ಪಾಂಡಗಳ ಮುದ್ದು ಮಾಡೋ ಕೆಲಸ 30 ಲಕ್ಷ ಸಂಬಳ:ಅರ್ಹತೆ ಏನು?

Published : Sep 21, 2025, 03:16 PM IST
China Hiring Panda Caretakers

ಸಾರಾಂಶ

ಚೀನಾದ ಸಿಚುವಾನ್‌ನಲ್ಲಿರುವ ಪಾಂಡಾ ಸಂರಕ್ಷಣಾ ಕೇಂದ್ರವು ಪಾಂಡಾಗಳನ್ನು ಮುದ್ದಾಡಿ, ಆರೈಕೆ ಮಾಡುವ ಕೆಲಸಕ್ಕೆ ವಾರ್ಷಿಕ 30 ಲಕ್ಷ ರೂ. ಸಂಬಳವನ್ನು ನೀಡುತ್ತಿದೆ. ಈ ಉದ್ಯೋಗದ ಜೊತೆ ವಸತಿ ಮತ್ತು ಕಾರಿನಂತಹ ಸೌಲಭ್ಯಗಳನ್ನು ನೀಡಲಾಗುತ್ತದೆ. ಈ 'ಕನಸಿನ ಉದ್ಯೋಗ' ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪಾಂಡಾಗಳ ಮುದ್ದಾಡೋ ಕೆಲಸ : ಆಕರ್ಷಕ ಸಂಬಳ:

ಜಗತ್ತಿನಲ್ಲಿ ಚಿತ್ರವಿಚಿತ್ರವೆನಿಸುವ ಉದ್ಯೋಗಗಳಿವೆ. ಪ್ರಾಣಿಗಳ ಆಹಾರದ ರುಚಿ ನೋಡುವ ಕೆಲಸ, ತಿಥಿ ಮಾಡುವ ಕೆಲಸ, ಹಾಸಿಗೆಯ ಟೆಸ್ಟ್ ಮಾಡುವ ಕೆಲಸ, ವೃತ್ತಿಪರ ಮುದ್ದಾಡುವವರು, ತಬ್ಬಿಕೊಳ್ಳುವವರು ಹೀಗೆ ಜಗತ್ತಿನಲ್ಲಿ ಕೇಳುವುದಕ್ಕೆ ಹೀಗೂ ಉಂಟಾ ಎನಿಸುವಂತಹ ಹಲವು ಉದ್ಯೋಗಗಳು ಹಾಗೂ ಆಕರ್ಷಕವಾದ ವೇತನಗಳು ಇವೆ. ಅದೇ ರೀತಿ ಈಗ ಚೀನಾದಲ್ಲಿ ಪಾಂಡಾಗಳನ್ನು ಮುದ್ದಾಡುವ ಆಟವಾಡುವ ಅವುಗಳನ್ನು ಕಾಳಜಿಯಿಂದ ನೋಡಿಕೊಳ್ಳುವ ಕೆಲಸಕ್ಕೆ ಅರ್ಜಿ ಆಹ್ವಾನಿಸಿದ್ದು, ವರ್ಷಕ್ಕೆ 30 ಲಕ್ಷದ ಆಕರ್ಷಕ ವೇತನವನ್ನು ಈ ಕೆಲಸಕ್ಕೆ ನಿಗದಿಪಡಿಸಿದೆ. ಅಚ್ಚರಿ ಎನಿಸಿದರು ಇದು ಚೀನಾದ ಸಿಚುವಾನ್‌ನಲ್ಲಿರುವ ದೊಡ್ಡ ಪಾಂಡಾ ರಕ್ಷಣೆ ಹಾಗೂ ಸಂಶೋಧನ ಕೇಂದ್ರವೂ ಇಲ್ಲಿ ಪಾಂಡಾಗಳ ಆರೈಕೆಯನ್ನು ಮಾಡುವವರಿಗೆ ವಾರ್ಷಿಕವಾಗಿ 32000 ಡಾಲರ್ ಎಂದರೆ ಸುಮಾರು 30 ಲಕ್ಷ ರೂಪಾಯಿಗಳ ವೇತನ ನೀಡುತ್ತದೆ. ಇದನ್ನು ಅನೇಕರು ಕನಸಿನ ಉದ್ಯೋಗವೆಂದೇ ಬಣ್ಣಿಸಿದ್ದಾರೆ. ಮನುಷ್ಯರ ಜೊತೆ ಬಹಳ ಸ್ನೇಹಪರವಾಗಿರುವ ಈ ದೈತ್ಯಗಾತ್ರದ ಪಾಂಡಾಗಳನ್ನು ಹಗ್ ಮಾಡುವುದು, ಅವುಗಳಿಗೆ ಆಹಾರ ತಿನ್ನಿಸುವುದು ಹಾಗೂ ಅವುಗಳ ಜೊತೆ ಆಟವಾಡುತ್ತಾ ಸಮಯ ಕಳೆಯುವುದು ಜೊತೆಗೆ ಆಕರ್ಷಕ ವೇತನ ಅನೇಕರನ್ನು ಈ ಉದ್ಯೋಗದತ್ತ ಆಕರ್ಷಿತರಾಗುವಂತೆ ಮಾಡಿದೆ.

ಪಾಂಡಾಗಳ ಆರೈಕೆ ಮಾಡೋರು ಏನೇನು ಮಾಡಬೇಕು?

ನೀವು ಪುಟ್ಟ ಮಕ್ಕಳ ನೋಡಿಕೊಳ್ಳುವ ಕೆಲಸವನ್ನು ನೋಡಿರಬಹುದು, ಮಾಡಿರಬಹುದು ಅಥವಾ ಕೇಳಿರಬಹುದು. ವಿಶ್ವದೆಲ್ಲೆಡೆಯಲ್ಲಿ ಮಕ್ಕಳನ್ನು ನೋಡಿಕೊಳ್ಳುವುದಕ್ಕೆ ಶಿಶುಪಾಲನಾ ಕೇಂದ್ರಗಳಿವೆ.. ಅಲ್ಲಿ ಅವರನ್ನು ನೋಡಿಕೊಳ್ಳುವುದಕ್ಕೆ ಪೋಷಕರು ಸಾವಿರಾರು ರೂಪಾಯಿಗಳನ್ನು ವೆಚ್ಚ ಮಾಡಲಾಗುತ್ತದೆ. ಆದರೂ ಸದಾ ಅಳುವ ನಿಂತಿಲ್ಲಿ ನಿಲ್ಲದ, ಮಕ್ಕಳನ್ನು ನೋಡಿಕೊಳ್ಳುವುದು ಸುಲಭದ ಕೆಲಸವಲ್ಲ, ಆದರೆ ಇಲ್ಲಿ ಸದಾ ತುಂಟಾಟವಾಡುತ್ತಾ ನೋಡುಗರಿಗೆ ಮನೋರಂಜನೆ ನೀಡುವ ಪಾಂಡಾಗಳ ನೋಡಿಕೊಳ್ಳುವುದಕ್ಕೆ ಒಳ್ಳೆಯ ವೇತನವನ್ನು ನೀಡಲಾಗುತ್ತದೆ. ಪಾಂಡಾಗಳು ವಿಶ್ವದ ಅಳಿವಿನಂಚಿನಲ್ಲಿರುವ ಪ್ರಾಣಿಗಳಲ್ಲಿ ಒಂದಾಗಿದ್ದು, ಅವುಗಳ ಜೊತೆ ಸಮಯ ಕಳೆಯಬೇಕಿದೆ. ಅವುಗಳನ್ನು ಮುದ್ದಾಡುವುದಲ್ಲದೇ ಪಾಂಡಾಗಳ ಆರೋಗ್ಯವನ್ನು ಮೇಲ್ವಿಚಾರಣೆ ಮಾಡುವುದು, ಅವುಗಳ ನಡವಳಿಕೆಯನ್ನು ಗಮನಿಸುವುದು ಮತ್ತು ಅವುಗಳ ದೈನಂದಿನ ಚಟುವಟಿಕೆಗಳನ್ನು ದಾಖಲಿಸುವುದು ಈ ಕೆಲಸದ ಭಾಗವಾಗಿದೆ.

32 ಲಕ್ಷ ಸಂಬಳದ ಜೊತೆ ಹಲವು ಸೌಲಭ್ಯ:

ಹೀಗೆ ಪಾಂಡಾಗಳ ನೋಡಿಕೊಳ್ಳುವವರಿಗೆ ಮನೆ ವಸತಿ ಸೌಕರ್ಯ ಹಾಗೂ ಪ್ರಯಾಣಕ್ಕೆ ಕಾರುಗಳನ್ನು ಕೂಡ ನೀಡಲಾಗುತ್ತದೆ. ಇದು ಅವರು ಕೆಲಸ ಮಾಡುವ ಉದ್ಯೋಗವನ್ನು ಇನ್ನಷ್ಟು ಆಕರ್ಷಕವಾಗಿಸಿದೆ. ಹಾಗಂತ ಈ ಉದ್ಯೋಗವೇನು ಯಾವಾಗಲೂ ಮಜಾ ಹಾಗೂ ಖುಷಿಯಿಂದ ಕೂಡಿರುತ್ತದೆ ಎಂದು ಹೇಳಲಾಗದು. ಇಲ್ಲಿ ಕೆಲಸ ಮಾಡುವ ಕೇರ್ ಟೇಕರ್‌ಗಳಿಗೆ ಅಗತ್ಯವಾಗಿ ತಾಳ್ಮೆ ಇರಬೇಕು, ತಮ್ಮ ಕೆಲಸಕ್ಕೆ ಬದ್ಧರಾಗಿರಬೇಕು. ಪಾಂಡಾಗಳ ಸಂರಕ್ಷಣಾ ಕಾರ್ಯಕ್ಕೆ ತಮ್ಮನ್ನು ತೊಡಗಿಸಿಕೊಳ್ಳಲು ಸದಾ ಸಿದ್ಧರಾಗಿರಬೇಕು. ಹಾಗೆಯೇ ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವವರಿಗೆ ಕನಿಷ್ಠ 22 ವರ್ಷ ವಯಸ್ಸಾಗಿರಬೇಕು. ಪಾಂಡಾಗಳ ಬಗ್ಗೆ ಮೂಲಭೂತ ಜ್ಞಾನ ಇರಬೇಕು ಬರೆಯುವುದಕ್ಕೆ ಹಾಗೂ ಛಾಯಾಗ್ರಾಹಣದ ಕಲೆ ತಿಳಿದಿರಬೇಕು. ಪ್ರಸ್ತುತ ಜಗತ್ತಿನಲ್ಲಿ 1900ಕ್ಕಿಂತಲೂ ಕಡಿಮೆ ಪಾಂಡಗಳಿದ್ದು, ಅವುಗಳ ರಕ್ಷಣೆಗಾಗಿ ಚೀನಾ ಬಹಳ ವಿಸ್ತಾರವಾದ ಪ್ಲಾನ್ ಮಾಡಿದೆ. ಇಲ್ಲಿ ಕೆಲಸಕ್ಕೆ ಸೇರಿರುವ ಅನೇಕರಿಗೆ ಇದು ಕೇವಲ ಸ್ಯಾಲರಿ ಬರುವ ಉದ್ಯೋಗವಲ್ಲ ಬದಲಾಗಿ ಭೂಮಿಯ ಬಹಳ ಅಪರೂಪದ ಮತ್ತು ಅತ್ಯಂತ ಪ್ರತಿಮಾರೂಪದ ಜೀವಿಗಳಲ್ಲಿ ಒಂದನ್ನು ರಕ್ಷಿಸುವ ಧ್ಯೇಯದ ಭಾಗವಾಗಿದೆ.

 ನೆಟ್ಟಿಗರಿಂದ ಉದ್ಯೋಗಕ್ಕೆ ಭಾರಿ ಬೇಡಿಕೆ

ಆದರೆ ಈ ಉದ್ಯೋಗದ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದೆ. ಅನೇಕರು ತಾವು ಹೋಗುವುದಕ್ಕೆ ಆಸಕ್ತಿ ಇರುವುದಾಗಿ ಕಾಮೆಂಟ್ ಮಾಡ್ತಿದ್ದಾರೆ. ಈ ಉದ್ಯೋಗಕ್ಕೆ ಎಲ್ಲಿ ಅರ್ಜಿ ಸಲ್ಲಿಸಬೇಕು, ನಾನು ನಿಜವಾಗಿಯೂ ಕೇಳುತ್ತಿದ್ದೇನೆ ಗೊತ್ತಿದ್ದವರು ತಿಳಿಸಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಕೆಲವರು ಜಾಸ್ತಿ ಖುಷಿಪಡಬೇಡಿ ಕೆಲವೊಮ್ಮೆ ಪಾಂಡಾಗಳು ಕಚ್ಚುತ್ತವೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವವರಿಗೆ ಅರ್ಜಿ ಸಲ್ಲಿಸುವ ವಿಚಾರ ತಿಳಿದರೆ ತಿಳಿಸುವಂತೆ ಕೆಲವರು ಮನವಿ ಮಾಡಿದ್ದಾರೆ. ಈ ಕೆಲಸದಲ್ಲಿ ಪ್ರೀತಿಯ ಜೊತೆ ಪಗಾರವೂ ಸಿಗುತ್ತದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ನಾಳೆಯಿಂದ ಜಿಎಸ್‌ಟಿ 2.0 ಅನ್ವಯ: ಕಾರಿನ ಬೆಲೆ ₹1 ಲಕ್ಷವರೆಗೆ ದರ ಇಳಿಕೆ, ದಸರಾ ಹಬ್ಬಕ್ಕೆ ಸಿಗಲಿದೆ ಸೂಪರ್ ಆಫರ್!
ಇದನ್ನೂ ಓದಿ: ರೈತರಿಗೂ ಬಂಪರ್‌: ಜಿಎಸ್‌ಟಿ ಇಳಿಕೆ ಬಳಿಕ ಟ್ರ್ಯಾಕ್ಟರ್ ಸೇರಿದಂತೆ ಹಲವು ಕೃಷಿ ಯಂತ್ರೋಪಕರಣಗಳ ದರ ಹೀಗಿದೆ

ಇದನ್ನೂ ಓದಿ: ಮರ್ಸಿಡಿಸ್ ಬೇಂಜ್ ಕಾರ್ ಇದೆ ಕಾಮನ್‌ಸೆನ್ಸ್ ಇಲ್ಲ: ರಸ್ತೆಗೆ ಕಸ ಎಸೆದ ಮಹಿಳೆ ಪ್ರಶ್ನಿಸಿದ್ದಕ್ಕೆ ಉದ್ಧಟತನದ ವರ್ತನೆ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!