ಹಾವಿನೊಂದಿಗೆ ಹೂವಿನಂತೆ ಹುಡುಗಿಯ ಆಟ: ವಿಡಿಯೋ ವೈರಲ್‌

Published : May 16, 2022, 05:16 PM IST
ಹಾವಿನೊಂದಿಗೆ ಹೂವಿನಂತೆ ಹುಡುಗಿಯ ಆಟ: ವಿಡಿಯೋ ವೈರಲ್‌

ಸಾರಾಂಶ

ಹಾವಿನೊಂದಿಗೆ ಸರಸವಾಡುವ ಹುಡುಗಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಹಾವು ಎಂದಾಕ್ಷಣ ನಾವು ಮಾರು ದೂರ ಓಡೋದೇ ಹೆಚ್ಚು. ಏಕೆಂದರೆ ವಿಷಕಾರಿ ಹಾವುಗಳೊಂದಿಗೆ ಸರಸವಾಡಲು ಹೋದರೆ ಅವು ಜೀವಕ್ಕೆ ಸಂಚಾಕಾರ ತರುವುದರಲ್ಲಿ ಸಂಶಯವೇ ಇಲ್ಲ. ಅದಾಗ್ಯೂ ಕೆಲವರು ಈ ಹಾವುಗಳನ್ನು ನೆಂಟರೆಂಬಂತೆ ತುಂಬಾ ಸಲೀಸಾಗಿ ನಿಭಾಯಿಸುತ್ತಾರೆ. ಹಾಗೆಯೇ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ಹುಡುಗಿಯೊಬ್ಬಳು ಅಪಾಯಕಾರಿ ಹಾವಿನೊಂದಿಗೆ ಆಟವಾಡುತ್ತಿರುವುದನ್ನು ಕಾಣಬಹುದು. ಹಾವನ್ನು ನಿಯಂತ್ರಿಸಲು ಬಾಲಕಿ ಕೈಯಲ್ಲಿ ಹಾವನ್ನು ಹಿಡಿದಿರುವುದು ವಿಡಿಯೋದಲ್ಲಿದೆ. ಆದರೆ ಹಾವು ಹುಡುಗಿಯ ಮಣಿಕಟ್ಟನ್ನು ಹಿಡಿದು ಹಲವಾರು ಬಾರಿ ಕಚ್ಚಿದರು ಹುಡುಗಿ ಮಾತ್ರ ಕ್ಯಾರೇ ಅನ್ನುತ್ತಿಲ್ಲ. ಹೀಗಾಗಿ ಇದು ವಿಷಕಾರಿ ಹಾವಲ್ಲ ಎಂಬುದು ವಿಡಿಯೋ ದೃಶ್ಯಗಳಿಂದ ತಿಳಿದು ಬರುತ್ತದೆ.

ಈ ವೀಡಿಯೊವನ್ನು ಇನ್ಸ್ಟಾಗ್ರಾಮ್‌ನಲ್ಲಿ(Instagram) snake_.world ಎಂಬ ಹೆಸರಿನ ಪುಟದಿಂದ ಅಪ್‌ಲೋಡ್ ಮಾಡಲಾಗಿದೆ. ಮನೆಯೊಳಗೆ ನೂರಾರು ಹಾವುಗಳು ಒಟ್ಟಿಗೆ ಕಾಣಿಸಿಕೊಂಡರೆ ಹೇಗಾಗಬಹುದು? ಬೆಚ್ಚಿ ಬೀಳೋದಂತೂ ಗ್ಯಾರಂಟಿ. ವಾರದ ಹಿಂದೆ  ಉತ್ತರ ಪ್ರದೇಶದ (ಯುಪಿ) ಅಂಬೇಡ್ಕರ್ ನಗರದ ಮನೆಯೊಂದರಲ್ಲಿ ನೂರಾರು ಹಾವುಗಳು ಪತ್ತೆಯಾಗಿವೆ. ಮಣ್ಣಿನ ಮಡಕೆಯೊಳಗೆ ಈ ಹಾವುಗಳು ಪತ್ತೆಯಾಗಿವೆ. ಇಷ್ಟೊಂದು ಸಂಖ್ಯೆಯಲ್ಲಿ ಹಾವುಗಳು ಬಂದಿರುವುದರಿಂದ ಗ್ರಾಮಸ್ಥರಲ್ಲಿ ಭೀತಿ ಆವರಿಸಿತ್ತು. ಇಷ್ಟು ದೊಡ್ಡದಾದ ಹಾವುಗಳ ಹಿಂಡನ್ನು ಒಟ್ಟಿಗೆ ನೋಡಿ ಎಲ್ಲರೂ ಆಚ್ಚರಿಗೀಡಾಗಿದ್ದಾರೆ. ಈ ಹಾವುಗಳು ಎಲ್ಲಿಂದ ಬಂದವು, ಎಂಬ ಬಗ್ಗೆ ಯಾರಿಗೂ ತಿಳಿದಿಲ್ಲ.

ಬರೋಬರಿ 13 ಅಡಿ ಉದ್ದದ ನಾಗರಹಾವು ಸೆರೆ ಹಿಡಿದ ಉರಗಪ್ರೇಮಿ

ಆಲಾಪುರ ತಹಸಿಲ್ ವ್ಯಾಪ್ತಿಯ ಮದುವಾನ ಗ್ರಾಮದಲ್ಲಿ ಇಂತಹ ದೃಶ್ಯ ಕಂಡು ಬಂದಿತ್ತು. ಈ ಮನೆ ಬಹಳ ದಿನಗಳಿಂದ ಮುಚ್ಚಿತ್ತು ಎಂದು ಹೇಳಲಾಗುತ್ತಿದೆ. ಇದರೊಂದಿಗೆ ಈ ಹಾವುಗಳು ವಿಷಕಾರಿಯಲ್ಲ ಎಂಬ ಮಾಹಿತಿಯೂ ಸಿಕ್ಕಿತ್ತು. ಇಷ್ಟೊಂದು ಸಂಖ್ಯೆಯಲ್ಲಿ ಹಾವುಗಳು ಬಂದಿರುವುದರಿಂದ ಜನರಲ್ಲಿ ಆತಂಕ ಮೂಡಿತ್ತು. ಹಾವುಗಳಿರುವ ಬಗ್ಗೆ ಮಾಹಿತಿ ದೊರೆತ ಕೂಡಲೇ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಬಳಿಕ ಅರಣ್ಯ ಇಲಾಖೆ ತಂಡ ಸ್ಥಳಕ್ಕೆ ಆಗಮಿಸಿ ಎಲ್ಲ ಹಾವುಗಳನ್ನು ಕಾಡಿಗೆ ಬಿಡಲು ಸಿದ್ಧತೆ ನಡೆಸಿತು.

 

ಮನೆಯಲ್ಲಿ ಹಳೆಯ ಮಣ್ಣಿನ ಮಡಕೆಗಳನ್ನು ಕಂಡು ಗ್ರಾಮಸ್ಥರು ಇದು ಪ್ರಕೃತಿ ಮುನಿದಿರಬಹುದು ಎಂದು ಹೇಳಿದರೆ ಮತ್ತೆ ಕೆಲವರು ಇದನ್ನು ಸರ್ಪ ದೋಷ ಎಂದು ಕರೆದಿದ್ದಾರೆ. ಕೆಲ ದಿನಗಳ ಹಿಂದೆ ನಾಲ್ಕೈದು ಹಾವುಗಳು ಮರದ ಕೊಂಬೆಯೊಂದರಲ್ಲಿ ಸುರುಳಿ ಸುತ್ತಿಕೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ನಾಗರಹಾವುಗಳು ವಿಶ್ವದ ಅತ್ಯಂತ ವಿಷಕಾರಿ ಹಾವುಗಳಾಗಿವೆ ಮತ್ತು ಅವುಗಳು ಕಚ್ಚಿದ 20 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಮನುಷ್ಯರು ಸಾವಿನ ಮನೆ ಸೇರುತ್ತಾರೆ. ಅವು ಸಾಮಾನ್ಯವಾಗಿ ಭಾರತ ಹಾಗೂ ನೆರೆಯ ದೇಶಗಳಲ್ಲಿ ಕಂಡುಬರುತ್ತವೆ.

ಗ್ಲಾಸ್‌ನಿಂದ ನೀರು ಕುಡಿಯುತ್ತಿರುವ ಕರಿನಾಗರ: ಭಯಾನಕ ವಿಡಿಯೋ 

ಕಾಡಿನಲ್ಲಿ ತೆಳ್ಳಗಿನ ಮರದ ಕೊಂಬೆಯೊಂದರಲ್ಲಿ ನಾಗರ ಹಾವುಗಳ ದೊಡ್ಡ ಗುಂಪೊಂದು ಸಿಕ್ಕು ಬಿದ್ದಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. 'snake._.world' ಎಂಬ  ಇನ್‌ಸ್ಟಾಗ್ರಾಮ್‌ ಪೇಜ್‌ನಲ್ಲಿ ಈ ವೀಡಿಯೊವನ್ನು ಪೋಸ್ಟ್ ಮಾಡಲಾಗಿತ್ತು. 18 ಸಾವಿರಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!
ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ