ಲಸಿಕೆ ಪಡೆದ 23 ಮಂದಿ ಸಾವು, ನಡುಗಿದ ನಾರ್ವೆ: ಬೆಲ್ಜಿಯಂನಲ್ಲೂ ಒಂದು ಸಾವು!

By Suvarna NewsFirst Published Jan 16, 2021, 12:31 PM IST
Highlights

ಕೊರೋನಾ ಲಸಿಕೆ ಸುರಕ್ಷತೆ ಬಗ್ಗೆ ಚರ್ಚೆ| ನಾರ್ವೆಯಲ್ಲಿ ಲಸಿಕೆ ಪಡೆದ 23 ಮಂದಿ ಸಾವು| ಸೈಡ್‌ ಎಫೆಕ್ಟ್‌ನಿಂದಾಗಿ ಸಂಭವಿಸಿದ ಸಾವು| ಚಿಕಿತ್ಸೆ ಪಡೆಯುತ್ತಿದ್ದ 13 ಮಂದಿ ಸಾವು| ಮೃತಪಟ್ಟ 13 ಮಂದಿ 80+ ವಯಸ್ಸಿನವರು

ಓಸ್ಲೋ(ಜ.16) ಕೊರೋನಾ ವಾಕ್ಸಿನ್‌ ಕೈಗೆ ಬಂದಿದೆಯಾದರೂ, ಅದರ ಸುರಕ್ಷತೆ ಬಗ್ಗೆ ಈಗಲೂ ಚರ್ಚೆ ನಡೆಯುತ್ತಿದೆ. ಇದರ ನಡುವೆ ನಾರ್ವೆ ಆರೋಗ್ಯ ಅಧಿಕಾರಿಗಳು ಅಘಾತಕಾರಿ ವಿಚಾರವೊಂದನ್ನು ಹೊರಹಾಕಿದ್ದಾರೆ.

ನಾರ್ವೆಯಲ್ಲಿ ಫೈಝರ್ ಕೊರೋನಾ ಲಸಿಕೆ ಪಡೆದ ಕೆಲವೇ ದಿನಗಳಲ್ಲಿ, ಸೈಡ್‌ಎಫೆಕ್ಟ್‌ನಿಂದಾಗಿ 23 ಮಂದಿ ಸಾವನ್ನಪ್ಪಿದ್ದಾರೆಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ಅವುಗಳಲ್ಲಿ 13 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿರುವುದು ಈಗ ಆತಂಕಕ್ಕೆ ಕಾರಣವಾಗಿದೆ.

ಲಸಿಕೆ ಪಡೆದವರಲ್ಲಿ ಶೀತ ಮತ್ತು ಜ್ವರ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿದೆ. ಆದರೆ ಅದೇ ಅವರಿಗೆ ಮಾರಕವಾಗಿ ಪರಿಣಮಿಸಿದೆ ಎಂದು ನಾರ್ವೆ  ನಾರ್ವೆಜಿಯನ್ ಮೆಡಿಕಲ್ ಏಜೆನ್ಸಿ ಮುಖ್ಯಸ್ಥ  ಸೀಗರ್ಡ್ ಹಾರ್ಟಿಮೋ ತಿಳಿಸಿದ್ದಾರೆ.

ಗಮನಾರ್ಹ ವಿಷಯವೆಂದರೆ, ಆಸ್ಪತ್ರೆಯಲ್ಲಿ ಮೃತಪಟ್ಟ 13 ಮಂದಿ  ಸರಿಸುಮಾರು 80 ವರ್ಷ ವಯಸ್ಸಿನವರು. ಸರ್ಕಾರಿ ಅಂಕಿಅಂಶಗಳ ಪ್ರಕಾರ, ನಾರ್ವೆಯಲ್ಲಿ ಈಗಾಗಲೇ ಸುಮಾರು 30 ಸಾವಿರ ಮಂದಿ ಫೈಝರ್ ಅಥ್ವಾ ಮಾಡೆರ್ನಾ ಲಸಿಕೆ ಪಡೆದಿದ್ದಾರೆ.

ಇದಕ್ಕೆ ಪ್ರತಿಕ್ರಿಸಯಿಸಿರುವ ಫೈಝರ್ ಕಂಪನಿ, ನಾವು ನಾರ್ವೆ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ, ಅದಕ್ಕೆ ಸಂಬಂಧಪಟ್ಟ ಎಲ್ಲಾ ಮಾಹಿತಿಯನ್ನು ತರಿಸಿದ್ದೇವೆ ಎಂದಿದೆ.

click me!