ಸಾಗರದಲ್ಲಿ ಶ್ವಾನದ ಏಕಾಂಗಿ ಸಾಹಸ ಕ್ರೀಡೆ: ವಿಡಿಯೋ ವೈರಲ್‌

Published : May 16, 2022, 02:21 PM IST
ಸಾಗರದಲ್ಲಿ ಶ್ವಾನದ ಏಕಾಂಗಿ ಸಾಹಸ ಕ್ರೀಡೆ: ವಿಡಿಯೋ ವೈರಲ್‌

ಸಾರಾಂಶ

ಸಮುದ್ರದಲ್ಲಿ ಶ್ವಾನದ ಸರ್ಫಿಂಗ್ ಅಲೆಗಳನ್ನು ತಪ್ಪಿಸಿಕೊಂಡು ಸಾಗುವ ಶ್ವಾನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಶ್ವಾನಗಳ ಹಲವು ವಿಡಿಯೋಗಳನ್ನು ನೀವು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ನೋಡಿರಬಹುದು. ನಾಯಿಯ ತುಂಟಾಟಗಳನ್ನು ನೋಡುವುದೇ ಒಂದು ಖುಷಿ. ಶ್ವಾನವೊಂದು ಸಮುದ್ರದಲ್ಲಿ ಏಕಾಂಗಿಯಾಗಿ ಸಾಹಸ ಕ್ರೀಡೆಯಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಾಯಿಯೊಂದು ಪ್ಯಾಡಲ್‌ಬೋರ್ಡ್‌ನಲ್ಲಿ ನಿಂತು ಏಕಾಂಗಿಯಾಗಿ ಸಮುದ್ರದಲ್ಲಿ ಸರ್ಫಿಂಗ್ ಮಾಡುತ್ತಿದೆ. ಈ ವಿಡಿಯೋವನ್ನು 18 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ರೋಸಿ ಡ್ರೊಟಾರ್ (Rosie Drottar) ಹೆಸರಿನ ಈ ಶ್ವಾನ, ಸರ್ಫಿಂಗ್‌ನಲ್ಲಿ ಪಕ್ಕ ವೃತ್ತಿಪರರಂತೆ ವರ್ತಿಸುತ್ತಿದೆ. ಸುಮಾರು 25 ಸೆಕೆಂಡುಗಳ ವಿಡಿಯೋದಲ್ಲಿ ಶ್ವಾನ ಯಾವುದೇ ಮನುಷ್ಯರ ಸಹಾಯವಿಲ್ಲದೇ ಸಮುದ್ರದ ಅಲೆಗಳನ್ನು ತಪ್ಪಿಸಿಕೊಂಡು ಅದ್ಬುತವಾಗಿ ಸರ್ಫ್ ಮಾಡಿದೆ.

ಶ್ವಾನದ ಸರ್ಫಿಂಗ್ ಚಟುವಟಿಕೆಗಳಿಗಾಗಿಯೇ ಮೀಸಲಾಗಿರುವ ಇನ್ಸಟಾಗ್ರಾಮ್‌ ಪೇಜ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಈ ಶ್ವಾನದ ಇನ್ಸ್ಟಾಗ್ರಾಮ್‌ ಪೇಜ್‌ಗೆ 35 ಸಾವಿರಕ್ಕೂ ಹೆಚ್ಚು ಫಾಲೋವರ್ಸ್‌ಗಳಿದ್ದಾರೆ. "ಶ್ವಾನ ರೋಸಿ ಸಮುದ್ರದ ಮಧ್ಯದಲ್ಲಿ ಅದ್ಭುತವಾಗಿ ಸರ್ಫಿಂಗ್ ಮಾಡುವುದನ್ನು ಕಾಣಬಹುದು. 25 ಸೆಕೆಂಡುಗಳ ಸವಾರಿ, ಸರ್ಫಿಂಗ್ ಶ್ವಾನಗಳ ಜೀವನ " ಎಂದು ಬರೆದು ಈ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ. ಈ ವಿಡಿಯೋವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದು, ಸರ್ಫರ್‌ನ ಆತ್ಮದೊಂದಿಗೆ ಜನಿಸಿದ ಶ್ವಾನ ಎಂದು ಕಾಮೆಂಟ್ ಮಾಡಿದ್ದಾರೆ. 

ಫುಟ್ಬಾಲ್‌ ಪಂದ್ಯದ ವೇಳೆ ಮೈದಾನಕ್ಕಿಳಿದು ಚೆಂಡು ಎತ್ತಿಕೊಂಡು ಹೋದ ಶ್ವಾನ

ಇತ್ತೀಚೆಗೆ ಪ್ರಾಣಿಗಳು ಕೂಡ ಮನುಷ್ಯರಂತೆ ಎಲ್ಲಾ ಸವಲತ್ತುಗಳನ್ನು ಎಂಜಾಯ್‌ ಮಾಡಲು ಬಯಸುತ್ತಿವೆ. ಅದರಲ್ಲೂ ಶ್ವಾನಗಳ ಕೆಲ ಬುದ್ಧಿವಂತಿಕೆ ನೋಡಿದರೆ ಇವರೇನು ಮನುಷ್ಯರೋ ಪ್ರಾಣಿಗಳೋ ಎಂದು ಸಂಶಯ ಮೂಡುವುದು ಸಾಮಾನ್ಯ. ಹಾಗೆಯೇ ಇಲ್ಲೊಂದು ಶ್ವಾನ ಜಾರು ಬಂಡಿ ಆಡುತ್ತಿದೆ. ಒಂದು ಬದಿಯಲ್ಲಿರುವ ಸ್ಟೆಪ್ ಮೇಲೇರುವ ಶ್ವಾನ ಮತ್ತೊಂದು ಕಡೆಯ ಇಳಿಜಾರಿನಲ್ಲಿ ಜಾರುತ್ತಾ ಹೋಗಿ ಮಕ್ಕಳಂತೆ ಎಂಜಾಯ್ ಮಾಡುತ್ತಿದೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು ವಿಡಿಯೋ ಪೋಸ್ಟ್ ಆದಾಗಿನಿಂದ ಮೂರು ಲಕ್ಷಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. 

 

ಪಾರ್ಕೊಂದರಲ್ಲಿ ಇರುವ ಜಾರು ಬಂಡಿ ಇದಾಗಿದ್ದು, ಇದರಲ್ಲಿ ಮಕ್ಕಳು ಒಬ್ಬೊಬರಾಗಿಯೇ ಮೆಟ್ಟಿಲ ಮೂಲಕ ಹತ್ತಿ ಮತ್ತೊಂದು ಭಾಗದಲ್ಲಿ ಮೇಲಿನಿಂದ ಕೆಳಗೆ ಹಾರುತ್ತಾರೆ. ಇದನ್ನು ನೋಡಿ ಮಕ್ಕಳ ಆಟದೊಂದಿಗೆ ತಾನು ಸೇರಿಕೊಳ್ಳುವ ಶ್ವಾನ ತಾನ್ಯಾರಿಗೂ ಕಡಿಮೆ ಇಲ್ಲ ಎಂಬಂತೆ ಮಕ್ಕಳೊಂದಿಗೆ ಜಾರುಬಂಡಿ ಆಟ ಆಡುತ್ತಿದ್ದು, ಮಕ್ಕಳು ಈ ಶ್ವಾನವನ್ನು ಇಷ್ಟ ಪಡುತ್ತಿದ್ದು, ಜೊತೆ ಜೊತೆಯಲ್ಲಿ ಕರೆದೊಯ್ಯುತ್ತಿದ್ದಾರೆ. ಈ ಪುಟ್ಟ ಶ್ವಾನ ನೀಲಿ ಬಣ್ಣದ ಜಾಕೆಟ್ ಧರಿಸಿದ್ದು, ಒಂದೊಂದೇ ಹೆಜ್ಜೆ ಇಡುತ್ತ ಮೆಟ್ಟಿಲು ಹತ್ತಿ ಕೆಳಗೆ ಜಾರುತ್ತಿದೆ. ವೀಡಿಯೊವನ್ನು ಒಂದು ವಾರದ ಹಿಂದೆ ಇನ್ಸ್ಟಾಗ್ರಾಮ್‌ (Instagram) ಹ್ಯಾಂಡಲ್( @beaglethedoodle) ನಲ್ಲಿ ಪೋಸ್ಟ್ ಮಾಡಲಾಗಿದೆ. 'ಡಾಗ್ಸ್ ಆಫ್ ಇನ್‌ಸ್ಟಾಗ್ರಾಮ್' ಕುಟುಂಬದ ಉದಯೋನ್ಮುಖ ತಾರೆ ಎನಿಸಿರುವ ಈ ಶ್ವಾನಕ್ಕೆ ಇನ್‌ಸ್ಟಾಗ್ರಾಮ್ ನಲ್ಲಿ ಒಂಬತ್ತು ಸಾವಿರಕ್ಕೂ ಹೆಚ್ಚು ಅನುಯಾಯಿಗಳಿದ್ದಾರೆ.

ತನ್ನ ತಾಯಿಯನ್ನು ಕೊಂದವರ ಮೇಲೆ ನಾಯಿಯ ಸೇಡು!

ಕೆಲದಿನಗಳ ಹಿಂದೆ ಶ್ವಾನವೊಂದು ಸಿಂಕ್‌ನಲ್ಲಿ ಸ್ನಾನ ಮಾಡುವ ವಿಡಿಯೋ ವೈರಲ್ ಆಗಿತ್ತು. ನಾಯಿಗಳು ಸಾಮಾನ್ಯವಾಗಿ ಸ್ನಾನ ಮಾಡುವುದು ಎಂದರೆ ಮಾರು ದೂರ ಓಡುತ್ತವೆ. ಶ್ವಾನದ ಮಾಲೀಕರು ತಮ್ಮ ಮುದ್ದಾದ ನಾಯಿಗೆ ಸ್ನಾನ ಮಾಡಿಸಲು ಹರ ಸಾಹಸವನ್ನೇ ಮಾಡುತ್ತಾರೆ. ಆದರೆ ಇಲ್ಲೊಂದು ಶ್ವಾನದ ಮರಿ ಮಾತ್ರ ವಿಭಿನ್ನ. ಇದಕ್ಕೆ ಶ್ವಾನ ಮಾಡುವುದೆಂದರೆ ತುಂಬಾ ಇಷ್ಟ. ಬಹುಶ ಈ  ಶ್ವಾನ ತನ್ನ ಮಾಲಕರು ಶವರ್‌ನಲ್ಲಿ ಸ್ನಾನ ಮಾಡುವುದನ್ನು ನೋಡಿರಬೇಕು ಎಂದೆನಿಸುತ್ತದೆ. ಏಕೆಂದರೆ ಇದು ಕೈ ತೊಳೆಯುವಂತಹ ಸಿಂಕ್‌ಗೆ ಇಳಿದು ಟ್ಯಾಪ್‌ಗ ತಲೆಯೊಡ್ಡಿ ಸ್ನಾನ ಮಾಡುತ್ತದೆ. ಮೇಲಿಂದ ಬೀಳುವ ನೀರನ್ನು ಆನಂದಿಸುವ ಈ ನಾಯಿ ಮರಿ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!
ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ