Sperm plastic:ವೀರ್ಯದಿಂದ ಪರಿಸರ ಸ್ನೇಹಿ ಪ್ಲಾಸ್ಟಿಕ್ ಆವಿಷ್ಕಾರ, ವಿಜ್ಞಾನಿಗಳ ಕಾರ್ಯಕ್ಕೆ ಭಾರಿ ಮೆಚ್ಚುಗೆ!

By Suvarna NewsFirst Published Dec 2, 2021, 5:46 PM IST
Highlights
  • ಸತತ ಸಂಶೋಧನೆ, ಅನ್ವೇಷಣೆಯಿಂದ ಪರಿಸರ ಪೂರಕ ಪ್ಲಾಸ್ಟಿಕ್ ತಯಾರಿ
  • ವೀರ್ಯದಿಂದ ತಯಾರಿಸಿದ ಪ್ಲಾಸ್ಟಿಕ್ ಕಂಡು ಹಿಡಿದ ವಿಜ್ಞಾನಿಗಳು
  • ಚೀನಾ ವಿಜ್ಞಾನಿಗಳ ಕಾರ್ಯಕ್ಕೆ ಮೆಚ್ಚುಗೆ ಮಹಾಪೂರ

ಬೀಜಿಂಗ್(ಡಿ.02):  ವೀರ್ಯದಿಂದ ಪ್ಲಾಸ್ಟಿಕ್, ಇದು ಅಚ್ಚರಿಯಾದರೂ ಸತ್ಯ. ಸಂತಾನೋತ್ಪತ್ತಿ ವೀರ್ಯದಿಂದ(Sperm) ಹಲವು ಇತರ ಪ್ರಯೋಜನಗಳ ಕುರಿತು ಈಗಾಗಲೇ ಬೆಳಕು ಚೆಲ್ಲಲಾಗಿದೆ. ಇದೀಗ ಇದೇ ವೀರ್ಯದಿಂದ ಪರಿಸರ ಸ್ನೇಹಿ ಪ್ಲಾಸ್ಟಿಕ್ ನಿರ್ಮಾಣಗೊಂಡಿದೆ. ಇಲ್ಲಿ ಪರಿಸರ ಸ್ನೇಹಿ ಪ್ಲಾಸ್ಟಿಕ್(eco-friendly plastic) ತಯಾರಿಕೆಗೆ ಬಳಸಿರುವುದು ಮೀನಿನ ವೀರ್ಯ. ಸಾಲಮೊನ್ ಮೀನಿನ ವೀರ್ಯದಿಂದ ಚೀನಾ(China) ವಿಜ್ಞಾನಿಗಳು ಈ ಸಾಧನೆ ಮಾಡಿದ್ದಾರೆ.

ಜಗತ್ತಿನಲ್ಲಿ ಹೊಸ ಹೊಸ ಸಂಶೋಧನೆ, ಆವಿಷ್ಕಾರ, ಅನ್ವೇಷಣೆ ನಡೆಯುತ್ತಲೇ ಇದೆ. ಇದರಲ್ಲಿ ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಪರಿಸರ ಸ್ನೇಹಿ ವಸ್ತು ಬಳಕೆ ಕುರಿತು ಈಗಾಗಲೇ ಸಾಕಷ್ಟು ಅಧ್ಯಯನ ನಡೆದಿದೆ. ಇದೀಗ ಈ ಅಧ್ಯಯನಕ್ಕೆ ಫಲ ಸಿಕ್ಕಿದೆ. ಮೀನಿನ ವೀರ್ಯದಿಂದ ವಿಜ್ಞಾನಿಗಳು ಪರಿಸರ ಸ್ನೇಹಿ ಪ್ಲಾಸ್ಟಿಕ್ ಕಂಡು ಹಿಡಿಯಲಾಗಿದೆ. ಈ ಅನ್ವೇಷಣೆ ಪ್ಲಾಸ್ಟಿಕ್ ಮುಕ್ತ ಜಗತ್ತು ಮಾಡಲು ನೆರವಾಗಲಿದೆ ಎಂದು ಹೇಳಲಾಗುತ್ತಿದೆ. 

ಬಾಯ್ ಫ್ರೆಂಡ್‌ವೀರ್ಯವೇ ಕೊರೋನಾಕ್ಕೆ ಔಷಧ, ವಾರಕ್ಕೆ ಮೂರು ಸಾರಿ!

ಸಾಲಮೊನ್ ಮೀನಿನ(Salmon Fish) ವೀರ್ಯದ ಡಿಎನ್ಎಯನ್ನು(DNA) ಎರಡು ಚಿಕ್ಕ ಎಳೆಗಳಾಗಿ ತೆಗೆಯಲಾಗುತ್ತದೆ. ಈ ಎರಡು ಎಳೆಗಳನ್ನು ತರಕಾರಿ ಎಣ್ಣೆಯ ರಾಸಾಯನಿಕಗಳಿಂದ ಸಂಯೋಜಿಸಲಾಗುತ್ತದೆ. ಇದು ಹೈಡ್ರೋಜೆಲ್(hydrogel) ಆಗಿ ಪರಿವರ್ತನೆಗೊಳ್ಳುತ್ತದೆ. ಈ ಜೆಲ್‌ನ್ನು ವಿವಿಧ ಆಕಾರಗಳಲ್ಲಿ ಅಚ್ಚು ಮಾಡಲಾಗುತ್ತದೆ. ಬಳಿಕ ಈ ಜೆಲ್‌ನಲ್ಲಿರುವ ನೀರಿನ ತೇವಾಂಶ ತೆಗೆಯಲು ಒಗಿಸಲಾಗುತ್ತದೆ. ಈ ಪ್ರಕ್ರಿಯೆಯಿಂದ ಹೈಡ್ರೋಜೆಲ್ ಆಗಿದ್ದ ವಸ್ತು ಗಟ್ಟಿಯಾಗಲಿದೆ. ಬಳಿಕ  ಈ ವಸ್ತುವಿನಿಂದ ವಿಜ್ಞಾನಿಗಳು ಪರಿಸರ ಸ್ನೇಹಿ ಕಪ್, ಇತರ ಪ್ಲಾಸ್ಟಿಕ್ ತುಣುಕುಗಳನ್ನು ನಿರ್ಮಿಸಿದ್ದಾರೆ. 

ವಿಶೇಷ ಅಧ್ಯಯನ ತಂಡದ ಶ್ರಮಕ್ಕೆ ಫಲ ಸಿಕ್ಕಿದೆ. ಈ ಸಂಶೋಧನೆ ಆಳ ಮತ್ತಷ್ಚು ವಿಸ್ತಾರವಾಗಿದೆ. ಕಾರಣ ಚೀನಾದ ವಿಜ್ಞಾನಿಗಳ ತಂಡ ಸಾಲಮೊನ್ ಮೀನಿನ ವೀರ್ಯದಿಂದ ಪರಿಸರ ಸ್ನೇಹಿ ಪ್ಲಾಸ್ಟಿಕ್ ರಚಿಸಿದ್ದಾರೆ. ವೀರ್ಯದಿಂದ ಡಿಎನ್ಎ ತೆಗೆದು ಈ ಸಾಧನೆ ಮಾಡಿದ್ದಾರೆ. ಈ ಭೂಮಿ ಮೇಲಿರುವ ಪ್ರತಿಯೊಂದು ಜೀವಿಗಳಲ್ಲೂ ಡಿಎನ್‌ಎ ಇದೆ. 2015ರಲ್ಲಿ ನಡೆಸಿ ಅಧ್ಯಯನದಲಲ್ಲಿ ಭೂಮಿ ಮೇಲೆ 50 ಶತಕೋಟಿ ಟನ್ ಡಿಎನ್‌ಎ ಇದೆ ಎಂದು ಅಂದಾಜಿಸಲಾಗಿದೆ. ಇದರಿಂದ ಪರಿಸರ ಸ್ನೇಹಿ ಪ್ಲಾಸ್ಟಿಕ್ ತಯಾರಿಕೆಗೆ ಮತ್ತಷ್ಟು ವೇಗ ಸಿಗಲಿದೆ.

ಸ್ವಿಮಿಂಗ್ ಫೂಲ್‌ನಲ್ಲಿ ಪ್ರಬಲ ವೀರ್ಯಾಣು ಇದ್ರೆ ಮಹಿಳೆ ಪ್ರಗ್ನೆಂಟ್!

ಹೊಸ ಸಂಶೋಥನೆಯಿಂದ ಭೂಮಿ ಮೇಲಿರುವ ಬ್ಯಾಕ್ಟೀರಿಯಾ, ಬೆಳೆ, ಪಾಚಿ ಸೇರಿದಂತೆ ತ್ಯಾಜ್ಯ ವಸ್ತುಗಳಿಂದ ಪರಿಸರ ಸ್ನೇಹಿ ಪ್ಲಾಸ್ಟಿಕ್ ನಿರ್ಮಾಣ ಮಾಡಲು ಸಾಧ್ಯವಿದೆ ಅನ್ನೋದು ಈ ಸಂಶೋಧನೆಯಲ್ಲಿ ಬೆಳಕಿಗೆ ಬಂದಿದೆ. ವಿಶ್ವಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್‌ಗೆ ಪರ್ಯಾಯ ವಸ್ತು ಇದೀಗ ಸಿಕ್ಕಿದೆ. ಈ ಸಂಶೋಧನೆಗೆ ಮತ್ತಷ್ಟು ವೇಗ ನೀಡಿ ಪರಿಸರ ಸ್ನೇಹಿ ಪ್ಲಾಸ್ಟಿಕ್ ಎಲ್ಲರಿಗೂ ಸಿಗುವಂತಾಗಬೇಕು.

ಪ್ಲಾಸ್ಟಿಕ್ ಭಾರತ ಸೇರಿ ವಿಶ್ವವನ್ನೇ ನುಂಗಿ ಹಾಕುತ್ತಿದೆ. ಭಾರತದ ಯಾವುದೇ ಸ್ಥಳಕ್ಕೆ ತೆರಳಿದರು ಪ್ಲಾಸ್ಟಿಕ್ ಇಲ್ಲದ, ಬಿಸಾಡದ ಪ್ರದೇಶವಿಲ್ಲ. ಇದರಿಂದ ಅದೆಂತಾ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗುತ್ತಿದ್ದೇವೆ ಅನ್ನೋದು ಈಗಾಗಲೇ ಮನದಟ್ಟಾಗಿದೆ. ಮಣ್ಣಿನಲ್ಲಿ ಕರಗದ ಪ್ಲಾಸ್ಟಿಕ್‌ನಿಂದ ಕಾಡು ಹಾಗೂ ಸಸ್ಯಸಂಕುಲ ನಾಶವಾಗುತ್ತಿದೆ. ತಾಪಮಾನ ಹೆಚ್ಚಾಗುತ್ತಿದೆ. ಅಕಾಲಿಕ ಮಳೆ, ಭೂಕುಸಿತ ಸಂಭವಿಸುತ್ತಿದೆ. ನೀರಿನಲ್ಲಿ ತೇಲುತ್ತ ಸಮುದ್ರ ಸೇರುವ ಈ ಪ್ಲಾಸ್ಟಿಕ್ ಜಲಚರಗಳ ನಾಶ ಮಾಡುತ್ತಿದೆ. ನದಿ ತೊರೆಗಳು ಬತ್ತಿ ಹೋಗುತ್ತಿದೆ. ಜಾಗತಿಕ ತಾಪಮನ ಕುರಿತು ಸತತ ಸಭೆಗಳು ನಡೆಯುತ್ತಿದೆ. ಇದಕ್ಕೆ ಪ್ಲಾಸ್ಟಿಕ್ ಕಾಡ ನೇರ ಕಾರಣವಾಗಿದೆ. 

ವ್ಯಾಕ್... ವೀರ್ಯದಲ್ಲಿ ವಿಧ ವಿಧ ಅಡುಗೆ ಮಾಡ್ತಾನಂತೆ ಈ ಭೂಪ!

ಇದೀಗ ಸಂಶೋಧನೆ ಮಾಡಿರುವ ಪರಿಸರ ಸ್ನೇಹಿ ಪ್ಲಾಸ್ಟಿಕ್ ನೀರಿನಲ್ಲಿ ಹಾಕಿದರೆ ಮತ್ತೆ ಜೆಲ್ ಆಗಿ ಪರಿವರ್ತನೆ ಆಗಲಿದೆ. ಇದನ್ನು ಮರು ಬಳಕೆ ಮಾಡಲು ಸುಲಭ. ಈ ಪರಿಸರ ಸ್ನೇಹಿ ಪ್ಲಾಸ್ಟಿಕ್‌ನಿಂದ ಇಂಗಾಲ ಹೊರಸೂಸುವಿಕೆ ಶೇಕಡ 97 ರಷ್ಟು ಕಡಿಮೆ. ಹೀಗಾಗಿ ಇದು ಪರಿಸರಕ್ಕೆ ಪೂರಕವಾಗಿದೆ. ಈ ಪ್ಲಾಸ್ಟಿಕ್‌ನ್ನು, ಸದ್ಯ ಬಳಕೆ ಮಾಡುತ್ತಿರುವ ಪ್ಲಾಸ್ಟಿಕ್ ರೀತಿಯಲ್ಲೇ ಬಳಕೆ ಮಾಡಬಹುದು. ಬ್ಯಾಗ್, ಕವರ್, ಪ್ಯಾಕೆಟ್, ಟೆಟ್ರಾ ಪ್ಯಾಕೆಟ್ ಸೇರಿದಂತೆ ಎಲ್ಲದ್ದಕ್ಕೂ ಈ ಪರಿಸರ ಸ್ನೇಹಿ ಪ್ಲಾಸ್ಟಿಕ್ ಬಳಕೆ ಮಾಡಲು ಸಾಧ್ಯವಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

click me!