ಸೊಂಡಿಲಿನಿಂದ ಪತ್ರಕರ್ತನ ಕಿವಿಹಿಂಡಿ ಮೂಗೆಳೆದ ಆನೆಮರಿ

By Anusha Kb  |  First Published Nov 15, 2022, 11:57 AM IST

ಪುಟ್ಟ ಆನೆಮರಿಯೊಂದು ಪಿಟುಸಿ ನೀಡುತ್ತಿದ್ದ ಪತ್ರಕರ್ತನಿಗೆ ಕೀಟಲೆ ಮಾಡಿ ಆತನ ಪಿಟುಸಿ ಮಾಡಲು ಬಿಡದೇ ಕ್ವಾಟ್ಲೆ ನೀಡಿದೆ. ಇದರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 


ಸಾಮಾನ್ಯವಾಗಿ ಆನೆಮರಿಗಳು ಮಕ್ಕಳಂತೆ ಆಟವಾಡುತ್ತಾ ಮೋಜು ಮಾಡಲು ಬಯಸುತ್ತವೆ. ತನ್ನ ಆತ್ಮೀಯರ ಜೊತೆ ಮುದ್ದು ಮಾಡಿಸಿಕೊಳ್ಳಲು ಬಯಸುವ ಆನೆಮರಿಗಳು ತನ್ನ ಪ್ರೀತಿಪಾತ್ರರೊಂದಿಗೆ ಮುದ್ದಾಡುತ್ತಾ ತುಂಟಾಟವಾಡುತ್ತವೆ. ಕೆಲದಿನಗಳ ಹಿಂದೆ ಆನೆಯೊಂದು ಆಟವಾಡುತ್ತಾ ತನ್ನದೇ ಸೊಂಡಿಲಿನ ಮೇಲೆ ಕಾಲಿಟ್ಟು, ನೋವಿನಿಂದ ಚೀರಿಕೊಂಡ ವಿಡಿಯೋ ವೈರಲ್ ಆಗಿತ್ತು. ಹಾಗೆಯೇ ಈಗ ಪುಟ್ಟ ಆನೆಮರಿಯೊಂದು ಪಿಟುಸಿ ನೀಡುತ್ತಿದ್ದ ಪತ್ರಕರ್ತನಿಗೆ ಕೀಟಲೆ ಮಾಡಿ ಆತನ ಪಿಟುಸಿ ಮಾಡಲು ಬಿಡದೇ ಕ್ವಾಟ್ಲೆ ನೀಡಿದೆ. ಇದರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಈ ವಿಡಿಯೋವನ್ನು sheldricktrust ಎಂಬ ಇನಸ್ಟಾಗ್ರಾಮ್ ಪೇಜ್‌ನಿಂದ ಪೋಸ್ಟ್ ಮಾಡಲಾಗಿದ್ದು, ಲಕ್ಷಾಂತರ ಜನ ವೀಕ್ಷಿಸಿದ್ದಾರೆ. ಪ್ರತಿಯೊಬ್ಬರು ತಾರೆಯಾಗಲು ಬಯಸುತ್ತಾರೆ. ಆನೆಮರಿ ಕಿಂದನಿ, ಪತ್ರಕರ್ತ ಅಲ್ವಿನ್ (Alvin) ಅವರ ವರದಿಗಾರಿಕೆ ನೋಡಿ ಅವರಿಂದ ಪ್ರಭಾವಿತಗೊಂಡು ಕ್ಯಾಮರಾ ಮುಂದೆ ತನ್ನದೇ ಸ್ಟೈಲ್‌ನಲ್ಲಿ ಪೋಸ್ ನೀಡಿ ಎಲ್ಲರ ಗಮನ ಸೆಳೆಯಲು ಮುಂದಾಗಿದೆ ಎಂದು ಬರೆದುಕೊಂಡು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. 

 
 
 
 
 
 
 
 
 
 
 
 
 
 
 

Tap to resize

Latest Videos

A post shared by Sheldrick Wildlife Trust (@sheldricktrust)

 

sheldricktrust ಒಂದು ವನ್ಯಜೀವಿಗಳ(wildlife) ರಕ್ಷಣೆ ಪಾಲನೆಗೆ ಸಂಬಂಧಿಸಿದ ಸೇವಾಸಂಸ್ಥೆಯಾಗಿದ್ದು, ಅನಾಥವಾದ ಆನೆಮರಿಗಳನ್ನು ರಕ್ಷಿಸಿ ಅವರ ಬೆಳವಣಿಗೆಗೆ ಬೇಕಾದ ಪೂರಕ ಆರೈಕೆ ಮಾಡಿ ಅವುಗಳು ಕಾಡಿಗೆ ತೆರಳಲು ಸಹಾಯ ಮಾಡುತ್ತವೆ. ಇಂತಹ ಸಂಸ್ಥೆಯ ಬಗ್ಗೆ @kbc_television ವರದಿಗೆ ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ಅದರ ಪ್ರತಿನಿಧಿಯೊಬ್ಬರು ಈ ವರದಿ ಮಾಡುತ್ತಾ ಪಿಟುಸಿ (piece to camera ಎಂದರೆ ಸಾಮಾನ್ಯವಾಗಿ ವರದಿಯ ಅಂತ್ಯದಲ್ಲಿ ವರದಿ ಮಾಡಿದ ಪತ್ರಕರ್ತ ವರದಿಗೆ ನೀಡುವ ಅಂತಿಮ ಅವಲೋಕನ )ನೀಡಲು ಮುಂದಾಗಿದ್ದಾರೆ. 

ಆನೆ ಮರಿಯ ತುಂಟಾಟ: ಯುವತಿಯ ಲಂಗ ಎಳೆದಾಡಿ ಆಟ

ಕ್ಯಾಮರಾದೆದುರು ಆನೆಮರಿಗಳ ಮುಂದೆ ನಿಂತು sheldricktrustನ ಸೇವಾಕಾರ್ಯಗಳ ಬಗ್ಗೆ ಹೇಳುತ್ತಾ ಅಂತಿಮ ವರದಿ ನೀಡುತ್ತಿದ್ದಾರೆ. ಈ ವೇಳೆ ಕಿಂದನಿ ಹೆಸರಿನ ಆನೆ ಮರಿಯೊಂದು (Elephant calf) ತನ್ನ ಸೊಂಡಿಲಿನಿಂದ ಮೊದಲಿಗೆ ಈ ಪತ್ರಕರ್ತನ ಕಿವಿಯನ್ನು ಚಿವುಟಿದೆ. ನಂತರ ತಲೆಗೆ ಸೊಂಡಿಲಿರಿಸಿ ಆಶೀರ್ವಾದ (Blessings) ಮಾಡಿದಂತೆ ಮಾಡಿ ತಲೆಯಿಂದ ಕೆಳಗೆ ಮುಖದ ಭಾಗದಲ್ಲಿ ಸೊಂಡಿಲನ್ನು ಇಳಿಸಿ ಮೂಗನ್ನು ಎಳೆದು ಮುತ್ತಿಕ್ಕಿದೆ. ಇದರಿಂದ ಪತ್ರಕರ್ತನಿಗೆ ಪೂರ್ತಿ ಕಚಗುಳಿ ಇಟ್ಟಂತಾಗಿದ್ದು, ಆತ ಪಿಟುಸಿ ಮರೆತು ಆನೆಯ ತುಂಟಾಟಕ್ಕೆ ಜೋರಾಗಿ ನಕ್ಕು ಬಿಟ್ಟಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. 

ಪುಟ್ಟ ಪಕ್ಷಿಯೊಂದಿಗೆ ಆನೆ ಮರಿಯ ಕಿತ್ತಾಟ ವಿಡಿಯೋ ವೈರಲ್‌
ಆನೆ ವಿಡಿಯೋ ನೋಡಿದ ಅನೇಕರು ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆನೆಮರಿಯ ತುಂಟಾಟಕ್ಕೆ ಅನೇಕರು ಹೃದಯದ ಇಮೋಜಿ ಕಳುಹಿಸಿದ್ದಾರೆ. ಅನೇಕರು ತುಂಟಾಟವಾಡಿ ಮುಖದಲ್ಲಿ ನಗು ಮೂಡಿಸಿದ್ದಕ್ಕೆ ಧನ್ಯವಾದ ಸಲ್ಲಿಸಿದ್ದಾರೆ. 

click me!