World Population: 800 ಕೋಟಿ ದಾಟಿದ ವಿಶ್ವದ ಜನಸಂಖ್ಯೆ: ವಿಶ್ವಸಂಸ್ಥೆ ವರದಿ

By Kannadaprabha News  |  First Published Nov 15, 2022, 9:08 AM IST

Global Population Hits 8 Billion: ಕಳೆದ 12 ವರ್ಷ ಜನಸಂಖ್ಯೆಯಲ್ಲಿ 100 ಕೋಟಿಯಷ್ಟು ಹೆಚ್ಚಳವಾಗಿದ್ದು, ವಿಶ್ವದ ಜನಸಂಖ್ಯೆ ಇದೀಗ 800 ಕೋಟಿಯಾಗಿದೆ ಎಂದು ವಿಶ್ವಸಂಸ್ಥೆ ವರದಿ ಹೇಳುತ್ತದೆ. 


ನಿತ್ಯ ಜೀವನದ ಗಡಿಬಿಡಿಯ ನಡುವೆಯೇ ವಿಶ್ವದ ಜನಸಂಖ್ಯೆ (World Population) ನವೆಂಬರ್‌ 15ರ ಬೆಳಗ್ಗೆ 800 ಕೋಟಿಗೆ ತಲುಪಿದೆ. ಭೂಮಿಯ (Earth) ಮೇಲೆ ಮಾನವನ (Human) ಉಗಮದ ನಂತರ ಜನಸಂಖ್ಯೆ 100 ಕೋಟಿ ಗಡಿ ತಲುಪಲು ಸುಮಾರು 1803 ವರ್ಷದಷ್ಟು(ಕ್ರಿ.ಶ. 1803) ಸುದೀರ್ಘ ಅವಧಿ ಬೇಕಾಯಿತು. ಬಳಿಕ ಸುಮಾರು 124 ವರ್ಷಗಳ ನಂತರ 1927ರಲ್ಲಿ ಜನಸಂಖ್ಯೆ 200 ಕೋಟಿ ಗಡಿ ದಾಟಿತು. ಆದರೆ ಮುಂದಿನ 33 ವರ್ಷಗಳಲ್ಲಿ ಎಂದರೆ 1960ರಲ್ಲಿ 300 ಕೋಟಿ ಹಾಗೂ ನಂತರದ 15 ವರ್ಷಗಳಲ್ಲಿ 400 ಕೋಟಿ ಜನಸಂಖ್ಯೆ ಗಡಿ ತಲುಪಿತು. 1975ರ ಬಳಿಕ ಜನಸಂಖ್ಯೆಯ ಪ್ರಮಾಣದಲ್ಲಿ ಭಾರಿ ಏರಿಕೆಯಾಗುತ್ತಿದ್ದು, ಪ್ರತಿ 12 ವರ್ಷಗಳಿಗೊಮ್ಮೆ ಜನಸಂಖ್ಯೆಯಲ್ಲಿ 100 ಕೋಟಿಯಷ್ಟು ಏರಿಕೆ ದಾಖಲಾಗುತ್ತಲೇ ಬಂದಿದೆ. ಇತ್ತೀಚಿನ ವರ್ಷಗಳಲ್ಲಿ ಜನಸಂಖ್ಯಾ ಬೆಳವಣಿಗೆ ದರದಲ್ಲಿ (Population Growth Rate) ಕೊಂಚ ಇಳಿಕೆ ಕಂಡುಬಂದರೂ, 2022ರಲ್ಲಿ ಜನಸಂಖ್ಯೆ 800 ಕೋಟಿ ಗಡಿ ದಾಟಿದೆ. ಆದರೆ ಮುಂದಿನ 100 ಕೋಟಿ ಹೆಚ್ಚಳಕ್ಕೆ ಅಂದಾಜು 15 ವರ್ಷ ಬೇಕಾಗಲಿದೆ ಎಂಬ ಅಂದಾಜಿದೆ.

ಅತಿ ಹೆಚ್ಚು ಜನಸಂಖ್ಯೆಯುಳ್ಳ ಟಾಪ್‌ 5 ದೇಶ
ಹಾಲಿ 145 ಕೋಟಿ ಜನಸಂಖ್ಯೆಯೊಂದಿಗೆ ಚೀನಾ (China) ಮೊದಲ ಸ್ಥಾನದಲ್ಲಿದ್ದರೆ, 141.2 ಕೋಟಿ ಜನಸಂಖ್ಯೆಯೊಂದಿಗೆ ಭಾರತ (India) 2ನೇ ಸ್ಥಾನದಲ್ಲಿದೆ. ನಂತರದ ಮೂರು ಸ್ಥಾನಗಳಲ್ಲಿ ಕ್ರಮವಾಗಿ ಅಮೆರಿಕ (United States of America) (33.50 ಕೋಟಿ), ಇಂಡೋನೇಷ್ಯಾ (Indonesia) (28 ಕೋಟಿ) ಮತ್ತು ಪಾಕಿಸ್ತಾನ (Pakistan) (23.15 ಕೋಟಿ) ದೇಶಗಳಿವೆ.

Tap to resize

Latest Videos

ಇದನ್ನು ಓದಿ: ಮತಾಂತರ, ಒಳನುಸುಳುವಿಕೆಯಿಂದ ಜನಸಂಖ್ಯಾ ಅಸಮಾನತೆ: ಹೊಸಬಾಳೆ

ಮುಂದಿನ ವರ್ಷ ಭಾರತ ವಿಶ್ವ ನಂ.1
ಸದ್ಯ ಚೀನಾದಲ್ಲಿ ಜನಸಂಖ್ಯೆ ಇಳಿಮುಖವಾಗಿರುವ ಕಾರಣ, 2023ರಲ್ಲಿ ಚೀನಾ ಹಿಂದಿಕ್ಕಿ ಭಾರತ ವಿಶ್ವದಲ್ಲೇ ಅತ್ಯಂತ ಹೆಚ್ಚು ಜನನಂಖ್ಯೆಯ ದೇಶ ಎನ್ನಿಸಿಕೊಳ್ಳಲಿದೆ.

ಹೆಚ್ಚಳಕ್ಕೆ ಕಾರಣವೇನು?
ಮಾನವರ ಜೀವಿತಾವಧಿ ಹೆಚ್ಚಳ, ಪೋಷಕಾಂಶಯುಕ್ತ ಆಹಾರ ಸೇವನೆ ಹೆಚ್ಚಳ, ವೈಯಕ್ತಿಕ ಆರೈಕೆಗೆ ಹೆಚ್ಚು ಗಮನ, ಹೆಚ್ಚಿನ ವೈದ್ಯಕೀಯ ಸೌಲಭ್ಯಗಳು, ವಿವಿಧ ಆರೋಗ್ಯ ಸಮಸ್ಯೆಗೆ ಸೂಕ್ತ ಔಷಧ ಲಭ್ಯತೆ ಜನಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ. ಪ್ರತಿ ವರ್ಷ ವಿಶ್ವದಲ್ಲಿ ಅಂದಾಜು 7 ಕೋಟಿ ಜನರ ಜನನವಾಗುತ್ತಿದ್ದರೆ, 6 ಕೋಟಿ ಜನರು ಸಾಯುತ್ತಿದ್ದಾರೆ.

ಇದನ್ನೂ ಓದಿ: ಮುಸ್ಲಿಮರ ಜನಸಂಖ್ಯೆ ಕಡಿಮೆಯಾಗ್ತಿದೆ; ನಮ್ಮಿಂದಲೇ ಹೆಚ್ಚು ಕಾಂಡೋಮ್‌ ಬಳಕೆ: Asaduddin Owaisi

click me!