
ಬ್ರೆಜಿಲಗ್(ಜ.16): ಕೊರೋನಾ ಮಹಾಮಾರಿಯಿಂದ ಕಂಗೆಟ್ಟಿರುವ ಬ್ರೆಜಿಲ್‌ನಲ್ಲಿ ಕೊರೋನಾ ರೂಪಾಂತರಗೊಂಡಿದ್ದು, ಇದು ಪ್ರಾಣಹಾನಿಯುಂಟು ಮಾಡುತ್ತಿದೆ. ಅಧ್ಯಯನವೊಂದರಲ್ಲಿ ಶಾಕಿಂಗ್ ಮಾಹಿತಿ ಬಯಲಾಗಿದ್ದು, ಪ್ರಸ್ತುತ ವರ್ಷ ಆಸ್ಪತ್ರೆಗೆ ದಾಖಲಾಗಿದ್ದ ಶೇ. 40ರಷ್ಟು ರೋಗಿಗಳು ಈ ಮಾರಕ ವೈರಸ್‌ನಬಿಂದಲೇ ಮೃತಪಟ್ಟಿದ್ದಾರೆಂಬ ವಿಚಾರ ಬಯಲಾಗಿದೆ. ಸದ್ಯ ರೂಪಾಂತರಗೊಂಡ ಈ ವೈರಸ್ ಅಮೆರಿಕಾಗೆ ಕಾಲಿಟ್ಟಿದ್ದು, ವಿಶ್ವಾದ್ಯಂತ ಭೀತಿ ಹುಟ್ಟಿಸಿದೆ ಎನ್ನಲಾಗಿದೆ.
ಇನ್ನು ಕೊರೋನಾದ ಈ ಹೊಸ ಮಾದರಿ ಲಸಿಕೆಯೂ ಜಗ್ಗಲ್ಲ ಎಂಬುವುದು ತಜ್ಞರ ಮಾತಾಗಿದೆ. ಸದ್ಯ ಅಪಾಯದಲ್ಲಿರುವ ಬ್ರೆಜಿಲ್ ಭಾರತದ ಬಳಿ ಕೊರೋನಾ ಲಸಿಕೆಗೆ ಮನವಿ ಮಾಡಿದೆ ಎಂದೂ ವರದಿಗಳು ತಿಳಿಸಿವೆ. ಅಷಷ್ಟಕ್ಕೂ ಈ ಹೊಸ ವೈರಸ್ ಯಾವುದು? ಇಲ್ಲಿದೆ ವಿವರ
ರೋಗಿಗಳಿಂದ ತುಂಬಿದ ಆಸ್ಪತ್ರೆಗಳು
ಕೊರೋನಾದ ಈ ಹೊಸ ರೂಪ ಬ್ರೆಜಿಲ್‌ನ ಅಮೆಜಾನಾಸ್ ಎಂಬ ರಾಜ್ಯದಿಂದ ವಿಶ್ವಾದ್ಯಂತ ಹರಡಿಕೊಳ್ಳಲಾರಮಭಿಸಿದೆ. ಈ ನೂತನ ವೈರಸ್ ಕಳೆದ ಜುಲೈನಿಂದಲೇ ಬ್ರೆಜಿಲ್‌ನಲ್ಲಿ ಹರಡಿಕೊಳ್ಳಲಾರಂಭಿಸಿದೆ ಎಂಬುವುದು ವಿಜ್ಞಾನಿಗಳ ಮಾತು. ಇನ್ನು ಬ್ರೆಜಿಲ್‌ನ ಉತ್ತರ ಹಾಗೂ ಪೂರ್ವ ಭಾಗದಲ್ಲಿ ಆರೋಗ್ಯ ಸೇವೆ ಬಹಳ ವಿರಳವಾಗಿದೆ. ಕೆಲವರಿಗಷ್ಟಟೇ ವೈದ್ಯಕೀಯ ಸೇವೆ ಲಭಿಸುತ್ತಿದೆ. ಹೀಗಿರುವಾಗ ಕೊರೋನಾದ ಈ ಹೊಸ ಮಾದರಿ ಈ ಪ್ರದೇಶದಲ್ಲಿ ರಣಕೇಕೆ ಹಾಕಲಾರಂಭಿಸಿದ್ದು, ಸಾವಿನ ಸಂಖ್ಯೆಯೂ ಹೆಚ್ಚಲಾರಂಭಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ