Adoption ಅನಾರೋಗ್ಯಪೀಡಿತ ಮಗುವನ್ನು ಒಲಿಂಪಿಕ್ ಚಾಂಪಿಯನ್‌ ಆಗುವಂತೆ ಬೆಳೆಸಿದ ತೃತೀಯ ಲಿಂಗಿ ತಂದೆ

By Suvarna News  |  First Published Dec 2, 2021, 4:45 PM IST

Intro: ತಂದೆ ತಾಯಿ ಇಬ್ಬರು ಪೋಷಕರೇ ಆಗಿದ್ದರು ಯಾವಾಗಲೂ ತಾಯಿ ಪ್ರೀತಿಯ ಗುಣಗಾನವಾಗಿದ್ದೆ ಹೆಚ್ಚು ತಂದೆಯೂ ಸರಿಸಮಾನ ಪ್ರೀತಿ ತೋರುವವರೇ ಆದರೂ ತಂದೆಯ ಪ್ರೀತಿ ಬಗ್ಗೆ ಜಾಸ್ತಿ ಉಲ್ಲೇಖಗಳಿಲ್ಲ. ಇಲ್ಲೊಂದು ಮಗುವನ್ನು ದತ್ತು ಪಡೆದು ತಂದೆಯಾದ ಒಬ್ಬ ತೃತೀಯ ಲಿಂಗಿ ತಂದೆಯ ಸಾಹಸಗಾಥೆ ಇದೆ.


ನ್ಯೂಯಾರ್ಕ್‌(ಡಿ.2): ಹೆಣ್ಣು ಮಕ್ಕಳಿಗೆ ತಾಯಿಯಾಗುವ ಖುಷಿ ಎಷ್ಟು ಸಂಭ್ರಮ ನೀಡುವುದೋ ಪುರುಷರಿಗೂ ಹಾಗೆ ತಂದೆಯಾಗುವ ಖುಷಿ ಎಲ್ಲೆಗೆ ಮೀರಿದ್ದು, ಆದರೆ ಗಂಡು ಹೆಣ್ಣು ಎರಡು ಅಲ್ಲದ ತೃತೀಯ ಲಿಂಗಿ ಸಮುದಾಯಕ್ಕೆ ಮಕ್ಕಳನ್ನು ಪಡೆಯುವ ವಿಚಾರ ಕನಸಿನ ಮಾತೇ ಸರಿ. ಆದರೆ ಇಲ್ಲೊಬ್ಬ ತೃತೀಯ ಲಿಂಗಿಸಮುದಾಯಕ್ಕೆ ಸೇರಿದ ವ್ಯಕ್ತಿ ತಂದೆಯಾಗಿದ್ದಾರೆ. ಹೌದು ಜೆರಿ ವಿಂಡ್ಲೆ ಎಂಬ ಈ ವ್ಯಕ್ತಿ ಒಂದು ಪುಟ್ಟ ಮಗುವನ್ನು ದತ್ತು ಪಡೆಯುವ ಮೂಲಕ ತಂದೆಯಾಗಿದ್ದಾರೆ. ಆದರೆ ಇವರು ತಂದೆಯಾಗಿರುವುದು ಪ್ರಸ್ತುತ ವಿಷಯವಲ್ಲ. ಹಲವು ಕಾಯಿಲೆಗಳಿಂದ ಬಳಲುತ್ತಿದ್ದ ಅಸ್ವಸ್ಥ ಪೀಡಿತ ಮಗುವನ್ನು ದತ್ತು ಪಡೆದು ಅದನ್ನು ಒಲಿಂಪಿಕ್‌ ಚಾಂಪಿಯನ್‌ ಆಗುವವರೆಗೆ ಬೆಳೆಸಿದ್ದು, ಇವರ ಈ ಸಾಧನೆ ಇದು ಇವರನ್ನು ಟೀಕಿಸುತ್ತಿದ್ದವರ ಬಾಯಿ ಮುಚ್ಚುವಂತೆ ಮಾಡಿದೆ. 

ಜೆರಿ ವಿಂಡೆಲ್‌ ಒಬ್ಬ ತೃತೀಯ ಲಿಂಗಿ, ಆತನಿಗೆ ನೀನು ತಂದೆಯಾಗುವುದಿಲ್ಲ ಎಂದು ಅನೇಕರು ನಿರಂತರವಾಗಿ ಹೇಳುತ್ತಲೆ ಇರುತ್ತಿದ್ದರು. ಆದರೆ ಆತನಿಗೆ ತಾನು ತಂದೆಯಾಗುವ  ಬಗ್ಗೆ ಸಂಪೂರ್ಣ ವಿಶ್ವಾಸವಿತ್ತು. ಅಮೆರಿಕಾದ ಪ್ರಜೆಯಾದ ಜೆರಿ ವಿಂಡ್ಲೆ(Jerry Windle)ಹಲವು ದಿನಗಳಿಂದ  ಮಗುವನ್ನು ದತ್ತು ಪಡೆಯುವ ಮೂಲಕ ತಂದೆಯಾಗುವ ಕನಸು ಕಾಣುತ್ತಿದ್ದರು. ಆದರೆ ಅಮೆರಿಕಾ(US)ದಲ್ಲಿ ಅವರಿಗೆ ಮಗುವನ್ನು ದತ್ತು ತೆಗೆದುಕೊಳ್ಳಲು ಎಷ್ಟು ಕಷ್ಟ ಪಟ್ಟರು ಸಾಧ್ಯವಾಗಿರಲಿಲ್ಲ. ಇದೇ ವೇಳೆ ಮ್ಯಾಗಜಿನ್‌ನಲ್ಲಿ ಒಂದು ಲೇಖನ ಪ್ರಕಟವಾಗಿತ್ತು. ಇದರಲ್ಲಿ ಕಾಂಬೋಡಿಯಾ(Cambodia)ದಲ್ಲಿ ಅನಾಥ ಮಕ್ಕಳ ಜೀವನದ ಬಗ್ಗೆ ಅದರಲ್ಲಿ ಬರೆಯಲಾಗಿತ್ತು.  ಕೂಡಲೇ ಇವರು ಕಾಂಬೋಡಿಯಾದ ಅಧಿಕಾರಿಗಳನ್ನು ಸಂಪರ್ಕಿಸಲು ತಡ ಮಾಡಲಿಲ್ಲ. ಅಲ್ಲದೇ ಕೂಡಲೇ ಅವರಿಗೆ ಜೀವನವೇ ಬದಲಾಗುವ ಸುದ್ದಿಯೊಂದು ಸಿಕ್ಕಿತ್ತು. 

Tap to resize

Latest Videos

ಅನಾಥ ಮಗುವಿಗೆ ಎದೆ ಹಾಲುಣಿಸಿ ಮಮತೆ ತೋರಿದ ಪೊಲೀಸ್ ಪೇದೆ

ಜೂನ್‌ 2000ದಲ್ಲಿ ಜೆರಿ, ಕಾಂಬೋಡಿಯಾದ ಫ್ನೋಮ್ ಪೆಹ್‌Phnom Penhಗೆ ಬಂದಿಳಿದರು. ಅಲ್ಲಿ ಇವರ ಭಾವಿ ಪುತ್ರ  ಜೋರ್ಡನ್‌ (Jordan)ಇದ್ದ. ಈತನಿಗೆ ಜನ್ಮ ನೀಡಿದ ಪೋಷಕರು ಮರಣಿಸಿದ ಹಿನ್ನೆಲೆಯಲ್ಲಿ ಈತನನ್ನು ಅನಾಥಶ್ರಮ(orphanage)ಕ್ಕೆ ಸೇರಿಸಲಾಗಿತ್ತು. ಈ ತೊಟ್ಟಿಲು ಕೂಸು, ಅಪೌಷ್ಠಿಕತೆ, ತುರಿಕೆ ಹಾಗೂ ಇತರ ಸೋಂಕುಗಳಿಂದ ಬಳಲುತ್ತಿತ್ತು. ಜೆರಿ ಈ ಮಗುವನ್ನು ಫ್ಲೋರಿಡಾ(Florida)ಗೆ ಕರೆ ತಂದರು. ಉತ್ತಮವಾಗಿ ಆರೈಕೆ ಮಾಡಿ ಮಗುವನ್ನು ಆರೋಗ್ಯಪೂರ್ಣನನ್ನಾಗಿಸಿದರು. 
 
ಆದರೆ ಪ್ರಾರಂಭದಲ್ಲಿ ಇವರ ಪ್ರಯಾಣ ಸುಲಭವಾಗಿರಲಿಲ್ಲ. ಜೊರ್ಡನ್‌ಗೆ ಹಲವು ಆರೋಗ್ಯ ಸಮಸ್ಯೆಗಳಿದ್ದವು. ತುಂಬಾ ಬಳಲಿಕೆಯ ಜೊತೆ ಜೊರ್ಡನ್‌ ತುಂಬಾ ಸಪೂರ ಇದ್ದ. ಅಲ್ಲದೇ ಮಗು ಇಂಗ್ಲೀಷ್‌ ಕಲಿಯುವ ಮೊದಲು ಕೈ ಸಂಭಾಷಣೆಯ ಮೂಲಕವೇ ಆತನೊಂದಿಗೆ ಮಾತನಾಡಬೇಕಾಗಿತ್ತು. ಆ ಸಂದರ್ಭದಲ್ಲಿ ಜೊರ್ಡನ್‌ಗೆ ಕೇವಲ 2 ವರ್ಷವಾಗಿತ್ತು. ಆದರೆ ತೂಕ ಮಾತ್ರ ಕೇವಲ 16 ಪೌಂಡ್ ಇತ್ತು.  ಹೀಗಾಗಿ ಮಗು ಬದುಕುವುದೋ ಇಲ್ಲವೋ ಎಂಬ ಬಗ್ಗೆಯೂ ಜೆರಿಗೆ ಖಾತರಿ ಇರಲಿಲ್ಲ. ಆದರೆ ಇನ್ನು ಮುಂದೆ ತನ್ನ ಕೂಸು ಮತ್ತೆ ಅನಾರೋಗ್ಯಕ್ಕೆ  ತುತ್ತಾಗಬಾರದು ಎಂದು ಜೆರಿ ನಿರ್ಧರಿಸಿದರು. 

ಶಿವಮೊಗ್ಗ: ಬಿಟ್ಟು ಹೋಗಿದ್ದ ಮಗು ಹುಡುಕಿ ಬಂದ ತಾಯಿ..!

ಒಂದೊಮ್ಮೆ ಅನಾರೋಗ್ಯ ಪೀಡಿತನಾಗಿದ್ದ ಜೆರಿ ಪುತ್ರ ಮತ್ತೆಂದೂ ಹಿಂದಿರುಗಿ ನೋಡಲೇ  ಇಲ್ಲ. ಈ ಬಾಲಕನ ಪ್ರಚಂಡವೆನಿಸುವ ಒಲಿಂಪಿಕ್‌ ಕೆರಿಯರ್‌ ಆರಂಭವಾಗಿದ್ದು ಒಂದು ಆಕಸ್ಮಿಕ. 7 ವರ್ಷದಲ್ಲಿದ್ದಾಗ ಒಲಿಂಪಿಕ್‌ ಕೆರಿಯರ್‌ ಆರಂಭಿಸಿದ ಜೋರ್ಡನ್‌,  ಖ್ಯಾತ ಡೈವಿಂಗ್‌ ಕೋಚ್‌ ಆದಂತಹ  ರೋನ್‌ ಒಬ್ರಿನ್‌(Ron O’Brien) ಅವರ ಪುತ್ರನಾದ ಟಿಮ್‌ ಓಬ್ರಿನ್ ಅವರ ಕಣ್ಣಿಗೆ ಬಿದ್ದರು. ಮೊದಲು ಜೋರ್ಡನ್‌ ವಿಶೇಷ ಡೈವಿಂಗ್‌ ಪ್ರೋಗ್ರಾಮ್‌ಗೆ ಪ್ರವೇಶ ಪಡೆದರು. ಬಳಿಕ ತಮ್ಮ ಚೊಚ್ಚಲ ಯಶಸ್ಸನ್ನು ಸಾಧಿಸಲು ಶುರು ಮಾಡಿದರು. ಅದೂ ಎಲ್‌ಜಿಬಿಟಿ( LGBT)ಸಮುದಾಯದ ಹೋರಾಟಗಾರ ಹಾಗೂ ಚಿನ್ನದ ಪದಕ ವಿಜೇತ ಗ್ರೇಗ್‌ ಲಗನಿಸ್‌ ಅವರನ್ನು ಇದೇ ಸಂದರ್ಭದಲ್ಲಿ ಜೋರ್ಡನ್‌ ಮೊದಲು ಭೇಟಿಯಾಗಿದ್ದಲ್ಲದೇ ಲಿಟ್ಲ್‌ ಲಗನಿಸ್(ಸಣ್ಣ ಲಗನಿಸ್‌ ) ಎಂದು ಕರೆಯಲ್ಪಟ್ಟರು. 

13ನೇ ವರ್ಷದಲ್ಲಿ ಒಮ್ಮೆ ಒಲಿಂಪಿಕ್‌ ನಲ್ಲಿ ಸ್ಪರ್ದಿಸಿದ ಜೋರ್ಡನ್‌  ತಮ್ಮ 16 ವರ್ಷದಲ್ಲಿ  ತಮ್ಮ 15ನೇ ವರ್ಷಗಳ ಕನಸನ್ನು ನನಸಾಗಿಸಿಕೊಂಡು ಪುರುಷರ ವಿಭಾಗದಲ್ಲಿ ಅರ್ಹತೆ ಪಡೆದುಕೊಂಡರು. ಇಷ್ಟು ವರ್ಷಗಳಲ್ಲಿ ತಂದೆ ಹಾಗೂ ಮಗನ ಮಧ್ಯೆ ಅಮೋಘವಾದ ಬಾಂಧವ್ಯ ಏರ್ಪಟ್ಟಿದೆ. ಇವತ್ತು ಜೋರ್ಡನ್‌  ಒಲಿಂಪಿಕ್‌ನಲ್ಲಿ ಅಮೆರಿಕಾವನ್ನು ಪ್ರತಿನಿಧಿಸುತ್ತಿದ್ದಾರೆ. ಆದರೆ ಹೃದಯದಲ್ಲಿ ಕಾಂಬೋಡಿಯಾವನ್ನು ಕೂಡ ಪ್ರತಿನಿಧಿಸುತ್ತಿರುವೆನೆಂಬ ಭಾವವಿದೆ. ಅಲ್ಲದೇ ಇತೀಚೆಗೆ ಈತ ಕಾಂಬೋಡಿಯಾದ ಟ್ಯಾಟೂವನ್ನು ತನ್ನ ಕೈಯಲ್ಲಿ ಹಾಕಿಸಿಕೊಂಡಿದ್ದ.  ಡೈವ್‌ ಮಾಡುವ ವೇಳೆ ಜನ ಇದನ್ನು ಗಮನಿಸಿದ್ದರು. ಇವರ ಈ ಬಾಂಧವ್ಯವು ಮಕ್ಕಳ ಪುಸ್ತಕ ರೂಪದಲ್ಲಿ ಬಿಡುಗಡೆಯಾಗಿದ್ದು, ಎನ್‌ ಒರ್ಪನ್‌ ನೋ ಮೋರ್‌ (An (Orphan No More) ಎಂಬ ಪುಸ್ತಕವನ್ನು ಇವರಿಬ್ಬರು ಸೇರಿ ಬರೆದಿದ್ದಾರೆ. 

click me!