ನಾನು ಒಪ್ಪು​ವು​ದಿಲ್ಲ. ಈ ಕುರಿ​ತಾಗಿ ಬ್ರಿಟನ್‌ ಸರ್ಕಾ​ರದ ನಿಲುವು ಸ್ಪಷ್ಟ​ವಾ​ಗಿದೆ ಮತ್ತು ಅದು ಎಂದಿಗೂ ಬದ​ಲಾ​ಗು​ವು​ದಿಲ್ಲ ಎಂದು ಹೇಳಿ​ದ್ದಾರೆ.

ಲಂಡನ್‌ನಲ್ಲಿ ಕುಚಿಪುಡಿ ನೃತ್ಯಕ್ಕೆ ಹೆಜ್ಜೆ ಹಾಕಿದ ರಿಷಿ ಸುನಕ್ ಪುತ್ರಿ

ಸಾಕ್ಷ್ಯಚಿತ್ರಕ್ಕೆ ಭಾರತ ಆಕ್ಷೇ​ಪ

2002ರ ಗುಜ​ರಾತ್‌ ಗಲ​ಭೆಯ ಕುರಿ​ತಾಗಿ ಬಿಬಿಸಿ ನಿರ್ಮಾಣ ಮಾಡಿ​ರುವ ಸಾಕ್ಷ್ಯ​ಚಿ​ತ್ರ​ಗಳು ಕಳಂಕಿತ ನಿರೂ​ಪ​ಣೆ​ಯ​ನ್ನು ಮಾಡಲು ಮಾಡ​ಲಾದ ಪ್ರಚಾ​ರದ ಸರಕು ಎಂದು ಭಾರತ ಕಿಡಿ​ಕಾ​ರಿದೆ. ಇದರಲ್ಲಿ ಪಕ್ಷ​ಪಾತ, ವಸ್ತು​ನಿ​ಷ್ಠ​ತೆಯ ಕೊರತೆ ಮತ್ತು ವಸಾ​ಹಾ​ತು​ಶಾಹಿ ಮನ​ಸ್ಥಿ​ತಿಯ ಮುಂದು​ವ​ರಿಕೆ ಸ್ಪಷ್ಟ​ವಾಗಿ ಗೋಚ​ರಿ​ಸು​ತ್ತಿದೆ. ಇದು ಇದ​ನ್ನು ನಿರ್ಮಾಣ ಮಾಡಿ​ರುವ ಸಂಸ್ಥೆ ಮತ್ತು ವ್ಯಕ್ತಿ​ಗಳ ಪ್ರಚಾ​ರ​ವಾ​ಗಿದೆ. ಇದರ ಹಿಂದಿನ ಉದ್ದೇಶ ಮತ್ತು ಕಾರ್ಯ​ಸೂಚಿ ನಮಗೆ ಆಶ್ಚರ್ಯ ಉಂಟು​ಮಾ​ಡಿ​ದೆ ಎಂದು ವಿದೇ​ಶಾಂಗ ಸಚಿ​ವಾ​ಲ​ಯದ ವಕ್ತಾರ ಅರಿಂದಮ್‌ ಬಗ್ಚಿ ಹೇಳಿ​ದ್ದಾರೆ.

ಶ್ವಾನದೊಂದಿಗೆ 10 ಡೌನಿಂಗ್‌ ಸ್ಟ್ರೀಟ್‌ಗೆ ಕಾಲಿಟ್ಟ Rishi Sunak: ಟ್ವಿಟ್ಟರ್‌ನಲ್ಲಿ ವೈರಲ್‌

click me!