ಡ್ರಗ್ಸ್‌ ಸೇವಿಸಿರಲಿಲ್ವಂತೆ ಫಿನ್ಲೆಂಡ್‌ ಪ್ರಧಾನಿ: ಪರೀಕ್ಷೆಯಲ್ಲಿ ಸಾಬೀತು..!

Published : Aug 23, 2022, 04:16 PM IST
ಡ್ರಗ್ಸ್‌ ಸೇವಿಸಿರಲಿಲ್ವಂತೆ ಫಿನ್ಲೆಂಡ್‌ ಪ್ರಧಾನಿ: ಪರೀಕ್ಷೆಯಲ್ಲಿ ಸಾಬೀತು..!

ಸಾರಾಂಶ

ಫಿನ್ಲೆಂಡ್‌ ಪ್ರಧಾನಿ ಪಾರ್ಟಿ ಮಾಡುತ್ತಿದ್ದ ವಿಡಿಯೋ ಇತ್ತೀಚೆಗೆ ವೈರಲ್‌ ಆಗಿತ್ತು. ಆದರೆ, ಈ ವೇಳೆ ಅವರು ಡ್ರಗ್ಸ್‌ ಸೇವಿಸಿರಲಿಲ್ಲ ಎಂದು ಸರ್ಕಾರ ವರದಿ ಮಾಡಿದೆ. 

ಫಿನ್ಲೆಂಡ್ ಪ್ರಧಾನಿ ಸನ್ನಾ ಮರಿನ್ ಜಗತ್ತಿನ ಅತ್ಯಂತ ಕಿರಿಯ ಪ್ರಧಾನಿ. ಇತ್ತೀಚೆಗಷ್ಟೇ ಅವರು ತಮ್ಮ ಸ್ನೇಹಿತೆಯರ ಗ್ಯಾಂಗ್‌ ಜತೆಗೆ ಪಾರ್ಟಿ ಮಾಡಿ ಕುಣಿದಿದ್ದ ವಿಡಿಯೋವೊಂದು ವೈರಲ್‌ ಆಗಿತ್ತು. ವಿಡಿಯೋ ವೈರಲ್‌ ಆದ ಬೆನ್ನಲ್ಲೇ ಸನ್ನಾ ಮರಿನ್‌ ಡ್ರಗ್ಸ್‌ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಹಲವು ನೆಟ್ಟಿಗರು ಹಾಗೂ ಫಿನ್ಲೆಂಡ್‌ ಮಾದ್ಯಮಗಳು ಸಹ ಆರೋಪಿಸಿದ್ದವು. ಈ ಆರೋಪದ ಬೆನ್ನಲ್ಲೇ ಫಿನ್ಲೆಂಡ್‌ ಮಹಿಳಾ ಪ್ರಧಾನಿ ಡ್ರಗ್ಸ್‌ ಪರೀಕ್ಷೆ ಮಾಡಿಸಿಕೊಂಡಿದ್ದು, ಡ್ರಗ್ಸ್ ಪರೀಕ್ಷೆಯಲ್ಲಿ ನೆಗೆಟಿವ್‌ ಬಂದಿದೆ ಎಂದು ತಿಳಿದುಬಂದಿದೆ. ಈ ಸಂಬಂಧ ಫಿನ್ಲೆಂಡ್‌ ಸರ್ಕಾರವೇ ವರದಿ ನೀಡಿದೆ.

ಫಿನ್ಲೆಂಡ್ ಪ್ರಧಾನಿ ಸನ್ನಾ ಮರಿನ್ ಅವರು ಖಾಸಗಿ ನಿವಾಸದಲ್ಲಿ ಸ್ನೇಹಿತರೊಂದಿಗೆ ನೃತ್ಯ ಮತ್ತು ಪಾರ್ಟಿ ಮಾಡುತ್ತಿದ್ದುದನ್ನು ತೋರಿಸುವ ವೈರಲ್‌ ವಿಡಿಯೋ ಕ್ಲಿಪ್‌ ಬಳಿಕ ಅವರು ಡ್ರಗ್ಸ್‌ ತೆಗೆದುಕೊಂಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಆದರೆ, "ಶುಕ್ರವಾರ ನಡೆಸಿದ ಸ್ಕ್ರೀನಿಂಗ್ ಬಳಿಕ ಡ್ರಗ್ಸ್‌ನ ಯಾವುದೇ ಸೂಚನೆಯನ್ನು ತೋರಿಸಲಿಲ್ಲ" ಎಂದು ಫಿನ್ಲೆಂಡ್‌ ಸರ್ಕಾರ ಹೇಳಿಕೆ ನೀಡಿರುವ ಬಗ್ಗೆ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. ಫಿನ್ಲೆಂಡ್‌ನ ವಿರೋಧ ಪಕ್ಷಗಳು ಸಹ ಪ್ರಧಾನಿ ಡ್ರಗ್ಸ್ ತೆಗೆದುಕೊಂಡಿದ್ದರು ಎಂಬ ಆರೋಪದ ಬಳಿಕ ಸಮರ್ಥಿಸಿಕೊಂಡಿದ್ದ 36 ವರ್ಷದ ಸನ್ನಾ ಮರಿನ್, ತಾನು ಡ್ರಗ್ಸ್ ಸೇವಿಸಿರಲಿಲ್ಲ ಹಾಗೂ ಪಾರ್ಟಿಯಲ್ಲಿ ಹಾಜರಿದ್ದವರು ಯಾರೂ ಸಹ ಮಾದಕ ದ್ರವ್ಯ ಸೇವಿಸಿದ್ದು ನಾನು ನೋಡಿಲ್ಲ ಎಂದೂ ಹೇಳಿಕೊಂಡಿದ್ದರು. ಈಗ ಡ್ರಗ್ಸ್‌ ಪರೀಕ್ಷೆಯಲ್ಲಿ ಸಹ ಅವರು ಡ್ರಗ್ಸ್‌ ಸೇವನೆ ಮಾಡಿಲ್ಲ ಎಂಬುದು ಸಾಬೀತಾಗಿದೆ.

ಇದನ್ನು ಓದಿ: ಫಿನ್ಲೆಂಡ್‌ ಪ್ರಧಾನಿ ಪಾರ್ಟಿ ವಿಡಿಯೋ ವೈರಲ್‌: ಡ್ರಗ್ಸ್ ತೆಗೆದುಕೊಂಡಿದ್ದರೇ ಜಗತ್ತಿನ ಕಿರಿಯ ಪಿಎಂ..?

ಇನ್ನು, ಫಿನ್ಲೆಂಡ್‌ ಪ್ರಧಾನಿ ಹಾಗೂ ಅವರ ಸ್ನೇಹಿತರ ಗುಂಪು ಪಾರ್ಟಿ ಮಾಡುತ್ತಿರುವ ಹಾಗೂ ಕುಣಿಯುತ್ತಿರುವ ವಿಡಿಯೋ ವೈರಲ್‌ ಆದ ಬಳಿಕ ಹಲವು ನೆಟ್ಟಿಗರು ಆಕೆಯ ಪರ ವಾದ ಮಾಡಿದ್ದರೆ, ಇನ್ನು ಅನೇಕರು ಜಗತ್ತಿನ ಕಿರಿಯ ಪ್ರಧಾನ ಮಂತ್ರಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಆಕೆಯ ಬೆಂಬಲಕ್ಕಾಗಿ ಹುಡುಗಿಯರು 'ಸಾಮಾನ್ಯ ಯುವಕರಂತೆ' ಪಾರ್ಟಿ ಮಾಡುವುದನ್ನು ತೋರಿಸುವ ಅನೇಕ ವಿಡಿಯೊಗಳು ನಂತರ ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆಯಾಗಿತ್ತು. ವಿವಾಹಿತೆಯಾಗಿರುವ ಮತ್ತು 4 ವರ್ಷದ ಮಗಳನ್ನು ಹೊಂದಿರುವ ಸನ್ನಾ ಮರಿನ್‌ ಅವರು ಫಿನ್ಲೆಂಡ್‌ನ ಸರ್ಕಾರದ ಮುಖ್ಯಸ್ಥರಾಗಿದ್ದರೂ ಸಹ, ತಮ್ಮ ಬಿಡುವಿನ ಸಮಯದಲ್ಲಿ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಉತ್ತಮ ಸಮಯವನ್ನು ಇಷ್ಟಪಡುವ ತನ್ನ ವಯಸ್ಸಿನ ಇತರರಂತೆಯೇ ಇರಬೇಕೆಂದು ಆಗಾಗ್ಗೆ ಹೇಳಿಕೊಂಡಿದ್ದಾರಂತೆ.

ವಿಡಿಯೋ ಸಾರ್ವಜನಿಕಗೊಳಿಸಿದ್ದಕ್ಕೆ ಅಸಮಾಧಾನ
ಇನ್ನೊಂದೆಡೆ, ಅವರು ಪಾರ್ಟಿ ಮಾಡುತ್ತಿದ್ದ ಹಾಗೂ ಡ್ಯಾನ್ಸ್‌ ಮಾಡುತ್ತಿದ್ದ ವಿಡಿಯೋ ಲೀಕ್‌ ಆದ ಕೆಲ ದಿನಗಳ ಬಳಿಕ ಪ್ರತಿಕ್ರಿಯೆ ನೀಡಿದ್ದ ಫಿನ್ಲೆಂಡ್‌ ಪ್ರಧಾನಿ, ನನ್ನನ್ನು ಚಿತ್ರೀಕರಿಸಲಾಗುತ್ತಿದೆ ಎಂದು ತಿಳಿದಿತ್ತು, ಆದರೆ ವಿಡಿಯೋವನ್ನು ಸಾರ್ವಜನಿಕವಾಗಿ ಬಿಡುಗಡಡೆ ಮಾಡಿದ್ದಕ್ಕೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು. "ನಾನು ನೃತ್ಯ ಮಾಡಿದೆ, ಹಾಡಿದೆ ಮತ್ತು ಪಾರ್ಟಿ ಮಾಡಿದ್ದೇನೆ - ಇದು ಸಂಪೂರ್ಣವಾಗಿ ಕಾನೂನು ವಿಷಯಗಳು. ಆದರೆ, ಡ್ರಗ್ಸ್‌ ಸೇವಿಸುವ ಅಥವಾ ಮಾದಕವಸ್ತುಗಳ ಉಪಸ್ಥಿತಿಯನ್ನು ಒಳಗೊಂಡಿರುವ ಪರಿಸ್ಥಿತಿಯಲ್ಲಿ ಎಂದಿಗೂ ಇರಲಿಲ್ಲ ಎಂದು ಅವರು ಕಳೆದ ಗುರುವಾರ ಹೇಳಿಕೊಂಡಿದ್ದರು. 

ಮದುವೆ ಮಂಟಪದಲ್ಲೇ ಹೊಡೆದಾಡಿಕೊಂಡ ಗಂಡು ಹೆಣ್ಣು: ಹೀಗೂ ಇರುತ್ತೆ..!

ಅಲ್ಲದೆ, "ನನಗೆ ಕೌಟುಂಬಿಕ ಜೀವನವಿದೆ, ವೃತ್ತಿ ಜೀವನವಿದೆ ಮತ್ತು ನನ್ನ ಸ್ನೇಹಿತರೊಂದಿಗೆ ಕಳೆಯಲು ನನಗೆ ಉಚಿತ ಸಮಯವಿದೆ. ನನ್ನ ವಯಸ್ಸಿನ ಅನೇಕ ಜನರಂತೆಯೇ" ಎಂದು ಮರಿನ್ ಬಿಬಿಸಿಗೆ ಹೇಳಿದ್ದರು. ಹಾಗೂ, ತನ್ನ ನಡವಳಿಕೆಯನ್ನು ಬದಲಾಯಿಸುವ ಅಗತ್ಯವಿಲ್ಲ ಎಂದು ನಾನು ಭಾವಿಸಿದ್ದೇನೆ. ನಾನು ಇಲ್ಲಿಯವರೆಗೆ ಹೇಗಿದ್ದೇನೋ ಮುಂದೆಯೂ ಅದೇ ವ್ಯಕ್ತಿಯಾಗಲಿದ್ದೇನೆ ಮತ್ತು ಅದನ್ನು ಸ್ವೀಕರಿಸಲಾಗುವುದು ಎಂದು ನಾನು ಭಾವಿಸುತ್ತೇನೆ" ಎಂದೂ ಫಿನ್ಲೆಂಡ್‌ ಮಹಿಳಾ ಪ್ರಧಾನಿ ಸನ್ನಾ ಮರಿನ್‌ ಹೇಳಿಕೊಂಡಿದ್ದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

17 ಲಕ್ಷದ ಚಿನ್ನದ ಪೆಂಡೆಂಟ್‌ ನುಂಗಿದ ಕಳ್ಳ, ಬಾತ್‌ರೂಮ್‌ನ ಹೊರಗಡೆ ಕಾಯುತ್ತಾ ನಿಂತ ಪೊಲೀಸ್‌!
ಮಹಿಳೆಯರಿಗೆ ಹೆದರಿ 55 ವರ್ಷಗಳಿಂದ ಒಬ್ಬಂಟಿಯಾಗಿ ವಾಸಿಸುತ್ತಿರುವ ವ್ಯಕ್ತಿ