ಟ್ರಕ್ ಪಲ್ಟಿ: ಲಕ್ಷಕ್ಕೂ ಅಧಿಕ ಮೊಟ್ಟೆ ರಸ್ತೆಯಲ್ಲೇ ಆಮ್ಲೇಟ್: ಮೊಟ್ಟೆ ಬಿಡಿ, ರಸ್ತೆಗೇನಾಯ್ತು ನೋಡಿ!

Published : May 24, 2022, 11:32 AM ISTUpdated : Jun 10, 2022, 04:04 PM IST
ಟ್ರಕ್ ಪಲ್ಟಿ: ಲಕ್ಷಕ್ಕೂ ಅಧಿಕ ಮೊಟ್ಟೆ ರಸ್ತೆಯಲ್ಲೇ ಆಮ್ಲೇಟ್: ಮೊಟ್ಟೆ ಬಿಡಿ, ರಸ್ತೆಗೇನಾಯ್ತು ನೋಡಿ!

ಸಾರಾಂಶ

ಮೊಟ್ಟೆ ಸಾಗಿಸುತ್ತಿದ್ದ ಟ್ರಕ್ ಪಲ್ಟಿ ಲಕ್ಷಕ್ಕೂ ಅಧಿಕ ಮೊಟ್ಟೆ ರಸ್ತೆಯಲ್ಲೇ ಅಂಬ್ಲೇಟ್‌ ಅಮೆರಿಕಾದಲ್ಲಿ ಘಟನೆ

ಒಂದು ಮೊಟ್ಟೆ ಕೆಳಗೆ ಬಿದ್ದು ಒಡೆದರೆ ಅದರ ಹೊಲಸು ವಾಸನೆಯನ್ನು ತಡೆಯಲಾಗದು. ಅಂತಹದಲ್ಲಿ ಲಕ್ಷಾಂತರ ಮೊಟ್ಟೆಗಳು ಬಿದ್ದು ಒಡೆದರೆ ಪರಿಸ್ಥಿತಿ ಹೇಗಿರುತ್ತೆ. ನೀವೇ ಯೋಚಿಸಿ ಅಂತಹ ಘಟನೆಯೊಂದು ಅಮೆರಿಕಾದಲ್ಲಿ ನಡೆದಿದೆ. ಅಮೆರಿಕಾದ ರಸ್ತೆಯೊಂದರಲ್ಲಿ ಮೊಟ್ಟೆಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ಪಲ್ಟಿಯಾಗಿದೆ. ಇದರ ಪರಿಣಾಮ ರಸ್ತೆಯ ಸ್ಥಿತಿ ಅಂಟು ಗಮ್ಮಿನಂತಾಗಿದ್ದು ಸವಾರರು ಸಂಕಷ್ಟಕ್ಕೀಡಾಗಿದ್ದರು. 

13,000 ಕಿಲೋ ಗ್ರಾಂಗಳಷ್ಟು ತೂಕದ 2,50,000 ಕ್ಕೂ ಹೆಚ್ಚು ಮೊಟ್ಟೆಗಳನ್ನು ಸಾಗಿಸುವ 18 ಚಕ್ರಗಳ ಟ್ರಕ್ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಯಿತು. ಪರಿಣಾಮ ಲಕ್ಷಾಂತರ ಮೊಟ್ಟೆಗಳು ರಸ್ತೆಗೆ ಉರುಳಿ ಬಿದ್ದಿದ್ದು, ಒಡೆದು ಚೂರಾಗಿವೆ. ಲಕ್ಷಾಂತರ ಮೊಟ್ಟೆಗಳು ಒಮ್ಮೆಲೆ ರಸ್ತೆ ಮೇಲೆ ಬಿದ್ದು ಚೆಲ್ಲಾಪಿಲ್ಲಿಯಾದ ಪರಿಣಾಮ ರಸ್ತೆಯಲ್ಲಿ ಅಂಟು ಅಂಟಾದ ಸ್ಥಿತಿ ನಿರ್ಮಾಣವಾಗಿತ್ತು. ಜಿಗುಟು ಜಿಗುಟಾದ ಸ್ಥಿತಿಯಿಂದಾಗಿ ವಾಹನಗಳು ಆ ರಸ್ತೆಯಲ್ಲಿ ಸಂಚರಿಸಲಾಗದಂತಹ ಸ್ಥಿತಿ ನಿರ್ಮಾಣವಾಗಿತ್ತು. 

Karwar: ಮೀನುಗಾರರ ವಾದಕ್ಕೆ ಪುಷ್ಠಿ: ಸಮುದ್ರತೀರದಲ್ಲಿ ಆಮೆಗಳ ನೂರಾರು ಮೊಟ್ಟೆ ಪತ್ತೆ!

ಅಮೆರಿಕಾದ ಡೌನ್ಟೌನ್ ಡಲ್ಲಾಸ್ (downtown Dallas) ಬಳಿ ಈ ಅವಘಡ ಸಂಭವಿಸಿದ್ದು, ಟೆಕ್ಸಾಸ್ ಸಾರಿಗೆ ಇಲಾಖೆಯ (TxDOT) ಅಧಿಕಾರಿಗಳ ಪ್ರಕಾರ, ಮಾಲ್ಕಮ್ ಎಕ್ಸ್ ಬೌಲೆವಾರ್ಡ್‌ನಲ್ಲಿ (Malcolm X Boulevard) ಸೇತುವೆಯ ಪಿಲ್ಲರ್‌ಗೆ ಟ್ರಕ್ ಡಿಕ್ಕಿ ಹೊಡೆದ ನಂತರ ಈ ಅನಾಹುತ ಸಂಭವಿಸಿದೆ.

 

ಟ್ರಕ್‌ ಉರುಳಿದ ಪರಿಣಾಮ  30,000 ಪೌಂಡ್‌ ಮೌಲ್ಯದ ಮೊಟ್ಟೆಗಳು ರಸ್ತೆಗುರುಳಿದವು. ಅಪಘಾತದ ನಂತರ ರಸ್ತೆ ಮೇಲೆ ಚೆಲ್ಲಿದ ಮೊಟ್ಟೆಗಳಿಂದ ಉಂಟಾದ ಅಂಟನ್ನು ಸ್ವಚ್ಛಗೊಳಿಸಿ ತೆಗೆಯುವವರೆಗೂ ಡೌನ್‌ಟೌನ್ ಬಳಿ I-30 ನ ಪಶ್ಚಿಮ ದಿಕ್ಕಿನ ಲೇನ್‌ಗಳನ್ನು ಮುಚ್ಚಲಾಯಿತು. ಆ ಸಂದರ್ಭದ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ. ಆದರೆ ಈ ಅಪಘಾತದಲ್ಲಿ ಟ್ರಕ್ ಚಾಲಕನಿಗೆ ಯಾವುದೇ ಹಾನಿಯಾಗಿಲ್ಲ. 

ಕೇಕ್‌ನಲ್ಲಿ ಮೊಟ್ಟೆಯಿದ್ಯಾ ಎಂದು ಪ್ರಶ್ನಿಸಿದ ವ್ಯಕ್ತಿ, ಬೇಕರಿ ಮಾಲೀಕರು ಉತ್ತರ ಕೊಟ್ಟ ರೀತಿಗೆ ಕಂಗಾಲು

ನಾವೆಲ್ಲರೂ ನಮ್ಮ ಉತ್ತಮ ಆರೋಗ್ಯಕ್ಕಾಗಿ ಮೊಟ್ಟೆಗಳನ್ನು ಸೇವಿಸುತ್ತಿದ್ದೇವೆ. ಮೊಟ್ಟೆಗಳಲ್ಲಿ ಪ್ರೋಟೀನ್ ಬಹಳ ಉತ್ತಮ ಪ್ರಮಾಣದಲ್ಲಿ ಕಂಡುಬರುತ್ತದೆ. ಇದು ಆರೋಗ್ಯಕ್ಕೆ ಅಗತ್ಯವಾದಂತಹ ಅನೇಕ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿದೆ, ಆದರೆ ಮೊಟ್ಟೆಯ ಸಿಪ್ಪೆಗಳು ನಿಮ್ಮ ಕೂದಲಿನ ಸೌಂದರ್ಯವನ್ನು ಹೆಚ್ಚಿಸಲು ಮತ್ತು ಅದನ್ನು ಆರೋಗ್ಯಕರವಾಗಿಡಲು ಉಪಯುಕ್ತವಾಗಿವೆ ಎಂದು ನಿಮಗೆ ತಿಳಿದಿದೆಯೇ? 

ಅನೇಕ ಜನರು ಈ ಸಿಪ್ಪೆಗಳನ್ನು ಚರ್ಮದ ಮೇಲೆ ಬಳಸುತ್ತಾರೆ. ಕಲೆಗಳನ್ನು ತೆಗೆದು ಹಾಕಲು ಮತ್ತು ಹೊಳಪನ್ನು(Shining) ಹೆಚ್ಚಿಸಲು ಅವು ಬಹಳ ಪರಿಣಾಮಕಾರಿ ರೀತಿಯಲ್ಲಿ ಕೆಲಸ ಮಾಡುತ್ತವೆ. ಈ ಸಿಪ್ಪೆಗಳು ಉತ್ತಮ ಪ್ರಮಾಣದ ಕ್ಯಾಲ್ಸಿಯಂ ಹೊಂದಿರುತ್ತವೆ. ಸತ್ತ ಜೀವಕೋಶಗಳನ್ನು ತೆಗೆದು ಹಾಕಲು ಅನೇಕ ಜನರು ಇದನ್ನು ಬಳಸುತ್ತಾರೆ. 

ಅದೇ ಸಮಯದಲ್ಲಿ, ಚರ್ಮದ ಜೊತೆಗೆ, ಇದು ಕೂದಲಿಗೆ ಸಹ ಮೊಟ್ಟೆಯ ಸಿಪ್ಪೆ ಪ್ರಯೋಜನಕಾರಿಯಾಗಿದೆ. ನಿಮ್ಮ ಕೂದಲು ಉದುರುತ್ತಿದ್ದರೆ ಅಥವಾ ಅದು ಚೆನ್ನಾಗಿ ಬೆಳೆಯದಿದ್ದರೆ, ನೀವು ಕೂದಲಿನ ಪ್ಯಾಕ್ ಆಗಿ ನಿಮ್ಮ ಕೂದಲಿಗೆ ಮೊಟ್ಟೆಯ ಸಿಪ್ಪೆಗಳನ್ನು(Egg shell) ಪ್ರಯತ್ನಿಸಬಹುದು.

ಹೇರ್ ಪ್ಯಾಕ್(Hair pack) ತಯಾರಿಸುವುದು ತುಂಬಾ ಸುಲಭ. ನೀವು ಕೂದಲಿಗೆ ಇತರ ಹೇರ್ ಪ್ಯಾಕ್ ಗಳನ್ನು ಅನ್ವಯಿಸುವಂತೆ, ಇದನ್ನು ಅದೇ ರೀತಿಯಲ್ಲಿ ಬಳಸಬೇಕು. ಕೆಲವು ಜನರು ಕೂದಲಿನ ಪ್ಯಾಕ್ ಗಳಿಗೆ ಸಿಪ್ಪೆಗಳನ್ನು ಬಳಸುತ್ತಾರೆ, ಆದರೆ ನೀವು ಬಯಸಿದರೆ ಅದನ್ನು ಇತರ ಪದಾರ್ಥಗಳೊಂದಿಗೆ ಸಹ ಹಚ್ಚಬಹುದು. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!
ಭಾರಿ ಸದ್ದು ಮಾಡ್ತಿದೆ ಪುಟಿನ್​ ತಂದ ಸೂಟ್​ಕೇಟ್: ಅದರ ಹಿಂದಿದೆ ಊಹೆಗೆ ನಿಲುಕದ ವಿಚಿತ್ರ ಸ್ಟೋರಿ! ಏನಿದೆ ಅದರಲ್ಲಿ?