ಅಮೆರಿಕಾದಲ್ಲಿ ಶಿಶು ಆಹಾರ ಕೊರತೆ: 118 ಲೀಟರ್ ಎದೆಹಾಲು ಶೇಖರಿಸಿದ ಮಹಿಳೆ

By Anusha KbFirst Published May 16, 2022, 4:43 PM IST
Highlights
  • 118 ಲೀಟರ್ ಎದೆಹಾಲು ಶೇಖರಿಸಿದ ಮಹಿಳೆ
  • ಅಮೆರಿಕಾದಲ್ಲಿ ಶಿಶು ಆಹಾರ ಕೊರತೆ
  • ಹಾಲಿಲ್ಲದ ತಾಯಂದಿರಿಗೆ ಮಾರಲು ನಿರ್ಧಾರ

ನ್ಯೂಯಾರ್ಕ್‌: ಅಮೆರಿಕಾದಲ್ಲಿ ಶಿಶು ಪೂರಕ ಆಹಾರದ ಕೊರತೆ ವ್ಯಾಪಕವಾಗಿ ಕಾಡುತ್ತಿದ್ದು ಇದರಿಂದ ನವಜಾತ ಶಿಶುಗಳನ್ನು ಹೊಂದಿರುವ ಎದೆಹಾಲಿನ ಕೊರತೆ ಅನುಭವಿಸುತ್ತಿರುವ ತಾಯಂದಿರು ಸಂಕಷ್ಟಕ್ಕೀಡಾಗಿದ್ದಾರೆ. ಈ ನಡುವೆ ಶಿಶು ಪೂರಕ ಆಹಾರದ ಬಿಕ್ಕಟ್ಟಿನ ನಡುವೆ ಕುಟುಂಬಗಳಿಗೆ ಸಹಾಯ ಮಾಡಲು ಮಹಿಳೆಯೊಬ್ಬರು ಮುಂದೆ ಬಂದಿದ್ದು, ತಮ್ಮ ಬಳಿ 118 ಲೀಟರ್  ಎದೆ ಹಾಲು ಇರುವುದಾಗಿ ಅವರು ಹೇಳಿದ್ದಾರೆ. 

ಉತಾಹ್‌ ನಿವಾಸಿ ತಾಯಿಯೊಬ್ಬಳು  4,000 ಔನ್ಸ್ (118 ಲೀಟರ್) ತನ್ನ ಸ್ವಂತ ಎದೆ ಹಾಲನ್ನು ಮಾರಾಟ ಮಾಡುವ ಮೂಲಕ ಎದೆ ಹಾಲಿನಿಂದ ಕೊರತೆಯಿಂದ ಬಳಲುತ್ತಿರುವ ಮಹಿಳೆಯರ ಕುಟುಂಬಗಳಿಗೆ ನೆರವಾಗಿದ್ದಾರೆ. ಶಿಶು ಆಹಾರದ ಬಿಕ್ಕಟ್ಟಿನ ನಡುವೆ ಕುಟುಂಬಗಳಿಗೆ ಸಹಾಯ ಮಾಡಲು ಅಮೆರಿಕಾದಲ್ಲಿ ಅನೇಕ ನವಜಾತ ಶಿಶುಗಳ ತಾಯಂದಿರು ಎದೆ ಹಾಲನ್ನು ಮಾರುತ್ತಿದ್ದಾರೆ. ಅಂತಹ ಅನೇಕ ತಾಯಂದಿರಲ್ಲಿ ಅಲಿಸ್ಸಾ ಚಿಟ್ಟಿ ಕೂಡ ಒಬ್ಬರು. ಅಲಿಸ್ಸಾ ಅತೀ ಹೆಚ್ಚು ಎದೆಹಾಲನ್ನು ಹೊಂದಿದ್ದು, ಮೂರಕ್ಕೂ ಹೆಚ್ಚು ಫ್ರೀಜರ್‌ಗಳಲ್ಲಿ ಎದೆಹಾಲುಗಳನ್ನು ಹೊಂದಿದ್ದಾರೆ. ಅದನ್ನು ಅಗತ್ಯವಿರುವ ಕುಟುಂಬಗಳಿಗೆ ಮಾರಾಟ ಮಾಡಲು ಅಲಿಸ್ಸಾ ಯೋಜಿಸಿದ್ದಾರೆ ಎಂದು ತಿಳಿದು ಬಂದಿದೆ.

Latest Videos

ಶಿಶು ಆಹಾರ ಕೊರತೆಯಿಂದ ಕಂಗೆಟ್ಟ ಅಮೆರಿಕಾ: ಆಹಾರವಿಲ್ಲದೇ ಶಿಶುಗಳ ಸಾವು

ನಾನು ಅಗತ್ಯಕ್ಕಿಂತ ಹೆಚ್ಚು ಎದೆ ಹಾಲನ್ನು ಹೊಂದಿದ್ದು, ಬೇರೆಯವರಿಗೆ ಇದರಿಂದ ಸಹಾಯವಾಗಬಹುದು. ನನ್ನ ಬಳಿ 3,000 ಔನ್ಸ್‌ಗಳಿವೆ ಎಂದು ನನಗೆ ತಿಳಿದಿದೆ. 3,000 ಔನ್ಸ್ ಕೆಳಗೆ ಮತ್ತು ಬಹುಶಃ 1,000 ಔನ್ಸ್‌ ಮಹಡಿ ಮೇಲೆ ಶೇಖರಿಸಿಟ್ಟಿದ್ದೇನೆ ಎಂದು ಅವರು ಫಾಕ್ಸ್13 ಎಂಬ ಮಾಧ್ಯಮಕ್ಕೆ ಹೇಳಿದ್ದಾರೆ. ಈ ತಾಯಿ ತನ್ನ ಎದೆಹಾಲನ್ನು ಪ್ರತಿ ಔನ್ಸ್‌ಗೆ 1 ಡಾಲರ್‌ಗೆ ಮಾರಾಟ ಮಾಡಲು ಯೋಜಿಸುತ್ತಿದ್ದಾಳೆ ಆದರೆ ಈ ಬಗ್ಗೆ ತನ್ನ ಪೋಷಕರೊಂದಿಗೆ ಮಾತುಕತೆಗೆ ಮುಕ್ತವಾಗಿದ್ದೇನೆ ಎಂದು ಆಕೆ ಹೇಳಿದ್ದಾರೆ. ನನಗೆ ಗೊತ್ತು ಬಹಳಷ್ಟು ಅಮ್ಮಂದಿರಿಗೆ ಹೊಟ್ಟೆನೋವು ಹೊಂದಿರುವ ಶಿಶುಗಳಿಗೆ ನಿರ್ದಿಷ್ಟ ಶಿಶು ಪೂರಕ ಆಹಾರಗಳು ಬೇಕಾಗುತ್ತವೆ. ಆದರೆ ಅವುಗಳ ಕೊರತೆಯಾದಾಗ ಎಷ್ಟು ಕಷ್ಟವಾಗಬಹುದು ಎಂದು ನನಗೆ ತಿಳಿದಿದೆ. ಆ  ನೋವಿನ ಬಗ್ಗೆ ನೀವು ಏನೂ ಮಾಡಲಾಗುವುದಿಲ್ಲ ಎಂದು ಅಲಿಶಾ ಹೇಳಿದರು.

Chamarajanagara ಬ್ಯಾಗ್ ನಲ್ಲಿ ನವಜಾತ ಗಂಡು ಶಿಶು ಪತ್ತೆ!
ಅಮೆರಿಕಾದಲ್ಲಿ ಸುಮಾರು 40 ಪ್ರತಿಶತದಷ್ಟು ಪ್ರಮುಖ ಶಿಶು ಪೂರಕ ಆಹಾರದ ಕೊರತೆ ಇದೆ. ಪ್ರಸ್ತುತ ಅಮೆರಿಕಾದಾದ್ಯಂತ ಔಟ್ ಅಫ್‌ ಸ್ಟಾಕ್‌ ಆಗಿದೆ. ಫೆಬ್ರವರಿಯಲ್ಲಿ ಪ್ರಮುಖ ಉತ್ಪಾದನಾ ಘಟಕವನ್ನು ಮುಚ್ಚಿದ್ದರಿಂದ ಈ ಕೊರತೆ ಉಂಟಾಗಿದೆ. ಶಿಶು ಸೂತ್ರ, ಅಥವಾ ಬೇಬಿ ಫಾರ್ಮುಲಾ  12 ತಿಂಗಳೊಳಗಿನ ಶಿಶುಗಳಿಗೆ ಆಹಾರಕ್ಕಾಗಿ ವಿನ್ಯಾಸಗೊಳಿಸಿದ ಉತ್ಪನ್ನವಾಗಿದೆ. 

ಅಮೆರಿಕಾ (America) ಆಡಳಿತವೂ ದಶಕಗಳಲ್ಲಿಯೇ ಅತಿ ಹೆಚ್ಚು ಹಣದುಬ್ಬರದ ಸ್ಥಿತಿ ಎದುರಿಸುತ್ತಿರುವುದರಿಂದ ಈಗಾಗಲೇ ಜನರ ಆಕ್ರೋಶಕ್ಕೆ ಕಾರಣವಾಗಿದೆ. ದೇಶವೂ ತಾನು ಬಳಸುವ ಶಿಶು ಆಹಾರದ 98 ಪ್ರತಿಶತವನ್ನು ದೇಶೀಯವಾಗಿಯೇ ಉತ್ಪಾದಿಸುತ್ತಿದೆ. ಆದರೆ ಈಗ ಕೊರತೆಯಾಗಿದ್ದು ಬೇರೆ ದೇಶಗಳಿಂದ ಆಮದಿಗೆ ಚಿಂತನೆ ನಡೆಸುತ್ತಿದೆ. ರೇಷನ್‌ ಕಾರ್ಡ್‌ಗಳ ಮೂಲಕ ಶಿಶು ಹಾಲನ್ನು ಖರೀದಿಸುವ ಬಡ ಕುಟುಂಬಗಳ ಮೇಲೆ ಇದರ ಪರಿಣಾಮ ಉಂಟಾಗದಂತೆ ಮಾಡಲು ಆಡಳಿತವೂ ರಾಜ್ಯಗಳೊಂದಿಗೆ ಕೆಲಸ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಅಲ್ಲದೇ ಶಿಶು ಆಹಾರ ತಯಾರಕರು ಮತ್ತು ಚಿಲ್ಲರೆ ವ್ಯಾಪಾರಿಗಳನ್ನು ಭೇಟಿಯಾದ ಅಧ್ಯಕ್ಷ ಬೈಡೆನ್ (Joe Biden)ಈ ಕೊರತೆಯ ಕಾರಣದ ಬಗ್ಗೆ ಚರ್ಚಿಸಿದ್ದಾರೆ. ಆದಾಗ್ಯೂ, ಪರಿಸ್ಥಿತಿ ಸುಧಾರಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದು ಅಧಿಕಾರಿಗಳಿಗೂ ತಿಳಿದಿಲ್ಲ. ಆದರೆ ನವೆಂಬರ್‌ನ ಮಧ್ಯಂತರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹಿಡಿತವನ್ನು ಹಿಮ್ಮೆಟ್ಟಿಸುವತ್ತ ದೃಷ್ಟಿ ನೆಟ್ಟಿರುವ ರಿಪಬ್ಲಿಕ್‌ ಪಾರ್ಟಿಗೆ ಮಾತ್ರ ಹೊಸ ವಿಚಾರ ಸಿಕ್ಕಂತಾಗಿದೆ.

click me!