ಇತ್ತೀಚಿನ ಈ ಡಿಜಿಟಲ್ ಯುಗದಲ್ಲಿ ಯಾವ ವಿಚಾರ ಹೇಗೆ ವೈರಲ್ ಆಗಬಲ್ಲದು ಎಂಬುದನ್ನು ಹೇಳಲಾಗದು. ಹಾಗೆಯೇ ಪಾಕಿಸ್ತಾನದಲ್ಲಿ ರೊಟ್ಟಿ ಮಾಡುತ್ತಿರುವ ಬಾಲಕಿಯೊಬ್ಬಳ ವಿಡಿಯೋ ಈಗ ಇನ್ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ಜನ ವೀಕ್ಷಿಸಿದ್ದಾರೆ.
ಕರಾಚಿ(ಡಿ.2): ಬಾಲಕಿಯೊಬ್ಬಳು ಆಲೂಗಡ್ಡೆಯನ್ನು ಕತ್ತರಿಸುತ್ತಿರುವ ಸಾಮಾನ್ಯವಾದ ವಿಡಿಯೋ ಇದಾಗಿದ್ದು, ಇದನ್ನು ಲಕ್ಷಾಂತರ ಮಂದಿ ವೀಕ್ಷಿಸುವ ಮೂಲಕ ವಿಡಿಯೋವನ್ನು ವೈರಲ್ ಮಾಡಿದ್ದಾರೆ. ಹಸಿರು ಕಂದು ಬಣ್ಣದ ಕಣ್ಣುಗಳನ್ನು ಹೊಂದಿರುವ ಬಾಲಕಿಯ ವಿಡಿಯೋ ಇದಾಗಿದ್ದು, ಅಂತಹ ವಿಶೇಷತೆಯೇನೋ ಈ ವಿಡಿಯೋದಲ್ಲಿ ಇಲ್ಲ. ಅದಾಗ್ಯೂ ಈ ವಿಡಿಯೋವನ್ನು ಲಕ್ಷಾಂತರ ಜನ ನೋಡಿದ್ದು ಅಚ್ಚರಿ ಎನಿಸಿದೆ. ಪಾಕಿಸ್ತಾನ(Pakistan)ದ ಅಮಿನಾ ರಿಯಾಜ್(Aamina Reyaz) ಹೆಸರಿನ 15 ವರ್ಷದ ಬಾಲಕಿ ಈಕೆ. ಕೆಲವು ತಿಂಗಳ ಹಿಂದೆ ಈಕೆ ರೊಟ್ಟಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಈಗ ಮತ್ತೆ ಆಕೆ ಅಲೂಗಡ್ಡೆ ಕತ್ತರಿಸುತ್ತಿರುವ ವಿಡಿಯೋ ಕೂಡ ಸಾಕಷ್ಟು ವೈರಲ್ ಆಗಿದೆ.
ಅಮಿನಾ ರಿಯಾಜ್ ಕರಾಚಿ(Karachi) ನಗರದ ಹೊರವಲಯದ ಸಿಂಧ್ ಪ್ರಾಂತ್ಯದಲ್ಲಿ ವಾಸ ಮಾಡುತ್ತಿದ್ದು, ಅಲೆಮಾರಿ(nomads) ಸಮುದಾಯದ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಅದಾಗ್ಯೂ ಈ ವಿಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದು ಅಮಿನಾ ಅಲ್ಲ, ಆಕೆಯ ನೆರೆ ಮನೆಯಲ್ಲಿ ವಾಸಿಸುವ ತರುಣನೋರ್ವ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾನೆ. ಈ ಬಾಲಕಿಯ ಆಕರ್ಷಣೀಯವಾದ ಕಿರುನಗೆ ಹಾಗೂ ಸುಂದರವಾದ ಕಣ್ಣುಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆಗೆ ಕಾರಣವಾಗಿದೆ. ಇತ್ತೀಚಿನ ವಿಡಿಯೋದಲ್ಲಿ ಆಕೆ ಅಲೂಗಡ್ಡೆ ಕತ್ತರಿಸುತ್ತಿದ್ದಾಳೆ. ಇನ್ಸ್ಟಾಗ್ರಾಮ್‌ನಲ್ಲಿ ಇಕಿಯಾ5(Ekiya5) ಹೆಸರಿನಲ್ಲಿರುವ ಖಾತೆಯಿಂದ ಸೆಪ್ಟೆಂಬರ್ 10ರಂದು ಈ ವಿಡಿಯೋ ಪೋಸ್ಟ್ ಆಗಿದೆ. ಬಹು ಬಣ್ಣದ ಸಂಯೋಜನೆಯನ್ನು ಒಳಗೊಂಡಿರುವ ಸಲ್ವಾರ್ ಧಿರಿಸಿನಲ್ಲಿ ಈಕೆ ಕಂಗೊಳಿಸುತ್ತಿದ್ದಾಳೆ.
ಮಂಗಳೂರು ಸಮವೇಶದ ವೈರಲ್ ವಿಡಿಯೋಗೆ ಮೋದಿ ಅಚ್ಚರಿ
ಇದು ಡಿಜಿಟಲ್ ಯುಗವಾದುದರಿಂದ ಬಹುತೇಕ ಘಟನೆಗಳು ವಿಡಿಯೋಗಳಾಗಿ ವೈರಲ್ ಆಗುತ್ತಿವೆ. ಇತ್ತೀಚೆಗೆ ವಧುವೊಬ್ಬರು ವಿವಾಹಕ್ಕೆ ಮೊದಲು ಸೀರೆ ಆಭರಣ ತೊಟ್ಟು ಶೃಂಗಾರಗೊಂಡ ಬಳಿಕ ಜಿಮ್‌ಗೆ ತೆರಳಿ ವರ್ಕೌಟ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಕಿತ್ತಳೆ ಹಾಗೂ ಕೆಂಪು ಮಿಶ್ರಿತ ಬಣ್ಣದ ಸೀರೆಯುಟ್ಟ ಮದುಮಗಳು ಡಂಬಲ್ಸ್ ಹಿಡಿದು ವರ್ಕೌಟ್ ಮಾಡುತ್ತಿರುವುದು ನೆಟ್ಟಿಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಅನು ಸೆಹಗಲ್(Anu sehagal) ಹೆಸರಿನ ಇನ್ಸ್ಟಾಗ್ರಾಮ್ ಬಳಕೆದಾರಿಗೆ ಕ್ರೆಡಿಟ್ ಕೊಟ್ಟು ಐಬಿಡೆಲ್ಲಿಎನ್‌ಸಿಆರ್(ibdelhincr) ಹೆಸರಿನ ಖಾತೆಯಿಂದ ಪೋಸ್ಟ್ ಮಾಡಲ್ಪಟ್ಟಿದೆ.
ಟಿಕ್‌ಟಾಕ್ ಇಂದು ಭಾರತದಲ್ಲಿ ನಿಷೇಧಿತಗೊಂಡಿದೆ ಅದರ ಬಳಿಕ ಚಿಂಗಾರಿ, ಮೋಜ್, ಫೇಸ್‌ಬುಕ್ ರೀಲ್ಸ್, ಮುಂತಾದ ಮನೋರಂಜನ ಆಪ್‌ಗಳು ಬಂದಿವೆ. ಪ್ರತಿಭೆ ಇದ್ದು ಅದನ್ನು ಹೊರಗೆಡಹಲು ವೇದಿಕೆ ಸಿಗದವರು ಇವುಗಳ ಮೂಲಕ ತಮ್ಮ ಪ್ರತಿಭೆಯನ್ನು ಹೊರ ಹಾಕುತ್ತಿದ್ದಾರೆ.
ಯೋಧರಿಗೆ ಸೆಲ್ಯೂಟ್: ವೈರಲ್ ವಿಡಿಯೋ ಬಾಲಕನ ಪೋಷಕರಿಗೆ ಆರ್.ಸಿ.ಯಿಂದ 2.5 ಲಕ್ಷ
ದಕ್ಷಿಣ ಆಫ್ರಿಕಾದ ತಾಂಜಾನಿಯಾ ಮೂಲದ ಯುವಕನೋರ್ವ ತನ್ನ ಸಹೋದರಿ ಜೊತೆಗೂಡಿ ಸಂಗೀತ ಹಾಗೂ ನೃತ್ಯದ ಹಲವು ವಿಡಿಯೋಗಳನ್ನು ಟಿಕ್‌ಟಾಕ್ ಮೂಲಕ ಪೋಸ್ಟ್ ಮಾಡಿದ್ದ, ಕಿಲಿಪಾಲ್ ಎಮಬ ಹೆಸರಿನ ಈತ ಇತ್ತೀಚೆಗೆ ಶೇರ್‌ಶಾ ಸಿನಿಮಾದ ರಾತನ್ ಲಂಬಿಯಾನ್ ಹಾಡು ಹಾಡಿ ನೃತ್ಯ ಮಾಡಿದ್ದು, ಇದು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.