ಈಜು ಕಲಿತ ಗೋಲ್ಡನ್‌ ರಿಟ್ರೈವರ್‌: ಶ್ವಾನದ ಮುದ್ದಾದ ವಿಡಿಯೋ

Published : May 24, 2022, 04:49 PM IST
ಈಜು ಕಲಿತ ಗೋಲ್ಡನ್‌ ರಿಟ್ರೈವರ್‌: ಶ್ವಾನದ ಮುದ್ದಾದ ವಿಡಿಯೋ

ಸಾರಾಂಶ

ಶ್ವಾನ ಈಜುವ ವಿಡಿಯೋ ವೈರಲ್‌ ಗೋಲ್ಡನ್‌ ರಿಟ್ರೈವರ್‌ಗೆ ಈಜು ಕಲಿಸಿದ ಮಾಲೀಕ ಒಂದು ಲಕ್ಷಕ್ಕೂ ಅಧಿಕ ಮಂದಿಯಿಂದ ವಿಡಿಯೋ ವೀಕ್ಷಣೆ

ಶ್ವಾನದ ಹಲವಾರು ವಿಡಿಯೋಗಳನ್ನು ನೀವು ಈಗಾಗಲೇ ನೋಡಿರುತ್ತಿರಿ. ಶ್ವಾನಗಳ ಆಟಾಟೋಪದ ಹಲವು ವಿಡಿಯೋಗಳನ್ನು ನೀವು ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ನೋಡಿರುತ್ತೀರಿ. ಹಾಗೆಯೇ ನೀರಿನಲ್ಲಿ ಈಜು ಕಲಿಯುತ್ತಿರುವ ಶ್ವಾನವೊಂದರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೆಲವು ಶ್ವಾನಗಳಿಗೆ ನೀರೆಂದರೆ ಬಲು ಪ್ರೀತಿ. ಮತ್ತೆ ಕೆಲವು ಶ್ವಾನಗಳು ನೀರೆಂದರೆ ಮಾರು ದೂರ ಓಡುತ್ತವೆ. ಸಾಮಾನ್ಯವಾಗಿ ಗೋಲ್ಡನ್‌ ರಿಟ್ರೈವರ್ ತಳಿಯ ಶ್ವಾನಗಳು ನೀರನ್ನು ಬಹಳ ಇಷ್ಟ ಪಡುತ್ತವೆ. ಹಾಗೆಯೇ ಶ್ವಾನದ ಪೋಷಕರು ಈಗ ಮುದ್ದಾದ ಶ್ವಾನಕ್ಕೆ ನೀರಿನಲ್ಲಿ ಈಜಾಡುವುದಕ್ಕೆ ಕಲಿಸಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಮೊದಲ ಬಾರಿಗೆ ಈ ಶ್ವಾನವನ್ನು ನೀರಿಗೆ ಇಳಿಸಿದಾಗ ಸ್ವಲ್ಪ ಅಳುಕಿನಿಂದಲೇ ತಣ್ಣನೆಯ ನೀರಿಗೆಎ ಇಳಿದ ಶ್ವಾನ ನಿಧಾನವಾಗಿ ಹೇಗೆ ಈಜುವುದು ಎಂಬುದನ್ನು ಕಲಿತಿದೆ. ಐಎಮ್‌ ರಿಟ್ರೈವರ್ ಫ್ಯಾನ್ (imretrieverfan) ಎಂಬ ಇನ್ಸ್ಟಾಗ್ರಾಮ್‌ ಪೇಜ್‌ನಿಂದ ಈ ವಿಡಿಯೋ ಅಪ್‌ಲೋಡ್ ಮಾಡಲಾಗಿದೆ. ಮೇ.1 ರಂದು ಅಪ್‌ಲೋಡ್ ಆಗಿರುವ ಈ ವಿಡಿಯೋವನ್ನು 1.46 ಲಕ್ಷ ಜನ ವೀಕ್ಷಿಸಿದ್ದಾರೆ. 

ನದಿಯಲ್ಲಿ ಮುಳುಗುತ್ತಿದ್ದ ಶ್ವಾನವನ್ನು ರಕ್ಷಿಸಿದ ಯುವಕ: ವಿಡಿಯೋ ವೈರಲ್

ಶ್ವಾನಕ್ಕೆ ಸ್ವಿಮ್ ಸೂಟ್ ನೀರಿನಲ್ಲಿ ಮುಳುಗದಂತೆ ರಕ್ಷಣಾ ಕವಚ ತೊಡಿಸಲಾಗಿದ್ದು, ಮೊದಲಿಗೆ ಶ್ವಾನವನ್ನು ಈಜು ಕೊಳದ ಬಳಿ ಕರೆದುಕೊಂಡು ಬಂದ ಅದರ ಮಾಲೀಕ ಸ್ವಿಮ್ಮಿಂಗ್‌ ಫುಲ್ ಸಮೀಪಕ್ಕೆ ಹೋಗಿ ಚೆಂಡೊಂದನ್ನು ಎಸೆಯುತ್ತಾರೆ. ಆದರೆ ನೀರಿಗಿಳಿಯಲು ಮನಸ್ಸು ಮಾಡದ ಶ್ವಾನ ವಾಪಸ್ ಈಚೆ ಬಂದು ಈಜುಕೊಳದ ಬಳಿಯೇ ಕುಳಿತುಕೊಳ್ಳುತ್ತದೆ. ಇದನ್ನು ನೋಡಿದ ಮನೆ ಮಾಲೀಕ ಶ್ವಾನವನ್ನು ಕರೆದುಕೊಂಡು ಈಜು ಕೊಳಕ್ಕೆ ಇಳಿಯುತ್ತಾನೆ. ಮೊದಲಿಗೆ ಸ್ವಲ್ಪ ನರ್ವಸ್ ಆಗುವ ಶ್ವಾನ ನಂತರ ಚೆನ್ನಾಗಿಯೇ ಈಜಲು ಶುರು ಮಾಡುತ್ತದೆ. 

 

ಈ ವಿಡಿಯೋ ತುಂಬ ಮುದ್ದಾಗಿದ್ದು, ನೋಡುಗರು ಈ ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೀನು ಚೆನ್ನಾಗಿ ಮಾಡಿದ್ದೀಯಾ ಡಾಗಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಗೋಲ್ಡನ್ ರಿಟ್ರೈವರ್ ಶ್ವಾನಕ್ಕೆ ಜಾಕೆಟ್‌ನ ಅಗತ್ಯವಿಲ್ಲ. ಅವು ನೀರನ್ನು ಇಷ್ಟ ಪಡುವ ಶ್ವಾನಗಳು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. 

ತಬ್ಬಲಿ ಹುಲಿಮರಿಗಳಿಗೆ ತಾಯಿ ಪ್ರೀತಿ ತೋರುವ ಶ್ವಾನ: ವಿಡಿಯೋ ವೈರಲ್‌

ಕೆಲ ದಿನಗಳ ಹಿಂದೆ ತನ್ನ ಮರಿಗಳಿಗೆ ಆಹಾರ ನೀಡಿದ ಮಹಿಳೆಗೆ ತಾಯಿ ಶ್ವಾನವೊಂದು ಹಿಂದೆ ಮುಂದೆ ಸುಳಿದಾಡಿ ಧನ್ಯವಾದ ಸಲ್ಲಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಶ್ವಾನಗಳು ಮನುಷ್ಯನ ಉತ್ತಮ ಸ್ನೇಹಿತರು. ಒಂದು ತುತ್ತು ಆಹಾರ ನೀಡಿದರು ಸರಿ ಜೀವನಪೂರ್ತಿ ನೆನಪಿಟ್ಟುಕೊಳ್ಳುವ ಈ ಶ್ವಾನಗಳು ಸ್ವಾಮಿನಿಷ್ಠೆಗೆ ಬಹಳ ಹೆಸರುವಾಸಿ. ಶ್ವಾನಗಳು ಮನುಷ್ಯರೊಂದಿಗೆ ಮಕ್ಕಳೊಂದಿಗೆ ಆಟವಾಡುವ ಮುದ್ದಾಡುವ ಅನೇಕ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೀವು ಈಗಾಗಲೇ ನೋಡಿರಬಹುದು. ಇದು ಕೂಡ ಅಂತಹದ್ದೇ ವಿಡಿಯೋವಾಗಿದ್ದು, ಇದರಲ್ಲಿ ಆಹಾರ ನೀಡಿದ ಮಹಿಳೆಗೆ ಶ್ವಾನ ಕೃತಜ್ಞತೆ ಹೇಳುತ್ತಿದೆ. 

ಈ ವಿಡಿಯೋವನ್ನು ನಾಲ್ಕು ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದರು. ಅಲ್ಲದೇ ತಾಯಿ ಶ್ವಾನದ ಈ ಕೃತಜ್ಞತೆ ತುಂಬಿದ ನೋಟಕ್ಕೆ ಜನ ಫಿದಾ ಆಗಿದ್ದಾರೆ. ಯೋಧ ಫಾರೆವರ್‌ (Yoda4ever) ಎಂಬ ಟ್ವಿಟ್ಟರ್‌ ಪೇಜ್‌ನಿಂದ ಮಾರ್ಚ್‌ 8ರಂದು ಈ ವಿಡಿಯೋ ಪೋಸ್ಟ್‌ ಆಗಿದೆ. ಈ ವಿಡಿಯೋದಲ್ಲಿ ಮಹಿಳೆಯೊಬ್ಬರು ನಾಯಿ ಮರಿಗಳಿಗೆ ಆಹಾರ ನೀಡುತ್ತಿದ್ದಾರೆ. ಇದನ್ನು ನೋಡಿದ ತಾಯಿ ಶ್ವಾನ ಮಹಿಳೆಯ ಹಿಂದೆ ಮುಂದೆ ಸುತ್ತಾಡಿ ತನ್ನ ಬಾಲವನ್ನು ಅಲ್ಲಾಡಿಸುತ್ತಾ ದೇಹವನ್ನು ಬಾಗಿಸಿ ಕೃತಜ್ಞತೆ ಸಲ್ಲಿಸುತ್ತದೆ. ಈ ವಿಡಿಯೋವನ್ನು ನೋಡಿದ ನೆಟ್ಟಿಗರು ಪ್ರೀತಿ ತುಂಬಿದ ಇಮೋಜಿಗಳನ್ನು ಕಾಮೆಂಟ್ ಮಾಡಿದ್ದಾರೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರಿ ಸದ್ದು ಮಾಡ್ತಿದೆ ಪುಟಿನ್​ ತಂದ ಸೂಟ್​ಕೇಟ್: ಅದರ ಹಿಂದಿದೆ ಊಹೆಗೆ ನಿಲುಕದ ವಿಚಿತ್ರ ಸ್ಟೋರಿ! ಏನಿದೆ ಅದರಲ್ಲಿ?
ಪಾಕಿಸ್ತಾನ ಪುಸ್ತಕ ಮೇಳ: ಸೇಲ್ ಆದ ಪುಸ್ತಕ ಬರೀ 35, ಖಾಲಿಯಾದ ಬಿರಿಯಾನಿ, ಶವರ್ಮಾ ಎಷ್ಟು ಕೇಳಿದ್ರೆ ಗಾಬರಿ ಆಗ್ತೀರಿ