ಚಿರತೆಯಂತೆ ನೆಗೆಯುತ್ತ ವ್ಯಕ್ತಿಯ ಓಡಿಸಿದ ಮೊಸಳೆ: ಭಯಾನಕ ವಿಡಿಯೋ ಫುಲ್ ವೈರಲ್‌

Published : Aug 24, 2022, 02:27 PM ISTUpdated : Aug 24, 2022, 02:31 PM IST
ಚಿರತೆಯಂತೆ ನೆಗೆಯುತ್ತ ವ್ಯಕ್ತಿಯ ಓಡಿಸಿದ ಮೊಸಳೆ: ಭಯಾನಕ ವಿಡಿಯೋ ಫುಲ್ ವೈರಲ್‌

ಸಾರಾಂಶ

ವ್ಯಕ್ತಿಯೊಬ್ಬನನ್ನು ಮೊಸಳೆಯೊಂದು ನೆಗೆಯುತ್ತಾ ಓಡಿಸಿಕೊಂಡು ಬರುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಸಾಮಾನ್ಯವಾಗಿ ಮೊಸಳೆ ಎಂದರೆ ಹೆದರಿ ಎದುಸಿರು ಬಿಡುವವರೇ ಜಾಸ್ತಿ. ಮೊಸಳೆ ಪ್ರಿಯ ಸ್ಟೀವ್‌ ಇರ್ವಿನ್ ಹೊರತಾಗಿ ಬೇರಾರು ಮೊಸಳೆಯ ಬಗ್ಗೆ ಅಷ್ಟೊಂದು ಆಸಕ್ತಿ ಇರುವವರು ಇರಲು ಸಾಧ್ಯವಿಲ್ಲ. ಅವುಗಳ ಬಿರುಸಾದ ಹಲ್ಲುಗಳು, ಭಯಾನಕ ನೋಟ, ದೇಹದ ಶೈಲಿಯೇ ನೋಡುಗರನ್ನು ಬೆವರುವಂತೆ ಮಾಡುತ್ತದೆ. ಅಂತಹದರಲ್ಲಿ ವ್ಯಕ್ತಿಯೊಬ್ಬನನ್ನು ಮೊಸಳೆಯೊಂದು ನೆಗೆಯುತ್ತಾ ಓಡಿಸಿಕೊಂಡು ಬರುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಮೊಸಳೆಗಳು ಬಹಳ ಭಯಾನಕವಾದ ಪರಭಕ್ಷಕ ಸರಿಸೃಪಗಳು. ನೀರಿನಲ್ಲೇ ಹೆಚ್ಚಾಗಿ ವಾಸಿಸುವ ಇವುಗಳು ಕೆಲವೊಮ್ಮೆ ನೆಲದ ಮೇಲೆಯೂ ಓಡಾಡುತ್ತಿರುತ್ತವೆ. ಸರೀಸೃಪಗಳಾದ ಇವುಗಳು ನೆಲದ ಮೇಲೆ ಹರಿದಾಡಿಕೊಂಡೆ ಸಾಗುತ್ತವೆ. ಇವುಗಳು ನೆಗೆಯುವುದು ಜಿಗಿಯುವುದನ್ನು ಎಲ್ಲೂ ನೋಡಿರಲೂ ಸಾಧ್ಯವಿಲ್ಲ. ಆದಾಗ್ಯೂ ಚಿರತೆಯಂತೆ ಮೊಸಳೆಯೊಂದು ನೆಗೆಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ಅನೇಕರ ಅಚ್ಚರಿಗೆ ಕಾರಣವಾಗಿದೆ. ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತ್ ನಂದಾ ಅವರು ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವಿಡಿಯೋದಲ್ಲಿ ಸೆರೆಯಾಗಿರುವ ದೃಶ್ಯ ನೋಡಿದರೆ ಜುರಾಸಿಕ್‌ ಪಾರ್ಕ್‌ ಸಿನಿಮಾದಲ್ಲಿ ಬರುವ ಡೈನೋಸಾರ್‌  ಪಾತ್ರ ನೆನಪಿಗೆ ಬರದಿರದು. ಡೈನೋಸರ್‌ಗಳು ನೆಗೆಯುವಂತೆ ಇಲ್ಲಿ ಮೊಸಳೆಯೊಂದು ನೆಗೆಯುತ್ತಾ ವ್ಯಕ್ತಿಯನ್ನು ಓಡಿಸುವುದನ್ನು ವಿಡಿಯೋದಲ್ಲಿ ಕಾಣಬಹುದು. 

ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಂಡ ಮೊಸಳೆ: ವಿಡಿಯೋ ವೈರಲ್‌

ಮೊಸಳೆಯೊಂದು ನೆಗೆಯುತ್ತಾ ಸಾಗುವುದನ್ನು ನಾನೆಂದು ನೋಡಿಲ್ಲ ಎಂದು ಸುಶಾಂತ್ ನಂದಾ ಈ ವಿಡಿಯೋ ಶೇರ್ ಮಾಡಿ ಬರೆದುಕೊಂಡಿದ್ದಾರೆ. ಇನ್ನು ಈ ವಿಡಿಯೋವನ್ನು 28 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, ಮೊಸಳೆಯ ವಿಚಿತ್ರ ಲಕ್ಷಣವನ್ನು ನೋಡಿ ನೆಟ್ಟಿಗರು ಅಚ್ಚರಿಗೊಂಡಿದ್ದಾರೆ. ಹೀಗೆ ಪ್ರಾಣಿಗಳು ನೆಗೆಯುತ್ತಾ ಓಡಿಸಿಕೊಂಡು ಬಂದರೆ ನಾವು ಓಡುವುದನ್ನು ಮರೆತು ಕೈಕಾಲು ಕುಸಿದಂತಾಗಿ ಅಲ್ಲೇ ಶರಣಾಗುತ್ತೇವೆ ಎಂದು ಒಬ್ಬರು ನೋಡುಗರು ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ. 

ಮೊಸಳೆ ಜೊತೆ ಯುವಕನ ಚೆಲ್ಲಾಟ, ಆಮೇಲೇನಾಯ್ತು ನೋಡಿ

ಆದರೆ ಈ ಘಟನೆ ಎಲ್ಲಿ ನಡೆದಿರುವುದು ಎಂಬುದರ ಬಗ್ಗೆ ವಿಡಿಯೋದಲ್ಲಿ ಎಲ್ಲೂ ಉಲ್ಲೇಖವಿಲ್ಲ. ಮೊಸಳೆ ತನ್ನ ಸರಹದ್ದಿಗೆ ಬಂದ ವ್ಯಕ್ತಿಯನ್ನು ನೆಗೆಯುತ್ತಾ ಓಡಿಸುತ್ತಿದ್ದರೆ, ಹೊರಭಾಗದಲ್ಲಿ ಅನೇಕ ಜನರು ನಿಂತುಕೊಂಡು ಈ ಭಯಾನಕ ದೃಶ್ಯವನ್ನು ನೋಡುತ್ತಿದ್ದಾರೆ.

ಕೆಲ ದಿನಗಳ ಹಿಂದೆ ಯುವಕನೋರ್ವ ಮೊಸಳೆ ಜೊತೆ ಚೆಲ್ಲಾಟವಾಡಲು ಹೋಗಿ ತನ್ನ ಒಂದು ಕೈಯನ್ನು ಕಳೆದುಕೊಂಡಿದ್ದ. ಈ ಭಯಾನಕ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವಿಡಿಯೋದಲ್ಲಿ ಕಾಣಿಸುವಂತೆ ಮೊಸಳೆ ಉದ್ಯಾನವನದ  ಕೆಲಸಗಾರನಂತೆ ಕಾಣುವ ವ್ಯಕ್ತಿಯೊಬ್ಬ ಮೊಸಳೆಯ ಬಾಯಿಯೊಳಗೆ ಕೈ ಹಾಕಲು ಪ್ರಯತ್ನಿಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಮೊಸಳೆಯು ತನ್ನ ಬಾಯಿಯನ್ನು ಅಗಲವಾಗಿ ತೆರೆದುಕೊಂಡು ಮಲಗಿಕೊಂಡಿದೆ. ಹೀಗೆ ಬಾಯ್ತೆರೆದು ಮಲಗಿರುವ ಮೊಸಳೆಯ ಮುಂದೆ ಯುವಕ ಸಾಹಸ ಮಾಡಲು ಹೋಗಿ, ತನ್ನ ಜೀವಕ್ಕೆ ಆಪತ್ತು ತಂದುಕೊಂಡಿದ್ದಾನೆ. 

ಯುವಕ ತನ್ನ ಬಲಗೈಯನ್ನು ಮೊಸಳೆಯ ಬಾಯೊಳಗೆ ಇಟ್ಟಿದ್ದಾನೆ. ಕೂಡಲೇ ಮೊಸಳೆಗೆ ಇದು ಲಡ್ಡು ಬಂದು ಬಾಯಿಗೆ ಬಿತ್ತ ಎಂಬಂತೆ ಆಗಿದ್ದು, ನಿರೀಕ್ಷಿಸದೇ ಬಾಯಿಗೆ ಆಹಾರ ಬಿದ್ದಂತಾಗಿದ್ದು, ಅದು ಈತನ ಕೈಯನ್ನು ಕಚ್ಚಿ ಎಳೆದಾಡಿದೆ. ಈ ವೇಳೆ ಸ್ಟಂಟ್‌ ಮಾಡುವ ಸರದಿ ಮೊಸಳೆ ಪಾಲಾಗಿದ್ದು, ಯುವಕನ ಕೈಯನ್ನು ಕಚ್ಚಿ ಮೊಸಳೆ ಎಳೆದಾಡಿದೆ. ಇತ್ತ ಸುಮ್ಮನಿರಲಾರದೆ ಅಪಾಯಕಾರಿ ಮೊಸಳೆಯೆದರು ಸಾಹಸ ಮಾಡಲು ಹೋದ ಯುವಕನ ಸ್ಥಿತಿ ಇರಲಾರದೇ ಇರುವೆ ಬಿಟ್ಕೊಂಡ ಎಂಬಂತಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸ್ಲಿಮ್ ಆಗೋಕೆ ಹೋಗಿ ಆರೋಗ್ಯವೇ ಹೋಯ್ತು: 11691 ರೂ ಪಾವತಿಸಿ ತೂಕ ಇಳಿಕೆ ಇಂಜೆಕ್ಷನ್ ಪಡೆದಾಕೆಗೆ ಆಘಾತ
ಹೆದ್ದಾರಿಯಲ್ಲಿ ಇಳಿದು ಕಾರಿಗೆ ಡಿಕ್ಕಿ ಹೊಡೆದ ವಿಮಾನ: ವೀಡಿಯೋ