ವಜಿರಾಬಾದ್ ಘಟನೆ ಬಗ್ಗೆ ಕೇಳಿ ನಾನು ಇಮ್ರಾನ್ ಖಾನ್ ಅವರ ಬಗ್ಗೆ ಆರಂಭದಲ್ಲಿ ಸಹಾನುಭೂತಿ ವ್ಯಕ್ತಪಡಿಸಿದೆ. ಆದರೆ, ಡ್ರಾಮಾ ಎಂದು ಈಗ ಅನಿಸುತ್ತಿದೆ ಎಂದು ರೆಹಮಾನ್ ಡಾನ್ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಕ್ರಿಕೆಟರ್ ಆಗಿ ರಾಜಕಾರಣಿಯಾಗಿ ಬದಲಾಗಿರುವ ಇಮ್ರಾನ್ ಖಾನ್ ಅವರ ಬಗ್ಗೆ ಹೇಳಿದರು.
ಪಾಕಿಸ್ತಾನ (Pakistan) ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರ ಮೇಲೆ ಗುಂಡಿನ ದಾಳಿ ನಡೆದಿದೆ, ಅಲ್ಲದೆ ಸ್ವತ: ಮಾಜಿ ಪ್ರಧಾನಿಗೆ ಗುಂಡು (Bullet) ಬಿದ್ದಿರುವ ಬಗ್ಗೆಯೂ ವರದಿಯಾಗಿತ್ತು. ಇಮ್ರಾನ್ ಖಾನ್ ಅವರ ಹತ್ಯೆ ಯತ್ನ ನಡೆದಿರುವ ವರದಿಗಳು ಪಾಕ್‌ನಲ್ಲಿ ದೊಡ್ಡ ಸಂಚಲನವನ್ನೇ ಮೂಡಿಸುತ್ತಿದೆ. ಆದರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನ ಡೆಮೋಕ್ರಾಟಿಕ್ ಮೂವ್‌ಮೆಂಟ್ (Pakistan Democratic Movement) (ಪಿಡಿಎಮ್) ಮುಖ್ಯಸ್ಥ ಮೌಲಾನಾ ಫಜ್ಲುರ್ ರೆಹಮಾನ್ (Maulana Fazlur Rehman), ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲೆ ನಡೆದಿರುವ ಗುಂಡಿನ ದಾಳಿಯನ್ನು ಡ್ರಾಮಾ ಎಂದು ಕರೆದಿದ್ದಾರೆ. ಅಲ್ಲದೆ, ನಟನಾ ಕೌಶಲ್ಯಗಳಲ್ಲಿ ಇಮ್ರಾನ್ ಖಾನ್ ಬಾಲಿವುಡ್ ಖ್ಯಾತನಾಮರಾದ ಶಾರುಖ್ ಖಾನ್ (ShahRukh Khan) ಹಾಗೂ ಸಲ್ಮಾನ್ ಖಾನ್ (Salman Khan) ಅವರನ್ನು ಮೀರಿಸಿದ್ದಾರೆ ಎಂದೂ ಅವರು ವ್ಯಂಗ್ಯವಾಡಿದ್ದಾರೆ.
ಗುರುವಾರ ಇಮ್ರಾನ್ ಖಾನ್ ಅವರ ಬಲಗಾಲಿಗೆ ಗುಂಡೇಟು ಬಿದ್ದಿತ್ತು. ಹಾಗೂ, ಅವರು ಭಾನುವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಅಲ್ಲದೆ, ಸದ್ಯ ಇಮ್ರಾನ್ ಖಾನ್ ಲಾಹೋರ್‌ನ ತಮ್ಮ ಖಾಸಗಿ ನಿವಾಸಕ್ಕೆ ಹೋಗಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಪಾಕಿಸ್ತಾನ ತೆಹ್ರೀಕ್ - ಇ - ಇನ್ಸಾಫ್ ಮುಖ್ಯಸ್ಥ ಇಮ್ರಾನ್ ಖಾನ್ ಅವರಿಗೆ ಆಗಿರುವ ಗಾಯಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಪಿಡಿಎಂ ಹಾಗೂ ಜಮಿಯತ್ ಉಲೇಮಾ - ಇ - ಇಸ್ಲಾಮ್ ಫಜಲ್ ಮುಖ್ಯಸ್ಥ ರೆಹಮಾನ್, ಇಮ್ರಾನ್ ಖಾನ್ ತನ್ನ ನಟನಾ ಕೌಶಲ್ಯಗಳಲ್ಲಿ ಬಾಲಿವುಡ್ ನಟರಾದ ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಅವರನ್ನು ಮೀರಿಸಿದ್ದಾರೆ ಎಂದು ಹೇಳಿದ್ದಾರೆ.
ಇದನ್ನು ಓದಿ: "ದೇವರು ನನಗೆ ಮರುಜೀವ ನೀಡಿದ್ದಾನೆ": ಗುಂಡಿನ ದಾಳಿಯ ನಂತರ ಇಮ್ರಾನ್ ಖಾನ್ ಹೇಳಿಕೆ
ವಜಿರಾಬಾದ್ ಘಟನೆ ಬಗ್ಗೆ ಕೇಳಿ ನಾನು ಇಮ್ರಾನ್ ಖಾನ್ ಅವರ ಬಗ್ಗೆ ಆರಂಭದಲ್ಲಿ ಸಹಾನುಭೂತಿ ವ್ಯಕ್ತಪಡಿಸಿದೆ. ಆದರೆ, ಡ್ರಾಮಾ ಎಂದು ಈಗ ಅನಿಸುತ್ತಿದೆ ಎಂದು ರೆಹಮಾನ್ ಡಾನ್ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಕ್ರಿಕೆಟರ್ ಆಗಿ ರಾಜಕಾರಣಿಯಾಗಿ ಬದಲಾಗಿರುವ ಇಮ್ರಾನ್ ಖಾನ್ ಅವರ ಬಗ್ಗೆ ಹೇಳಿದರು. ಇಮ್ರಾನ್ ಖಾನ್ ಅವರಿಗೆ ಆಗಿರುವ ಗಾಯಗಳು ಹಲವರ ಹುಬ್ಬೇರಿಸುತ್ತದೆ. ಆದರೆ, ಇಮ್ರಾನ್ ಖಾನ್ ಅವರ ಮೇಲೆ ಒಂದು ಬಾರಿ ಗುಂಡು ಹಾರಿಸಲಾಗಿದೆಯಾ ಅಥವಾ ಹೆಚ್ಚು ಬಾರಿಯೋ ಹಾಗೂ ಒಂದು ಕಾಲಿಗೆ ಗಾಯವಾಗಿದೆಯೋ ಅಥವಾ ಎರಡೂ ಕಾಲಿಗೆ ಗಾಯವಾಗಿದೆಯೋ ಎಂಬ ಬಗ್ಗೆಯೂ ಅನುಮಾನವಿದೆ ಎಂದು ಅವರು ಹೇಳಿದರು.
ಅಲ್ಲದೆ, ವಜಿರಾಬಾದ್‌ನಲ್ಲಿ ಸ್ಥಳೀಯ ಆಸ್ಪತ್ರೆಗೆ ಸೇರಿಸುವ ಬದಲು ಲಾಹೋರ್‌ಗೆ ಕರೆದುಕೊಂಡು ಹೋಗಿದ್ದ ಬಗ್ಗೆಯೂ ಮೌಲಾನಾ ಫಜಲ್ ಅನುಮಾನ ವ್ಯಕ್ತಪಡಿಸಿದ್ದಾರೆ. ಹಾಗೂ, ಬುಲೆಟ್‌ನ ಮುರಿದ ತುಂಡುಗಳಿಂದ ಇಮ್ರಾನ್ ಖಾನ್‌ಗೆ ಗಾಯಗಳಾಗಿದೆ ಎಂದು ಪಿಟಿಐ ಹೇಳಿಕೊಂಡಿರುವ ಬಗ್ಗೆಯೂ ಜೆಯುಐ ಮುಖ್ಯಸ್ಥ ತರಾಟೆಗೆ ತೆಗೆದುಕೊಂಡಿದ್ದಾರೆ. ಬುಲೆಟ್ ತುಂಡಾಗಿ ಮುರಿಯುವುದು ಹೇಗೆ..? ನಾವು ಬಾಂಬ್ ತುಂಡಿನ ಬಗ್ಗೆ ಕೇಳಿದ್ದೇವೆ, ಆದರೆ ಬುಲೆಟ್ ತುಂಡಿನ ಬಗ್ಗೆ ಅಲ್ಲ ಎಂದು ಅವರು ಮಾಜಿ ಪ್ರಧಾನಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Explained: ಇಮ್ರಾನ್ ಖಾನ್ ಹತ್ಯೆ ಯತ್ನದಿಂದ ಪಾಕಿಸ್ತಾನ ಸೇನೆ ಮತ್ತು ಆರ್ಥಿಕತೆಗೆ ಆದ ನಷ್ಟವೇನು?
ಕುರುಡರು ಇಮ್ರಾನ್ ಖಾನ್ ಅವರ ಸುಳ್ಳುಗಳನ್ನು ನಂಬಬಹುದು. ಇಮ್ರಾನ್ ಖಾನ್ ವಾರ ಮೇಲೆ ದಾಳಿ ನಡೆದಾಗ ನಾವೂ ಅದನ್ನು ಖಂಡಿಸಿದ್ದೆವು. ಆದರೆ, ಅವರ ಮೇಲೆ ಒಮದು, ಎರಡು, ಮೂರು ಅಥವಾ 4 ಗುಂಡುಗಳು ಬಿದ್ದಿದೆಯೋ ಅಥವಾ ಗುಂಡಿನ ತುಂಡುಗಳು ಬಿದ್ದಿದೆಯೋ. ಬಾಂಬ್ ಚೂರುಗಳ ಬಗ್ಗೆ ನಾವು ಕೇಳಿದ್ದೇವೆ ಬುಲೆಟ್ ಚೂರುಗಳ ಬಗ್ಗೆ ಈಗಲೇ ಕೇಳುತ್ತಿರುವುದು ಎಂದು ಪಿಡಿಎಂ ಮುಖ್ಯಸ್ಥ ಹೇಳಿದ್ದಾರೆ. ಅಲ್ಲದೆ, ಬುಲೆಟ್ ಗಾಯಗಳಿಗೆ ಇಮ್ರಾನ್ ಖಾನ್ ಅವರಿಗೆ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿರುವುದೇಕೆ ಎಂದೂ ಮೌಲಾನಾ ಫಜ್ಲುರ್ ರೆಹಮಾನ್ ಪ್ರಶ್ನೆ ಮಾಡಿದ್ದಾರೆ.