ಭಾರತದಲ್ಲಿ ಲಸಿಕೆ ಅಭಿಯಾನ; ಇತರ ದೇಶಗಳಿಗೆ ವಿಶ್ವ ಆರೋಗ್ಯ ಸಂಸ್ಥೆ ವಿಶೇಷ ಮನವಿ !

By Suvarna NewsFirst Published Jan 16, 2021, 6:15 PM IST
Highlights

ಭಾರತದಲ್ಲಿ ಲಸಿಕಾ ಅಭಿಯಾನಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ. ಇದು ವಿಶ್ವದ ಅತೀ ದೊಡ್ಡ ವಾಕ್ಸಿನೇಶನ್ ಆಗಿದೆ. ಇದೀಗ ಭಾರತದಲ್ಲಿ ಲಸಿಕಾ ಅಭಿಯಾನದ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆ ಇತರ ದೇಶಗಳಿಗೆ ವಿಶ್ವ ಆರೋಗ್ಯ ಸಂಸ್ಥೆ ಮನವಿ ಮಾಡಿದೆ. 

ಜಿನೆವಾ(ಜ.16): ವಿಶ್ವವನ್ನೇ ಬೆಚ್ಚಿ ಬೀಳಿಸಿದ ಕೊರೋನಾ ವೈರಸ್‌ಗೆ ಇದೀಗ ಲಸಿಕೆ ವಿತರಣೆ ಕಾರ್ಯ ಆರಂಭಗೊಂಡಿದೆ. ಭಾರತದಲ್ಲಿ ವಿಶ್ವದ ಅತೀ ದೊಡ್ಡ ವಾಕ್ಸಿನೇಷನ್‌ಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. 3 ಕೋಟಿ ಆರೋಗ್ಯ ಕಾರ್ಯಕರ್ತರಿಗೆ ಮೊದಲ ಹಂತದಲ್ಲಿ ಲಸಿಕೆ ನೀಡಲಾಗುತ್ತಿದೆ. ಭಾರತದಲ್ಲಿನ ಈ ಮಹತ್ವದ ಹೆಜ್ಜೆಗೆ ವಿಶ್ವ ಆರೋಗ್ಯ ಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿದೆ. ಜೊತೆಗೆ ಇತರ ದೇಶಗಳಿಗೆ ವಿಶೇಷ ಮನವಿ ಮಾಡಿದೆ.

ಲಸಿಕೆ ಪಡೆಯುವ ಮುನ್ನ ಮೋದಿ ಎಚ್ಚರಿಕೆ, ಈ ತಪ್ಪು ಮಾಡಬೇಡಿ ಎಂದ ಪಿಎಂ!.

ಭಾರತ ಲಸಿಕೆ ಅಭಿವೃದ್ಧಿಪಡಿಸಿ ವಿತರಣೆ ಆರಂಭಿಸಿದೆ. ಮುಂದಿನ 100 ದಿನಗಳಲ್ಲಿ ಇತರ ದೇಶಗಳೂ ಈ ರೀತಿ ವ್ಯಾಕ್ಸಿನೇಷನ್ ವಿತರಣೆಯನ್ನು ಎದುರುನೋಡುತ್ತಿದ್ದೇನೆ. ಆರೋಗ್ಯ ಕಾರ್ಯಕರ್ತರು, ಫ್ರಂಟ್‌ಲೈನ್ ವರ್ಕಸ್‌ಗೆ ಲಸಿಕೆ ನೀಡುವ ಮೂಲಕ ಅಪಾಯದಲ್ಲಿರುವವರನ್ನು ರಕ್ಷಿಸುವ ಕೆಲಸ ಆಗಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ನಿರ್ದೇಶಕ ಟೆಡ್ರೋಸ್ ಅಧಮನ್ ಗೆಬ್ರಿಯುಸಸ್ ಹೇಳಿದ್ದಾರೆ.

ಅಮೃತಂಗಮಯ: ಜಗತ್ತಿನ ಅತಿದೊಡ್ಡ ಕೊರೋನಾ ಲಸಿಕೆ ವಿತರಣೆ ಆಂದೋಲನಕ್ಕೆ ಮೋದಿ ಚಾಲನೆ!

ಪ್ರತಿ ದೇಶದಲ್ಲಿ ಕೊರೋನಾ ವೈರಸ್ ಲಸಿತೆ ವಿತರಣೆ ಕಾರ್ಯ ಆರಂಭಗೊಂಡರೆ, ಶೀಘ್ರದಲ್ಲೇ ವಿಶ್ವ ಕೊರೋನಾದಿಂದ ಮುಕ್ತವಾಗಲಿದೆ. ಈ ನಿಟ್ಟಿನಲ್ಲಿ ಎಲ್ಲಾ ದೇಶಗಳು ಲಸಿಕೆ ವಿತರಣೆಯತ್ತ ಹೆಜ್ಜೆ ಇಡಬೇಕು ಎಂದು ಮನವಿ ಮಾಡಿದ್ದಾರೆ.

click me!