
ಕರಾಚಿ (ಮೇ. 24): ಪಾಕಿಸ್ತಾನದಲ್ಲಿ ( pakistan ) ಸರ್ಕಾರ ಬದಲಾದರೂ ಪರಿಸ್ಥಿತಿ ಬದಲಾಗಿಲ್ಲ. ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಪಾಕಿಸ್ತಾನ ಸರ್ಕಾರ (pakistan government) ಇದೀಗ ತೈಲ ಉಳಿತಾಯಕ್ಕೆ ( Save Fuel ) ಹೊಸ ದಾರಿ ಕಂಡುಕೊಂಡಿದೆ. ಇಂಧನ ಉಳಿಸಲು ಕೆಲಸದ ದಿನಗಳನ್ನು ಕಡಿಮೆ ಮಾಡುವ ಸಾಧ್ಯತೆಯನ್ನು ಪಾಕಿಸ್ತಾನ ಸರ್ಕಾರ ಪರಿಶೀಲಿಸುತ್ತಿದೆ. ಹಾಗೆ ಮಾಡುವುದರಿಂದ $ 2.7 ಬಿಲಿಯನ್ (ವಾರ್ಷಿಕ) ವಿದೇಶಿ ವಿನಿಮಯವನ್ನು (foreign exchange) ಉಳಿಸಬಹುದು ಎನ್ನುವ ಯೋಜನೆಯನ್ನು ರೂಪಿಸಿದೆ.
ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ್ (State Bank Of pakistan) ಮೂರು ಸಾಧ್ಯತೆಗಳ ಬಗ್ಗೆ ಯೋಚನೆ ನಡೆಸುತ್ತಿದೆ. ಹೀಗೆ ಮಾಡುವುದರಿಂದ 1.5 ಶತಕೋಟಿ ಅಮೆರಿಕನ್ ಡಾಲರ್ ನಿಂದ 2.7 ಶತಕೋಟಿ ಅಮೆರಿಕನ್ ಡಾಲರ್ ವಿದೇಶಿ ವಿನಿಮಯವನ್ನು ಉಳಿಸಬಹುದು ಎಂದು ಹೇಳಲಾಗಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ 10 ತಿಂಗಳಲ್ಲಿ (ಜುಲೈನಿಂದ ಏಪ್ರಿಲ್‌ವರೆಗೆ) ಪಾಕಿಸ್ತಾನದ ತೈಲ ಆಮದು 17 ಶತಕೋಟಿ ಅಮೆರಿಕನ್ ಡಾಲರ್ ಗಿಂತ ಹೆಚ್ಚಾಗಿದೆ. ಇದು ಕಳೆದ ಹಣಕಾಸು ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.96 ರಷ್ಟು ಹೆಚ್ಚಳವಾಗಿದೆ.
ಈಗ ಮಾಡಿರುವ ಅಂದಾಜಿನ ಪ್ರಕಾರ, ಪ್ರತಿ ವಾರ ಒಂದು ಕೆಲಸದ ದಿನವು ಪಾಕಿಸ್ತಾನದ ಮೇಲೆ 642 ಮಿಲಿಯನ್ ಯುಎಸ್ ಡಾಲರ್ ಹೊರೆಯನ್ನು ಹಾಕುತ್ತದೆ. ಇದರಲ್ಲಿ ಸರಕು ಮತ್ತು ಸಾರಿಗೆಯನ್ನು ( freight and transportation ) ಒಳಗೊಂಡ ತೈಲ ಬಳಕೆಯನ್ನು ಒಳಗೊಂಡಿಲ್ಲ.
ಇಂಧನ ಉಳಿಸಲು ಲಾಕ್ ಡೌನ್: ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ ಮಾಡಿರುವ ಮೊದಲ ಯೋಜನೆಯ ಪ್ರಕಾರ, ಕೆಲಸದ ದಿನಗಳನ್ನು ನಾಲ್ಕಕ್ಕೆ ಇಳಿಸಿ ಮೂರು ದಿನ ರಜೆ ನೀಡಬೇಕು ಎಂದು ಹೇಳಲಾಗುತ್ತಿದೆ. ಈ ರೀತಿ ಮಾಡುವುದರಿಂದ ಒಂದು ತಿಂಗಳಲ್ಲಿ 122 ಮಿಲಿಯನ್ ಡಾಲರ್ ಉಳಿಸಬಹುದು. ಇದು ವಾರ್ಷಿಕವಾಗಿ $ 1.5 ಬಿಲಿಯನ್ ಡಾಲರ್ ಉಳಿತಾಯವಾಗಿರುತ್ತದೆ. 2ನೇ ಯೋಜನೆ ಪ್ರಕಾರ, ವಾರದಲ್ಲಿ ನಾಲ್ಕು ಕೆಲಸದ ದಿನಗಳನ್ನು ಇಟ್ಟು ಎರಡು ರಜಾ ದಿನಗಳನ್ನು ನೀಡುವುದಾಗಿದ್ದರೆ, ಒಂದು ದಿನವನ್ನು ಲಾಕ್ ಡೌನ್ (Lock Down) ಮಾಡುವ ಯೋಜನೆಯಾಗಿದೆ. ಈ ಮೂಲಕ ತಿಂಗಳಿಗೆ 175 ಮಿಲಿಯನ್ ಡಾಲರ್ ಮತ್ತು ವರ್ಷದಲ್ಲಿ 2.1 ಬಿಲಿಯನ್ ಡಾಲರ್ ಉಳಿತಾಯ ಮಾಡಬಹುದು ಎಂದು ಹೇಳಲಾಗಿದೆ.
ಮೂರನೇ ಯೋಜನೆ ಪ್ರಕಾರ, ವಾರದಲ್ಲಿ ನಾಲ್ಕು ಕೆಲಸದ ದಿನಗಳು, ಒಂದು ರಜೆ ಮತ್ತು ಎರಡು ದಿನಗಳ ಲಾಕ್‌ಡೌನ್ (ವಾಣಿಜ್ಯ ಚಟುವಟಿಕೆ ಸಹಿತ ಕ್ಲೋಸ್) ಎಂದು ಹೇಳಲಾಗಿದೆ. ಇದು ತಿಂಗಳಿಗೆ 230 ಮಿಲಿಯನ್ ಡಾಲರ್ ಮತ್ತು ಪೆಟ್ರೋಲಿಯಂ-ಸಂಬಂಧಿತ ಆಮದು ಬಿಲ್‌ನಲ್ಲಿ ವಾರ್ಷಿಕವಾಗಿ 2.7 ಶತಕೋಟಿ ಡಾಲರ್ ಅನ್ನು ಉಳಿಸುತ್ತದೆ.
ಪೆಟ್ರೋಲ್ ದರ ಇಳಿಕೆ, ಪಾಕ್‌ನಿಂದಲೂ ಶ್ಲಾಘನೆ, ಮೋದಿ ಸ್ಟ್ರಾಟಜಿ ಬೇರೆನೇ..!
ವಿದ್ಯುತ್ ಉಳಿತಾಯ ( save electricity ) ಮಾಡುವಂತೆ ಇಂಧನ ಇಲಾಖೆಯೂ ( Energy Department ) ಸೂಚನೆ ನೀಡಿದೆ. ಕೆಲಸದ ದಿನಗಳನ್ನು ಕಡಿಮೆ ಮಾಡಿ ಹಗಲಿನಲ್ಲಿ ಮಾತ್ರ ವಾಣಿಜ್ಯ ಕಾರ್ಯಕ್ರಮಗಳನ್ನು ಮಾಡಲು ಅವಕಾಶ ನೀಡುವಂತೆ ಇಂಧನ ಇಲಾಖೆ ವತಿಯಿಂದ ಹೊಸ ಸರ್ಕಾರಕ್ಕೆ ಮನವಿ ಮಾಡಲಾಗಿದ್ದು, ಇದರಿಂದ ವಿದ್ಯುತ್ ಕೂಡ ಉಳಿತಾಯವಾಗುತ್ತದೆ.
ರೈಲ್ವೆ ಹಳಿಗಳನ್ನು ಸ್ಪೋಟಿಸಲು ಪಾಕ್ ಸಂಚು, ಗುಪ್ತಚರ ವಿಭಾಗದ ಎಚ್ಚರಿಕೆ!
ಕಳೆದ ವಾರ ಪಾಕಿಸ್ತಾನದಲ್ಲಿ ವಿದೇಶಿ ವಿನಿಮಯ ಉಳಿಸಲು 38 ವಿದೇಶಿ ವಸ್ತುಗಳನ್ನು ನಿಷೇಧಿಸಲಾಗಿತ್ತು. ಇದರಲ್ಲಿ ವಿದೇಶಿ ಮೊಬೈಲ್ ಫೋನ್, ಪಾಸ್ತಾ, ಜಾಮ್ ಇತ್ಯಾದಿಗಳ ಆಮದು ಐಷಾರಾಮಿ ಉತ್ಪನ್ನಗಳೆಂದು ಹೇಳುವ ಮೂಲಕ ನಿಷೇಧ ಮಾಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ